ಈ ಕೆಲಸದಲ್ಲಿ (Job) ನಿಮಗೆ ಎಷ್ಟು ವರ್ಷಗಳ ಅನುಭವವಿದೆ (Experience)..? ಮೊದಲ ಬಾರಿಗೆ ಉದ್ಯೋಗ ಹುಡುಕುವಾಗ (Job Search) ಬಹುತೇಕ ಎಲ್ಲರೂ ಇಂಥದ್ದೊಂದು ಪ್ರಶ್ನೆಯನ್ನು ಎದುರಿಸಿರುತ್ತಾರೆ. ಮೊದಲ ಬಾರಿಗೆ ಉದ್ಯೋಗ (First Job) ಹುಡುಕುವವರಿಗೆ ಯಾವುದೇ ಅನುಭವವಿರೋದಿಲ್ಲ. ಹೀಗಿದ್ದಾಗ ಕೆಲಸ ಗಿಟ್ಟಿಸಿಕೊಳ್ಳೋದು ಕಷ್ಟ ಅನ್ನೋದು ಸಾಮಾನ್ಯರ ಅಭಿಪ್ರಾಯ. ಆದ್ರೆ ಅನುಭವವಿಲ್ಲದೆ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಅಥವಾ ಹೊಸ ವೃತ್ತಿಗೆ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನಿಮಗಾಗಿ ಇಲ್ಲೊಂದಿಷ್ಟು ಸಲಹೆಗಳಿವೆ.
1. ನಿಮ್ಮ ರೆಸ್ಯೂಮ್ ಅನ್ನು ಕಸ್ಟಮೈಸ್ ಮಾಡಿ: ನೀವು ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಕಂಪನಿಯವರು ನೋಡುವ ಮೊದಲ ವಿಷಯವೆಂದರೆ ನಿಮ್ಮ ರೆಸ್ಯೂಮ್. ಹಾಗಾಗಿ ನೀವು ಅದನ್ನು ಕಸ್ಟಮೈಸ್ ಮಾಡೋದು ತುಂಬಾ ಮುಖ್ಯ. ನೀವು ಹೋಗುವ ಕಂಪನಿಗೆ ಒದಗಿಸಬಹುದಾದ ಪ್ರಯೋಜನಗಳನ್ನು ಒತ್ತಿ ಹೇಳುವಂತೆ CV ತಯಾರು ಮಾಡಿ.
ರೆಸ್ಯೂಮ್ ನ ಆರಂಭದಲ್ಲೇ ವೃತ್ತಿಪರ ಅನುಭವವನ್ನು ಹೊರತುಪಡಿಸಿ ಬೇರೆ ವಿಷಯಗಳನ್ನು ಹೈಲೈಟ್ ಮಾಡುವುದು ಹೆಚ್ಚು ಮುಖ್ಯವಾಗಿದೆ. ಉದಾಹರಣೆಗೆ, ನಿಮ್ಮ ಸ್ವಯಂಸೇವಕ ಕೆಲಸ, ಪಠ್ಯೇತರ ಚಟುವಟಿಕೆಗಳು, ಶಾಲಾ ಯೋಜನೆಗಳು ಅಥವಾ ಇಂಟರ್ನ್‌ಶಿಪ್‌ಗಳಲ್ಲಿ ಭಾಗವಹಿಸಿದ್ದರೆ ಅದನ್ನು ಸೇರಿಸಿ. ನಿಮ್ಮ ಮೊದಲ ಕೆಲಸಕ್ಕೆ ನೀವು ಅನ್ವಯಿಸಬಹುದಾದ ಹಾರ್ಡ್ ಹಾಗೂ ಸಾಫ್ಟ್ ಸ್ಕಿಲ್ ಗಳನ್ನು ಅವು ತೋರಿಸುತ್ತವೆ.
2. ನೆಟ್ವರ್ಕಿಂಗ್ ಪ್ರಾರಂಭಿಸಿ: ನೀವು ಕಾಲೇಜಿನಿಂದ ಪದವಿ ಪಡೆಯುವ ಮೊದಲು, ನೀವು ಹೊಂದಿದ್ದ ನೆಟ್‌ವರ್ಕ್‌ಗಳನ್ನು ಬಳಸಿಕೊಳ್ಳಿ. ಉದ್ಯೋಗದಾತರ ಸೆಮಿನಾರ್‌ಗಳು ಮತ್ತು ಉಪನ್ಯಾಸಗಳು, ಉದ್ಯೋಗ ಮೇಳಗಳಲ್ಲಿ ಪಾಲ್ಗೊಂಡು ಸಂಪರ್ಕ ಸಾಧಿಸಿಕೊಳ್ಳಿ. ನೀವು ವಿಶ್ವಾಸಾರ್ಹ ಮೂಲದಿಂದ ಶಿಫಾರಸನ್ನು ಪಡೆದುಕೊಂಡರೆ, ನಿಮ್ಮ ಅನುಭವದ ಕೊರತೆಯ ಬಗ್ಗೆ ಉದ್ಯೋಗದಾತರು ಅಷ್ಟಾಗಿ ಗಮನ ಹರಿಸದೇ ಇರುವ ಸಾಧ್ಯತೆಯೂ ಇರುತ್ತದೆ.
ಇನ್ನು, ಸಾಮಾಜಿಕ ಮಾಧ್ಯಮದ ಮೂಲಕ ನಿಮ್ಮ ವೃತ್ತಿಪರ ನೆಟ್‌ವರ್ಕ್ ಅನ್ನು ರಚಿಸುವುದು ಹೆಚ್ಚು ಪ್ರಯೋಜನಕಾರಿ ಆಯ್ಕೆಯಾಗಿದೆ. Twitter ಮತ್ತು LinkedIn ನಂತಹ ವೆಬ್‌ಸೈಟ್‌ಗಳಲ್ಲಿ ನಿಮ್ಮ ಉದ್ಯಮದಲ್ಲಿರುವ ಸಂಸ್ಥೆಗಳು ಮತ್ತು ಜನರನ್ನು ಅನುಸರಿಸುವುದು, ಅವರೊಂದಿಗೆ ಮಾತನಾಡುವುದ, ಮಾಹಿತಿ ಪಡೆಯುವುದನ್ನು ಮಾಡಬಹುದು. ನೀವು ಈಗಾಗಲೇ ನೆಟ್‌ವರ್ಕ್ ಅನ್ನು ಹೊಂದಿದ್ದರೂ ಅಥವಾ ಇಲ್ಲದಿದ್ದರೂ, ನಿಮ್ಮ ವೃತ್ತಿಪರ ಜೀವನದುದ್ದಕ್ಕೂ ಸಂಪರ್ಕಗಳನ್ನು ನಿರ್ಮಿಸಲು ನೀವು ಪ್ರಯತ್ನ ಪಡಬೇಕು.
3. ನಿಮ್ಮ ಸಾಫ್ಟ್ ಸ್ಕಿಲ್ಸ್ ಅನ್ನು ಹೈಲೈಟ್ ಮಾಡಿ: ಸಂವಹನ, ನಾಯಕತ್ವ, ಸಾಮರ್ಥ್ಯ ಇಂತಹ ಗುಣಗಳು ಹೆಚ್ಚಿನ ವೃತ್ತಿಗಳಲ್ಲಿ ಮೆಚ್ಚುಗೆ ಪಡೆದಿರುವ ಮೃದು ಕೌಶಲ್ಯಗಳಾಗಿವೆ. ನೀವು ಯಾವುದೇ ಮೊದಲ ಕೆಲಸದ ಅನುಭವವನ್ನು ಹೊಂದಿಲ್ಲದಿದ್ದರೆ ನೀವು ಈ ಕೆಲವು ಮೃದು ಕೌಶಲ್ಯಗಳನ್ನು ಪ್ರದರ್ಶಿಸಬಹುದಾಗಿದೆ. ಈ ಅನುಭವಗಳನ್ನು ನಮೂದಿಸುವ ಮೂಲಕ ನಿಮ್ಮ ರೆಸ್ಯೂಮ್‌ನಲ್ಲಿ ನಿಮ್ಮ ಸಾಫ್ಟ್ ಸ್ಕಿಲ್‌ಗಳನ್ನು ನೀವು ಹೈಲೈಟ್ ಮಾಡಬಹುದು.
ನೀವು ಆಸಕ್ತಿ ಹೊಂದಿರುವ ವಲಯದ ಕುರಿತು ಕೆಲವು ಹಿನ್ನೆಲೆ ಅಧ್ಯಯನವನ್ನು ಮಾಡುವ ಮೂಲಕ ಕಂಪನಿಯವರು ಯಾವ ಸಾಫ್ಟ್ ಸ್ಕಿಲ್ ಹುಡುಕುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳಿ.
4. ಇಂಟರ್ನ್‌ಶಿಪ್ ಅನುಭವ: ಪ್ರವೇಶ ಮಟ್ಟದ ಕೆಲಸ ಅಥವಾ ಇಂಟರ್ನ್‌ಶಿಪ್‌ನಿಂದ ನಿಮ್ಮ ಅನುಭವವನ್ನು ನಿರ್ಮಿಸಬಹುದಾಗಿದೆ. ಜೊತೆಗೆ ಇದು ನಿಮಗೆ ಸಾಕಷ್ಟು ಅವಕಾಶಗಳನ್ನು ತೆರೆಯುತ್ತದೆ. ಅನುಭವವನ್ನು ಪಡೆಯಲು ನೀವು ಸ್ವಯಂಸೇವಕರಾಗಬಹುದು, ಇಂಟರ್ನ್ ಶಿಪ್ ಮಾಡಬಹುದು. ಉದ್ಯಮದೊಂದಿಗೆ ನೀವೇ ಪರಿಚಿತರಾಗಬಹುದು.
ಇಂಟರ್ನ್‌ಶಿಪ್‌ಗಳು ಮತ್ತು ಸ್ವಯಂಸೇವಕ ಅವಕಾಶಗಳ ಮೂಲಕ ದಿನನಿತ್ಯದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳಬಹುದು. ನಿಮ್ಮ ರೆಸ್ಯೂಮ್ ನಲ್ಲಿ ಈ ಅನುಭವಗಳನ್ನು ಸೇರಿಸಲು ಸಹಾಯವಾಗುತ್ತದೆ.
5. ಉನ್ನತ ಕೌಶಲ್ಯ: ಶೈಕ್ಷಣಿಕ ಅರ್ಹತೆ ಹೊಂದಿರುವುದು, ವೃತ್ತಿಪರ ಪ್ರಮಾಣಪತ್ರವನ್ನು ಗಳಿಸುವುದು ಅಥವಾ ಪದವಿಯನ್ನು ಪಡೆಯುವುದರಿಂದ ನಿಮ್ಮ ಕೌಶಲ್ಯ ಮತ್ತು ಅರ್ಹತೆಗಳು ಹೆಚ್ಚಾಗುತ್ತವೆ. ಅಲ್ಲದೇ ನಿಮ್ಮ ಸ್ವಂತ ಸೈಡ್ ಪ್ರಾಜೆಕ್ಟ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ ನೀವು ಸೃಜನಾತ್ಮಕವಾಗಿ ಕೆಲಸ ಮಾಡುವ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬಹುದು.
ನೀವು ಬರಹಗಾರರಾಗಲು ಬಯಸಿದರೆ ಉಚಿತ ವೆಬ್‌ಸೈಟ್ ರಚಿಸಿ ಮತ್ತು ನಿಮ್ಮ ಬರವಣಿಗೆಯನ್ನು ಹಂಚಿಕೊಳ್ಳಲು ಪ್ರಾರಂಭಿಸಿ. ಇನ್ನು ನೀವು ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡಲು ಬಯಸಿದರೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮೂಲಕ ನಿಮ್ಮನ್ನು ನೀವು ಪ್ರೊಮೋಟ್ ಮಾಡಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ