• Home
 • »
 • News
 • »
 • career
 • »
 • Career Tips: ನಿಮ್ಮ ರೆಸ್ಯೂಮ್​ನಲ್ಲಿ ಕಂಪನಿಯ HR ಏನನ್ನು ನೋಡ್ತಾರೆ ಎಂದು ತಿಳಿಯಿರಿ

Career Tips: ನಿಮ್ಮ ರೆಸ್ಯೂಮ್​ನಲ್ಲಿ ಕಂಪನಿಯ HR ಏನನ್ನು ನೋಡ್ತಾರೆ ಎಂದು ತಿಳಿಯಿರಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವೈಯಕ್ತಿಕ ಚಟುವಟಿಕೆಗಳ ಬಗ್ಗೆ ಸಹ ರೆಸ್ಯೂಮ್ ನಲ್ಲಿ ಉಲ್ಲೇಖಿಸಿ. ನೇಮಕಾತಿದಾರರು ಹೆಚ್ಚಿನ ಸಂಖ್ಯೆಯ ರೆಸ್ಯೂಮ್ ಗಳಲ್ಲಿ ನಿಖರವಾಗಿ ಇದೇ ವಿಷಯಗಳನ್ನು ನೋಡುತ್ತಾರೆ, ಆದ್ದರಿಂದ ಪ್ರಮುಖ ವೈಯಕ್ತಿಕ ಚಟುವಟಿಕೆಗಳ ಬಗ್ಗೆ ಬರೆಯುವಾಗ ನಿಮಗಿರುವ ಹವ್ಯಾಸಗಳನ್ನು ಸಹ ನಿಮ್ಮ ರೆಸ್ಯೂಮ್ ನಲ್ಲಿ ಬರೆಯಿರಿ.

ಮುಂದೆ ಓದಿ ...
 • Share this:

  ಸಾಮಾನ್ಯವಾಗಿ ನಾವು ಯಾವುದಾದರೂ ಕೆಲಸ ಹುಡುಕುವಾಗ (Jobs Search) ನಮ್ಮ ಬಗ್ಗೆ ಮಾಹಿತಿ ಇರುವ ರೆಸ್ಯೂಮ್  (Resume) ಅನ್ನು ಮೊದಲು ಅವರಿಗೆ ಕಳುಹಿಸುತ್ತೇವೆ. ಎಷ್ಟೋ ಬಾರಿ ನಮ್ಮ ಆ ರೆಸ್ಯೂಮ್ ನೋಡಿ ಕೆಲವೊಮ್ಮೆ ತಕ್ಷಣಕ್ಕೆ ಕಂಪನಿಯ ಎಚ್ ಆರ್ (HR) ಕರೆ ಮಾಡಿ ವಿಚಾರಿಸಿದರೆ, ಇನ್ನೂ ಎಷ್ಟೋ ಸಂದರ್ಭಗಳಲ್ಲಿ ಕಂಪನಿಯವರಿಂದ ಯಾವುದೇ ರೀತಿಯ ಕರೆಗಳು ಸಹ ಬರುವುದಿಲ್ಲ. ಹೀಗೇಕೆ ಆಗುತ್ತದೆ? ಕಂಪನಿಯವರು ನಮ್ಮ ರೆಸ್ಯೂಮ್ ನೋಡಿ ಏಕೆ ಕರೆ ಸಹ ಮಾಡುವುದಿಲ್ಲ ಅಂತ ಅನೇಕ ಬಾರಿ ಬಹುತೇಕರು ಚಿಂತೆಗೀಡಾಗಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಎಷ್ಟೋ ಜನ ಕೆಲಸ ಮಾಡುವ ಉದ್ಯೋಗಿಗಳಿಗೆ ತಮ್ಮ ರೆಸ್ಯೂಮ್ ನಲ್ಲಿ ಏನೆಲ್ಲಾ ಬರೀಬೇಕು ಅಂತಾನೆ ಗೊತ್ತಿರುವುದಿಲ್ಲ.


  ಕೆಲವೊಮ್ಮೆ ನಾವು ನಮ್ಮ ವೃತ್ತಿಜೀವನದಲ್ಲಿ ಮಾಡಿರುವ ಕೆಲಸದ ಬಗ್ಗೆ ಎಲ್ಲವನ್ನೂ ರೆಸ್ಯೂಮ್ ನಲ್ಲಿ ಬರೆದಿದ್ದರೂ ಸಹ ನಮಗೆ ಉದ್ಯೋಗದಾತರ ಕಡೆಯಿಂದ ಯಾವುದೇ ಪ್ರತಿಕ್ರಿಯೆಯು ಸಹ ಸಿಗುವುದಿಲ್ಲ. ಕಂಪನಿಗಳಿಗೆ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವ ಎಚ್ ಆರ್ ಕೆಲಸವೆ ಅಸಾಧಾರಣವಾದ ಗೊಂದಲದ ಗೂಡಾಗಿರುತ್ತದೆ ಅಂತ ಹೇಳಬಹುದು. ವಿವಿಧ ಸಂಘಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ನೇಮಕಗೊಂಡವರನ್ನು ಪತ್ತೆ ಹಚ್ಚಲು ಅವರು ಸಮಯಕ್ಕೆ ಸರಿಯಾಗಿ ಅಭ್ಯರ್ಥಿಗಳನ್ನು ಹುಡುಕಬೇಕು.


  ಇದರ ಜೊತೆಗೆ, ಕಂಪನಿಯಲ್ಲಿರುವ ಮೇಲಾಧಿಕಾರಿಗಳಿಗೆ ಪ್ರಸ್ತುತಪಡಿಸಲು ಒಳ್ಳೆಯ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲು ಅವರು ರೆಸ್ಯೂಮ್ ಗಳ ರಾಶಿಯನ್ನು ನಿರ್ವಹಿಸಬೇಕಾಗುತ್ತದೆ. ಉದ್ಯೋಗ ಅರ್ಜಿಗಳನ್ನು ನಿರ್ಣಯಿಸುವಾಗ, ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವವರು ತಮ್ಮದೇ ಆದ ವಿಶಿಷ್ಟ ವಿಧಾನಗಳನ್ನು ಹೊಂದಿರುತ್ತಾರೆ ಅಂತ ಹೇಳಬಹುದು.


  ರೆಸ್ಯೂಮ್ ಅರ್ಜಿದಾರರ ಬಗ್ಗೆ ತುಂಬಾ ಮಾಹಿತಿಯನ್ನು ತಿಳಿಸುತ್ತದೆ..


  ಈ ರೆಸ್ಯೂಮ್ ನಲ್ಲಿರುವ ಕೆಲವು ವಿವರಗಳು ಅರ್ಜಿದಾರರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಬಹಿರಂಗಪಡಿಸಬಹುದು ಮತ್ತು ಅವರು ತಮ್ಮ ಸ್ವವಿವರದಲ್ಲಿ ತಮ್ಮನ್ನು ಪ್ರಸ್ತುತಪಡಿಸುವ ವಿಧಾನವು ಅವರು ನಿಜವಾಗಿಯೂ ಯಾರು ಎಂಬುದು ಅರ್ಥವಾಗುತ್ತದೆ. ಕಂಪನಿಯವರ ಬೇಡಿಕೆಗಳನ್ನು ನಿಮ್ಮ ಕೌಶಲ್ಯಗಳು ಮತ್ತು ನಿಮ್ಮ ಕೆಲಸದ ಅನುಭವ ಸಹಾಯವಾಗುತ್ತದೆ ಅಂತ ನೇಮಕಾತಿ ಮಾಡಿಕೊಳ್ಳುವವರಿಗೆ ಒಂದು ಕ್ಷಣ ಅನ್ನಿಸಿದರೆ ಸಾಕು ಅಲ್ಲಿಗೆ ನಿಮ್ಮ ಕೆಲಸ ಆದಂತೆಯೇ ಅಂತ ತಿಳಿದುಕೊಳ್ಳಬಹುದು.


  ನೇಮಕಾತಿದಾರರಿಗೆ ಬಹಳ ಕಡಿಮೆ ಸಮಯವಿರುವುದರಿಂದ, ನಿಮ್ಮ ರೆಸ್ಯೂಮ್ ಅನ್ನು ಒಮ್ಮೆ ಕಣ್ಣಾಡಿಸಿ ನೋಡಿದರೆ ಸಾಕು ಅವರಿಗೆ ನಿಮ್ಮ ಬಗ್ಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ.
  ಅರ್ಜಿದಾರರನ್ನು ಪರೀಕ್ಷಿಸಲು ಮತ್ತು ಉತ್ತಮ ಅಭ್ಯರ್ಥಿಗಳನ್ನು ಶಿಫಾರಸು ಮಾಡಲು ಅರ್ಜಿದಾರರ ಟ್ರ್ಯಾಕಿಂಗ್ ವ್ಯವಸ್ಥೆ ಎಂದರೆ ಎಟಿಎಸ್ ಅನ್ನು ಸಹ ಬಳಸಲಾಗುತ್ತದೆ. ಒಂದು ಉದ್ಯೋಗಕ್ಕಾಗಿ ಉತ್ತಮ ಅಭ್ಯರ್ಥಿಗಳನ್ನು ಗುರುತಿಸುವ ಸಲುವಾಗಿ ಇದು ಅರ್ಜಿದಾರರ ಪ್ರಾಥಮಿಕ ವಿಶ್ಲೇಷಣೆಯನ್ನು ನಡೆಸಬಹುದು.


  ಇದು ಕೀವರ್ಡ್ ಗಳಿಗಾಗಿಯೂ ಸಹ ನೋಡಬಹುದು ಅಥವಾ ಉದ್ಯೋಗ ಅರ್ಜಿದಾರರ ಬಗ್ಗೆ ಹೆಚ್ಚು ಆಳವಾದ ವಿಶ್ಲೇಷಣೆಯನ್ನು ನಡೆಸಲು ಎಐ-ತರಹದ ಕ್ರಮಾವಳಿಗಳನ್ನು ಬಳಸಬಹುದು. ಎಚ್ ಆರ್ ನಿಂದ ಉದ್ಯೋಗ ಅರ್ಜಿಗಳು ಮತ್ತು ರೆಸ್ಯೂಮ್ ಗಳ ಪರಿಶೀಲನೆಯನ್ನು ತ್ವರಿತಗೊಳಿಸುವುದು ಇದರ ಗುರಿಯಾಗಿದೆ. ಹಾಗಾದರೆ ಈ ರೆಸ್ಯೂಮ್ ಹೇಗಿರಬೇಕು ಮತ್ತು ಇದರಲ್ಲಿ ಯಾವೆಲ್ಲಾ ಅಂಶಗಳು ಇರಬೇಕು ಅಂತ ತಿಳಿದುಕೊಳ್ಳೋಣ ಬನ್ನಿ.


  ರೆಸ್ಯೂಮ್ ನಲ್ಲಿ ಇರಬೇಕಾದ ಪ್ರಮುಖ ಅಂಶಗಳು


  1. ವೃತ್ತಿಜೀವನದ ಹರಿವು


  ವೃತ್ತಿಜೀವನದ ಪ್ರಗತಿಯ ವೇಗವು ಕಲಿಕೆಯ ನಿರಂತರತೆ ಮತ್ತು ವೇಗವನ್ನು ಅವಲಂಬಿಸಿರುತ್ತದೆ. ಆಗಾಗ್ಗೆ ಕೆಲಸಗಳನ್ನು ಬದಲಾಯಿಸುವುದರಿಂದ ಒಂದು ಕಂಪನಿಯಲ್ಲಿ ಉಳಿದುಕೊಂಡು ಕೆಲಸವನ್ನು ಚೆನ್ನಾಗಿ ಅರಿತುಕೊಂಡು ಕಂಪನಿಯ ಯಶಸ್ಸಿನ ಹಾದಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಆಗುವುದಿಲ್ಲ ಅಂತ ಅನೇಕರು ಹೇಳುತ್ತಾರೆ. ಸಾಕಷ್ಟು ಬಾರಿ ಕೆಲಸಗಳನ್ನು ಬದಲಾಯಿಸುವುದರಿಂದ ವ್ಯಕ್ತಿಯಲ್ಲಿ ದೃಢನಿರ್ಧಾರ ಮತ್ತು ಸಾಮರ್ಥ್ಯವನ್ನು ಹೊಂದಿಲ್ಲ ಅಂತಾನೂ ಸಹ ಅರ್ಥ ಮಾಡಿಕೊಳ್ಳುತ್ತಾರೆ.


  2. ರೆಸ್ಯೂಮ್ ಕವರ್ ಲೆಟರ್ ಕೆಲಸದ ವಿವರಣೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿರಬೇಕು


  ಒಬ್ಬ ನೇಮಕಾತಿದಾರನು ಸಾಮಾನ್ಯವಾಗಿ ನಿಮ್ಮ ಕೆಲಸದ ಅನುಭವ, ಮಾಹಿತಿ ಮತ್ತು ಸಾಮರ್ಥ್ಯಗಳ ಬಗ್ಗೆ ಆಗಾಗ್ಗೆ ಯೋಚಿಸಿದರೂ, ಅವರು ನಿಮ್ಮ ರೆಸ್ಯೂಮ್ ನಲ್ಲಿರುವ ಸಾಮಾನ್ಯ ಸಂಗತಿಗಳನ್ನು ಗಮನಿಸುತ್ತಾರೆ. ಅಭ್ಯರ್ಥಿಯ ರೆಸ್ಯೂಮ್ ಮತ್ತು ಕವರ್ ಲೆಟರ್ ಕೆಲಸದ ವಿವರಣೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿರಬೇಕು. ಸ್ವವಿವರವು ಕೆಲಸದ ಅನುಭವ, ಶಿಕ್ಷಣ, ಕೌಶಲ್ಯಗಳು ಮತ್ತು ಉದ್ಯೋಗವಕಾಶ ಅಥವಾ ಅಪ್ಲಿಕೇಶನ್ ಗೆ ಸಂಬಂಧಿಸಿದ ಸಾಧನೆಗಳನ್ನು ಸ್ಪಷ್ಟವಾಗಿ ಹೇಳಬೇಕು ಮತ್ತು ಪ್ರದರ್ಶಿಸಬೇಕು.


  ಸಾಂದರ್ಭಿಕ ಚಿತ್ರ


  3. ಹಿಂದಿನ ಕೆಲಸದ ಅನುಭವ


  ನೇಮಕಾತಿದಾರರು ಸಾಮಾನ್ಯವಾಗಿ ಆರಂಭದಲ್ಲಿ ನಿಮ್ಮ ರೆಸ್ಯೂಮ್ ಕೈಗೆ ಬಂದಾಗ ಅದರಲ್ಲಿ ನೀವು ಮಾಡಿದ ಕೆಲಸದ ಇತಿಹಾಸವನ್ನು ನೋಡುತ್ತಾರೆ. ಅದರಿಂದ ಅವರಿಗೆ ನೀವು ಅವರು ಹುಡುಕುತ್ತಿರುವ ಸರಿಯಾದ ಅಭ್ಯರ್ಥಿಯೇ ಅಥವಾ ಅಲ್ಲವೇ ಅಂತ ಅವರಿಗೆ ಕೂಡಲೇ ಅರ್ಥವಾಗುತ್ತದೆ. ಹಾಗಾಗಿ ನಿಮ್ಮ ರೆಸ್ಯೂಮ್ ನಲ್ಲಿ ನೀವು ಹಿಂದೆ ಮಾಡಿದ ಕೆಲಸಗಳ ಅನುಭವದ ಬಗ್ಗೆ ವಿವರವಾಗಿ ಬರೆಯಬೇಕು.


  ಕೆಲಸದ ಶೀರ್ಷಿಕೆ


  ಸಂಸ್ಥೆಯ ಹೆಸರು


  ಕೆಲಸದ ದಿನಾಂಕಗಳು


  ನೀವು ಈ ಹಿಂದೆ ಮಾಡಿದ ಕೆಲಸಗಳು: ನಿಮ್ಮ ಹಿಂದೆ ಮಾಡಿದ ಕೆಲಸಗಳನ್ನು ಪಟ್ಟಿ ಮಾಡಿ ಮತ್ತು ಅದಕ್ಕೆ ಒಂದು ನಿರ್ಣಾಯಕ ಐಟಿ ಚೌಕಟ್ಟುಗಳನ್ನು ಅಳವಡಿಸಿಕೊಳ್ಳಿ. ಈ ಕಾಂಪ್ಯಾಕ್ಟ್ ಅನ್ನು ಇರಿಸಿಕೊಳ್ಳಿ. ಕನಿಷ್ಠ 5 ಅಥವಾ 6 ರಷ್ಟನ್ನು ಅದರಲ್ಲಿ ಸೇರಿಸಿ, ನೀವು ನಿರಂತರವಾಗಿ ಕೆಲಸದಲ್ಲಿ ಏನು ಮಾಡಿದ್ದೀರಿ ಎಂಬುದರ ಮೇಲೆ ಕೇಂದ್ರೀಕರಿಸಿ.


  ಸಾಧನೆಗಳು: ನೀವು ಈ ಹಿಂದೆ ಕಂಪನಿಗಳಲ್ಲಿ ಕೆಲಸ ಮಾಡುವಾಗ ನೀವು ಮಾಡಿದ ನಿರ್ಣಾಯಕ ಸಾಧನೆಗಳನ್ನು ಸಹ ಅದರಲ್ಲಿ ಬರೆಯಿರಿ.


  4. ರೆಸ್ಯೂಮ್ ನಲ್ಲಿ ವ್ಯಾಕರಣ ದೋಷಗಳು ಮತ್ತು ಕಾಗುಣಿತ ದೋಷಗಳಿರಬಾರದು


  ರೆಸ್ಯೂಮ್ ಅನ್ನು ಕಳುಹಿಸುವಾಗ ಅದರಲ್ಲಿ ಕಾಗುಣಿತ ಮತ್ತು ವ್ಯಾಕರಣವು ತುಂಬಾನೇ ಮುಖ್ಯವಾಗಿರುತ್ತದೆ. ರೆಸ್ಯೂಮ್ ಎಂಬುದು ಆತುರ ಪಡದೇ ಮತ್ತು ತುಂಬಾ ಸಮಯ ತೆಗೆದುಕೊಂಡು ಬರೆಯುವ ಒಂದು ದಾಖಲೆಯಾಗಿದೆ. ಅರ್ಜಿದಾರರು ಅದನ್ನು ಸಲ್ಲಿಸುವ ಮೊದಲು ಅದನ್ನು ಓದಲು, ಪರಿಶೀಲಿಸಲು, ಟ್ವೀಕ್ ಮಾಡಲು ಮತ್ತು ಅದನ್ನು ಎಡಿಟ್ ಮಾಡಲು ಸಾಕಷ್ಟು ಸಮಯ ಅದಕ್ಕೆ ನೀಡಿ.


  5. ನಿಮಗಿರುವ ವಿಶೇಷವಾದ ಕೌಶಲ್ಯಗಳನ್ನು ಸಹ ಉಲ್ಲೇಖಿಸಿ


  ರೆಸ್ಯೂಮ್ ಗಳು ಮತ್ತು ಉದ್ಯೋಗ ಅಪ್ಲಿಕೇಶನ್ ಗಳ ಆನ್ಲೈನ್ ಪ್ರೊಫೈಲ್ ಗಳು ಅಭ್ಯರ್ಥಿಯ ಬಗ್ಗೆ ತುಂಬಾ ಹೇಳಬಹುದು. ಇತ್ತೀಚಿನ ದಿನಗಳಲ್ಲಿ, ನೇಮಕಾತಿದಾರರು ಸೂಕ್ತವಾದ ಕೆಲಸದ ಅನುಭವವನ್ನು ಹೊಂದಿರುವ ಮತ್ತು ಅವರ ಕೌಶಲ್ಯಗಳನ್ನು ಜೀವಂತಗೊಳಿಸುವ ವಿಶೇಷವಾದದ್ದನ್ನು ಹೊಂದಿರುವ ಯಾರನ್ನಾದರೂ ನೇಮಿಸಿಕೊಳ್ಳಲು ಬಯಸುತ್ತಾರೆ. ಆದ್ದರಿಂದ, ಅವರು ನೈಜತೆ ಇರುವ ಮತ್ತು ಸ್ವಯಂ ಪ್ರಜ್ಞೆ ಇರುವ ಕೆಲಸಗಾರನನ್ನು ಹುಡುಕುತ್ತಿರುತ್ತಾರೆ.


  ಇದನ್ನೂ ಓದಿ: Online Interview ನೀಡುವುದು ಹೇಗೆ? ಇವುಗಳ ಬಗ್ಗೆ ಕಾಳಜಿ ವಹಿಸಿದರೆ ಖಂಡಿತ ಕೆಲಸ ಸಿಗುತ್ತದೆ


  6. ರೆಸ್ಯೂಮ್ ಅನ್ನು ಆಕರ್ಷಕವಾಗಿ ಕಾಣುವಂತೆ ತಯಾರಿಸಿ


  ರೆಸ್ಯೂಮ್ ಗಳನ್ನು ತುಂಬಾ ಆಕರ್ಷಕವಾಗಿ ಕಾಣುವಂತೆ ಮಾಡಲು ಅದರಲ್ಲಿ ಸ್ವಲ್ಪ ಸುಂದರವಾಗಿ ಮತ್ತು ಸ್ಟೈಲಿಶ್ ಆಗಿರುವಂತಹ ಅಕ್ಷರಗಳ ಫಾಂಟ್ ಗಳನ್ನು ಬಳಸುವುದು, ಆಕರ್ಷಕವಾದ ವಿನ್ಯಾಸವನ್ನು ಬಳಸುವುದು ಸಹ ಆಗಿರಬಹುದು. ಎಷ್ಟೋ ರೆಸ್ಯೂಮ್ ಗಳು ನೋಡಲು ತುಂಬಾನೇ ಮಂದವಾಗಿ ಕಾಣುತ್ತವೆ. ಹೀಗಾಗಿ ಅನೇಕ ನೇಮಕಾತಿದಾರರು ಅದನ್ನು ಚೆನ್ನಾಗಿ ಗಮನಿಸದೆ ಹೋಗುವ ಅವಕಾಶಗಳು ಸಹ ಇರುತ್ತವೆ.


  ನಿಜವಾಗಿಯೂ ಅವರ ಕಣ್ಣನ್ನು ನಿಮ್ಮ ರೆಸ್ಯೂಮ್ ಸೆಳೆಯಬೇಕು ಅಂತ ಅನ್ನಿಸಿದರೆ, ನೀವು ಆಹ್ಲಾದಕರವಾದ ಟೈಪೊಗ್ರಫಿಯನ್ನು ಬಳಸಿರಿ. ಕೇವಲ ಒಂದು ವಿನ್ಯಾಸವನ್ನು ನಿಮ್ಮ ರೆಸ್ಯೂಮ್ ನಲ್ಲಿ ಬಳಸಿಕೊಳ್ಳಬೇಡಿ. ವಿಶೇಷವಾಗಿ ನೀವು ಹೊಸ ಕ್ಷೇತ್ರ, ವಿಶೇಷತೆ ಅಥವಾ ಉದ್ಯಮದಲ್ಲಿ ಕೆಲಸವನ್ನು ಹುಡುಕುತ್ತಿದ್ದೀರಿ ಎಂದಾದಲ್ಲಿ ನಿಮ್ಮ ರೆಸ್ಯೂಮ್ ಅನ್ನು ಆಕರ್ಷಕವಾಗಿ ಮಾಡಿರಿ.


  7. ವೈಯಕ್ತಿಕ ಚಟುವಟಿಕೆಗಳ ಬಗ್ಗೆ ಸಹ ರೆಸ್ಯೂಮ್ ನಲ್ಲಿ ಉಲ್ಲೇಖಿಸಿ


  ನೇಮಕಾತಿದಾರರು ಹೆಚ್ಚಿನ ಸಂಖ್ಯೆಯ ರೆಸ್ಯೂಮ್ ಗಳಲ್ಲಿ ನಿಖರವಾಗಿ ಇದೇ ವಿಷಯಗಳನ್ನು ನೋಡುತ್ತಾರೆ, ಆದ್ದರಿಂದ ಪ್ರಮುಖ ವೈಯಕ್ತಿಕ ಚಟುವಟಿಕೆಗಳ ಬಗ್ಗೆ ಬರೆಯುವಾಗ ನಿಮಗಿರುವ ಹವ್ಯಾಸಗಳನ್ನು ಸಹ ನಿಮ್ಮ ರೆಸ್ಯೂಮ್ ನಲ್ಲಿ ಬರೆಯಿರಿ. ಹಾಗೆ ಬರೆಯುವುದರಿಂದ ನಿಮ್ಮ ಬಗ್ಗೆ ನೇಮಕಾತಿದಾರರು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಅಂತ ಹೇಳಬಹುದು.


  8. ನಿಮ್ಮನ್ನು ನೀವು ಹೇಗೆ ಪ್ರಸ್ತುತಪಡಿಸಿಕೊಳ್ಳುತ್ತೀರಿ ಎಂಬುದು ತುಂಬಾ ಮುಖ್ಯ


  ನಾವು ಉದ್ಯೋಗ ಅರಿಸಿ ಕಳುಹಿಸುವ ರೆಸ್ಯೂಮ್, ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ಎತ್ತಿ ತೋರಿಸುವಂತಿರಬೇಕು ಮತ್ತು ಈ ಆತ್ಮವಿಶ್ವಾಸ ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬವಾಗಿರುತ್ತದೆ ಅಂತ ಹೇಳಬಹುದು. ಅಭ್ಯರ್ಥಿಯು ಒಬ್ಬ ವ್ಯಕ್ತಿಯಾಗಿ ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸುತ್ತಾನೆ ಎಂಬುದರ ಬಗ್ಗೆ ನೇಮಕಾತಿದಾರರು ಯಾವಾಗಲೂ ಆಸಕ್ತಿ ಹೊಂದಿರುತ್ತಾರೆ.


  ಅವರು ಏನನ್ನು ಒತ್ತಿ ಹೇಳುತ್ತಾರೆ? ಅವರು ತಮ್ಮ ಅನುಭವದ ಬಗ್ಗೆ ಮಾತನಾಡುವ ರೀತಿ ಹೇಗಿದೆ? ಅವರು ಇನ್ನೊಬ್ಬರ ಜೊತೆ ಹೇಗೆ ಮಾತಾಡುತ್ತಾರೆ? ಹೀಗೆ ಎಲ್ಲದರ ಬಗ್ಗೆ ಅರ್ಥಮಾಡಿಕೊಳ್ಳಲು ಅಭ್ಯರ್ಥಿಗಳನ್ನು ಅವರ ಬಗ್ಗೆ ಹೇಳಲು ಕೇಳಲಾಗುತ್ತದೆ.

  Published by:Kavya V
  First published: