ನಿಮ್ಮ ವೃತ್ತಿಜೀವನದ (Career Growth) ಬೆಳವಣಿಗೆಗೆ ಸ್ವತಃ ನೀವೇ ಜವಾಬ್ದಾರರು. ಯಾರ ವೃತ್ತಿಜೀವನಗಳು (Career Life) ವೇಗವಾಗಿ ಸಾಗುತ್ತಿರುತ್ತದೆಯೋ ಅಂಥವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಡಿರುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಸಾಮಾನ್ಯವಾಗಿದೆ. ಆದರೆ ಕೆಲವರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ತಮ್ಮ ವೃತ್ತಿಜೀವನದ ಬೆಳವಣಿಗೆಯ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುತ್ತಾರೆ. ನಿಮ್ಮ ವೃತ್ತಿಜೀವನವು ಯಾವ ಕ್ಷೇತ್ರದಲ್ಲಿ ಮುನ್ನಡೆಯಬೇಕು ಎಂಬುದನ್ನು ನೀವೇ ನಿರ್ಧರಿಸಬೇಕು. ಅಂತಹ ಕ್ಷೇತ್ರಗಳಲ್ಲಿ ನೀವು ಮತ್ತಷ್ಟು ಕಲಿಯಲು ಮತ್ತು ಅದರಲ್ಲಿ ಪರಿಣಿತಿ ಹೊಂದಲು ನೀವು ಪ್ರಯತ್ನಿಸಬೇಕು.
ಉದಾಹರಣೆಗೆ, ಈ ಉದ್ದೇಶವನ್ನು ಪೂರೈಸಲಿಕ್ಕಾಗಿ ನೀವು ಉದ್ಯೋಗಕ್ಕಾಗಿ ಬೆಂಗಳೂರಿನಂತಹ ಅಥವಾ ಮುಂಬೈನಂತಹ ನಗರಗಳಿಗೆ ಹೋಗುವ ಬದಲು ಆನ್-ಲೈನ್ನಲ್ಲಿಯೇ ಉದ್ಯೋಗ ಹುಡುಕಿಕೊಳ್ಳಬಹುದು.
ನಿಮ್ಮ ವೃತ್ತಿಪರ ಕ್ಷೇತ್ರದಲ್ಲಿ ಯಶಸ್ವಿಯಾಗಲು 5 ಟಿಪ್ಸ್ಗಳು ಇಲ್ಲಿವೆ
ನೀವು ವೃತ್ತಿಪರ ಜಗತ್ತನ್ನು ಪ್ರವೇಶಿಸಿದ ನಂತರ, ನಿಮ್ಮ ಮುಂದಿನ ಅವಕಾಶಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಸಾಧಿಸುವುದು ಎಂಬುದರ ಕುರಿತು ಯೋಚಿಸುವುದು ಸಹಜ. ಅದರಲ್ಲಿ ಯಶಸ್ಸು ಹೊಂದಲು ಸಲಹೆಗಳು ಇಲ್ಲಿವೆ.
1) ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಆಸಕ್ತಿ ಇರಲಿ
ನಿಮ್ಮ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ನನಗೆ ಆಸಕ್ತಿ ಇದೆ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಕೆಲಸವನ್ನು ಪ್ರಾರಂಭಿಸಿ. ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳನ್ನು ನೀವು ಸೂಕ್ತವಾಗಿ ಬಳಸಿಕೊಂಡಾಗ ಅಲ್ಲಿ ನೀವು ಮುನ್ನಡೆಯುವುದು ಸುಲಭ.
ಉದ್ಯೋಗದಲ್ಲಿ ಕೆಲವರು ತಾವು ಈಗ ಇರುವ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಇನ್ನು ಕೆಲವರು ಸತತವಾಗಿ ಉದ್ಯೋಗದಲ್ಲಿ ಉನ್ನತವಾದ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂದು ಪ್ರಯತ್ನ ಪಡುತ್ತಲೇ ಇರುತ್ತಾರೆ. ನೀವು ನಿಮ್ಮ ಕೆಲಸದ ಮ್ಯಾನೇಜರ್ನೊಂದಿಗೆ ಮಾತನಾಡುವ ಮೂಲಕ ಮತ್ತು ನೀವು ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದೀರಿ ಎಂದು ವಿವರಿಸುವ ಮೂಲಕ, ಹೊಸ ಯೋಜನೆಗಳು ಮತ್ತು ಜವಾಬ್ದಾರಿಗಳು ಬಂದಾಗ ಅವುಗಳನ್ನು ಬಳಸಿಕೊಂಡು ಉನ್ನತ ಸ್ಥಾನವನ್ನು ಪಡೆಯಬಹುದು.
2) ಕೆಲಸದ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯಗಳನ್ನು ಸಮರ್ಥಿಸಿಕೊಳ್ಳಿ
ನೀವು ಕೆಲಸದಲ್ಲಿ ಪ್ರಗತಿ ಹೊಂದಲು ಬಯಸುತ್ತೀರಿ ಎಂದು ಸ್ಪಷ್ಟಪಡಿಸಿದ ನಂತರ, ಕೆಲಸದ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯಗಳನ್ನು ಸಮರ್ಥಿಸಿ. ನಿಮ್ಮ ಉದ್ಯೋಗದಾತರು ನೀವು ಆಸಕ್ತಿ ಹೊಂದಿರುವ ಹೊಸ ಸ್ಥಾನಗಳನ್ನು ಪೋಸ್ಟ್ ಮಾಡಿದಾಗ, ನೀವು ಅರ್ಜಿ ಸಲ್ಲಿಸಲು ಬಯಸುತ್ತೇನೆ ಎಂದು ನಿಮ್ಮ ಮ್ಯಾನೇಜರ್ಗೆ ಆಗಾಗ ಹೇಳುತ್ತಿರಿ.
ಯಾರೋ ನಮಗೆ ಬಂದು ಅವಕಾಶ ನೀಡುತ್ತಾರೆ ಎಂದು ಕಾಯುವ ಬದಲು ನಿಮನ್ನು ನೀವೆ ನಾನು ಏಕೆ ಬೆಸ್ಟ್ ಅಭ್ಯರ್ಥಿ ಎಂದು ಪುಟ್ಟ ಸಭೆ ಮಾಡಿ ಎಲ್ಲರಿಗೂ ತಿಳಿಸಿ. ಪ್ರಸ್ತುತಿಗಳನ್ನು ಮಾಡಲು, ಪ್ರಚಾರಗಳಿಗೆ ಅರ್ಜಿ ಸಲ್ಲಿಸಲು, ಸಂಬಳ ಏರಿಕೆಗೆ, ಸಮ್ಮೇಳನಗಳಿಗೆ ಹಾಜರಾಗಲು ಅಥವಾ ಪ್ರಶಸ್ತಿಗಳನ್ನು ಪಡೆಯಲು ಅವಕಾಶಗಳನ್ನು ಹುಡುಕುವುದು ಸೇರಿದಂತೆ ನಿಮ್ಮ ವೃತ್ತಿಜೀವನದ ಹಲವು ಅಂಶಗಳಲ್ಲಿ ನಿಮ್ಮ ಸ್ವಂತ ಕೆಲಸವನ್ನು ಪ್ರಚಾರ ಮಾಡುವುದು ಸಹ ಅತ್ಯಂತ ಪ್ರಮುಖ ಕೆಲಸವಾಗಿದೆ.
3) ನಿಮ್ಮ ಗುರಿಗಳನ್ನು ನೀವೆ ಕಂಡುಕೊಳ್ಳಿ
ನಿಮ್ಮ ವೃತ್ತಿಜೀವನದಲ್ಲಿ ಬೆಳವಣಿಗೆಯನ್ನು ಸಾಧಿಸಲು ಉತ್ತಮ ಮಾರ್ಗವೆಂದರೆ ವೃತ್ತಿಪರ ಗುರಿಗಳನ್ನು ನೀವೆ ಕಂಡುಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ವೃತ್ತಿಜೀವನದ ಹೊಸ ಉದ್ದೇಶವನ್ನು ನಿರ್ಧರಿಸಿದಾಗ, ಆ ಗುರಿಯನ್ನು ಸಾಧಿಸಲು ನಿಮಗೆ ಅಗತ್ಯವಿರುವ ಕೌಶಲ್ಯಗಳು, ಅರ್ಹತೆಗಳು, ಜ್ಞಾನ ಮತ್ತು ವೃತ್ತಿಪರ ಸಂಪರ್ಕಗಳ ಕುರಿತು ತಿಳಿದುಕೊಳ್ಳುಲು ಆರಂಭಿಸಿ. ಯಶಸ್ವಿ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಸೂಕ್ತ ಸಮರ್ಪಣ ಭಾವ ಮತ್ತು ಸಮಯದ ಅಗತ್ಯವಿರುತ್ತದೆ.
4) ವೃತ್ತಿಪರ ಅಭಿವೃದ್ಧಿಗಾಗಿ ನಿಮ್ಮ ಸಂಪನ್ಮೂಲಗಳನ್ನು ಹೂಡಿಕೆ ಮಾಡಿ
ನಿಮ್ಮ ಸುತ್ತಮುತ್ತಲಿನ ಜನರಿಂದ ಕಲಿಯಲು ನಿರಂತರವಾಗಿ ಶ್ರಮಿಸಿ ಮತ್ತು ವೃತ್ತಿಪರ ಅಭಿವೃದ್ಧಿ ಅವಕಾಶಗಳಿಗೆ ನಿಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಹೂಡಿಕೆ ಮಾಡಿ. ಔಪಚಾರಿಕ ಶಿಕ್ಷಣ, ಸೆಮಿನಾರ್ಗಳು, ಕಾನ್ಫರೆನ್ಸ್ಗಳು ಮತ್ತು ಆನ್ಲೈನ್ ತರಗತಿಗಳು ಸೇರಿದಂತೆ ಹಲವು ರೀತಿಯ ವೃತ್ತಿಪರ ಅಭಿವೃದ್ಧಿ ಆಯ್ಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು. ನಿಮಗಿಂತ ವಿಭಿನ್ನವಾದ ಕೌಶಲ್ಯಗಳನ್ನು ಹೊಂದಿರುವ ಸಹೋದ್ಯೋಗಿಗಳೊಂದಿಗೆ ನೀವು ಮತ್ತಷ್ಟು ಕಲಿಯಬಹುದು.
5) ಉದ್ಯೋಗದಲ್ಲಿ ಸ್ವಂತ ಅವಕಾಶಗಳನ್ನು ಸೃಷ್ಟಿ ಮಾಡಿ
ಕೊನೆದಾಗಿ ಹೇಳಬೇಕೆಂದರೆ ನಿಮ್ಮ ವೃತ್ತಿಜೀವನದಲ್ಲಿ ಬೆಳೆಯಲು ಉತ್ತಮ ಮಾರ್ಗವೆಂದರೆ ನಿಮ್ಮ ಯಶಸ್ಸಿಗೆ ನೀವೆ ಜವಾಬ್ದಾರರಾಗಿರುವುದು. ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶಗಳನ್ನು ನೀವೆ ಸೃಷ್ಟಿ ಮಾಡಿಕೊಳ್ಳುವುದು ಪ್ರಮುಖವಾಗಿದೆ. ನಿಮ್ಮ ಕೌಶಲ್ಯಗಳನ್ನು ಪರೀಕ್ಷಿಸುವ ಸೈಡ್ ಪ್ರಾಜೆಕ್ಟ್ಗಳು ಅಥವಾ ಪೋರ್ಟ್ಫೋಲಿಯೊವನ್ನು ರೆಡಿ ಮಾಡಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ