• Home
 • »
 • News
 • »
 • career
 • »
 • Employee Burnout: ಒತ್ತಡದಿಂದ ರೋಸಿ ಹೋದ ಉದ್ಯೋಗಿಯನ್ನು ಕೂಡಲೇ ಗುರುತಿಸಿ, ಇಲ್ಲವಾದಲ್ಲಿ ನಷ್ಟ

Employee Burnout: ಒತ್ತಡದಿಂದ ರೋಸಿ ಹೋದ ಉದ್ಯೋಗಿಯನ್ನು ಕೂಡಲೇ ಗುರುತಿಸಿ, ಇಲ್ಲವಾದಲ್ಲಿ ನಷ್ಟ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

‘ಬರ್ನ್ಔಟ್’ ಎಂದರೆ ಅತಿಯಾದ ಒತ್ತಡದಿಂದ ಕೆಲಸದ ಮೇಲಿನ ಆಸಕ್ತಿಯನ್ನು ಕಳೆದುಕೊಂಡ, ದೈಹಿಕ ಮತ್ತು ಮಾನಸಿಕ ಬಳಲಿಕೆಯ ಸ್ಥಿತಿ ಎಂದು ಹೇಳಬಹುದು. ಉದ್ಯೋಗಿಗಳಲ್ಲಿ ‘ಬರ್ನ್ಔಟ್’ ಅನ್ನು ಹೇಗೆ ಗುರುತಿಸುತ್ತೀರಿ ಅಂತ ಅನೇಕರು ಕೇಳಬಹುದು. ಅದಕ್ಕೆ ಉತ್ತರ ಇಲ್ಲಿದೆ.

 • Share this:

  ಯಾವುದೇ ಕಂಪನಿಯನ್ನು ಗಣನೆಗೆ ತೆಗೆದುಕೊಂಡರೂ ಅಲ್ಲಿ ಕೆಲಸ (JOB) ಮಾಡುತ್ತಿರುವಂತಹ ಉದ್ಯೋಗಿಗಳು (Employees) ತುಂಬಾನೇ ಮುಖ್ಯವಾಗುತ್ತಾರೆ ಅಂತ ಹೇಳಬಹುದು. ಎಲ್ಲಿ ಉದ್ಯೋಗಿಗಳು ಸಂತೋಷದಿಂದ ಕೆಲಸ (Work)  ಮಾಡುತ್ತಿರುತ್ತಾರೋ, ಆ ಕಂಪನಿಯ ಯಶಸ್ಸು ಬೇರೆ ಹಂತದಲ್ಲಿಯೇ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಕಂಪನಿಯ ಮತ್ತು ಸಂಸ್ಥೆಯ ಯಶಸ್ಸು ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕಾರ್ಯವೈಖರಿಯ ಮೇಲೆ ಅವಲಂಬಿತವಾಗಿರುತ್ತದೆ ಅಂತ ಹೇಳಬಹುದು. ಅದೇ ಒಬ್ಬ ಉದ್ಯೋಗಿ ಸಂಪೂರ್ಣವಾಗಿ ‘ಬರ್ನ್ಔಟ್’ ಆಗಿದ್ದರೆ, ಆ ವ್ಯಕ್ತಿ ಮಾಡುವ ಕೆಲಸ ಕಂಪನಿಯ ಯಶಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಅಂತ ಹೇಳಬಹುದು.


  ಏನಿದು ಉದ್ಯೋಗಿಗಳು ‘ಬರ್ನ್ಔಟ್’ ಆಗುವುದು ಎಂದರೆ?


  ‘ಬರ್ನ್ಔಟ್’ ಎಂದರೆ ಅತಿಯಾದ ಒತ್ತಡದಿಂದ ಕೆಲಸದ ಮೇಲಿನ ಆಸಕ್ತಿಯನ್ನು ಕಳೆದುಕೊಂಡು ದೈಹಿಕ ಮತ್ತು ಮಾನಸಿಕ ಬಳಲಿಕೆಯ ಸ್ಥಿತಿ ಎಂದು ಹೇಳಬಹುದು. ಉದ್ಯೋಗಿಗಳಲ್ಲಿ ‘ಬರ್ನ್ಔಟ್’ ಅನ್ನು  ಹೇಗೆ ಗುರುತಿಸುತ್ತೀರಿ ಅಂತ ಅನೇಕರು ಕೇಳಬಹುದು. ಅತಿಯಾದ ಕೆಲಸದಿಂದ ಉಂಟಾಗುವ ಒತ್ತಡದಿಂದ ಉಂಟಾಗುವ ನಿದ್ರೆಯ ಕೊರತೆಯ ಪರಿಣಾಮವಾಗಿ ಅವರು ಕೆಲಸ ಮಾಡುವಾಗ ತುಂಬಾನೇ ಆಕಳಿಸುತ್ತಿರುತ್ತಾರೆ. ಹಣೆಯನ್ನು ಗಂಟುಹಾಕಿಕೊಂಡು ಮತ್ತು ತಮ್ಮ ಸಹೋದ್ಯೋಗಿಗಳ ಮೇಲೆ ರೇಗುತ್ತಾ ಇರುವುದನ್ನು ನೋಡಬಹುದು.


  ಉದಾಹರಣೆಗೆ ಒಬ್ಬ ಬರ್ನ್ಔಟ್ ಆದ ಉದ್ಯೋಗಿಗೆ ಪ್ರತಿ ಸೋಮವಾರ ಕೆಲಸಕ್ಕೆ ಬಂದಾಗ ವಾರಾಂತ್ಯ ಯಾವಾಗಪ್ಪಾ ಬರುತ್ತೆ ಅಂತ,  ಇನ್ನೂ ಬಾರದೇ ಇರುವ ಐದು ದಿನಗಳು ಉಳಿದಿವೆ ಎಂದು ಒಪ್ಪಿಕೊಳ್ಳಲು ಹೆಣಗಾಡುತ್ತಾರೆ. ಬಾಕಿ ಇರುವ ಕೆಲಸಗಳು, ಮುಂಬರುವ ಸಭೆಗಳು ಮತ್ತು ಅನಿಯಂತ್ರಿತ ಗಡುವುಗಳನ್ನು ನೋಡುತ್ತಿದ್ದಂತೆ ಅವರಿಗೆ ಒಂದು ರೀತಿಯ ಭಯ ಮತ್ತು ಆತಂಕ ಶುರುವಾಗುತ್ತದೆ. ಇದನ್ನು ನಿಜವಾಗಿಯೂ ಬರ್ನ್ಔಟ್ ಅಂತ ಹೇಳಬಹುದು.


  ಸಾಂದರ್ಭಿಕ ಚಿತ್ರ


  ಹೀಗೆ ದಿನವಿಡೀ ಒತ್ತಡದಲ್ಲಿ ಕೆಲಸ ಮಾಡಿ ದಿನದ ಕೊನೆಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾನೇ ದಣಿದಿರುತ್ತಾರೆ, ಕಂಡ ಕಂಡವರ ಮೇಲೆ ಕೋಪ ಮಾಡಿಕೊಳ್ಳುತ್ತಾರೆ ಮತ್ತು ಭ್ರಮನಿರಸನಗೊಳ್ಳುತ್ತಾರೆ. ಇದನ್ನು ಬರ್ನ್ಔಟ್ ಅಂತ ಅನೇಕರು ಹೇಳುತ್ತಾರೆ.


  ‘ಬರ್ನ್ಔಟ್’ ಕಂಪನಿ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ..


  ಈ ಸ್ಥಿತಿ ಆರಂಭದಲ್ಲಿ ಆ ವ್ಯಕ್ತಿಯ ವೈಯಕ್ತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತದೆಯಾದರೂ, ನಂತರ ಅದು ತಮ್ಮ ಕೆಲಸದ ಮೇಲೂ ಪರಿಣಾಮ ಬೀರುವುದಕ್ಕೆ ಶುರುವಾಗುತ್ತದೆ. ಇದು ಹೇಳಿಕೊಳ್ಳಲು ತುಂಬಾನೇ ಚಿಕ್ಕ ಸಮಸ್ಯೆ ಅಂತ ಅನ್ನಿಸಿದರೂ ಸಹ ಇದು ಹೆಚ್ಚು ಗಂಭೀರವಾದ ಸಮಸ್ಯೆಯ ಸಂಕೇತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಬರ್ನ್ಔಟ್ ಅನ್ನು ದೀರ್ಘಕಾಲದ ಕೆಲಸದ ಒತ್ತಡ ಎಂದು ವ್ಯಾಖ್ಯಾನಿಸುತ್ತದೆ, ಏಕೆಂದರೆ ಮಾಡುತ್ತಿರುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲಾಗುವುದಿಲ್ಲ.


  ಕೆಲಸದ ಸ್ಥಳದಲ್ಲಿ ಹೀಗೆ ಬರ್ನ್ಔಟ್ ಆದ ಉದ್ಯೋಗಿಗಳನ್ನು ಗುರುತಿಸಲು ಕೆಲವು ಮಾರ್ಗಗಳಿವೆ. ನಿಮ್ಮ ಉದ್ಯೋಗಿಗಳು ನಿರಂತರವಾಗಿ ದಣಿದಿರುವುದನ್ನು ನೀವು ಗಮನಿಸಿದರೆ, ಅವರು ಕೆಲಸದ ಬಗ್ಗೆ ನಕಾರಾತ್ಮಕ ಮನೋಭಾವವನ್ನು ವ್ಯಕ್ತಪಡಿಸಿದರೆ, ಅಥವಾ ಕಡಿಮೆ ವೃತ್ತಿಪರ ಸಾಮರ್ಥ್ಯವನ್ನು ಪ್ರದರ್ಶಿಸಿದರೆ, ಅವರು ಬರ್ನ್ಔಟ್ ಆಗಿರುವ ಸಾಧ್ಯತೆಯಿದೆ.


  ಇದನ್ನೂ ಓದಿ: Why Employees Quit: ಒಳ್ಳೆಯ ಉದ್ಯೋಗಿಗಳು ಕೆಲಸ ಬಿಡಲು ಈ 4 ವಿಷಯಗಳೇ ಮುಖ್ಯ ಕಾರಣ


  ಯಾಹೂನ ಮಾಜಿ ಅಧ್ಯಕ್ಷರು ಇದರ ಬಗ್ಗೆ ಏನ್ ಹೇಳ್ತಾರೆ?


  ಯಾಹೂನ ಮಾಜಿ ಅಧ್ಯಕ್ಷ "ಈ ಬರ್ನ್ಔಟ್ ಎನ್ನುವುದು ಉದ್ಯೋಗಿಯ ಅಸಮಾಧಾನಕ್ಕೆ ಸಂಬಂಧಿಸಿದೆ. ನಿಮಗೆ ಆ ರೀತಿ ಏಕೆ ಆಗುತ್ತಿದೆ ಅಂತ ತಿಳಿದುಕೊಳ್ಳುವ ಮೂಲಕ ನೀವು ಅದನ್ನು ಬಗೆಹರಿಸಿಕೊಳ್ಳಬಹುದು" ಎಂದು ಹೇಳುತ್ತಾರೆ. ಸಹೋದ್ಯೋಗಿಗಳ ಬಗ್ಗೆ ಅಸಮಾಧಾನ, ಸಂಗಾತಿ ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯದೇ ಇರುವುದರಿಂದ ಉಂಟಾಗುವ ಅಸಮಾಧಾನ ಮತ್ತು ಇತರ ಕಾರಣಗಳು ಸಹ ಉದ್ಯೋಗಿಗಳಲ್ಲಿ ಬರ್ನ್ಔಟ್ ಆಗುವುದಕ್ಕೆ ಕಾರಣವಾಗಿರಬಹುದು.


  ಸಂಸ್ಥೆಯ ಮೇಲೆ ಉದ್ಯೋಗಿಯ ‘ಬರ್ನ್ಔಟ್’ ಹೇಗೆ ಪರಿಣಾಮ ಬೀರುತ್ತದೆ?


  ಸಾಂಸ್ಥಿಕ ಕಾರ್ಯಕ್ಷಮತೆಯ ಮೇಲೆ ಉದ್ಯೋಗಿಯ ಬರ್ನ್ಔಟ್ ನೇರವಾಗಿ ಪರಿಣಾಮ ಬೀರುತ್ತದೆ. ಇದು ಅವರ ಕೆಲಸದಲ್ಲಿನ ಉತ್ಪಾದಕತೆಯನ್ನು ಕಡಿಮೆ ಮಾಡಲು ಮತ್ತು ಉದ್ಯೋಗಿಗಳ ವಹಿವಾಟು ಮತ್ತು ಗೈರುಹಾಜರಿಯನ್ನು ಹೆಚ್ಚಿಸಲು ಸಹ ಕಾರಣವಾಗಬಹುದು. ಇದು ಸಂಸ್ಥೆಯ ವೆಚ್ಚಗಳನ್ನು ಸಹ ಗಮನಾರ್ಹವಾಗಿ ಹೆಚ್ಚಿಸುತ್ತದೆ ಅಂತ ಹೇಳಬಹುದು. ಅನಾರೋಗ್ಯದ ರಜೆ, ರಾಜೀನಾಮೆ ಮತ್ತು ಪರಿಣಾಮವಾಗಿ ನೇಮಕಾತಿ ಮತ್ತು ತರಬೇತಿ ವೆಚ್ಚಗಳು ಹೀಗೆ ತುಂಬಾನೇ ಇರುತ್ತವೆ.


  ಸಾಂದರ್ಭಿಕ ಚಿತ್ರ


  ಮೆಕಿನ್ಸೆ ಆಂಡ್ ಕಂಪನಿಯ ಇತ್ತೀಚಿನ ಸಂಶೋಧನೆಯು ಸರಿಯಾದ ಮಾಹಿತಿಯನ್ನು ಹೊಂದಿರುವ ಅಧಿಕಾರಿಗಳು ಉದ್ಯೋಗಿಯ ಬರ್ನ್ಔಟ್ ಅನ್ನು ತಡೆಗಟ್ಟುವಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟು ಮಾಡಬಹುದು ಎಂದು ಬಹಿರಂಗಪಡಿಸಿದ್ದಾರೆ.‘


  ಉದ್ಯೋಗಿಯ ‘ಬರ್ನ್ಔಟ್’ ಅನ್ನು ನಿವಾರಿಸಲು ಇರುವ ಕೆಲವು ಪ್ರಮುಖ ಮಾರ್ಗಗಳು:


  1) ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸಿ


  ಈ ಸಮಸ್ಯೆಯನ್ನು ಸೂಕ್ತವಾಗಿ ಗುರುತಿಸಿದ ನಂತರ ಮಾತ್ರ ನೀವು ಅದನ್ನು ಪರಿಹರಿಸಬಹುದು. ಉದ್ಯೋಗಿಯು ಸಂಪೂರ್ಣವಾಗಿ ಬರ್ನ್ಔಟ್ ಆಗಿರುವ ಸಾಧ್ಯತೆಯನ್ನು ಒಪ್ಪಿಕೊಳ್ಳಬೇಕು. ಆದ್ದರಿಂದ, ನಿಮ್ಮ ತಂಡದೊಳಗಿನ ಯಾವುದೇ ಮಾಹಿತಿಯ ಮೇಲೆ ನೀವು ತುಂಬಾನೇ ಸೂಕ್ಷ್ಮವಾಗಿ ಗಮನವಿಡಿ. ಹೆಚ್ಚಿದ ಗೈರುಹಾಜರಿ ಮತ್ತು ಕಳಪೆ ಆರೋಗ್ಯವು ಸಹ ಆಗಾಗ್ಗೆ ಉದ್ಯೋಗಿಯು ಬರ್ನ್ಔಟ್ ಆಗಲು ಕಾರಣವಾಗುತ್ತದೆ.


  ದೀರ್ಘಕಾಲದ ದಣಿವು, ಕೋಪ, ಸ್ವಯಂ ವಿಮರ್ಶೆ, ನಕಾರಾತ್ಮಕತೆ ಮತ್ತು ಆಕ್ರಮಣಕ್ಕೆ ಒಳಗಾಗುವ ಭಾವನೆ ಇವೆಲ್ಲವೂ ಉದ್ಯೋಗಿಯು ಬರ್ನ್ಔಟ್ ಆಗಿರುವ ಲಕ್ಷಣಗಳಾಗಿವೆ. ಈ ರೋಗಲಕ್ಷಣಗಳಲ್ಲಿ ಯಾವುದನ್ನಾದರೂ ಪ್ರದರ್ಶಿಸುವ ಉದ್ಯೋಗಿಯೊಂದಿಗೆ ಕೂಡಲೇ ಸಂಪರ್ಕಿಸಿ ಮತ್ತು ಸಹಾಯ ಮಾಡಲು ನೀವು ಏನು ಮಾಡಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಿರಿ.


  2) ಕೆಲಸದ ಹೊರೆಯನ್ನು ಚರ್ಚಿಸಿ ಮತ್ತು ಅದನ್ನು ಸರಿಯಾಗಿ ವಿಂಗಡಿಸಿ


  ಹೆಚ್ಚು ನುರಿತ ಉದ್ಯೋಗಿಗಳು ಸಾಂದರ್ಭಿಕವಾಗಿ ಹೆಚ್ಚು ಕೆಲಸದ ಹೊರೆಯನ್ನು ಹೊರಬಹುದು. ಅವರು ಅತಿಯಾಗಿ ಕೆಲಸ ಮಾಡುತ್ತಿದ್ದಾರೆ ಅಥವಾ ಯಾವಾಗಲೂ ನಿಗದಿತ ಸಮಯಕ್ಕಿಂತ ಹೆಚ್ಚು ಗಂಟೆಗಳ ಕಾಲದವರೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದರೆ, ನಿಮ್ಮ ತಂಡದ ಸದಸ್ಯರೊಂದಿಗೆ ಕುಳಿತುಕೊಳ್ಳಿ ಮತ್ತು ಅವರ ಎಲ್ಲಾ ಕೆಲಸಗಳು ಮತ್ತು ಯೋಜನೆಗಳ ಪಟ್ಟಿಯನ್ನು ತಯಾರಿಸಿ. ಆದ್ಯತೆ ನೀಡಲು ಮತ್ತು ಅವರ ಪಟ್ಟಿಯಿಂದ ಮಾಡಬೇಕಾದ ಕೆಲವು ಕೆಲಸಗಳನ್ನು ಆನಂತರ ಮಾಡಲು ಅಥವಾ ಅವುಗಳನ್ನು ಇತರಲ್ಲಿ ವಿಂಗಡಿಸಿ.


  Urban youth under immense pressure to maintain their existence as per society s expectations study report stg asp
  ಸಾಂಕೇತಿಕ ಚಿತ್ರ


  3) ಉದ್ಯೋಗಿಯ ಪ್ರಯತ್ನ ಮತ್ತು ಉತ್ತಮ ಕೆಲಸವನ್ನು ಗುರುತಿಸುವುದು


  ಅನೇಕ ಬಾರಿ, ಸಂಸ್ಥೆಗಳು ತಮ್ಮ ಯಶಸ್ಸಿಗೆ ಕಾರಣರಾದವರನ್ನು ಗುರುತಿಸಲು ವಿಫಲವಾಗುತ್ತವೆ ಅಥವಾ ಹೆಚ್ಚು ಗಮನಾರ್ಹವಾಗಿ ಆ ಯಶಸ್ಸನ್ನು ತಮ್ಮ ಉದ್ಯೋಗಿಗಳು ಪಟ್ಟ ಪರಿಶ್ರಮದೊಂದಿಗೆ ಜೋಡಿಸಲು ವಿಫಲವಾಗುತ್ತವೆ. ಉದ್ಯೋಗಿಯ ಪ್ರಯತ್ನಗಳನ್ನು ಸಕಾಲಿಕ ರೀತಿಯಲ್ಲಿ ಗುರುತಿಸುವುದು ಅವರನ್ನು ಪ್ರೇರೇಪಿಸುವಂತೆ ಮತ್ತು ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ.


  4) ಉದ್ಯೋಗಿಯ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ


  ಹೆಚ್ಚಿನ ಕೆಲಸದ ಒತ್ತಡದ ಅವಧಿಯಲ್ಲಿ ಉದ್ಯೋಗಿಯ ನೈತಿಕ ಸ್ಥೈರ್ಯವು ಹದಗೆಡಬಹುದು. ಅಂತಹ ಅವಧಿಗಳ ನಂತರ ಸ್ವಲ್ಪ ಸಮಯದ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಉದ್ಯೋಗಿಗಳನ್ನು ಉತ್ತೇಜಿಸುವುದು, ಅವರ ಮಾನಸಿಕ ಯೋಗಕ್ಷೇಮಕ್ಕಾಗಿ ತಮ್ಮನ್ನು ತಾವು ಸಡಿಲಗೊಳಿಸಲು ಮತ್ತು ಪುನರುಜ್ಜೀವನಗೊಳಿಸಲು ಉತ್ತೇಜಿಸುವುದು ತುಂಬಾ ಸಹಾಯಕಾರಿಯಾಗಿದೆ. ಅವರ ವ್ಯವಸ್ಥಾಪಕರು ಅವರನ್ನು ಬೆಂಬಲಿಸುತ್ತಾರೆ ಎಂದು ತಿಳಿದುಕೊಳ್ಳುವುದು ಅವರಿಗೆ ಸಮಯವನ್ನು ಕೇಳುವ ಬಗ್ಗೆ ಇರುವ ಆತಂಕವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.


  5) ರಜೆಯ ದಿನಗಳನ್ನು ತೆಗೆದುಕೊಳ್ಳಲು ಉದ್ಯೋಗಿಗಳಿಗೆ ಹೇಳಿ


  ತಮ್ಮ ಪಾವತಿಸುವ ರಜೆದಿನಗಳ ಲಾಭವನ್ನು ಪಡೆಯಲು ಉದ್ಯೋಗಿಗಳನ್ನು ಉತ್ತೇಜಿಸಿ. ಉದ್ಯೋಗಿಗಳು ಅತಿಯಾದ ರಜೆ ತೆಗೆದುಕೊಳ್ಳುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ವರ್ಷಕ್ಕೊಮ್ಮೆ ಒಂದು ವರದಿಯನ್ನು ತಯಾರಿಸಿ. ಪ್ರತಿಯೊಬ್ಬರೂ ತಮ್ಮ ರಜೆಯ ದಿನಗಳನ್ನು ಬಳಸಿಕೊಳ್ಳುವಂತೆ ನೋಡಿಕೊಳ್ಳಿರಿ.


  What should be kept on office desk as per Vastu
  ಸಾಂದರ್ಭಿಕ ಚಿತ್ರ


  ಈಗಂತೂ ಕಂಪನಿಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಪೈಕಿ ಅನೇಕ ಜನರು ಹೀಗೆ ಬರ್ನ್ಔಟ್ ಆಗಿರುವುದನ್ನು ನಾವು ನೋಡಬಹುದು ಮತ್ತು ಇದು ಬಹಳ ಸಾಮಾನ್ಯವಾದ ಘಟನೆಯಾಗಿದೆ. ಮೇಲೆ ಪಟ್ಟಿ ಮಾಡಲಾದ ಹಲವಾರು ಅಭ್ಯಾಸಗಳಿವೆ, ಇದು ಸಂಸ್ಥೆಗಳಲ್ಲಿನ ಉದ್ಯೋಗಿಗಳಿಗೆ ಒಳ್ಳೆಯ ಭಾವನೆಯನ್ನು ಮೂಡಿಸಿ ಈ ಬರ್ನ್ಔಟ್ ಅನ್ನು ದೂರವಿಡುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಬಹುದು.


  ಆಗಾಗ್ಗೆ ಉದ್ಯೋಗಿಗಳ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು


  ಉದ್ಯೋಗಿಗಳಲ್ಲಿ ಈ ಬರ್ನ್ಔಟ್ ಸಮಸ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಲು, ಉದ್ಯೋಗದಾತರು ಉದ್ಯೋಗಿಗಳು ಕೆಲಸದಲ್ಲಿ ನೀಡುವ ತಮ್ಮ ಕಠಿಣ ಪರಿಶ್ರಮಕ್ಕಾಗಿ ಆಗಾಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಿರಬೇಕು ಮತ್ತು ಅವರಿಗೆ ಮನ್ನಣೆಯನ್ನು ಅನುಭವಿಸಲು ಸಹಾಯ ಮಾಡುವ ಸಂಪನ್ಮೂಲಗಳನ್ನು ಸುಗಮಗೊಳಿಸಲು ಸಕ್ರಿಯವಾಗಿ ಶ್ರಮಿಸಬಹುದು. ಇದು ಅವರನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ ಮತ್ತು ಸಂಸ್ಥೆಯ ಬೆಳವಣಿಗೆ ಮತ್ತು ಯಶಸ್ಸಿನ ಭಾಗವಾಗಲು ಸಹ ಪ್ರೇರೇಪಿಸುತ್ತದೆ.

  Published by:Kavya V
  First published: