• Home
  • »
  • News
  • »
  • career
  • »
  • Career Guide: ಗೊಂದಲಕ್ಕೆ ಇಲ್ಲಿದೆ ಪರಿಹಾರ, ವೃತ್ತಿಪರ ಸಲಹೆಗಾರರಿಂದ ಮಾರ್ಗದರ್ಶನ

Career Guide: ಗೊಂದಲಕ್ಕೆ ಇಲ್ಲಿದೆ ಪರಿಹಾರ, ವೃತ್ತಿಪರ ಸಲಹೆಗಾರರಿಂದ ಮಾರ್ಗದರ್ಶನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಗತಕಾಲದ ಬಗೆಹರಿಯದ ಸಮಸ್ಯೆಗಳನ್ನು ಪರಿಹರಿಸಲು ವೃತ್ತಿಪರ ಸಲಹೆಗಾರರಿಂದ ಮಾರ್ಗದರ್ಶನ ಪಡೆಯಿರಿ. ನಿಮಗೆ ನಿಖರವಾಗಿ ಏನು ತೊಂದರೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ

  • Share this:

ಭಾವನಾತ್ಮಕ ಘರ್ಷಣೆ, ಗೊಂದಲ, ಮನಸಿನ ತುಮುಲಗಳು ಮನುಷ್ಯರನ್ನು (Human)  ಕಾಡುತ್ತಲೇ ಇರುತ್ತವೆ. ಕೆಲವೊಮ್ಮೆ ಕ್ಲಿಷ್ಟಕರ ಸನ್ನಿವೇಶದಲ್ಲಿ ಸಿಲುಕಿ ಒದ್ದಾಡುತ್ತಿರುತ್ತೇವೆ. ದಾರಿಯೇ ಕಾಣದೇ ಹೋದಾಗ ಅಂಥ ದ್ವಂದ್ವಗಳನ್ನು ಹೇಳಿಕೊಳ್ಳಲು, ಪರಿಹಾರ ಸೂಚಿಸಲು ತಜ್ಞರಿದ್ದಾರೆ ಎಂಬುದನ್ನೇ ಮರೆತುಹೋಗುತ್ತೇವೆ. ಆದರೆ ನಮ್ಮ ಸಮಸ್ಯೆಯನ್ನು (Problem) ಸರಿಯಾದವರ ಬಳಿ ಹೇಳಿದರೆ ಒಂದು ಪರಿಹಾರ (Solution), ಸಮಾಧಾನ ಸಿಕ್ಕೇ ಸಿಗುತ್ತದೆ. ಇಲ್ಲೊಬ್ಬ ಕೌನ್ಸಿಲಿಂಗ್‌ ಮನಶ್ಯಾಸ್ತ್ರಜ್ಞರಾದ ರಚನಾ ಅವತ್ರಮಣಿ ಅವರಿಗೆ ಪ್ರಶ್ನೆ (Question) ಕೇಳಿದ್ದು, ಅವರು ಅದಕ್ಕೆ ಉತ್ತರಿಸಿದ್ದಾರೆ.


ಪ್ರಶ್ನೆ: ನಮಸ್ಕಾರ, ನಾನು 29 ವರ್ಷದ ಯುವಕ. ಕಾಲೇಜಿನಲ್ಲಿದ್ದಾಗ ಮೂರು ವರ್ಷಗಳ ಕಾಲ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದೆ. ನಾವು ನಮ್ಮ ಸಂಬಂಧವನ್ನು ಸಿರಿಯಸ್ಸಾಗಿ ತೆಗೆದುಕೊಂಡಿದ್ದೆವು. ನನ್ನ ಪ್ರೇಮಿಯಾಗಿದ್ದವಳು ದಕ್ಷಿಣ ಭಾರತದವಳು. ನಾನು ಈಶಾನ್ಯ ಭಾರತದವನು. ಆದಾಗ್ಯೂ, ನಮ್ಮ ಓದು ಮುಗಿದ ಬಳಿಕ ನಾವು ದೂರ ಆಗಿದ್ದೇವೆ. ನಾವು ನಮ್ಮ ಊರಿಗೆ ಹೋದೆವು. ನಾವು ಮನೆಯಿಂದ ದೂರವಿದ್ದ ಕಾರಣ, ನಮ್ಮಿಬ್ಬರ ಬಗ್ಗೆ ನಮ್ಮ ಹೆತ್ತವರಿಗೆ ಗೊತ್ತಿರಲಿಲ್ಲ.


ಎರಡು ವರ್ಷಗಳ ಹಿಂದೆ ಭೇಟಿ
ಆದ್ರೆ ಅಮೇರಿಕಾದಲ್ಲಿ MNC ಯಲ್ಲಿ ಕೆಲಸ ಮಾಡುವ ನನ್ನ ಸಹೋದರ ಅದೇ ಹುಡುಗಿಯನ್ನು ಎರಡು ವರ್ಷಗಳ ಹಿಂದೆ ಭೇಟಿಯಾದ. ಈಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇತ್ತೀಚೆಗೆ, ನನ್ನ ಸಹೋದರ ಮನೆಗೆ ಬಂದಿದ್ದಾಗ ಆ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳಿದ. ಮನೆಯವರೆಲ್ಲರೂ ಸಂತೋಷಪಟ್ಟರು. ಆದ್ರೆ ನನ್ನ ಮನಸ್ಸು ಮಾತ್ರ ಒಡೆದು ಹೋಯಿತು.


ಇದನ್ನೂ ಓದಿ: ISRO: ಇಸ್ರೋದಿಂದ ಉಚಿತ ಆನ್​ಲೈನ್​ ಕೋರ್ಸ್,​ ನೀವೂ ಭಾಗಿಯಾಗಿ


ಆ ಹುಡುಗಿ ಹಾಗೂ ತನ್ನ ಮಧ್ಯೆ ಸಂಬಂಧವಿದ್ದುದರ ಬಗ್ಗೆ ಮನೆಯಲ್ಲಿ ತಿಳಿಸಿದೆ. ಅಣ್ಣನಿಗೂ ಹೇಳಿದೆ. ಆದರೆ ಭೂತಕಾಲವು ಭವಿಷ್ಯದ ಮೇಲೆ ಪರಿಣಾಮ ಬೀರಲು ಬಿಡಬೇಡಿ ಎಂದು ನನ್ನ ಸಹೋದರ ಹೇಳಿದ. ನನ್ನ ಮಾಜಿ ಗೆಳತಿ ಕೂಡ ಅದೇ ಅಭಿಪ್ರಾಯ ಹೊಂದಿದ್ದಾಳೆ. ಜನವರಿಯಲ್ಲಿ ಅವರಿಬ್ಬರ ಮದುವೆ ನಡೆಯಲಿದೆ. ಆದ್ರೆ ನಾನು ಅವಳನ್ನು ನನ್ನ ಅತ್ತಿಗೆ ಎಂದು ಒಪ್ಪಿಕೊಳ್ಳಲಾರೆ! ಏನು ಮಾಡಬೇಕೆಂದು ನನಗೆ ಗೊತ್ತಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ! – ಅನಾಮಧೇಯ


ರಚನಾ ಅವತ್ರಮಣಿ ಪ್ರತಿಕ್ರಿಯೆ: ನಾವೆಲ್ಲರೂ ಹಿಂದಿನ ನೆನಪನ್ನು ಹೊಂದಿದ್ದೇವೆ. ನಿನ್ನೆಯ ಬಗ್ಗೆ ಕಲಿತಿದ್ದರಿಂದಲೇ ನಾವು ಇಂದಿನ ದಿನವನ್ನು ನಿಭಾಯಿಸಲು ಸಮರ್ಥರಾಗಿದ್ದೇವೆ. ಕೆಲವೊಮ್ಮೆ ನಮ್ಮ ಹಿಂದಿನ ಅನುಭವಗಳು, ನಿದರ್ಶನಗಳು ಅಥವಾ ವ್ಯಕ್ತಿಗಳಿಂದ ಬಂದ ಸಂದರ್ಭಗಳನ್ನು ನಿಭಾಯಿಸುವುದು ಸವಾಲಾಗಬಹುದು. ಅದೇ ಬಗ್ಗೆ ನಮ್ಮ ಮನಸ್ಸಿನಲ್ಲಿರುವ ಸಮಸ್ಯೆಗಳು.


ಹಿಂದಿನ ಜೀವನದ ಚಿಂತೆ ಬೇಡ
ನಿಮಗೆ 29 ವರ್ಷ ವಯಸ್ಸಾಗಿದೆ. ನಿಮ್ಮ ಹಿಂದಿನ ಜೀವನದ ಬಗ್ಗೆ ನಿಮ್ಮ ತೊಂದರೆ ಮತ್ತು ಕುಟುಂಬ ಸದಸ್ಯರೊಂದಿಗೆ ನೀವು ಹಂಚಿಕೊಂಡಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದಾಗ್ಯೂ, ನಿಮ್ಮ ಸಹೋದರ ಮತ್ತು ಮಾಜಿ ಗೆಳತಿ ಹಿಂದಿನದನ್ನು ಮರೆತು ಮುಂದೆ ಸಾಗಿದ್ದಾರೆ. ನೀವು ಅವಳೊಂದಿಗೆ ದೈಹಿಕವಾಗಿ ತೊಡಗಿಸಿಕೊಂಡಿದ್ದರಿಂದ ಇದನ್ನು ನಿಭಾಯಿಸುವುದು ನಿಮಗೆ ಕಷ್ಟ ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ನೀವು ಕನಸಿನಲ್ಲಿಯೂ ಆಕೆ ನಿಮ್ಮ ಸಹೋದರನ್ನು ಮದುವೆಯಾಗುತ್ತಾಳೆ ಎಂದು ಭಾವಿಸಿರಲಿಲ್ಲ.


ಅದೇನೇ ಇದ್ದರೂ, ಇಬ್ಬರೂ ವಯಸ್ಕರು ಮತ್ತು ಅವರು ಪರಿಸ್ಥಿತಿ ಮತ್ತು ಅವರ ಹಿಂದಿನ ಬಗ್ಗೆ ತಿಳಿದಿರುತ್ತಾರೆ. ಅದನ್ನೆಲ್ಲ ತಿಳಿದೂ ಅವರು ಮದುವೆಯಾಗಬಯಸಿದರೆ ಅದು ಅವರ ಆಯ್ಕೆಯಾಗಿದೆ. ಅವರು ಸ್ವಇಚ್ಛೆಯಿಂದ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕಿದೆ.


ಕಳೆದುಹೋದ ಜೀವನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ
ನಿಮ್ಮ ಗತಕಾಲದ ಬಗೆಹರಿಯದ ಸಮಸ್ಯೆಗಳನ್ನು ಪರಿಹರಿಸಲು ವೃತ್ತಿಪರ ಸಲಹೆಗಾರರಿಂದ ಮಾರ್ಗದರ್ಶನ ಪಡೆಯಿರಿ. ನಿಮಗೆ ನಿಖರವಾಗಿ ಏನು ತೊಂದರೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಅವರ ಭಾವನೆಗಳು ಮತ್ತು ನಿರ್ಧಾರವನ್ನು ಗೌರವಿಸಲು ನಾನು ನಿಮಗೆ ಸಲಹೆ ನೀಡುತ್ತೇನೆ. ಅಲ್ಲದೇ ನಿಮ್ಮ ಜೀವನ, ನಿಮ್ಮ ಭಾವನೆಗಳು ಮತ್ತು ನಿಮ್ಮ ಆಲೋಚನೆಗಳಿಗೆ ಮಾತ್ರ ನೀವು ಜವಾಬ್ದಾರರಾಗಿರುತ್ತೀರಿ. ಆದ್ದರಿಂದ, ನಿಮ್ಮ ಜೀವನ ಮತ್ತು ನಿಮ್ಮ ಜೀವನದ ಗುರಿಗಳ ಮೇಲೆ ಕೇಂದ್ರೀಕರಿಸಿ.

First published: