• Home
 • »
 • News
 • »
 • career
 • »
 • Career Failure: ಗೆಲುವು ಸುಲಭ ಅಲ್ಲ, ಆದ್ರೆ ನೀವು ಅಂದುಕೊಂಡಷ್ಟು ಕಷ್ಟನೂ ಅಲ್ಲ: ಕರಿಯರ್ ಸಕ್ಸಸ್​ಗೆ ಸೋಲೇ ಮುನ್ನುಡಿ

Career Failure: ಗೆಲುವು ಸುಲಭ ಅಲ್ಲ, ಆದ್ರೆ ನೀವು ಅಂದುಕೊಂಡಷ್ಟು ಕಷ್ಟನೂ ಅಲ್ಲ: ಕರಿಯರ್ ಸಕ್ಸಸ್​ಗೆ ಸೋಲೇ ಮುನ್ನುಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಪರೂಪದ ಅದೃಷ್ಟವಂತರು ತಮ್ಮ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಯಶಸ್ಸನ್ನು ಗಳಿಸಿಬಿಡುತ್ತಾರೆ. ಆದರೆ, ಬಹಳಷ್ಟು ಜನರು ತಮ್ಮ ವೃತ್ತಿಯ ಆರಂಭದಲ್ಲಿ ಯಶಸ್ಸು ಪಡೆಯುವುದಿಲ್ಲ. ಮೊದಮೊದಲು ವೈಫಲ್ಯಗಳನ್ನೇ ಎದುರಿಸುತ್ತಾರೆ.

 • Trending Desk
 • 4-MIN READ
 • Last Updated :
 • Share this:

  ಇದೊಂದು ವೈಫಲ್ಯವಷ್ಟೆ (Failure) ಎಂದು ಬೇಸರ ಮಾಡಿಕೊಳ್ಳದೆ ಮತ್ತೆ ಎದ್ದು ಮುಂದೆ ಸಾಗು, ನಿನ್ನ ಗುರಿ ತಲುಪುವೆ. ಹೀಗೆಂದು ನಾವು ಅದೆಷ್ಟೋ ಸಲ ನಮ್ಮ ಹಿರಿಯರು ಕಿವಿಮಾತು ಹೇಳಿರುವುದನ್ನು ಕೇಳಿರುತ್ತೇವೆ. ಹೌದು, ಜೀವನದ ಸುದೀರ್ಘ ಪ್ರಯಾಣದಲ್ಲಿ ನಾವು ಸಾಕಷ್ಟು ಬಾರಿ ಕೆಳಗೆ ಬೀಳಬಹುದು. ಆದರೆ ಬಿದ್ದೆವೆಂದು ಹಾಗೆ ಕೂರಲಾದಿತೇ? ಮತ್ತೆ ಎದ್ದು ನಡೆಯುವುದೇ ಜೀವನ. ಅದರಂತೆಯೇ ವೃತ್ತಿ  (CAREER) ವಿಷಯ ಬಂದಾಗಲೂ ಇದು ಸತ್ಯವಾದ ಮಾತೇ ಆಗಿದೆ.


  ಕೆಲವರು ಅದರಲ್ಲೂ ಅಪರೂಪದ ಅದೃಷ್ಟವಂತರು ತಮ್ಮ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಯಶಸ್ಸನ್ನು ಗಳಿಸಿಬಿಡುತ್ತಾರೆ. ಆದರೆ, ಬಹಳಷ್ಟು ಜನರು ತಮ್ಮ ವೃತ್ತಿಯ ಆರಂಭದಲ್ಲಿ ಯಶಸ್ಸು ಪಡೆಯುವುದಿಲ್ಲ. ಮೊದಮೊದಲು ವೈಫಲ್ಯಗಳನ್ನೇ ಎದುರಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಅದರಿಂದ ಹತಾಶೆಗೊಳ್ಳುವುದು ಉಚಿತವಲ್ಲ. ಸ್ವಯಂ-ಸುಧಾರಣೆ ವಿಷಯದ ಲೇಖಕರಾದ ಡೇಲ್ ಕಾರ್ನಿಜ್ ಅವರು ಹೇಳುವಂತೆ ನಾವು ಪ್ರಯತ್ನಿಸದೆ ಇರುವಿಕೆ ನಮ್ಮಲ್ಲಿ ಸಂದೇಹ ಹಾಗೂ ಆತಂಕ ಮನೆ ಮಾಡುವಂತೆ ಮಾಡುತ್ತದೆ. ಅದೇ ನಾವು ಪ್ರಯತ್ನಿಸುತ್ತಿದ್ದರೆ ಅದು ನಮಗೆ ಆತ್ಮವಿಶ್ವಾಸ ಹಾಗೂ ಧೈರ್ಯ ಕೊಡುತ್ತದೆ.


  here is how career cushioning helps to prepare for job loss
  ಸಾಂದರ್ಭಿಕ ಚಿತ್ರ


  ಇದೇ ಅರಿವನ್ನು ಅಮೆರಿಕದ ಪ್ರಸಿದ್ಧ ಮನೋಶಾಸ್ತ್ರಜ್ಞೆಯಾದ ಕ್ಯಾರಲ್ ಡ್ವೆಕ್ ಅವರು 2006 ರಲ್ಲಿ ಪ್ರಕಾಶಿತವಾದ ತಮ್ಮ ಪ್ರಸಿದ್ಧ ಪುಸ್ತಕ 'ಮೈಂಡ್ಸೆಟ್' ನಲ್ಲಿ ವಿವರಿಸಿದ್ದಾರೆ. ತಮ್ಮ ಪುಸ್ತಕದಲ್ಲಿ ಅವರು "ನಿಶ್ಚಿತ ಮನಸ್ಥಿತಿ" ಹಾಗೂ "ಪ್ರಗತಿಪರ ಮನಸ್ಥಿತಿ" ಇವೆರಡನ್ನೂ ಹೋಲಿಸಿರುವುದನ್ನು ಗಮನಿಸಬಹುದು.


  ಪಾಟಿಸಿವ್​ ಥಿಂಕಿಂಗ್​ ಇರಲಿ


  ನಿಶ್ಚಿತ ಮನಸ್ಥಿತಿ ಹೊಂದಿರುವವರು ಆತ್ಮವಿಶ್ವಾಸ ಹಾಗೂ ಧೈರ್ಯದ ಕೊರತೆ ಅನುಭವಿಸುತ್ತ ತಮ್ಮ ಸುತ್ತ ನಕಾರಾತ್ಮಕ ಧೋರಣೆಯನ್ನು ತಳೆದಿದ್ದರೆ "ಪ್ರಗತಿಪರ ಮನಸ್ಥಿತಿ" ಉಳ್ಳವರು ಸದಾ ಕಾರ್ಯವನ್ನು ಸಾಧಿಸುವ ಉತ್ತೇಜನದಲ್ಲಿರುತ್ತಾರೆ. ನಿಮ್ಮ ಮನಸ್ಥಿತಿ ಹೇಗಿದೆಯೋ ಅದರಂತೆ ನೀವು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬಹುದಾಗಿದೆ ಎಂಬುದು ಇದರ ತಿರುಳು.


  ಕಲಿಯುವಿಕೆಗೆ ನೀವು ಉತ್ಸಾಹ ತೋರಿದರೆ ಅದು ನಿಮ್ಮನ್ನು ಚಿಂತನಶೀಲರನ್ನಾಗಿ ಮಾಡುವುದಲ್ಲದೆ ನೀವು ಎದುರಿಸುವ ಪ್ರತಿ ಸವಾಲುಗಳನ್ನು, ವೈಫಲ್ಯಗಳನ್ನು ಹೇಗೆ ನಿರ್ವಹಿಸಬಹುದು ಎಂಬುದಕ್ಕೆ ಸಾಮರ್ಥ್ಯವನ್ನು ತಂದುಕೊಡುತ್ತದೆ. ನೀವು ಸೃಜನಶೀಲ ವ್ಯಕ್ತಿಯಾಗಿದ್ದಲ್ಲಿ ಈ ರೀತಿಯ ಮನಸ್ಥಿತಿ ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ತಜ್ಞ ಮನೋಶಾಸ್ತ್ರಜ್ಞರು.


  ಕನಸುಗಳು ಭಗ್ನಗೊಂಡಾಗ ಅದು ವೈಫಲ್ಯ ತರುವುದಿಲ್ಲ


  ಈ ಶಿರ್ಷಿಕೆಯನ್ನು ಪುಷ್ಟಿಕರಿಸುವ ಒಂದು ಉದಾಹರಣೆ ಇಂತಿದೆ. 1960ರ ದಶಕದಲ್ಲಿ ಅಮೆರಿಕದ ಮೈನ್ ನಲ್ಲಿ ಒಬ್ಬರು ಯುವ ಶಿಕ್ಷಕರಿದ್ದರು. ಅವರು ಸಮಯವಿದ್ದಾಗಲೆಲ್ಲ ಬರೆಯುವ ಕೆಲಸಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು.


  ಅವರು ತಮ್ಮದೆ ಆದ ಪುಸ್ತಕವೊಂದು ಪ್ರಕಾಶಿತವಾಗಬೇಕೆಂಬ ಕನಸುಕಂಡಿದ್ದರು, ಹಾಗಾಗಿ ಅವರು ದಣಿವರಿಯದೆ ತಮಗೆ ಸಮಯ ದೊರೆತಾಗಲೆಲ್ಲ ಪುಸ್ತಕ ಬರೆಯುತ್ತಿದ್ದರು. ಆದರೆ, ಅವರಿಗೆ ಮೊದಲ ಹಂತದಲ್ಲೇ ಯಶಸ್ಸು ಸಿಗಲಿಲ್ಲ. ಸಾಕಷ್ಟು ಬಾರಿ ಅವರ ಪ್ರಯತ್ನಗಳು ವೈಫಲ್ಯವಾಗುತ್ತಲೇ ಇದ್ದವು.
  ಆದರೆ, ಅವರು ಎಂದಿಗೂ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಪ್ರಯತ್ನಪಡುತ್ತಲೇ ಇದ್ದರು. ಮುವತ್ತು ಬಾರಿ ಅವರು ಬರೆದ ಪುಸ್ತಕವನ್ನು ಪ್ರಕಾಶಿಸಲು ತೀರಸ್ಕರಿಸಲಾಯಿತು. ಕೊನೆಗೆ, ಆ ಬರಹಗಾರ ಇನ್ನೊಂದು ಪ್ರಯತ್ನ ಮಾಡಿ ಸುಮ್ಮನಾದರು. ಆದರೆ ಅವರ ಮಡದಿ ಅವರ ಬರಹದಲ್ಲಿ ವಿಶ್ವಾಸವಿರಿಸಿದ್ದರು, ಹಾಗಾಗಿ ಅವರು ತನ್ನ ಪತಿ ಬರೆದಿದ್ದ ಪುಸ್ತಕದ ಮ್ಯಾನುಸ್ಕ್ರಿಪ್ಟ್ ಅನ್ನು ಉಳಿಸಿಕೊಂಡಿದ್ದರು.


  ಈ ಬಾರಿ ಮಡದಿಯು ಆ ಪುಸ್ತಕದ ಪ್ರಕಾಶನದ ಕುರಿತು ಪ್ರಯತ್ನಿಸಿದಾಗ ಆರಂಭದಲ್ಲೇ ಅವರಿಗೆ 2000 ಪೌಂಡುಗಳ ಮುಂಗಡ್ ಅಡ್ವಾನ್ಸ್ ದೊರೆಯಿತು. ತದನಂತರ ಆ ಪುಸ್ತಕ ಪ್ರಕಾಶಿತವಾಗಿ ಅದರ ಹಕ್ಕುಗಳಿಗಾಗಿ ಅವರಿಗೆ 200000 ಪೌಂಡುಗಳ ಮೊತ್ತ ಸಿಕ್ಕಿತು. ಇದಾದ ನಂತರವೇ ಸ್ಟಿಫನ್ ಕಿಂಗ್ ತಮ್ಮ ಕ್ಯಾರಿ ಕಾದಂಬರಿಯ ಮೂಲಕ ಪ್ರಸಿದ್ಧರಾದರು.


  here is the key skills for your career


  ಜೋನಾಥನ್ ಲಾರ್ಸನ್ 1991 ತಮ್ಮ ಸಂಗೀತಕ್ಕಾಗಿ ಸಾಕಶ್ಟು ಪ್ರಯತ್ನಪಟ್ಟರು. ಆದರೆ, ಅವರ ಸಂಗೀತವನ್ನು ಪ್ರತಿಬಾರಿ ತೀರಸ್ಕರಿಸಲಾಯಿತು. ಕೊನೆಗೆ ಅವರಿಗೆ ಇನ್ನೊಂದು ಉತ್ತಮವಾದ ಅವರಿಗೆ ತಿಳಿದಿರುವ ಸಂಗೀತ ರಚನೆ ಮಾಡಿಕೊಂಡು ಬನ್ನಿ ಎಂದು ಮೊನಚಾಗಿ ಹೇಳಿ ಕಳುಹಿಸಲಾಯಿತು.


  ಇದರಿಂದ ಲಾರ್ಸನ್ ಅವರಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಏಕೆಂದರೆ ಅವರು ತಮ್ಮ ಸಂಗೀತಕ್ಕಾಗಿ ಎಂಟು ವರ್ಷ ಶ್ರಮಪಟ್ಟಿದ್ದರು. ಆದರೂ ಅವರು ವಿಚಲಿತರಾಗಲಿಲ್ಲ. ಬದಲಾಗಿ ಮತ್ತೆ ತಮ್ಮ ಪ್ರಯತ್ನ ಮುಂದುವರೆಸಿದರು. ಕೊನೆಗೆ 1996 ರಲ್ಲಿ ಅವರ ಸಂಗೀತ ರಚನೆಯಾದ ರೆಂಟ್ ಅನ್ನು ಬ್ರಾಡ್ ವೇ ನಲ್ಲಿ ಪ್ರಿಮಿಯರ್ ಮಾಡಲಾಯಿತು ಹಾಗೂ ಅದೊಂದು ಬಾಕ್ಸ್ ಆಫೀಸ್ ಸನ್ಸೇಷನ್ ಆಗಿ ಬದಲಾಗಿತ್ತು.


  ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವೈಫಲ್ಯಗಳು ಬಂದಾಗ ಅದು ನಮ್ಮನ್ನು ಕುಗ್ಗಿಸುತ್ತವೆ. ಎಲ್ಲವೂ ಮುಗಿದಂತೆ ಭಾಸವಾಗುತ್ತದೆ. ಆದರೂ ಅದರ ವ್ಯಾಪ್ತಿಗೆ ಒಳಪಡದೆ ಮತ್ತೆ ಹೊಸತನದಿಂದ ಕಲಿಯಲು ಮುಂದಾದಾದ, ಹಿಂದಿರುವ ಕೊರತೆಗಳನ್ನು ಗಮನಿಸಿ ಅದನ್ನು ತೊಡೆದು ಹಾಕಿದಾಗ ಯಶಸ್ಸೆಂಬುದು ನಮ್ಮನ್ನು ಹಿಂಬಾಲಿಸುತ್ತದೆ.


  ಕಷ್ಟದ ಪರಿಸ್ಥಿತಿಗಳಿಂದ ಹೊರಬರುವುದು


  ಜೀವನದಲ್ಲಿ ಕೆಲ ಬಾರಿ ಸಂಪೂರ್ಣವಾಗಿ ಕುಗ್ಗಿಹೋಗುವಂತಹ ಪರಿಸ್ಥಿತಿಗಳು ಬರಬಹುದು. ಆ ಕಠಿಣ ಪರಿಸ್ಥಿತಿಗಳೇ ನಾವು ಅದನ್ನು ಹೇಗೆ ನಿಭಾಯಿಸಿ ಮತ್ತೆ ಪುಟಿದೇಳುತ್ತೇವೆ ಎಂಬುದನ್ನು ನಿರ್ಧರಿಸುವ ನಿರ್ಣಾಯಕ ಮಾನದಂಡಗಳಾಗಿರುತ್ತವೆ.


  ಮಾದರಿ ವ್ಯಕ್ತಿಗಳು


  ಇಂದು ಹಾಲಿವುಡ್ ಚಿತ್ರರಂಗದ ಪ್ರಸಿದ್ಧ ನಟರಲ್ಲೊಬ್ಬರಾದ ರ್‍ಯಾಂಬೊ ಅಕಾ ಸಿಲ್ವೆಸ್ಟರ್ ಸ್ಟ್ಯಾಲೋನ್ ಅವರೂ ಸಹ ಪ್ರಾರಂಭದಲ್ಲಿ ತಡೆಯಲಾಗದಷ್ಟು ಅಡೆ-ತಡೆಗಳನ್ನು ಅನುಭವಿಸಿದವರು.


  ಕೆಲಸ-ಕಾಂಚಾಣಗಳಿಲ್ಲದ ಅಲೆದಾಡಿದವರು. ಆದಾಗ್ಯೂ ಅವರು ತಮ್ಮಲ್ಲಿರುವ ವಿಶ್ವಾಸವನ್ನು ಎಂದಿಗೂ ತೊರೆಯಲಿಲ್ಲ. ಪ್ರಯತ್ನಿಸುತ್ತಲೇ ಇದ್ದರು. ಅವರಿಗೆ ತಮ್ಮಲ್ಲಿದ್ದ ಪ್ತರಿಭೆಯ ಮೇಲೆ ನಂಬಿಕೆಯಿತ್ತು. ಹಾಗಾಗಿ ಅವರು ಮುಂದಿಂದು ದಿನ ಸೆಲಿಬ್ರಿಟಿಯಾಗಿ ವಿಜೃಂಭಿಸಿದರು.


  Career Growth Tips: ನಿಮ್ಮ ವೃತ್ತಿಯಲ್ಲಿ ಬೇಗ ಯಶಸ್ಸು ಸಿಗಬೇಕೆಂದರೆ ಈ 5 ಟಿಪ್ಸ್ ಪಾಲಿಸಿ ಸಾಕು
  ಸಾಂಕೇತಿಕ ಚಿತ್ರ


  ಪ್ರಸಿದ್ಧ ಚಿತ್ರ ನಿರ್ಮಾಣಗಾರ ಸ್ಟಿವನ್ ಸ್ಪಿಲ್ಬರ್ಗ್ ಯಾರಿಗೆ ತಾನೇ ಗೊತ್ತಿಲ್ಲ. ಪರೀಕ್ಷೆಗಳಲ್ಲಿ ಅವರ ಕಳಪೆ ಪ್ರದರ್ಶನಗಳಿಗಾಗಿ ಚಿತ್ರಶಾಲೆಯಿಂದ ಮೂರು ಬಾರಿ ತೀರಸ್ಕರಿಸಲ್ಪಟ್ಟಿದ್ದರು.


  ಆದರೂ ಅವರು ತಮ್ಮ ಭಗೀರಥ ಪ್ರಯತ್ನ ಬಿಡಲಿಲ್ಲ ಹಾಗೂ ಇಂದು ಅವರು 51 ಚಿತ್ರಗಳ ನಿರ್ಮಾಣ ಮಾಡಿದ್ದಲ್ಲದೆ ಮೂರು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಂತಿಮವಾಗಿ, ವೈಫಲ್ಯಗಳು ಜೀವನದ ವೈಫಲ್ಯವಲ್ಲ. ಬದಲಾಗಿ ಯಶಸ್ಸಿನೆಡೆಗೆ ನಮ್ಮನ್ನು ಸಕಲ ರೀತಿಯಿಂದ ಸಜ್ಜುಗೊಳಿಸುವಂತಹ ಅಂಶಗಳು.  

  Published by:Kavya V
  First published: