ಭಾರತದ ರಿಯಲ್ ಎಸ್ಟೇಟ್ ಉದ್ಯಮ (Real Estate) ದಿನದಿಂದ ದಿನಕ್ಕೆ ಪ್ರಗತಿಯ ಮಾರ್ಗದತ್ತ ಸಾಗುತ್ತಿದೆ. ದೇಶೀಯ ಹಾಗೂ ಅಂತರಾಷ್ಟ್ರೀಯ ಹೂಡಿಕೆಗಳಲ್ಲಿಯೂ (Investment) ಪ್ರಖ್ಯಾತಿ ಗಳಿಸುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸರಕಾರವು ಇತ್ತೀಚೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೆಲವೊಂದು ಸುಧಾರಣೆಗಳನ್ನು ನಡೆಸಿದ್ದು ಒಂದು ರೀತಿಯಲ್ಲಿ ನೋಡುವುದಾದರೆ ರಿಯಲ್ ಎಸ್ಟೇಟ್ ವ್ಯವಹಾರವು ವೇಗವರ್ಧಿತ ಬೆಳವಣಿಗೆಯಲ್ಲಿದೆ.
ರಿಯಲ್ ಎಸ್ಟೇಟ್ ಕ್ಷೇತ್ರ ಇದೀಗ ಭರವಸೆಗಳ ಆಗರ
ಈ ಕ್ಷೇತ್ರವು ದೊಡ್ಡ ಭರವಸೆಗಳನ್ನು ನೀಡುತ್ತಿದ್ದು ವಸತಿ ಹಾಗೂ ವಾಣಿಜ್ಯ ಫ್ಲ್ಯಾಟ್‌ಗಳು ಅಂತೆಯೇ ಇತರ ಪ್ರದೇಶಗಳಿಗೆ ಹೆಚ್ಚುತ್ತಿರುವ ಆಯ್ಕೆಗಳು ಇದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದಲೇ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರು ತಮ್ಮಿಷ್ಟದ ಆಯ್ಕೆಗಳನ್ನು ನಡೆಸಬಹುದಾಗಿದೆ. ಹಾಗಿದ್ದರೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಾವ ರೀತಿಯ ಉದ್ಯೋಗವನ್ನು ಅರಸಬಹುದು ಎಂಬುದನ್ನು ನೋಡೋಣ. ಈ ಕ್ಷೇತ್ರದಲ್ಲಿ ಕೂಡ ವೃತ್ತಿಗೆ ಸೂಕ್ತವಾಗಿರುವ ಅನೇಕ ಹುದ್ದೆಗಳಿದ್ದು ತರಬೇತಿ ಹಾಗೂ ಸಂಪರ್ಕ ಅತ್ಯವಶ್ಯಕವಾಗಿದೆ.
1) ರಿಯಲ್ ಎಸ್ಟೇಟ್ ಏಜೆಂಟ್
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಮಾನ್ಯ ಹಂತದ ಸ್ಥಿತಿ ಎಂದೆನಿಸಿದೆ. ಮನೆ ಹಾಗೂ ಸೈಟ್‌ಗಳ ಮಾರಾಟಕ್ಕೆ ಏಜೆಂಟ್‌ಗಳು ಸಹಾಯ ಮಾಡುತ್ತಾರೆ. ಆಸ್ತಿ ಮಾರಾಟಕ್ಕೆ ಖರೀದಿದಾರರನ್ನು ಪ್ರತಿನಿಧಿಸುವುದು ಅವರನ್ನು ಸಂಪರ್ಕಿಸುವುದು ಏಜೆಂಟರ ಮುಖ್ಯ ಕೆಲಸವಾಗಿದೆ. ಸಂಪರ್ಕ, ನಿರ್ವಹಣೆ ಹಾಗೂ ದಾಖಲೆಗಳ ಅಗತ್ಯ ಈ ಹುದ್ದೆಗೆ ಬೇಕು.
ರಿಯಲ್ ಎಸ್ಟೇಟ್ ಏಜೆಂಟ್‌ಗಳು ಸಾಮಾನ್ಯವಾಗಿ ಆಸ್ತಿಯ ಮಾರಾಟ/ಖರೀದಿ ಬೆಲೆಯ ಕಮಿಷನ್ ಅಥವಾ ಶೇಕಡಾವಾರು ಮೊತ್ತವನ್ನು ಗಳಿಸುತ್ತಾರೆ.
2) ರಿಯಲ್ ಎಸ್ಟೇಟ್ ಮ್ಯಾನೇಜಿಂಗ್ ಬ್ರೋಕರ್
ರಿಯಲ್ ಎಸ್ಟೇಟ್ ಬ್ರೋಕರ್ ಇವರು ರಿಯಲ್ ಎಸ್ಟೇಟ್ ಬ್ರೋಕರೇಜ್ ಸಂಸ್ಥೆಯ ಮಾಲೀಕರು ಹಾಗೂ ನಿರ್ವಾಹಕರಾಗಿರುತ್ತಾರೆ. ನೀವು ಏಜೆಂಟ್ ಆಗಬೇಕೆಂದು ಬಯಸಿದ್ದರೆ ಹಾಗೂ ವೃತ್ತಿಜೀವನದಲ್ಲಿ ಹೇಗೆ ಮುಂದುವರಿಬಹುದು ಎಂಬುದನ್ನು ಅರಿತುಕೊಳ್ಳಲು ಬಯಸಿದರೆ ರಿಯಲ್ ಎಸ್ಟೇಟ್ ಬ್ರೋಕರ್ ಆಯ್ಕೆ ಮಾಡಿಕೊಳ್ಳಿ.
ಇದನ್ನೂ ಓದಿ: Job Without Experience: ಅನುಭವವಿಲ್ಲದೆ ಉದ್ಯೋಗವನ್ನು ಪಡೆಯುವುದು ಹೇಗೆ? ಇಲ್ಲಿವೆ 5 ಸಲಹೆಗಳು
ಈ ಉದ್ಯೋಗದಲ್ಲಿರುವವರು ಸ್ವಾವಲಂಬಿಗಳು ಎಂದೆನಿಸಿದ್ದು ಕಮಿಷನ್ ವಿಭಜನೆಯ 100% ವನ್ನು ಇರಿಸಿಕೊಳ್ಳುತ್ತಾರೆ, ಬ್ರೋಕರೇಜ್ ನಿರ್ವಹಣೆ ಎಂಬುದು ಗಮನಾರ್ಹ ಜವಬ್ದಾರಿಯಾಗಿದೆ.
3) ಲೋನ್ ಆಫೀಸರ್
ರಿಯಲ್ ಎಸ್ಟೇಟ್ ವಹಿವಾಟು ಪ್ರಕ್ರಿಯೆಯಲ್ಲಿ ಲೋನ್ ಅಧಿಕಾರಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ, ಏಕೆಂದರೆ ಹೆಚ್ಚಿನ ಖರೀದಿದಾರರಿಗೆ ರಿಯಲ್ ಎಸ್ಟೇಟ್ ಖರೀದಿ ಮಾಡಲು ಸಾಲದ ಅಗತ್ಯವಿರುತ್ತದೆ. ಕೆಲವು ಲೋನ್ ಆಫೀಸರ್‌ಗಳು ಅಡಮಾನ (ವಸತಿ) ಮತ್ತು ವಾಣಿಜ್ಯ ಸಾಲ ಎರಡರಲ್ಲೂ ಪರಿಣತಿ ಹೊಂದಿರುತ್ತಾರೆ.
ಬ್ಯಾಂಕ್‌ಗಳಂತಹ ಸಾಲ ನೀಡುವ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಇವರುಗಳಾಗಿದ್ದು ಬ್ಯಾಂಕ್/ಸಾಲ ನೀಡುವ ಸಂಸ್ಥೆ ಹಾಗೂ ಗ್ರಾಹಕರ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾರೆ. ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಅಥವಾ ಕಂಪನಿಗೆ ಅನುಗುಣವಾಗಿ ಸಾಲ ಪರಿಹಾರಗಳನ್ನು ಒದಗಿಸುತ್ತಾರೆ.
4) ಅಡಮಾನ ದಲ್ಲಾಳಿ (ಮೋರ್ಟೇಜ್ ಬ್ರೋಕರ್)
ಈ ದಲ್ಲಾಳಿಗಳು ಅಡವು ಇಡುವ ಸಾಲದ ನಿಯಮಗಳನ್ನು ಸಂವಹನ ಮಾಡುವ ವ್ಯಕ್ತಿಗಳಿಗೆ ಸಹಕಾರ ನೀಡುತ್ತಾರೆ. ನಿಮ್ಮ ಮನೆ ಅಥವಾ ಕಚೇರಿಯಲ್ಲಿದ್ದುಕೊಂಡೇ ಉತ್ತಮ ಹಣ ಸಂಪಾದಿಸಲು ಸಾಧ್ಯವಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮವು ಅತ್ಯಂತ ಲಾಭದಾಯಕವಾದುದು ಎಂಬ ಸತ್ಯವನ್ನು ನೀವು ಮನಗಾಣುತ್ತೀರಿ.
ಈ ಬ್ರೋಕರ್‌ಗಳು ಬ್ಯಾಂಕ್ ಇಲ್ಲವೇ ಇತರ ಅಡಮಾನ ಸಾಲ ನೀಡುವ ಸಂಸ್ಥೆಗಳಿಗೆ ಕೆಲಸ ಮಾಡುತ್ತಾರೆ ಹಾಗೂ ಅಡಮಾನ ಅರ್ಜಿ ಪ್ರಕ್ರಿಯೆಯೊಂದಿಗೆ ಸಾಲಗಾರರಿಗೆ ಸಹಾಯ ಮಾಡುತ್ತಾರೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪ್ರಗತಿ ಸಾಧಿಸುವುದು
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಿಮ್ಮನ್ನು ನೀವು ಗುರುತಿಸಿಕೊಳ್ಳುವುದು ಉನ್ನತ ನೀತಿಸಂಹಿತೆ ಹಾಗೂ ನಿಯಮಗಳಿಗೆ ಬದ್ಧವಾಗಿದೆ ಜೊತೆಗೆ ನೀವು ಉತ್ತಮ ಸಂಪರ್ಕ ಹೊಂದಿರುವುದು ಹಾಗೂ ಪ್ರಭಾವಶಾಲಿಯಾಗಿಯೂ ಕೆಲಸ ಮಾಡಬೇಕಾದ ಅಗತ್ಯವಿರುತ್ತದೆ. ನಿಮ್ಮ ಇನ್ನಿತರ ವೃತ್ತಿ ನಡೆಸಿಕೊಂಡೇ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೂಡ ಪ್ರಗತಿ ಸಾಧಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ