• Home
  • »
  • News
  • »
  • career
  • »
  • Notice Period ಮಾಡದೇ ಸಡನ್ ಆಗಿ ಕೆಲಸ ಬಿಟ್ಟರೆ, ಯಾವೆಲ್ಲಾ ಸಮಸ್ಯೆ ಎದುರಾಗುತ್ತೆ?

Notice Period ಮಾಡದೇ ಸಡನ್ ಆಗಿ ಕೆಲಸ ಬಿಟ್ಟರೆ, ಯಾವೆಲ್ಲಾ ಸಮಸ್ಯೆ ಎದುರಾಗುತ್ತೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಏಕಾಏಕಿ ಕೆಲಸ ಬಿಟ್ಟರೆ ಕೆಲವೊಂದು ಸಂಸ್ಥೆಗಳು ನೋಟಿಸ್​ ಪಿರಿಯಡ್​​ ಪೂರ್ಣಗೊಳಿಸಲು ಕೇಳುತ್ತವೆ. ಇಲ್ಲವಾದಲ್ಲಿ 2 ತಿಂಗಳ ವೇತನವನ್ನು ನೀಡಬೇಕೆಂದು ಷರತ್ತು ಹಾಕಬಹುದು. ಬಾಸ್​ ಜೊತೆ ನಿಮ್ಮ ಸಂಬಂಧ ಕೆಡಬಹುದು. ಆಫೀಸ್​ನಲ್ಲೂ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆಗಳಿರುತ್ತವೆ.

ಮುಂದೆ ಓದಿ ...
  • Share this:

ಯಾವುದೇ ಕಂಪನಿಯಲ್ಲಿ ಉದ್ಯೋಗಿ (Employee) ನೇಮಕವಾಗಲು (Recruitment) ಹೇಗೆ ಹಲವಾರು ನಿಯಮಗಳಿರುತ್ತವೋ, ಅದೇ ರೀತಿ ಉದ್ಯೋಗಿ ಕೆಲಸವವನ್ನು ಬಿಡಬೇಕಾದರೂ (Resignation) ಕೆಲವೊಂದು ನಿಯಮಗಳಿರುತ್ತವೆ. ಸಾಮಾನ್ಯವಾಗಿ ಬಹುತೇಕ ಕಂಪನಿಗಳಲ್ಲಿ ಕಂಡು ಬರುವ ನಿಯಮ ಎಂದರೆ ರಾಜೀನಾಮೆ ನೀಡಿದ ಬಳಿಕ 1 ಇಲ್ಲವೇ 2 ತಿಂಗಳ ನೋಟಿಸ್​ ಪಿರಿಯಡ್ (Notice Period)​​​. ನಿಮಗೆ ಈಗಾಗಲೇ ಬೇರೆಡೆ ಕೆಲಸ ಸಿಕ್ಕಿದ್ದರೆ ರಿಸೈನ್​​​​​​​​​ ಮಾಡಿ ಹೋಗಬಹುದು. ಆದರೆ ಎಲ್ಲಾ ಉದ್ಯೋಗಿಗಳ ಪರಿಸ್ಥಿತಿಯೂ ಇಷ್ಟು ಸರಳವಾಗಿರೋಲ್ಲ. ಕೆಲವೊಮ್ಮೆ ಉದ್ಯೋಗಿಗೆ ಏಕಾಏಕಿ ಕೆಲಸ ಬಿಟ್ಟು ಹೋಗಬೇಕು ಎನಿಸಬಹುದು.


ಆ ರೀತಿ ಸಡನ್​ ಆಗಿ ರಿಸೈನ್​ ಮಾಡಬಹುದೇ? ಏಕಾಏಕಿ ಉದ್ಯೋಗ ಬಿಟ್ಟರೆ ಎದುರಾಗುವ ಸಮಸ್ಯೆಗಳೇನು? ಮೊದಲು ಬೇರೆಡೆ ಕೆಲಸ ಹುಡುಕಿಕೊಂಡು ನಂತರ ಈಗ ಇರುವ ಕೆಲಸ ಬಿಡಬೇಕೇ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.


ಕೆಲಸವನ್ನು ಏಕಾಏಕಿ ಬಿಡಬೇಕು ಅನಿಸೋದು ಏಕೆ?


1.ವೈಯಕ್ತಿಕ ಸಮಸ್ಯೆಗಳಿಂದ ಕೆಲಸ ಬಿಟ್ಟು ಊರಿಗೆ ಹೋಗಬೇಕಾಗಬಹುದು. ಆರೋಗ್ಯ ಸಮಸ್ಯೆಯಿಂದ ದೀರ್ಘ ರಜೆಯ ಅಗತ್ಯ ಬೀಳಬಹುದು.


2. ಬೇರೆ ಕಂಪನಿಯಲ್ಲಿ ಹೆಚ್ಚಿನ ಸಂಬಳ, ಆಕರ್ಷಕ ಹುದ್ದೆ ಸಿಗಬಹುದು. ಹೊಸ ಕಂಪನಿಯವರು ತಕ್ಷಣವೇ ಅವರಲ್ಲಿ ನೇಮಕ ಆಗಲು ಒತ್ತಡ ಹಾಕಬಹುದು.


3. ಕಚೇರಿಯಲ್ಲಿನ ಕೆಟ್ಟ ವಾತಾವರಣ ನಿಮ್ಮನ್ನು ತಕ್ಷಣವೇ ಬಿಡಬೇಕು ಅನಿಸುವಂತೆ ಮಾಡಬಹುದು. ಬಾಸ್​ನಿಂದ ಟಾರ್ಚರ್​, ಸಹೋದ್ಯೋಗಿಗಳ ಗಾಸಿಪ್​​​​​​​​​​​​, ಅವಮಾನ ಕಾರಣವಾಗಬಹುದು.


4. ಆಫೀಸ್​ನಲ್ಲಿ ನೀವು ಬಯಸಿದ ಪ್ರೊಮೋಷನ್​, ವೇತನ ಹೆಚ್ಚಳ ಸಿಗದಿರುವುದು ನಿಮ್ಮನ್ನು ಹತಾಷರಾಗಿಸಬಹುದು.


Office Behavior Tips avoid this behavior in office it will damage your career kvd
ಸಾಂದರ್ಭಿಕ ಚಿತ್ರ


ಏಕಾಏಕಿ ಕೆಲಸ ಬಿಟ್ಟರೆ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು?


ನೀವು ಏಕಾಏಕಿ ಕೆಲಸ ಬಿಟ್ಟರೆ ಕೆಲವೊಂದು ಸಂಸ್ಥೆಗಳು ನೋಟಿಸ್​ ಪಿರಿಯಡ್​​ ಪೂರ್ಣಗೊಳಿಸಲು ಕೇಳುತ್ತವೆ. ಇಲ್ಲವಾದಲ್ಲಿ 2 ತಿಂಗಳ ವೇತನವನ್ನು ನೀಡಬೇಕೆಂದು ಷರತ್ತು ಹಾಕಬಹುದು. ಬಾಸ್​ ಜೊತೆ ನಿಮ್ಮ ಸಂಬಂಧ ಕೆಡಬಹುದು. ಆಫೀಸ್​ನಲ್ಲೂ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆಗಳಿರುತ್ತವೆ. ಸಡನ್​ ಆಗಿ ಕೆಲಸ ಬಿಟ್ಟಾಗ ಬೇರೆಡೆ ಮತ್ತೆ ಕೆಲಸ ಸಿಗುವಲ್ಲಿ ತಡಬಾಗಬಹುದು. ಸಂಬಳವಿಲ್ಲದೆ ಈ ಸಮಯದಲ್ಲಿ ನಿಮ್ಮ ಹಣಕಾಸಿನ ಕಮಿಟ್​ಮೆಂಟ್​ ನಿಮಗೆ ಹೊರೆಯಾಗಬಹುದು. ಉಳಿತಾಯದ ಹಣವಿದ್ದರೆ EMIಗಳನ್ನು ನಿಭಾಯಿಸಬಹುದು. ಕೆಲಸದಲ್ಲಿರುವ ಉದ್ಯೋಗಿಗೆ ಬೇರೆ ಕಂಪನಿಗಳಿಂದ ಡಿಮ್ಯಾಂಡ್​ ಇರುತ್ತದೆ. ಆದರೆ ಯಾವುದೇ ಕೆಲಸದಲ್ಲಿ ಇಲ್ಲದೇ ಇರುವವರನ್ನು ನೇಮಿಸಿಕೊಳ್ಳಲು ಕೆಲ ಕಂಪನಿಗಳು ಹಿಂದೆಮುಂದೆ ನೋಡಬಹುದು.


how to avoid fighting at office
ಸಾಂದರ್ಭಿಕ ಚಿತ್ರ


ಯಾವ ಸಂದರ್ಭದಲ್ಲಿ ಉದ್ಯೋಗಿ ಸಡನ್ ಆಗಿ ಕೆಲಸ ಬಿಡಬಹುದು?


ಸಡನ್​ ಆಗಿ ಕೆಲಸ ಬಿಡುವುದು ಅಸಾಧ್ಯವಾದ ವಿಷಯವೇನು ಅಲ್ಲ. ಕೆಲವೊಮ್ಮೆ ಸೂಕ್ತವಾದ ಕಾರಣಗಳಿದ್ದರೆ ನೀವು ನೋಟಿಸ್​ ಪಿರಿಯಡ್​ ಮಾಡದೇ ಕೆಲಸವನ್ನು ಬಿಡಬಹುದು. ಕೌಟುಂಬಿಕ ಕಾರಣಗಳು, ದೂರದ ಊರಿಗೆ ಹೋಗಲೇಬೇಕಾದ ಸಂದರ್ಭದಲ್ಲಿ ಸಂಸ್ಥೆಗೆ ಇಲ್ಲವೇ ನಿಮ್ಮ ಉದ್ಯೋಗದಾತರಿಗೆ ನಿಮ್ಮ ಪರಿಸ್ಥಿತಿಯನ್ನು ತಿಳಿಸಿ, ಅವರ ಮನವೊಲಿಸಬಹುದು. ನಿಮ್ಮ ಹುದ್ದೆಗೆ ಬೇರೆಯವರನ್ನು ನೇಮಿಸಲು ಸೂಚಿಸಿ, ಪರ್ಯಾಯ ವ್ಯವಸ್ಥೆಯನ್ನು ಮಾಡಿ ಕೂಡಲೇ ನೀವು ಕೆಲಸವನ್ನು ಬಿಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಮೇಲೆ ಆಪಾದನೆ, ಕೆಟ್ಟ ಅಭಿಪ್ರಾಯ ಮೂಡುವುದನ್ನು ತಡೆಯಬಹುದು.


ಇದನ್ನೂ ಓದಿ: Job Interview Tips: ನಿಮ್ಮ ಬಗ್ಗೆ ಹೇಳಿ: ಜಾಬ್ ಇಂಟರ್​ವ್ಯೂನಲ್ಲಿ ಕೇಳುವ ಈ ಮೊದಲ ಪ್ರಶ್ನೆಗೆ ನಿಮ್ಮ ಉತ್ತರ ಹೀಗಿರಲಿ


ಕಂಪನಿಯ ರೂಲ್ಸ್​ ಪ್ರಕಾರ 1 ತಿಂಗಳ ಸಂಬಳ ಇಲ್ಲವೇ ನೋಟಿಸ್​ ಪಿರಿಯಡ್​ ಸಮಯದ ವೇತನವನ್ನು ನೀಡಿ ನೀವು ಕೂಡಲೇ ಕೆಲಸ ಬಿಡಬಹುದು. ಕೆಲವೊಮ್ಮೆ ನಿಮಗೆ ಹೊಸ ಕೆಲಸವನ್ನು ನೀಡುತ್ತಿರುವ ಸಂಸ್ಥೆಯವರೇ ಈ ಮೊತ್ತವನ್ನು ಭರಿಸಲು ಮುಂದಾಗುತ್ತವೆ. ನಿಮ್ಮನ್ನು ಕೂಡಲೇ ಅವರ ಕಂಪನಿಗೆ ಸೇರಿಸಿಕೊಳ್ಳಲು ಹಿಂದಿನ ಸಂಸ್ಥೆಯ ನೋಟಿಸ್​ ಪಿರಿಯಡ್​ ಹಣವನ್ನು ನೀಡಲು ಸಿದ್ಧರಿರುತ್ತಾರೆ. ಕೊನೆಯದಾಗಿ ಕೆಲಸ ಬಿಡುವ ಮುನ್ನ ನೀವು ಎಲ್ಲವನ್ನೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

Published by:Kavya V
First published: