• Home
  • »
  • News
  • »
  • career
  • »
  • International Jobs: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಬೇಕೇ? ಈ 5 ವೃತ್ತಿ ಆಯ್ಕೆಗಳು ಬೆಸ್ಟ್

International Jobs: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಬೇಕೇ? ಈ 5 ವೃತ್ತಿ ಆಯ್ಕೆಗಳು ಬೆಸ್ಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವ್ಯಾಪಾರ, ಕಾನೂನು, ಶಿಕ್ಷಣ, ಮಾಧ್ಯಮ ಮತ್ತು ಪತ್ರಿಕೋದ್ಯಮವು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪದವಿಗಳನ್ನು ಹೊಂದಿರುವ ಪದವೀಧರರಿಗೆ ಕೆಲವು ಪ್ರಮುಖ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

  • Share this:

    ವಿಶ್ವ ರಾಜಕೀಯ ( Global politics), ವಿದೇಶಾಂಗ ನೀತಿ ( Foreign policy) ಮತ್ತು ಜಾಗತಿಕ ಆರ್ಥಿಕತೆಯಲ್ಲಿ (Global Eeconomy) ಆಸಕ್ತಿ ಹೊಂದಿರುವ ಅನೇಕ ಜನರು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪದವಿಗಳನ್ನು ಪಡೆದಿರುತ್ತಾರೆ. ಇದು ವಿವಿಧ ಉತ್ತೇಜಕ ಮತ್ತು ಲಾಭದಾಯಕ ವೃತ್ತಿಗಳಿಗೆ ಅವರನ್ನು ಸಿದ್ಧಪಡಿಸುತ್ತದೆ. ವ್ಯಾಪಾರ, ಕಾನೂನು, ಶಿಕ್ಷಣ, ಮಾಧ್ಯಮ ಮತ್ತು ಪತ್ರಿಕೋದ್ಯಮವು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪದವಿಗಳನ್ನು ಹೊಂದಿರುವ ಪದವೀಧರರಿಗೆ ಕೆಲವು ಪ್ರಮುಖ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.


    ಹಾಗಿದ್ರೆ ಅಂತಾರಾಷ್ಟ್ರೀಯ ಸಂಬಂಧಗಳ ಪದವಿ ಪಡೆದ ನಂತರ ಆಯ್ಕೆ ಮಾಡಬಹುದಾದ ಟಾಪ್ 5 ವೃತ್ತಿಗಳ ಪಟ್ಟಿ ಇಲ್ಲಿದೆ:


    1. ರಾಜಕೀಯ ಸಲಹೆಗಾರ: ರಾಜಕೀಯ ಸಲಹೆಗಾರರಾದವರು ರಾಜಕಾರಣಿಗಳು ಮತ್ತು ಇತರ ಪ್ರಮುಖ ವಿಐಪಿ ವ್ಯಕ್ತಿಗಳಿಗೆ ಅವರ ಉದ್ದೇಶಗಳಲ್ಲಿ ಸಹಾಯ ಮಾಡುತ್ತಾರೆ. ಅವರ ಸಾರ್ವಜನಿಕ ಬದುಕನ್ನು ರಾಜಕೀಯ ಸಲಹೆಗಾರರು ನಿರ್ವಹಿಸುತ್ತಾರೆ. ಅವರು ತಮ್ಮ ಅಭ್ಯರ್ಥಿ ಅಥವಾ ಪ್ರಚಾರವನ್ನು ಬೆಂಬಲಿಸಲು ಜಾಹೀರಾತು ಮತ್ತು ಸುದ್ದಿ ಪ್ರಕರಣೆಗಳನ್ನು ಬಿಡುಗಡೆ ಮಾಡುವಂತಹ ತಂತ್ರಗಳ ಮೂಲಕ ಪ್ರಚಾರ ಮಾಡುತ್ತಾರೆ.


    ಸಾಂದರ್ಭಿಕ ಚಿತ್ರ


    ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಸಂಪರ್ಕ ತಜ್ಞರು ಮತ್ತು ಮಾರಾಟಗಾರರಂತೆ ಅವರು ಕಾರ್ಯ ನಿರ್ವಹಿಸುತ್ತಾರೆ. ಇನ್ನು, ಸಾರ್ವಜನಿಕ ಪ್ರದರ್ಶನಗಳು, ಸಂವಹನ ಮತ್ತು ನೀತಿಯನ್ನು ಕಾರ್ಯತಂತ್ರವಾಗಿ ರಾಜಕೀಯ ಸಲಹೆಗಾರರು ನಿರ್ದೇಶಿಸುತ್ತಾರೆ. ಸಂಸ್ಥೆಗಳು ಅಥವಾ ಕಾರ್ಯಕರ್ತರೊಂದಿಗೆ ಕೆಲಸ ಮಾಡುವುದರ ಜೊತೆಗೆ ರಾಜಕೀಯ ಸಲಹೆಗಾರರು ಶಾಸಕಾಂಗ ಸುಧಾರಣೆಯನ್ನು ಉತ್ತೇಜಿಸಬಹುದಾಗಿದೆ.


    2. ಇಂಟರ್‌ ನ್ಯಾಷನಲ್‌ ಮಾರ್ಕೆಟಿಂಗ್ ಸ್ಪೆಷಲಿಸ್ಟ್ : ಅಂತರರಾಷ್ಟ್ರೀಯ ಮಾರುಕಟ್ಟೆ ತಜ್ಞರು ಸಂಸ್ಥೆಯ ಜಾಗತಿಕ ಮಾರುಕಟ್ಟೆ ಯೋಜನೆಗಳು ಮತ್ತು ಉಪಕ್ರಮಗಳ ಉಸ್ತುವಾರಿ ವಹಿಸುತ್ತಾರೆ. ದೇಶೀಯ ಮಾರುಕಟ್ಟೆ ತಂಡಗಳೊಂದಿಗೆ, ಅವರು ಮಾರುಕಟ್ಟೆ ಬಜೆಟ್ ಮತ್ತು ಯೋಜನೆಗಳನ್ನು ಅಭಿವೃದ್ಧಿ ಪಡಿಸುತ್ತಾರೆ. ಇವರು ಉತ್ಪನ್ನ ಬಿಡುಗಡೆಗಳು ಮತ್ತು ಮಾರುಕಟ್ಟೆ ಪ್ರಚಾರಗಳಲ್ಲಿ ಕೆಲಸ ಮಾಡುತ್ತಾರೆ.


    ಇತರ ಜವಾಬ್ದಾರಿಗಳಲ್ಲಿ ಕಂಪನಿಯ ಸರಕು ಮತ್ತು ಸೇವೆಗಳ ಮಾರ್ಕೆಟಿಂಗ್ ಅನ್ನು ಪ್ರೋತ್ಸಾಹಿಸುವುದು, ಮಾರುಕಟ್ಟೆ ಸಂಶೋಧನೆ ನಡೆಸುವುದು, ಪ್ರವೃತ್ತಿಗಳನ್ನು ಮುನ್ಸೂಚಿಸುವುದು ಮತ್ತು ಸಂಸ್ಥೆಯ ವಲಯದಲ್ಲಿ ಅಪಾಯಗಳು ಮತ್ತು ಅವಕಾಶಗಳನ್ನು ಗುರುತಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ.


    3. ರಾಜತಾಂತ್ರಿಕ: ಒಬ್ಬ ರಾಜತಾಂತ್ರಿಕನು ತನ್ನ ದೇಶವನ್ನು ಪ್ರತಿನಿಧಿಸುತ್ತಾನೆ. ವಿದೇಶಿ ಆಡಳಿತದಲ್ಲಿ ತನ್ನ ದೇಶದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಅದನ್ನು ರಕ್ಷಿಸುತ್ತಾನೆ. ಅಂತಾರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದ ಎಲ್ಲಾ ಸ್ಥಳೀಯ ಸರ್ಕಾರಿ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಅವರೊಂದಿಗೆ ಮಾತುಕತೆ ನಡೆಸುವ ಕೆಲಸ ರಾಜತಾಂತ್ರಿಕನದ್ದಾಗಿರುತ್ತದೆ.


    ಇದನ್ನೂ ಓದಿ: Campus Placement: ವಿದ್ಯಾರ್ಥಿಗಳೇ, ಕ್ಯಾಂಪಸ್ ಸೆಲೆಕ್ಷನ್​ಗೆ ನಿಮ್ಮ ತಯಾರಿ ಹೀಗಿದ್ದರೆ ಕೆಲಸ ಸಿಗೋದು ಪಕ್ಕಾ


    4. ಲಾಭರಹಿತ ಯೋಜನೆಯ ನಾಯಕರು: ಉದ್ದೇಶಗಳು ಮತ್ತು ಧ್ಯೇಯವನ್ನು ಬೆಂಬಲಿಸುವ ಲಾಭದ ಉದ್ದೇಶವಿಲ್ಲದ ಸಂಸ್ಥೆಗಾಗಿ ಕಾರ್ಯಕ್ರಮಗಳ ಯೋಜನೆ ಮತ್ತು ಸಮನ್ವಯವನ್ನು ಲಾಭರಹಿತ ಯೋಜನಾ ನಾಯಕರು ಮಾಡುತ್ತಾರೆ. ನಿಧಿ ಸಂಗ್ರಹಣೆ, ಆಯವ್ಯಯ, ಸಮುದಾಯಕ್ಕೆ ತಲುಪುವಿಕೆ ಮತ್ತು ತಾಂತ್ರಿಕ ಬೆಂಬಲ ಮುಂತಾದವು ಅವರ ಕರ್ತವ್ಯಗಳಲ್ಲಿ ಸೇರಿವೆ.


    ತಮ್ಮ ಸಂಸ್ಥೆಯ ಉದ್ದೇಶಕ್ಕೆ ಸಂಬಂಧಿಸಿದ ಸಂಸ್ಕೃತಿಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಕೆಲಸ ಮಾಡುವ ಕಾರ್ಯಕ್ರಮ ಸಂಯೋಜಕರು ಆಗಾಗ್ಗೆ ಪ್ರದರ್ಶಿಸುತ್ತಾರೆ. ಇತರ ದೇಶಗಳ ಗ್ರಾಹಕರೊಂದಿಗೆ ತಮ್ಮ ಸಂವಹನವನ್ನು ಬಲಪಡಿಸಲು ಅವರು ಈ ತಿಳುವಳಿಕೆಯನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ.


    5. ಆರ್ಥಿಕ ವಿಶ್ಲೇಷಕ: ಆರ್ಥಿಕ ವಿಶ್ಲೇಷಕನಾದವನು ಆರ್ಥಿಕ ಡೇಟಾವನ್ನು ಪರಿಶೀಲನೆ ಮಾಡಿ ಅಂದಾಜು ಹಾಗೂ ಮಾದರಿಗಳನ್ನು ಅಭಿವೃದ್ಧಿ ಪಡಿಸುತ್ತಾನೆ. ಅಂದಹಾಗೆ, ಆರ್ಥಿಕ ವಿಶ್ಲೇಷಕರನ್ನು ಸಾರ್ವಜನಿಕ ಅಥವಾ ವಾಣಿಜ್ಯ ಕಂಪನಿಗಳು ನೇಮಿಸಿಕೊಳ್ಳಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಜಾಗತಿಕ ಆರ್ಥಿಕತೆ, ಹಾಗೆಯೇ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹಣಕಾಸಿನ ಪ್ರವೃತ್ತಿಗಳ ತಿಳುವಳಿಕೆಯು ಆರ್ಥಿಕ ವಿಶ್ಲೇಷಕರಿಗೆ ಅಗತ್ಯವಾಗಿರುತ್ತದೆ.

    Published by:Kavya V
    First published: