• Home
  • »
  • News
  • »
  • career
  • »
  • Career Guidance: ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕರಿಯರ್​ಗಾಗಿ LinkedIn ಅನ್ನು ಈ ರೀತಿ ಬಳಸಿಕೊಳ್ಳಿ

Career Guidance: ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕರಿಯರ್​ಗಾಗಿ LinkedIn ಅನ್ನು ಈ ರೀತಿ ಬಳಸಿಕೊಳ್ಳಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ವೃತ್ತಿಪರರ ಸಂಪರ್ಕವನ್ನು ನಿರ್ಮಿಸಿಕೊಳ್ಳಲು ಮತ್ತು ಲಭ್ಯವಿರುವ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಓದು ಮುಗಿದ ನಂತರ ಇಂಟರ್ನ್​​ ಶಿಪ್​​​ಗೆ ಅಂತ ಯಾವ ಕಂಪನಿಗೆ ಹೋಗುವುದು ಮತ್ತು ಸ್ವಂತವಾಗಿ ಶುರು ಮಾಡಬಹುದಾದ ಅವಕಾಶಗಳಿಗಾಗಿ ಲಿಂಕ್ಡ್ಇನ್ ಅನ್ನು ಬಳಸುತ್ತಾರೆ.

  • Share this:

    ಈಗಂತೂ ಬಹುತೇಕರು ಹೊಸ ಹೊಸ ಕ್ಷೇತ್ರದಲ್ಲಿ ತಮಗೆ ಬೇಕಾದ ಕೆಲಸಗಳನ್ನು (Jobs) ಹುಡುಕಲು ಮತ್ತು ಜಗತ್ತಿನಾದ್ಯಂತ ಇರುವ ಕೆಲಸಗಳ ಮಾಹಿತಿಯನ್ನು ಪಡೆಯಲು ಲಿಂಕ್ಡ್ಇನ್ (LinkedIn) ಅನ್ನು ಬಳಸುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏನಿದು ಲಿಂಕ್ಡ್ಇನ್ ಅಂತ ಸರಳವಾಗಿ ಹೇಳಬೇಕೆಂದರೆ, ಲಿಂಕ್ಡ್ಇನ್ ಒಂದು ಸಾಮಾಜಿಕ ನೆಟ್‌ವರ್ಕ್ (Social Network) ಅಂತಾನೆ ಹೇಳಬಹುದು. ಇದನ್ನು ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತಹ ಅನೇಕರು ಬಳಸುತ್ತಿದ್ದಾರೆ ಅಂತ ಹೇಳಬಹುದು. ಆದರೆ ಇದು ವಿದ್ಯಾರ್ಥಿಗಳಿಗೂ ಸಹ ಅವರ ಭವಿಷ್ಯದಲ್ಲಿ ವೃತ್ತಿಜೀವನಕ್ಕೆ (Career Life) ತುಂಬಾನೇ ಸಹಾಯವಾಗುತ್ತಂತೆ ಅಂತ ಹೇಳಲಾಗುತ್ತಿದೆ. ಎಂದರೆ ಲಿಂಕ್ಡ್ಇನ್ ನಲ್ಲಿ ತಮ್ಮ ಪ್ರೊಫೈಲ್ ಅನ್ನು ರಚಿಸಿಕೊಳ್ಳಲು ಕೆಲಸಕ್ಕೆ ಸೇರುವ ತನಕ ನೀವು ಕಾಯಬೇಕಾಗಿಲ್ಲವಂತೆ.


    ವೃತ್ತಿಪರರ ಸಂಪರ್ಕವನ್ನು ನಿರ್ಮಿಸಿಕೊಳ್ಳಲು ಮತ್ತು ಲಭ್ಯವಿರುವ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಓದು ಮುಗಿದ ನಂತರ ಇಂಟರ್ನ್​​ ಶಿಪ್​​​ಗೆ ಅಂತ ಯಾವ ಕಂಪನಿಗೆ ಹೋಗುವುದು ಮತ್ತು ಸ್ವಂತವಾಗಿ ಶುರು ಮಾಡಬಹುದಾದ ಅವಕಾಶಗಳಿಗಾಗಿ ಲಿಂಕ್ಡ್ಇನ್ ಅನ್ನು ಬಳಸುತ್ತಾರೆ.


    ಕೆಲವು ದೇಶಗಳಲ್ಲಿ ವಿದ್ಯಾರ್ಥಿಗಳು ಇನ್ನೂ ತಮ್ಮ ಹೈಸ್ಕೂಲ್ ಅಥವಾ ಕಾಲೇಜಿನಲ್ಲಿದ್ದಾಗ ಈ ವಿಷಯಗಳ ಬಗ್ಗೆ ಯೋಚಿಸಲು ಪ್ರಾರಂಭಿಸುವುದನ್ನು ಕಡ್ಡಾಯಗೊಳಿಸಿದೆ. ಆದ್ದರಿಂದ, ನೀವು ಹೈಸ್ಕೂಲ್ ವಿದ್ಯಾರ್ಥಿಯಾಗಿರಲಿ ಅಥವಾ ಪದವಿಪೂರ್ವ ವಿದ್ಯಾರ್ಥಿಯಾಗಿರಲಿ, ಲಿಂಕ್ಡ್ಇನ್ ಅನ್ನು ಬಳಸುವುದು ನಿಮ್ಮ ವೃತ್ತಿಜೀವನದ ಗುರಿಗಳನ್ನು ಸಾಧಿಸಲು ನಿಮಗೆ ದಾರಿ ಮಾಡಿಕೊಡುತ್ತದೆ.


    ವಿದ್ಯಾರ್ಥಿಗಳಿಗೆ ಲಿಂಕ್ಡ್ಇನ್ ಹೇಗೆ ಸಹಾಯಕವಾಗುತ್ತದೆ?


    ಪ್ರಸ್ತುತ, ಲಿಂಕ್ಡ್ಇನ್ 200 ಕ್ಕೂ ಹೆಚ್ಚು ದೇಶಗಳ ಬಳಕೆದಾರರನ್ನು ಹೊಂದಿದ್ದು, ಒಟ್ಟು 750 ಮಿಲಿಯನ್ ಬಳಕೆದಾರರನ್ನು ಹೊಂದಿದೆ. 2003 ರಲ್ಲಿ ಪ್ರಾರಂಭವಾದಾಗಿನಿಂದ, ನೆಟ್ವರ್ಕಿಂಗ್ ಸೈಟ್ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು ಸಂಪರ್ಕಿಸುವ ಅದರ ಮೂಲ ಗುರಿಯ ಜೊತೆಗೆ ಶಿಕ್ಷಣ ತಜ್ಞರು, ಮಾರಾಟಗಾರರು ಮತ್ತು ನೇಮಕಾತಿದಾರರಿಗೆ ಸೇವೆಗಳ ಶ್ರೇಣಿಯನ್ನು ಒದಗಿಸಲು ವಿಸ್ತರಿಸಿದೆ.


    kpsc upsc free coaching for students from karnataka government labour card required
    ಅಪ್ಲೈ ಮಾಡಿ


    ವೀಡಿಯೋ ಗೇಮ್ ಗಳನ್ನು ಖರೀದಿಸುವುದರಿಂದ ಹಿಡಿದು ಕೋರ್ಸ್ ತೆಗೆದುಕೊಳ್ಳುವವರೆಗೆ, ಒಬ್ಬರ ವೃತ್ತಿಜೀವನದಲ್ಲಿ ಅದನ್ನು ದೊಡ್ಡದಾಗಿ ಮಾಡಲು, ಕಾರ್ಪೊರೇಟ್ ಜಗತ್ತಿಗೆ ಒಡ್ಡಿಕೊಳ್ಳುವುದು ಅತ್ಯಗತ್ಯ ಮತ್ತು ಇನ್ನೂ ಹೈಸ್ಕೂಲ್ ಅಥವಾ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾರಂಭಿಸಲು ಲಿಂಕ್ಡ್ಇನ್ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ.


    ಈ 4 ಪ್ರಮುಖ ಕಾರಣಗಳಿಗಾಗಿ ಇಂದೇ ಲಿಂಕ್ಡ್ಇನ್ ನಲ್ಲಿ ಪ್ರೊಫೈಲ್ ಅನ್ನು ರಚಿಸಿ


    1. ನೆಟ್ವರ್ಕ್ ಅನ್ನು ನಿರ್ಮಿಸಿಕೊಳ್ಳುವುದು: ಯಾವುದೇ ವೃತ್ತಿಜೀವನದ ಪ್ರಗತಿಯು ನಿಮಗೆ ಎಂತಹ ಜನರು ತಿಳಿದಿದ್ದಾರೆ ಅನ್ನೋದರ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಮತ್ತು ಆದ್ದರಿಂದ ನೆಟ್ವರ್ಕಿಂಗ್ ತುಂಬಾನೇ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.


    ನೀವು ಕೆಲಸ ಮಾಡಲು ಬಯಸುವ ಉದ್ಯಮಕ್ಕೆ ಪ್ರವೇಶಿಸುವ ಮೊದಲು, ಸಹಪಾಠಿಗಳು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅದೇ ಕ್ಷೇತ್ರದ ಮಾರ್ಗದರ್ಶಕರು ಅಥವಾ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಿ. ಈ ಸಂಪರ್ಕಗಳು ಯಾವಾಗ ಉಪಯುಕ್ತವಾಗುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ. ನಿಮ್ಮ ನೆಟ್ವರ್ಕ್ ಬೆಳೆದಷ್ಟು ಕೆಲಸಕ್ಕೆ ಶಿಫಾರಸು ಮಾಡುವ ಸಾಧ್ಯತೆಗಳು ಹೆಚ್ಚಾಗುತ್ತವೆ.


    2. ಉದ್ಯೋಗಾವಕಾಶಗಳು: ಲಿಂಕ್ಡ್ಇನ್ ಪ್ರೊಫೈಲ್ ಅನ್ನು ಹೊಂದಿರುವುದು ನಿಮಗೆ ಪ್ರಪಂಚದಾದ್ಯಂತ ಇರುವ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತದೆ. ಲಿಂಕ್ಡ್ಇನ್ ನಲ್ಲಿ ಮೊದಲು ವಿದ್ಯಾರ್ಥಿಗಳು ವರ್ಗೀಕೃತ ಜಾಹೀರಾತುಗಳು ಅಥವಾ ಸಂಪರ್ಕಗಳ ಮೂಲಕ ಉದ್ಯೋಗಗಳನ್ನು ಪಡೆಯುತ್ತಾರೆ. ಆದರೆ ಈಗ, ನಿಮ್ಮ ಉದ್ಯೋಗದ ಆಯ್ಕೆಗಳು ಬಹಳ ಹೆಚ್ಚಾಗಿದೆ.




    ನೀವು ಭಾರತದಲ್ಲಿ ಅಥವಾ ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದರೂ, ನೀವು ನಿಮ್ಮ ಪರಿಣತಿಯ ಕ್ಷೇತ್ರವನ್ನು ಮಾತ್ರ ಪ್ರವೇಶಿಸಬೇಕು ಮತ್ತು ಸೂಕ್ತವಾದ ಇಂಟರ್ನ್ಶಿಪ್ ಅಥವಾ ನಿಮ್ಮ ಪ್ರದೇಶದಲ್ಲಿ ಅರೆಕಾಲಿಕ ಕೆಲಸಗಳ ಅವಕಾಶವನ್ನು ಕಂಡು ಹಿಡಿಯಬೇಕು. ಹೆಚ್ಚುವರಿಯಾಗಿ, ನೀವು ಆಸಕ್ತಿ ಹೊಂದಿರುವ ಯಾವುದೇ ನಿರ್ದಿಷ್ಟ ಕಂಪನಿಗಳಿದ್ದರೆ, ಕಂಪನಿಯ ಪ್ರಮುಖ ಕಾರ್ಯನಿರ್ವಾಹಕರನ್ನು ಸಂಪರ್ಕಿಸಿ ಮತ್ತು ಅವರಿಂದ ಇಂಟರ್ನ್ಶಿಪ್ ಬಗ್ಗೆ ತಿಳಿದುಕೊಳ್ಳಬಹುದು.


    3. ವೈಯಕ್ತಿಕ ಬ್ರ್ಯಾಂಡ್ ರಚಿಸಿಕೊಳ್ಳುವುದು: ನೀವು ಹೆಚ್ಚಿನ ಅನುಭವವನ್ನು ಪಡೆಯುತ್ತಿದ್ದಂತೆ ಮತ್ತು ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ ಅನ್ನು ನವೀಕರಿಸುತ್ತಿದ್ದಂತೆ, ನಿಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ನೀವು ವೃತ್ತಿಪರ ಜಗತ್ತಿನಲ್ಲಿ ನಿಮ್ಮ ಮೊದಲ ಹೆಜ್ಜೆಯನ್ನು ಇಟ್ಟಾಗ ಇದು ನಿಮ್ಮನ್ನು ಅತ್ಯುತ್ತಮ ಸ್ಥಾನದಲ್ಲಿ ನಿಲ್ಲಿಸುತ್ತದೆ.


    ನಿಮ್ಮ ವೈಯಕ್ತಿಕ ಬ್ರ್ಯಾಂಡ್, ನಿಮ್ಮ ಪ್ರೊಫೈಲ್ ನಲ್ಲಿ ನಿಮ್ಮ ಸಾಮರ್ಥ್ಯಗಳು, ಗುಣಗಳು, ಆಸಕ್ತಿಗಳು ಮತ್ತು ಕೆಲಸದ ಅನುಭವವನ್ನು ಪ್ರದರ್ಶಿಸುವ ಮೂಲಕ ನಿಮಗಾಗಿ ನೀವು ಅಭಿವೃದ್ಧಿಪಡಿಸುವ ವಿಷಯವಾಗಿದೆ. ನೀವು ಕೆಲಸ ಮಾಡಲು ನಿಮ್ಮ ಇಚ್ಛೆಯನ್ನು ತೋರಿಸುವ ಪೂರ್ಣ ಲಿಂಕ್ಡ್ಇನ್ ಪ್ರೊಫೈಲ್ ಅನ್ನು ಹೊಂದಿದ್ದರೆ, ಸಂಭಾವ್ಯ ನೇಮಕಾತಿದಾರರಿಗೆ ನಿಮ್ಮ ಕಥೆಯನ್ನು ಹೇಳುವ ನಿಜವಾದ ಬ್ರ್ಯಾಂಡ್ ಅನ್ನು ನೀವು ಹೊಂದಿರುತ್ತೀರಿ.


    ಇದನ್ನೂ ಓದಿ: Resume Tips: 2023ರಲ್ಲಿ ನಿಮ್ಮ ರೆಸ್ಯೂಮ್ ಹೀಗಿದ್ದರೆ ಮಾತ್ರ ವರ್ಕೌಟ್ ಆಗುತ್ತೆ


    4. ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಸುಲಭ: ಲಿಂಕ್ಡ್ಇನ್ ನಲ್ಲಿ ಪ್ರೊಫೈಲ್ ಇದ್ದರೆ, ನಿಮ್ಮ ರೆಸ್ಯೂಮ್ ಅನ್ನು ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ ಗೆ ಸುಲಭವಾಗಿ ಅಪ್ಲೋಡ್ ಮಾಡಬಹುದು ಮತ್ತು ನೇಮಕಾತಿದಾರರೊಂದಿಗೆ ಕೆಲಸ ಮಾಡಲು ಮುಕ್ತವಾದ ವ್ಯಕ್ತಿಯಾಗಿ ನಿಮ್ಮನ್ನು ನೀವು ಪ್ರದರ್ಶಿಸಬಹುದು. ಹೆಚ್ಚುವರಿಯಾಗಿ, ವೆಬ್‌ಸೈಟ್ ನಲ್ಲಿ ನಿಮ್ಮ ರೆಸ್ಯೂಮ್ ಅಪ್ಲೋಡ್ ಮಾಡುವುದರೊಂದಿಗೆ ಪೋರ್ಟಲ್ ನಲ್ಲಿ ಜಾಹೀರಾತು ನೀಡುವ ಅವಕಾಶಗಳಿಗಾಗಿ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು.


    ಒಬ್ಬ ವಿದ್ಯಾರ್ಥಿಯಾಗಿ ನೀವು ಲಿಂಕ್ಡ್ಇನ್ ಅನ್ನು ಹೇಗೆ ಬಳಸಿಕೊಳ್ಳಬಹುದು?


    ಲಿಂಕ್ಡ್ಇನ್ ಮಾಹಿತಿಯ ಉತ್ತಮ ಮೂಲವಾಗಬಹುದು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ವೃತ್ತಿಜೀವನವನ್ನು ಪ್ರಾರಂಭಿಸಲು ಒಂದು ಒಳ್ಳೆಯ ಮಾರ್ಗವಾಗಬಹುದು. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕಾಗಿ ಲಿಂಕ್ಡ್ಇನ್ ಅನ್ನು ಬಳಸಲು ಕೆಲವು ಅಗತ್ಯ ಸಲಹೆಗಳು ಇಲ್ಲಿವೆ ನೋಡಿ.


    1. ವೃತ್ತಿಪರ ಛಾಯಾಚಿತ್ರ: ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ ನಲ್ಲಿ ನೀವು ಹಾಕಿಕೊಳ್ಳುವ ನಿಮ್ಮ ಫೋಟೋ ನೀವು ಒಬ್ಬ ಸಮರ್ಥ ಮತ್ತು ವೃತ್ತಿಪರವಾಗಿ ಕಾಣಿಸುವಂತಿರಬೇಕು. ಆದ್ದರಿಂದ, ಯಾವುದೇ ಸೆಲ್ಫಿಗಳು, ನಿಮ್ಮ ಇತ್ತೀಚಿನ ರಜಾದಿನದ ಯಾವುದೇ ಫೋಟೋಗಳನ್ನು ಇಲ್ಲಿ ಹಾಕುವಂತಿಲ್ಲ. ಸರಿಯಾದ ಬಟ್ಟೆ ತೊಟ್ಟ ಭವಿಷ್ಯದ ಉದ್ಯೋಗದಾತರಿಗೆ ನೀವು ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತರಾಗಿದ್ದೀರಿ ಎಂದು ತೋರಿಸುವಂತಹ ಫೋಟೋವನ್ನು ಹಾಕಿಕೊಳ್ಳುವುದು ಮುಖ್ಯವಾಗುತ್ತದೆ. ಅಲ್ಲದೆ ಇದು ಅತ್ಯುತ್ತಮವಾದ ಮೊದಲ ಬಾರಿಯ ಅನಿಸಿಕೆಯನ್ನು ಸಹ ಸೃಷ್ಟಿಸುತ್ತದೆ.


    2. ಶಿಕ್ಷಣ ಮತ್ತು ಅನುಭವ: ನಿಮ್ಮ ಸಿವಿಯಂತೆ, ಲಿಂಕ್ಡ್ಇನ್ ಪ್ರೊಫೈಲ್ ನಿಮ್ಮ ಶೈಕ್ಷಣಿಕ ಅರ್ಹತೆಗಳು, ವೃತ್ತಿಪರ ಅನುಭವ, ಇಂಟರ್ನ್ಶಿಪ್ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಪಟ್ಟಿ ಮಾಡಲು ನಿಮಗೆ ಅನುಮತಿಸುತ್ತದೆ. ನಿಮ್ಮ ಸಾಧನೆಗಳ ಬಗ್ಗೆ ನಿರ್ದಿಷ್ಟವಾಗಿರುವುದು ಭವಿಷ್ಯದ ಉದ್ಯೋಗದಾತರ ಹುಡುಕಾಟದ ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳಲು ಸಹ ನಿಮಗೆ ಸಹಾಯ ಮಾಡುತ್ತದೆ.


    3. ವೃತ್ತಿಪರರ ಗುಂಪುಗಳಿಗೆ ಸೇರುವುದು: ನೀವು ಲಿಂಕ್ಡ್ಇನ್ ಗುಂಪುಗಳ ಮೂಲಕ ಸಮಾನ ಮನಸ್ಕ ಜನರೊಂದಿಗೆ ನೆಟ್ವರ್ಕ್ ಮಾಡಬಹುದು ಮತ್ತು ನಿಮ್ಮ ಜ್ಞಾನವನ್ನು ಪ್ರದರ್ಶಿಸಲು ಅವರನ್ನು ಚಾನಲ್ ಗಳಾಗಿ ಬಳಸಬಹುದು. ಆ ರೀತಿಯ ಗುಂಪುಗಳನ್ನು ಕಂಡು ಹಿಡಿಯಲು ಸೈಟ್ ನ ಶಿಫಾರಸು ಮತ್ತು ಶೋಧ ಸಾಧನಗಳನ್ನು ಬಳಸಿ. ನಿಮ್ಮ ನೆಟ್ವರ್ಕ್ ನಲ್ಲಿ ಯಾರು ನಿರ್ದಿಷ್ಟ ಗುಂಪಿನ ಸದಸ್ಯರಾಗಿದ್ದಾರೆ ಎಂಬುದನ್ನು ಪರಿಶೀಲಿಸಿ.


    how to do 2 jobs in same timehow to do 2 jobs in same time
    ಸಾಂದರ್ಭಿಕ ಚಿತ್ರ


    4. ಸಂಪರ್ಕಗಳೊಂದಿಗೆ ತೊಡಗಿಸಿಕೊಳ್ಳುವಿಕೆ: ಲಿಂಕ್ಡ್ಇನ್ ನಿಮಗೆ ವೃತ್ತಿಪರ ಸಮ್ಮೇಳನ ಅಥವಾ ಉದ್ಯೋಗ ಮೇಳದಂತೆ ಉದ್ಯಮದ ಸಂಪರ್ಕಗಳನ್ನು ಸ್ಥಾಪಿಸಲು ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತದೆ. ಪೋಸ್ಟ್ ಗಳಲ್ಲಿ ಲೈಕ್ ಗಳು, ಕಾಮೆಂಟ್ ಗಳನ್ನು ಹಾಕುವುದರಿಂದ ಮತ್ತು ಶೇರ್ ಮಾಡುವುದರಿಂದ ಸಹ ಚರ್ಚೆಯನ್ನು ಪ್ರಾರಂಭಿಸಬಹುದು ಮತ್ತು ನೀವು ವೈಯಕ್ತಿಕವಾಗಿ ಭೇಟಿಯಾಗಲು ಮತ್ತು ವೃತ್ತಿಪರ ಅಥವಾ ಮಾರ್ಗದರ್ಶಕ ಅವಕಾಶಗಳನ್ನು ಚರ್ಚಿಸಲು ನೀವು ಆನ್ಲೈನ್ ನಲ್ಲಿ ಸ್ಥಾಪಿಸಿದ ಸಂಬಂಧವನ್ನು ಬಳಸಬಹುದು.


    5. ಕಂಪನಿಗಳ ಬಗ್ಗೆ ಸಂಶೋಧನೆ: ಲಿಂಕ್ಡ್ಇನ್ ನ ಶೋಧ ಕಾರ್ಯವನ್ನು ಬಳಸಿಕೊಂಡು ಉದ್ಯಮ, ಭೌಗೋಳಿಕತೆ ಮತ್ತು ಇತರ ಕೀವರ್ಡ್ ಗಳ ಆಧಾರದ ಮೇಲೆ ಕಂಪನಿಗಳನ್ನು ಅನ್ವೇಷಿಸಿ. ಸಾಮಾನ್ಯ ಕಂಪನಿಯ ಮಾಹಿತಿಯನ್ನು ಕಂಡು ಹಿಡಿಯುವುದು ಸಂದರ್ಶನಗಳಿಗೆ ಸಿದ್ಧರಾಗಲು ನಿಮಗೆ ಸಹಾಯ ಮಾಡುತ್ತದೆ, ಆದರೆ ನಿಮ್ಮ ನೆಟ್ವರ್ಕ್ ನಲ್ಲಿ ಆ ಕಂಪನಿಗೆ ಯಾರು ಸಂಬಂಧ ಹೊಂದಿದ್ದಾರೆಂದು ಕಂಡು ಹಿಡಿಯುವುದು ಸಹ ನಿಮಗೆ ಮುಂದಕ್ಕೆ ಹೆಜ್ಜೆ ಇಡಲು ಸಹಾಯ ಮಾಡುತ್ತದೆ. ಕಂಪನಿಯ ಸಾಂಸ್ಥಿಕ ಉದ್ದೇಶಗಳು, ನೇಮಕಾತಿ ಕಾರ್ಯವಿಧಾನಗಳು ಮತ್ತು ನಡೆಯುತ್ತಿರುವ ಯೋಜನೆಗಳ ವಿವರಗಳಿಗಾಗಿ, ಅದರ ಲಿಂಕ್ಡ್ಇನ್ ಪ್ರೊಫೈಲ್ ಅನ್ನು ಪರಿಶೀಲಿಸಿ.


    ತಮ್ಮ ವೃತ್ತಿಜೀವನದ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಯೋಜನವನ್ನು ಹುಡುಕುತ್ತಿರುವ ವಿದ್ಯಾರ್ಥಿಗಳು ಲಿಂಕ್ಡ್ಇನ್ ಅನ್ನು ಅದ್ಭುತ ಸಂಪನ್ಮೂಲವಾಗಿ ಕಂಡುಕೊಳ್ಳಬಹುದು. ವೇದಿಕೆಯ ಪ್ರಸ್ತುತತೆಯ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿಂದಾಗಿ ಅಥವಾ ಅವರ ಪ್ರೊಫೈಲ್ ಗಳು ಉತ್ತಮವಾಗಿಲ್ಲ ಎಂಬ ಅವರ ಗ್ರಹಿಕೆಗಳಿಂದಾಗಿ, ಅನೇಕ ವಿದ್ಯಾರ್ಥಿಗಳು ಅದನ್ನು ಬಳಸುವುದನ್ನು ಕೈ ಬಿಡುತ್ತಿದ್ದಾರೆ.


    ಲಿಂಕ್ಡ್ಇನ್ ನ ಮೇಲೆ ತಿಳಿಸಿದ ಅನುಕೂಲಗಳು ಮತ್ತು ಪ್ರಾಮುಖ್ಯತೆಯು ವಿದ್ಯಾರ್ಥಿಗಳಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಈ ವೃತ್ತಿಪರ ಸಾಮಾಜಿಕ ಮಾಧ್ಯಮ ವೇದಿಕೆಯತ್ತ ಸಾಗಲು ಸಹಾಯ ಮಾಡುತ್ತದೆ.

    Published by:Kavya V
    First published: