• Home
  • »
  • News
  • »
  • career
  • »
  • Career Options: ಹಣದ ಬಗ್ಗೆ ಆಸಕ್ತಿ ಜಾಸ್ತಿನಾ? ಹಾಗಾದರೆ ನಿಮಗೆ ಈ ಉದ್ಯೋಗಗಳು ಹೊಂದುತ್ತೆ

Career Options: ಹಣದ ಬಗ್ಗೆ ಆಸಕ್ತಿ ಜಾಸ್ತಿನಾ? ಹಾಗಾದರೆ ನಿಮಗೆ ಈ ಉದ್ಯೋಗಗಳು ಹೊಂದುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಟಾಕ್ ಮಾರುಕಟ್ಟೆಯಲ್ಲಿನ ವೃತ್ತಿಯು ಕೇವಲ ವ್ಯಾಪಾರಿಗಳು ಅಥವಾ ಹೂಡಿಕೆದಾರರಿಗೆ ಸೀಮಿತವಾಗಿಲ್ಲ. ಇದು ಹಲವಾರು ಬೇರೆ ಬೇರೆ ಕ್ಷೇತ್ರಗಳನ್ನೂ ಹೊಂದಿದೆ. ನಿಮ್ಮ ಆಸಕ್ತಿ ಮತ್ತು ನಿಮಗಿರುವ ಕೌಶಲ್ಯಗಳ ಪ್ರಕಾರ ನೀವು ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

  • Trending Desk
  • 4-MIN READ
  • Last Updated :
  • Share this:

    ಭಾರತದ ಷೇರು ಮಾರುಕಟ್ಟೆಯು (Stock Market) ದಿನೇ ದಿನೇ ಬೆಳೆಯುತ್ತಿದೆ. ದೇಶದಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರು ದಿನದ ವಹಿವಾಟಿನಲ್ಲಿ ತೊಡಗಿದ್ದು, ಸಂಖ್ಯೆಯು ಹೆಚ್ಚಾಗುತ್ತಲೇ ಸಾಗಿದೆ.$3.4055 ಟ್ರಿಲಿಯನ್ ಮಾರುಕಟ್ಟೆ ಬಂಡವಾಳದೊಂದಿಗೆ (Investment), ಭಾರತವು ವಿಶ್ವದ 6 ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿದೆ. ಅಲ್ಲದೇ ಷೇರು ಮಾರುಕಟ್ಟೆಯು ಹೆಚ್ಚಾಗಿ ಯುವ ವೃತ್ತಿಪರರನ್ನು (Career Options) ಆಕರ್ಷಿಸಿದೆ ಎಂದರೆ ತಪ್ಪಾಗೋದಿಲ್ಲ.


    ಇದಕ್ಕೆ ಸಾಕ್ಷಿಯಾಗಿ ದೇಶವು 69 ಮಿಲಿಯನ್ ಡಿಮ್ಯಾಟ್ ಖಾತೆಗಳನ್ನು ಹೊಂದಿದೆ ಎಂಬುದಾಗಿ ಅಂಕಿ ಅಂಶಗಳು ಹೇಳುತ್ತವೆ. ದೇಶದಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರು ದಿನದ ವಹಿವಾಟಿನಲ್ಲಿ ತೊಡಗಿದ್ದಾರೆ ಎಂದಾದರೆ ಅದನ್ನು ನೀವೇ ಅರ್ಥ ಮಾಡಿಕೊಳ್ಳಬಹುದು.


    ಮಾರುಕಟ್ಟೆಯು ದೊಡ್ಡ ಆರ್ಥಿಕತೆಗಳಲ್ಲಿ ಪ್ರಾಮುಖ್ಯತೆ ಪಡೆದಿರುವ ಸ್ಟಾಕ್ ಮಾರುಕಟ್ಟೆಯಲ್ಲಿ ವೃತ್ತಿ ಆಯ್ಕೆಗಳೂ ಸಾಕಷ್ಟಿವೆ. 2026 ರ ವೇಳೆಗೆ ವೃತ್ತಿಪರರ ಉದ್ಯೋಗವು ಸರಾಸರಿ ಉದ್ಯೋಗಕ್ಕಿಂತ ವೇಗವಾಗಿ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಸ್ಟಾಕ್ ಮಾರುಕಟ್ಟೆಯಲ್ಲಿನ ವೃತ್ತಿಯು ಕೇವಲ ವ್ಯಾಪಾರಿಗಳು ಅಥವಾ ಹೂಡಿಕೆದಾರರಿಗೆ ಸೀಮಿತವಾಗಿಲ್ಲ. ಇದು ಹಲವಾರು ಬೇರೆ ಬೇರೆ ಕ್ಷೇತ್ರಗಳನ್ನೂ ಹೊಂದಿದೆ. ನಿಮ್ಮ ಆಸಕ್ತಿ ಮತ್ತು ನಿಮಗಿರುವ ಕೌಶಲ್ಯಗಳ ಪ್ರಕಾರ ನೀವು ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.


    ಷೇರು ಮಾರುಕಟ್ಟೆಯಲ್ಲಿವೆ ಸಾಕಷ್ಟು ವೃತ್ತಿ ಅವಕಾಶಗಳು


    ಷೇರು ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿರುವುದರಿಂದ, ಇಲ್ಲಿ ವೃತ್ತಿ ಅವಕಾಶಗಳ ವ್ಯಾಪ್ತಿಯು ಕೂಡ ಹೆಚ್ಚಾಗುತ್ತಿದೆ. ಅನೇಕ ಜನರು ಇನ್ನೂ ಷೇರು ಮಾರುಕಟ್ಟೆಯ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ. ಸರಿಯಾಗಿ ಅರಿವಿರದೇ ಅಲ್ಪ ಸ್ವಲ್ಪ ಪರಿಣಿತಿಯೊಂದಿಗೆ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಆದ್ರೆ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಬೆಳೆಯುತ್ತಿರುವ ಟ್ರೆಂಡ್‌ನಿಂದಾಗಿ ಅನೇಕರು ಇದರ ಬಗ್ಗೆ ಆಸಕ್ತಿ ಹೊಂದಿದ್ದಾರೆ.




    ಷೇರು ಮಾರ್ಕೆಟ್‌ ನ ಬಗ್ಗೆ ಪರಿಣತಿ ಮತ್ತು ಜ್ಞಾನದ ಕೊರತೆ, ಹಾಗೆಯೇ ಈ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಆಸಕ್ತಿ ಹಾಗೂ ಪ್ರವೃತ್ತಿಯು ಷೇರು ಮಾರುಕಟ್ಟೆಯಲ್ಲಿ ಸ್ಟಾಕ್ ಬ್ರೋಕರ್‌ಗಳು ಮತ್ತು ಇತರ ಕ್ಷೇತ್ರಗಳಿಗೆ ವೃತ್ತಿಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿದೆ. ಈ ಬೆಳೆಯುತ್ತಿರುವ ಪ್ರವೃತ್ತಿಯಿಂದಾಗಿ ಹೆಚ್ಚಿನ ಬೇಡಿಕೆಯಲ್ಲಿರುವ ಕೆಲವು ವೃತ್ತಿ ಅವಕಾಶಗಳ ಬಗ್ಗೆ ಮಾಹಿತಿ ಇಲ್ಲಿವೆ.


    ಹಣಕಾಸು ವಿಶ್ಲೇಷಕ: ಹಣಕಾಸು ವಿಶ್ಲೇಷಕರರಾದವರು, ವಿಶ್ಲೇಷಣಾತ್ಮಕ ವರದಿಗಳು, ಹಣಕಾಸು ಯೋಜನೆಗಳನ್ನು ತಯಾರಿಸುತ್ತಾರೆ. ಇದರ ಆಧಾರದ ಮೇಲೆ ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು, ಕಂಪನಿಗಳು ಮತ್ತು ವ್ಯಕ್ತಿಗಳು ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.


    ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಹೊಂದಲು ನೀವು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. CFA (ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್) ಸಂಸ್ಥೆಯು ನಿಗದಿಪಡಿಸಿದ ಪರೀಕ್ಷೆಗಳಲ್ಲಿ ಕನಿಷ್ಠ ಉತ್ತೀರ್ಣ ಸ್ಕೋರ್ ಗಳಿಸಿರಬೇಕು. ಜೊತೆಗೆ CFA ಪ್ರಮಾಣೀಕರಣವನ್ನು ಹೊಂದಿರಬೇಕು. ಇದರ ಹೊರತಾಗಿ, ಪ್ರಸ್ತುತಿ ಕೌಶಲ್ಯಗಳು ಮತ್ತು ಸಂವಹನ ಕೌಶಲ್ಯಗಳಂತಹ ಕೌಶಲ್ಯಗಳನ್ನು ನೀವು ಹೊಂದಿರಬಕಾದದ್ದು ಅಗತ್ಯ. ಇದು ಹಣಕಾಸಿನ ವಿಶ್ಲೇಷಕರಾಗಿ ನೀವು ಕೆಲಸ ವಿವರಗಳು ಮತ್ತು ಯೋಜನೆಯಲ್ಲಿ ನಿಮ್ಮ ಗ್ರಾಹಕರಿಗೆ ಮನದಟ್ಟು ಮಾಡಲು ಸಹಾಯ ಮಾಡುತ್ತದೆ.


    ಹಣಕಾಸು ಮತ್ತು ಗಣಿತಶಾಸ್ತ್ರದ ಜ್ಞಾನ ಮತ್ತು ಸಾಫ್ಟ್‌ವೇರ್ ಪರಿಕರಗಳನ್ನು ಬಳಸುವ ಅನುಭವವು ಇತರ ಪ್ರಮುಖ ಕೌಶಲ್ಯಗಳಾಗಿವೆ. ಇನ್ನು ಹಣಕಾಸು/ಡೇಟಾ ಅನಾಲಿಟಿಕ್ಸ್‌ನಲ್ಲಿ PGDM ಕೋರ್ಸ್‌ ನಿಮಗೆ ಸಹಾಯ ಮಾಡುತ್ತದೆ.


    ರಿಸ್ಕ್‌ ಅನಾಲಿಸ್ಟ್‌ : ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸಲು, ನೀವು ಸಾರ್ವಜನಿಕ ಭಾಷಣ ಮತ್ತು ಪ್ರಸ್ತುತಿ ಪಡಿಸುವಂಥ ಕೌಶಲ್ಯಗಳನ್ನು ಹೊಂದಿರಬೇಕು. ದೈನಂದಿನ ಕಾರ್ಯಗಳು ಮತ್ತು ಗಡುವನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿರಬೇಕು.


    ಇದಲ್ಲದೆ, ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಅಳವಡಿಸಿಕೊಂಡಿರಬೇಕು. ಜೊತೆಗೆ ಕಂಪ್ಯೂಟರ್‌ ಸ್ಕಿಲ್ಸ್‌ , ಮೈಕ್ರೋಸಾಫ್ಟ್ ಎಕ್ಸೆಲ್ ಮತ್ತು ಇತರ ವಿಶ್ಲೇಷಣಾ ಕಾರ್ಯಕ್ರಮಗಳಲ್ಲಿ ಪರಿಣತಿಯನ್ನು ಹೊಂದಿರಬೇಕು.




    ಬಲವಾದ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು. ಹಣಕಾಸು/ಬಿಗ್ ಡೇಟಾದಲ್ಲಿ PGDM ಇದಕ್ಕೆ ಅತ್ಯಗತ್ಯವಾಗಿರುತ್ತದೆ. ಇನ್ನು ರಿಸ್ಕ್ ವಿಶ್ಲೇಷಕರ ಜವಾಬ್ದಾರಿಗಳನ್ನು ನೋಡೋದಾದ್ರೆ ರಿಪೋರ್ಟ್‌ ಗಳನ್ನು ರಚಿಸುವುದು, ಫೈನಾನ್ಶಿಯಲ್‌ ಮತ್ತು ಎಕಾನಾಮಿಕ್‌ ಟ್ರೆಂಡ್‌ ಗಳನ್ನು ಗುರುತಿಸುವುದು, ಆಂತರಿಕ ಮತ್ತು ಬಾಹ್ಯ ಡೇಟಾ ಪಾಯಿಂಟ್‌ಗಳನ್ನು ಮೇಲ್ವಿಚಾರಣೆ ಮಾಡುವುದಾಗಿದೆ.


    ರಿಸ್ಕ್‌ ಎನಲಿಸ್ಟ್‌ ಆಗೋಕೆ ನೀವು ವಿಶ್ಲೇಷಕರಾಗಿ ಅಥವಾ ಯಾವುದೇ ಇತರ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು.


    ಹೂಡಿಕೆ ಸಲಹೆಗಾರ: ಹಣಕಾಸು ಹೂಡಿಕೆಗೆ ಸಂಬಂಧಿಸಿದ ಗ್ರಾಹಕರಿಗೆ ಮಾರ್ಗದರ್ಶನ ನೀಡುವ ಹೂಡಿಕೆ ಸಲಹೆಗಾರರನ್ನು ಹಣಕಾಸು ಸಲಹೆಗಾರರು ಎಂದೂ ಕರೆಯುತ್ತಾರೆ. ಅವರು ತೆರಿಗೆ ಯೋಜನೆ, ಹೂಡಿಕೆ ನಿರ್ವಹಣೆ, ಎಸ್ಟೇಟ್ ಯೋಜನೆ ಮುಂತಾದವುಗಳನ್ನು ಮಾಡುತ್ತಾರೆ. ಹೂಡಿಕೆ ಸಲಹೆಯನ್ನು ಮುಂದುವರಿಸಲು ಬಯಸುವವರಲ್ಲಿ ನೀವು ಒಬ್ಬರಾಗಿದ್ದರೆ, ನಿಮಗೆ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿ ಬೇಕಾಗುತ್ತದೆ.


    Lakshya Singh invested 5 thousand rupees in the stock market is now a Billionaire stg-asp
    ಸಾಂಕೇತಿಕ ಚಿತ್ರ


    Lakshya Singh invested 5 thousand rupees in the stock market is now a Billionaire stg-asp
    ಸಾಂಕೇತಿಕ ಚಿತ್ರ


    ಶೈಕ್ಷಣಿಕ ಅರ್ಹತೆಗಳ ಜೊತೆಗೆ ಗ್ರಾಹಕ ಸೇವೆ, ವಿಶ್ಲೇಷಣಾತ್ಮಕ ಚಿಂತನೆ, ಸಂವಹನ, ಪರಸ್ಪರ ಕೌಶಲ್ಯಗಳು ಮತ್ತು ಇತರ ಕೌಶಲ್ಯಗಳು ನಿರ್ಣಾಯಕವಾಗಿವೆ ಅನ್ನೋದನ್ನು ಪರಿಗಣಿಸಬೇಕು. ಹಣಕಾಸು ವಿಷಯದಲ್ಲಿ ಪಿಜಿಡಿಎಂ ಮತ್ತು ಪೋರ್ಟ್‌ಫೋಲಿಯೊ ನಿರ್ವಹಣೆಯಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳು ಹೆಚ್ಚು ಉಪಯೋಗಕ್ಕೆ ಬರುತ್ತವೆ.


    ಸ್ಟಾಕ್ ಬ್ರೋಕರ್: ಸ್ಟಾಕ್ ಬ್ರೋಕರ್ ಆದವರು ಗ್ರಾಹಕರಿಗೆ ಮಾರುಕಟ್ಟೆಯ ಬಗ್ಗೆ ಮತ್ತು ಮಾರುಕಟ್ಟೆ ನಿಯಮಗಳ ಬಗ್ಗೆ, ಹಣಕಾಸಿನ ಪೋರ್ಟ್ಫೋಲಿಯೋಗಳ ಬಗ್ಗೆ ತಿಳಿಸಿಕೊಡುತ್ತಾರೆ. ಸ್ಟಾಕ್ ಬ್ರೋಕರ್‌ಗಳು ಸಲಹೆಗಾರರು, ವಿತರಕರು, ಭದ್ರತಾ ವಿಶ್ಲೇಷಕರಾಗಿಯೂ ಕೆಲಸಗಳನ್ನು ಮಾಡುತ್ತಾರೆ.


    ಸ್ಟಾಕ್ ಬ್ರೋಕರ್ ಆಗಲು, ನೀವು ಸ್ಟಾಕ್ ಬ್ರೋಕಿಂಗ್ ಮತ್ತು ಕಂಪನಿಗಳಿಂದ ಹೆಚ್ಚಿನ ಬೇಡಿಕೆಯಿರುವ ಶೈಕ್ಷಣಿಕ ಅರ್ಹತೆಗಳಲ್ಲಿ ಪದವಿಯನ್ನು ಹೊಂದಿರಬೇಕು. ಹಣಕಾಸು ವಿಷಯದಲ್ಲಿ ಸ್ಟಾಕ್ ಬ್ರೋಕರ್ ಎಂಬಿಎ ಅಥವಾ ಚಾರ್ಟರ್ಡ್ ಫೈನಾನ್ಷಿಯಲ್ ವಿಶ್ಲೇಷಕರ ಪ್ರಮಾಣೀಕರಣದ ಅಗತ್ಯವಿದೆ.


    ಇದಲ್ಲದೆ, ನೀವು ಸಂವಹನ ಕೌಶಲ್ಯಗಳನ್ನು ಹೊಂದಿರಬೇಕಾದದ್ದು ಅಗತ್ಯ. ತಾರ್ಕಿಕ ಚಿಂತನೆ, ಗಣಿತದ ಕೌಶಲ್ಯಗಳು, ಜವಾಬ್ದಾರಿಯುತ ವರ್ತನೆ, ವಿಶ್ಲೇಷಣಾತ್ಮಕ ಮನಸ್ಸು ಹೀಗೆ ವಿವಿಧ ಸ್ಕಿಲ್‌ ಗಳನ್ನು ಹೊಂದಿರಬೇಕು. ಅಲ್ಲದೆ, ಈ ಕ್ಷೇತ್ರವು ಸ್ಟಾಕ್ ಬ್ರೋಕರ್ ಆಗಲು 2 ವರ್ಷಗಳ ಅನುಭವವನ್ನು ಕೇಳುತ್ತದೆ.


    ಈಕ್ವಿಟಿ ವಿಶ್ಲೇಷಕ: ಷೇರು ಅಥವಾ ಈಕ್ವಿಟಿ ವಿಶ್ಲೇಷಕರಾದವರು ವರದಿ ಮಾಡುವುದು, ಕಂಪನಿಗಳಿಗೆ ಅವರ ಸ್ಟಾಕ್‌ಗಳ ಕುರಿತು ಶಿಫಾರಸು ಮಾಡುವುದು, ಸಂಬಂಧಿತ ಕಂಪನಿಗಳು ತಮ್ಮ ಡೇಟಾವನ್ನು ನವೀಕರಿಸಲು ಸಹಾಯ ಮಾಡುವುದು. ಇದಕ್ಕಾಗಿ ಸುದ್ದಿ ವರದಿಗಳು ಮತ್ತು ಮಾರುಕಟ್ಟೆ ಡೇಟಾವನ್ನು ಮೇಲ್ವಿಚಾರಣೆ ಮಾಡುವ ಕೆಲಸವನ್ನು ಮಾಡುತ್ತಾರೆ.


    ನೀವು ಈಕ್ವಿಟಿ ವಿಶ್ಲೇಷಕರಾಗಿ ವೃತ್ತಿಜೀವನವನ್ನು ಆರಂಭಿಸಬಲು ಬಯಸಿದರೆ ನೀವು ಮಾರಾಟ-ಭಾಗದ ಸಂಸ್ಥೆ ಮತ್ತು ಖರೀದಿ-ಭಾಗದ ಸಂಸ್ಥೆ ಹೀಗೆ ಎರಡೂ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ.


    ಖರೀದಿಯ ಬದಿಯ ಸಂಸ್ಥೆಯು ಪೆನ್ಶನ್‌ ನಿಧಿಗಳು, ಸಂಪತ್ತು ನಿರ್ವಹಣಾ ಸಂಸ್ಥೆಗಳು ಮುಂತಾದವಕ್ಕೆ ಸಂಬಂಧಿಸಿದೆ. ಮಾರಾಟದ ಬದಿಯ ಸಂಸ್ಥೆಯು ಬ್ಯಾಂಕುಗಳು, ಬ್ರೋಕರೇಜ್ ಮುಂತಾದವುಗಳೊಂದಿಗೆ ಸಂಬಂಧ ಹೊಂದಿದೆ.


    ಇನ್ನು ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಹೊಂದಲು ಅಗತ್ಯವಿರುವ ಶೈಕ್ಷಣಿಕ ಅರ್ಹತೆಗಳು ಯಾವವು ಅನ್ನೋದನ್ನು ನೋಡೋದಾದ್ರೆ, ಅಕೌಂಟಿಂಗ್, ಹಣಕಾಸು, ವ್ಯವಹಾರ ಆಡಳಿತ ಅಥವಾ ಯಾವುದೇ ಇತರ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕಾಗುತ್ತದೆ.


    ಅಂದಹಾಗೆ ತೀವ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳಲ್ಲಿ ಷೇರು ಮಾರುಕಟ್ಟೆ ಕೂಡ ಒಂದಾಗಿರುವುದರಿಂದ ಇದರಲ್ಲಿ ಹೂಡಿಕೆ ಪ್ರಮಾಣವೂ ಹೆಚ್ಚುತ್ತಿದೆ. ಆದ್ರೆ ಅನೇಕರಿಗೆ ಇದರಲ್ಲಿ ಸರಿಯಾದ ಮಾಹಿತಿ ಇಲ್ಲದೇ ಇರೋದ್ರಿಂದ ತಪ್ಪು ಹೆಜ್ಜೆ ಇಡುವ ಸಾಧ್ಯತೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಎಷ್ಟು ಲಾಭ ಬರುತ್ತದೆಯೋ ಹಾಗೆಯೇ ಕೆಲವೊಮ್ಮೆ ನಷ್ಟವೂ ಆಗಬಹುದು.




    ಆದ್ದರಿಂದ ಸರಿಯಾದ ಜ್ಞಾನ ಅಥವಾ ಮಾಹಿತಿ ಹೊಂದಿದವರ ಮಾರ್ಗದರ್ಶನ ತುಂಬಾ ಮುಖ್ಯವಾಗುತ್ತದೆ. ಸುಲಭವಾಗಿ ಹೂಡಿಕೆ ಮಾಡಿ ಕೈ ಸುಟ್ಟುಕೊಳ್ಳುವುದಕ್ಕಿಂತ ತಿಳಿದವರ ಬಳಿ ಕೇಳಿ ನಂತರದಲ್ಲಿ, ಮಾಹಿತಿ ಪಡೆದು ನಂತರ ಹೂಡಿಕೆ ಮಾಡಿದಾಗ ಮಾತ್ರ ಲಾಭ ಗಳಿಸೋದು ಸುಲಭ. ಇಂದು ಹೆಚ್ಚು ಹೆಚ್ಚು ಜನರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮತ್ತು ವ್ಯಾಪಾರದ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ವೃತ್ತಿಪರರ ಬೇಡಿಕೆ ಹೆಚ್ಚಾಗುತ್ತಿದೆ.


    ಸ್ಟಾಕ್ ಮಾರುಕಟ್ಟೆಯು ಆಕರ್ಷಕ ಸ್ಥಳವಾಗಿದೆ. ಆದರೆ ಇಲ್ಲಿ ಎಲ್ಲವೂ ನಿಮಗೆ ಎಷ್ಟು ಗೊತ್ತಿದೆ ಎಂಬುದನ್ನು ಅವಲಂಬಿಸಿರುತ್ತದೆ. ಹಣಕಾಸು ಜಗತ್ತಿಗೆ ತಜ್ಞರ ಅಗತ್ಯವಿದೆ ಮತ್ತು ಹಣಕಾಸು ಮಾರುಕಟ್ಟೆಗಳಿಗೆ ಒಡ್ಡಿಕೊಳ್ಳುವುದರೊಂದಿಗೆ, ನೀವು ಇದರಲ್ಲಿ ವೃತ್ತಿಜೀವನವನ್ನು ಆರಂಭಿಸಲು ಕೌಶಲ್ಯವನ್ನು ಬೆಳೆಸಿಕೊಳ್ಳಬಹುದು. ಹಾಗಾಗಿ ಈ ಕ್ಷೇತ್ರವು ನಿಮ್ಮ ಆಸಕ್ತಿಯ ಕ್ಷೇತ್ರವಾಗಿದ್ದರೆ ಖಂಡಿತಾ ಇದರಲ್ಲಿ ವೃತ್ತಿ ಆಯ್ಕೆ ಮಾಡಿಕೊಳ್ಳಬಹುದು.

    Published by:Kavya V
    First published: