• Home
  • »
  • News
  • »
  • career
  • »
  • Maternity Leave Planning: ಮಹಿಳಾ ಉದ್ಯೋಗಿಗಳು ಹೆರಿಗೆ ರಜೆಯನ್ನು ಹೇಗೆ ಪ್ಲ್ಯಾನ್ ಮಾಡಬೇಕು?

Maternity Leave Planning: ಮಹಿಳಾ ಉದ್ಯೋಗಿಗಳು ಹೆರಿಗೆ ರಜೆಯನ್ನು ಹೇಗೆ ಪ್ಲ್ಯಾನ್ ಮಾಡಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆರಿಗೆಗೂ ಮುನ್ನ ಗರ್ಭವತಿಯಾಗಿ 9 ತಿಂಗಳುಗಳ ಕಾಲ ನೀವು ಕಚೇರಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ವೇಳೆ ನಿಮ್ಮ ಆಫೀಸ್​ ಎಷ್ಟರ ಮಟ್ಟಿಗೆ ನಿಮ್ಮ ನೆರವಿಗೆ ನಿಲ್ಲುತ್ತದೆ ಎಂಬುವುದು ತುಂಬಾನೇ ಮುಖ್ಯ. ಹಾಗಾದರೆ ಮಹಿಳಾ ಉದ್ಯೋಗಿ ತನ್ನ ಹೆರಿಗೆ ರಜೆಯನ್ನು ಹೇಗೆ ಪ್ಲ್ಯಾನ್​​​ ಮಾಡಬೇಕು ಎಂದು ತಿಳಿಯೋಣ.

ಮುಂದೆ ಓದಿ ...
  • Share this:

ತಾಯಿಯಾಗುವುದು (Motherhood) ಪ್ರತಿಯೊಬ್ಬ ಮಹಿಳೆಗೂ ವಿಶೇಷ. ಮಹಿಳಾ ಉದ್ಯೋಗಿಯಾಗಿದ್ದು (Woman Employee) ನೀವು ಗರ್ಭಧರಿಸಲು (Pregnancy) ನಿರ್ಧರಿಸಿದ್ದರೆ, ಕೆಲವೊಂದು ವಿಚಾರಗಳನ್ನು ಮೊದಲೇ ತಿಳಿದುಕೊಳ್ಳಬೇಕು. ಮಹಿಳಾ ಉದ್ಯೋಗಿ ಹೆರಿಗೆ ರಜೆ (Maternity Leave) ತೆಗೆದುಕೊಂಡು ಹೋಗುವುದು ಆಕೆಯ ಕರಿಯರ್​ಗೆ ಮೈನಸ್​ ಪಾಯಿಂಟ್​ ಎನ್ನುವ ಕಾಲ ಈಗ ಇಲ್ಲ. ತಾಯಿಯಾಗುವುದರ ಜೊತೆಗೆ ಆಕೆ ಒಳ್ಳೆಯ ಉದ್ಯೋಗಿಯೂ ಆಗಬಹುದು. ಕಾರ್ಮಿಕರ ಕಾನೂನು ಪ್ರಕಾರ ಹೆರಿಯಾದ ದಿನದಿಂದ ಅಂದಾಜು 6 ತಿಂಗಳುಗಳ ಕಾಲ ವೇತನ ಸಹಿತ ರಜೆಯನ್ನು ನೀಡಬೇಕು. ಈ ಬಗ್ಗೆ ನೀವು ಕೆಲಸ ಮಾಡುವ ಕಂಪನಿಯಲ್ಲಿನ ಎಚ್​ ಆರ್​ ಡಿಪಾರ್ಟ್​ಮೆಂಟ್​ ಸದಸ್ಯರೊಂದಿಗೆ ಮಾತನಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.


ಆದರೆ ಹೆರಿಗೆಗೂ ಮುನ್ನ ಗರ್ಭವತಿಯಾಗಿ 9 ತಿಂಗಳುಗಳ ಕಾಲ ನೀವು ಕಚೇರಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ವೇಳೆ ನಿಮ್ಮ ಆಫೀಸ್​ ಎಷ್ಟರ ಮಟ್ಟಿಗೆ ನಿಮ್ಮ ನೆರವಿಗೆ ನಿಲ್ಲುತ್ತದೆ ಎಂಬುವುದು ತುಂಬಾನೇ ಮುಖ್ಯ. ಹಾಗಾದರೆ ಮಹಿಳಾ ಉದ್ಯೋಗಿ ತನ್ನ ಹೆರಿಗೆ ರಜೆಯನ್ನು ಹೇಗೆ ಪ್ಲ್ಯಾನ್​​​ ಮಾಡಬೇಕು ಎಂದು ತಿಳಿಯೋಣ.


1.  ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಇರಲಿ: ನೀವು ಗರ್ಭವತಿಯಾದ ಕೂಡಲೇ ಕಂಪನಿಯಲ್ಲಿ ಈ ಸಂಬಂಧ ಇರುವ ನಿಯಮಗಳು, ರಜೆ ಅವಕಾಶಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು. ಕಾನೂನಿನ ಪ್ರಕಾರ ನಿಮ್ಮ ಕಂಪನಿ ಸೌಲಭ್ಯಗಳನ್ನು ನೀಡದಿದ್ದರೆ ಆ ಬಗ್ಗೆ ನೀವು ಸಂಸ್ಥೆಯೊಂದಿಗೆ ಚರ್ಚಿಸಬಹುದು. ನಿಮ್ಮ ಕಂಪನಿಯಲ್ಲಿ ಈಗಾಗಲೇ ಯಾರಾದರೂ ಹೆರಿಗೆ ರಜೆ ತೆಗೆದುಕೊಂಡಿದ್ದರೆ ಅವರೊಂದಿಗೆ ಚರ್ಚಿಸುವುದು ನಿಮಗೆ ಸಹಾಯಕವಾಗಬಹುದು.




2. ಮ್ಯಾನೇಜರ್​ ಜೊತೆ ಮಾತನಾಡಿ: ಆಫೀಸ್​ನಲ್ಲಿ ಸಹೋದ್ಯೋಗಿಗಳಿಗೆ ನಿಮ್ಮ ಗರ್ಭಾವಸ್ಥೆಯ ಬಗ್ಗೆ ತಿಳಿಸುವ ಮುನ್ನ ಮ್ಯಾನೇಜಟ್​/ ಟೀಂ ಲೀಡರ್​ ಇಲ್ಲವೇ ಮೇಲಾಧಿಕಾರಿಗೆ ವಿಷಯ ತಿಳಿಸಿ. ನಿಮಗೆ ಹೊಂದುವಂತ ಶಿಫ್ಟ್​​ ನೀಡಲು, ಕೆಲವೊಂದು ಓಡಾಟದ ಕೆಲಸವನ್ನು ನಿಮಗೆ ನೀಡದಿರಲು, ನಿಮ್ಮಿಂದ ಓವರ್​ ವರ್ಕ್​ ನಿರೀಕ್ಷಿಸದಿರಲು ಹಾಗೂ ಯಾವಾಗಿನಿಂದ ನೀವು ಹೆರಿಗೆ ರಜೆ ಹೋಗುತ್ತೀರಾ ಆಗ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಇದು ಸಹಾಯಕವಾಗುತ್ತದೆ.




3. ಹೆರಿಗೆ ರಜೆಗೆ ಹೋಗುವ ಮುನ್ನ ಹೀಗೆ ಮಾಡಿ: ನೀವು ಹೆರಿಗೆ ರಜೆಗೆ ಹೋಗುವ ಮುನ್ನ ನಿಮ್ಮ ಕೆಲಸಗಳನ್ನು ಬೇರೆ ಉದ್ಯೋಗಿ ಹಸ್ತಾಂತರಿಸಿ, ಸೂಕ್ತವಾದ ಮಾಹಿತಿಯನ್ನು ನೀಡಿ. ನಿಮ್ಮಿಂದ ಕೆಲಸಕ್ಕೆ ಯಾವುದೇ ತೊಂದರೆಯಾಗದಂತೆ ಎಲ್ಲವನ್ನೂ ಸಂಭಾಳಿಸಿ. ಗುಡ್​​ ನ್ಯೂಸ್​​ನೊಂದಿಗೆ, ಹೊಸ ತಾಯಿಯಾಗಿ ಕೆಲಸಕ್ಕೆ ಮರಳುವುದಾಗಿ ಸಹೋದ್ಯೋಗಿಗಳಿಗೆ ತಿಳಿಸಿ. ಇದು ಒಳ್ಳೆಯ ಅಭಿಪ್ರಾಯವನ್ನು ಮೂಡಿಸುತ್ತದೆ.


ಈ ಬಗ್ಗೆಯೂ ಮಾಹಿತಿ ಇರಲಿ


ಮಹಿಳಾ ಉದ್ಯೋಗಿಗಳಿಗೆ ಮಾತ್ರ ಹೆರಿಗೆ ರಜೆ ನೀಡುತ್ತಾರೆ ಎಂದು ಭಾವಿಸಬೇಡಿ. ನಿಮ್ಮ ಪತಿಗೂ ಅವರ ಕಂಪನಿಗೆಯಿಂದ ಪೋಷಕರ ರಜೆಯನ್ನು ನೀಡಲಾಗುತ್ತದೆ. ಈ ಬಗ್ಗೆಯೂ ತಂದೆಯಾದವರು ವಿಚಾರಿಸಿ, ಮಾಹಿತಿಯನ್ನು ಪಡೆದುಕೊಳ್ಳಬೇಕು. ಆಗ ಇಬ್ಬರೂ ಪೋಷಕರು ಸಮಾನವಾಗಿ ಮಗುವಿನ ಆರೈಕೆಗೆ ಮುಂದಾಗಬಹುದು. ಕೆಲಸದಲ್ಲಿರುವ ದಂಪತಿಗಳು ಮಗು ಮಾಡಿಕೊಳ್ಳಲು ಪ್ಲಾನ್​ ಮಾಡುವಾಗ ಈ ಎಲ್ಲಾ ಅಂಶಗಳ ಬಗ್ಗೆ ಚರ್ಚಿಸಬೇಕು.




ಸರಿಯಾದ ರೀತಿಯಲ್ಲಿ ನೀವು ಪ್ಲಾನ್​ ಮಾಡಿದರೆ ನಿಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು. ಮಗುವಿನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬಹುದು. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಸರಿಯಾದ ಮಾಹಿತಿಯನ್ನು ಹೊಂದಿರುವುದು ತುಂಬಾನೇ ಮುಖ್ಯ.

Published by:Kavya V
First published: