ನೀವು ನಿಮ್ಮ ಉದ್ಯೋಗವನ್ನು (Jobs) ಬದಲಾಯಿಸಲು ಯೋಜಿಸುತ್ತಿದ್ದೀರಾ? ಹಾಗಿದ್ರೆ ನೀವು ಕೆಲವೊಂದಿಷ್ಟು ಅಪ್ಲಿಕೇಷನ್ ಗಳ (Job Search Apps) ಸಹಾಯ ಪಡೆದುಕೊಳ್ಳಬಹುದು. ಕೆಲವಷ್ಟು ಜಾಬ್ ಅಪ್ಲಿಕೇಷನ್ ಗಳು ಪ್ರಮಾಣಿಕವಾಗಿ ನಿಮಗೆ ಕೆಲಸ ಹುಡುಕಿಕೊಡುವುದರಲ್ಲಿ ಸಹಾಯ ಮಾಡುತ್ತವೆ. ಹಾಗಿದ್ರೆ ಅಂಥ ಅಪ್ಲಿಕೇಷನ್ ಗಳು ಯಾವವು ಅನ್ನೋದನ್ನು ನೋಡೋಣ.
1.ಲಿಂಕ್ಡ್ಇನ್: ಲಿಂಕ್ಡ್ ಇನ್ ಬೆಸ್ಟ್ ಜಾಬ್ ಸರ್ಚ್ ಅಪ್ಲಿಕೇಷನ್ ಗಳಲ್ಲಿ ಅಗ್ರಸ್ಥಾನದಲ್ಲಿದೆ. ಈ ಜಾಲತಾಣವು ಒಮ್ಮೆ ನೀವು ಹೊಸ ಕೆಲಸ ಹುಡುಕುತ್ತಿದ್ದೀರಿ ಎಂದು ತಿಳಿದ ಮೇಲೆ ನಿಮಗಾಗಿ ಅದು ಕೆಲಸ ಮಾಡುತ್ತದೆ. ನಿಮಗೆ ಬೇಕಾಗಿರುವಂಥ ಅಥವಾ ನಿಮ್ಮ ಅಗತ್ಯಗಳು, ನಿಮ್ಮ ಅನುಭವಕ್ಕೆ ತಕ್ಕಂತ ಕೆಲಸಗಳ ಬಗ್ಗೆ ಅದು ನೋಟಿಫಿಕೇಷನ್ ಕಳುಹಿಸುತ್ತದೆ. ಜೊತೆಗೆ ಅಗತ್ಯವಿರುವಲ್ಲಿ ನಿಮ್ಮ ಪ್ರೊಫೈಲ್ ಅನ್ನು ಹೈಲೈಟ್ ಮಾಡುತ್ತದೆ.
ಇನ್ನು ಉದ್ಯೋಗ ಹುಡುಕುವಾಗ, ನೀವು ಉದ್ಯೋಗ ಶೀರ್ಷಿಕೆ, ವೇತನ ಶ್ರೇಣಿಗಳನ್ನು ಫಿಲ್ಟರ್ ಮಾಡುವುದರ ಮೂಲಕವೂ ಹುಡುಕಬಹುದು. ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ ಅನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಲಿಂಕ್ಡ್ಇನ್ ನಿಮ್ಮ ಉದ್ಯೋಗ ಬೇಟೆಯನ್ನು ಗುಪ್ತವಾಗಿಯೂ ಇರಿಸುತ್ತದೆ. ನಿಮ್ಮ ಹುಡುಕಾಟವನ್ನು ಬಹಿರಂಗಪಡಿಸಲು ನೀವು ಸಿದ್ಧವಾಗಿಲ್ಲದಿದ್ದರೆ ಅದು ನಿಮ್ಮ ಉದ್ಯೋಗದಾತರಿಗೆ ಅದರ ಬಗ್ಗೆ ಸುಳಿವು ನೀಡುವುದಿಲ್ಲ.
2. ಶೈನ್ ಡಾಟ್ ಕಾಮ್: ಇದೂ ಕೂಡ ಭಾರತದ ಅತಿದೊಡ್ಡ ಉದ್ಯೋಗ ಹುಡುಕಾಟ ವೇದಿಕೆಗಳಲ್ಲಿ ಒಂದಾಗಿದೆ. Shine.com ಸಹಸ್ರಾರು ಉದ್ಯೋಗಾಕಾಂಕ್ಷಿಗಳಿಗೆ ವೇದಿಕೆ ಒದಗಿಸಿದೆ. ಈ ಪ್ಲಾಟ್ಫಾರ್ಮ್ 300,000ಕ್ಕೂ ಹೆಚ್ಚು ಲೈವ್ ಉದ್ಯೋಗಗಳು, 14,000ಕ್ಕೂ ಹೆಚ್ಚು ನೇಮಕಾತಿದಾರರು ಮತ್ತು 3 ಕೋಟಿಗೂ ಹೆಚ್ಚು ನೋಂದಾಯಿತ ಅಭ್ಯರ್ಥಿಗಳನ್ನು ಹೊಂದಿದೆ.ಇದು, ಅಪ್ಲಿಕೇಶನ್ ಸುಧಾರಿತ ಉದ್ಯೋಗ ಹುಡುಕಾಟ, ರೆಸ್ಯೂಮ್ ಬಿಲ್ಡರ್, ಉದ್ಯೋಗ ಎಚ್ಚರಿಕೆಗಳು ಮತ್ತು ಕಂಪನಿಯ ವಿಮರ್ಶೆಗಳನ್ನು ಒಳಗೊಂಡಂತೆ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ.
ಅದರಲ್ಲಿರುವ ಕೃತಕ ಬುದ್ದಿಮತ್ತೆಯ (AI) ಉದ್ಯೋಗ-ಅಭ್ಯರ್ಥಿ ಹೊಂದಾಣಿಕೆ ಪ್ರಕ್ರಿಯೆಯು ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚು ಸಹಾಯ ಮಾಡುತ್ತದೆ. ಇದು ನಿಮ್ಮ ಕೌಶಲ್ಯಗಳು, ಅನುಭವ ಮತ್ತು ಸಂಬಳದ ನಿರೀಕ್ಷೆಗಳ ಆಧಾರದ ಮೇಲೆ ಹೆಚ್ಚು ಸೂಕ್ತವಾದ ಕೆಲಸವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Career Tips: ಮಹಿಳಾ ಉದ್ಯೋಗಿಗಳೇ ಆಫೀಸ್ನಲ್ಲಿ ಗಾಸಿಪ್, ಟೀಕೆಗಳಿಗೆ ಗುರಿಯಾಗುತ್ತಿದ್ದೀರಾ? ಇಷ್ಟು ಮಾಡಿ
3. ಮಾನ್ ಸ್ಟರ್ ಡಾಟ್ ಕಾಮ್: ಅಮೆರಿಕದಾದ್ಯಂತ ಒಂದು ಮಿಲಿಯನ್ಗಿಂತಲೂ ಹೆಚ್ಚು ಪೂರ್ಣ ಮತ್ತು ಅರೆಕಾಲಿಕ ಜಾಬ್ ಒದಗಿಸುವ ವೇದಿಕೆಯಾಗಿದೆ. ಇದು ಅತ್ಯುತ್ತಮ ಉದ್ಯೋಗ ಬೇಟೆಯ ಆಯ್ಕೆಗಳಲ್ಲಿ ಒಂದಾಗಿದೆ. ಈ ಅಪ್ಲಿಕೇಶನ್ ನಿಮ್ಮ ಅಪ್ಲೋಡ್ ಮಾಡಿದ ವಿವರಗಳನ್ನು ಬಳಸಿಕೊಂಡು ಉದ್ಯೋಗ ಹುಡುಕಾಟವನ್ನು ಸುಲಭ ಮತ್ತು ವೇಗವಾಗಿ ಮಾಡುತ್ತದೆ. ನಿಮ್ಮ ರೆಸ್ಯೂಮ್ ಹೈಲೈಟ್ ಆಗಿಸಲು ಹಾಗೂ ನಿಮ್ಮ ಸಂಬಳವನ್ನು ರೇಟ್ ಮಾಡಲು ಇದು ಸಹಾಯ ಮಾಡುತ್ತದೆ. ಹಾಗಾಗಿ ನೀವು ಜಾಬ್ ಸರ್ಚ್ ಗೆ ಬಹಳಸುವ ಅಪ್ಲಿಕೇಶನ್ ಗಳಲ್ಲಿ ಇದನ್ನು ನಿರ್ಲಕ್ಷಿಸಬೇಡಿ.
4. ಇನ್ ಡೀಡ್ ಡಾಟ್ ಕಾಮ್: ವಿಶ್ವದ ಉನ್ನತ ಉದ್ಯೋಗ ಹುಡುಕಾಟ ವೆಬ್ಸೈಟ್ಗಳಲ್ಲಿ ಒಂದಾದ ಅಪ್ಲಿಕೇಶನ್ ಇದು. ಇನ್ ಡೀಡ್ ಡಾಟ್ ಕಾಮ್ 60 ದೇಶಗಳಲ್ಲಿ, 28 ಭಾಷೆಗಳಲ್ಲಿ 16 ಮಿಲಿಯನ್ ಸ್ಟ್ರಾಂಗ್ ಡೇಟಾಬೇಸ್ ಹೊಂದಿದೆ. ಇದರಲ್ಲಿ ನೀವು ಸುಲಭವಾಗಿ ನಿಮ್ಮ ರೆಸ್ಯೂಮ್ ಅನ್ನು ಅಪ್ಲೋಡ್ ಮಾಡಬಹುದು ಮತ್ತು ಒಂದೆರಡು ಕ್ಲಿಕ್ಗಳೊಂದಿಗೆ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಅಲ್ಲದೇ ನಿಮ್ಮ ಮೊಬೈಲ್ ನ GPS ಬಳಸಿಕೊಂಡು ನಿಮಗೆ ಹತ್ತಿರವಾಗುವಂತಹ ಉದ್ಯೋಗಗಳನ್ನು ಹುಡುಕಬಹುದು.
5. ಗ್ಲಾಸ್ ಡೋರ್ : ಗ್ಲಾಸ್ ಡೋರ್ ಅಪ್ಲಿಕೇಶನ್, ಕಂಪನಿಯ ವಿಮರ್ಶೆಗಳು, ಸಂಬಳಗಳು ಮತ್ತು ಸಂದರ್ಶನ ವಿಧಾನಗಳ ಒಂದು ದೊಡ್ಡ ಡೇಟಾಬೇಸ್ ಅನ್ನು ನಿಮಗೆ ನೀಡುತ್ತದೆ. ಇದು ಉದ್ಯೋಗಗಳ ಪಟ್ಟಿ ಹಾಗೂ ಖಾಲಿ ಹುದ್ದೆಗಳ ಬಗ್ಗೆ ಪರಿಶೀಲಿಸಲು ಅನುಕೂಲವಾಗಿದೆ. ಅಲ್ಲದೇ ಈ ಅಪ್ಲಿಕೇಶನ್, ನಿಮ್ಮ ಕೌಶಲ್ಯಗಳಿಗೆ ತಕ್ಕಂತಹ ವೇತನವನ್ನು ನೀವು ಪಡೆಯುತ್ತಿದ್ದೀರಾ ಎಂಬ ಬಗ್ಗೆಯೂ ತಿಳಿದುಕೊಳ್ಳಲು ಸಹಕಾರಿಯಾಗಿದೆ. ನಿಮ್ಮ ಅಗತ್ಯಗಳು ಹಾಗೂ ಅವಶ್ಯಕತೆಗಳಿಗೆ ತಕ್ಕಂತಹ ಉದ್ಯೋಗಗಳಿಗೆ ನೀವು ಇದರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ