• Home
 • »
 • News
 • »
 • career
 • »
 • Working Woman: ಪ್ರತಿಭೆ ಇದ್ದರೂ ಮಹಿಳೆಯರ ವೃತ್ತಿಜೀವನ ಇನ್ನೂ ಏಕೆ ಸುಧಾರಿಸುತ್ತಿಲ್ಲ?

Working Woman: ಪ್ರತಿಭೆ ಇದ್ದರೂ ಮಹಿಳೆಯರ ವೃತ್ತಿಜೀವನ ಇನ್ನೂ ಏಕೆ ಸುಧಾರಿಸುತ್ತಿಲ್ಲ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋವಿಡ್ ನಂತರದ ದಿನಗಳಿಂದ ಕೌಶಲ್ಯಗಳನ್ನು ಉನ್ನತೀಕರಿಸುವ ಟ್ರೆಂಡ್ ಒಂದು ಶುರುವಾಗಿದ್ದು, ಅದರಲ್ಲಿ ಮಹಿಳೆ ಸಹ ಹಿಂದೆ ಬಿದ್ದಿಲ್ಲ. ಹಿಂದೆಂದಿಗಿಂತಲೂ ಇಂದಿನ ಮಹಿಳೆಯರು ಸಾಕಷ್ಟು ಕೌಶಲ್ಯಭರಿತರಾಗಿದ್ದಾರೆ.

 • Trending Desk
 • 5-MIN READ
 • Last Updated :
 • Share this:

  ಇಂದಿನ ಭಾರತ ಹಿಂದಿನಂತಿಲ್ಲ. ಈ ಹಿಂದೆ ನಾಲ್ಕು ಗೋಡೆಗಳ ಮಧ್ಯೆ ಕೌಟುಂಬಿಕ ಜವಾಬ್ದಾರಿ ಹೊತ್ತು ಜೀವನ ಕಳೆಯುತ್ತಿದ್ದ ಹೆಣ್ಣು (Woman) ಇಂದು ಆ ರೀತಿ ಇಲ್ಲ. ಸಾಕಷ್ಟು ಸುಶಿಕ್ಷಿತರಾಗಿರುವ ಇಂದಿನ ಹೆಣ್ಣು (Educated Women) ಮನೆಯ ಜೊತೆ ಕೆಲಸದ (JOB) ಜವಾಬ್ದಾರಿಯನ್ನೂ ಹೊತ್ತಿದ್ದಾಳೆ. ತನ್ನ ಕರಿಯರ್ (Career) ಬಗ್ಗೆ ವಿಶೇಷ  ಕಾಳಜಿವಹಿಸುತ್ತಾಳೆ. ಅದಲ್ಲದೆ, ಕೋವಿಡ್ ನಂತರದ ದಿನಗಳಿಂದ ಕೌಶಲ್ಯಗಳನ್ನು ಉನ್ನತೀಕರಿಸುವ ಟ್ರೆಂಡ್ ಒಂದು ಶುರುವಾಗಿದ್ದು,  ಅದರಲ್ಲಿ ಮಹಿಳೆ ಸಹ ಹಿಂದೆ ಬಿದ್ದಿಲ್ಲ. ಹಿಂದೆಂದಿಗಿಂತಲೂ ಇಂದಿನ ಮಹಿಳೆಯರು ಸಾಕಷ್ಟು ಕೌಶಲ್ಯಭರಿತರಾಗಿದ್ದಾರೆ.


  ಮಹಿಳೆಯರಲ್ಲಿ ಹೆಚ್ಚಿದ ಕಲಿಕೆ


  ಕೋರ್ಸೆರಾ ಎಂಬ ಸಂಸ್ಥೆ ನಡೆಸಿರುವ ಅಧ್ಯಯನವು ಕೋವಿಡ್ ಬಿಕ್ಕಟ್ಟಿನ ಮುಂಚೆ ಐದು ಮಿಲಿಯನ್ ಜನರಲ್ಲಿ 26% ರಷ್ಟು ಮಹಿಳೆಯರು ಸುಶಿಕ್ಷಿತರಾಗಿದ್ದರು, ಅದೇ ಪ್ರಸ್ತುತ ಆ ಸಂಖ್ಯೆಯು 18 ಮಿಲಿಯನ್ ಜನರಲ್ಲಿ ಕಲಿತ ಮಹಿಳೆಯರ ಪ್ರಮಾಣ 38% ರಷ್ಟಿದೆ ಎಂದು ತೋರಿಸಿದೆ.


  ಇನ್ನು ಆನ್ಲೈನ್ ಕಲಿಕಾ ವೇದಿಕೆಯಾದ ಸಿಂಪ್ಲಿಲರ್ನ್ ವೇದಿಕೆಯು ಸೆಪ್ಟೆಂಬರ್ 2019 ರಿಂದಿಚೆಗೆ ಕೌಶಲ್ಯ ಸುಧಾರಣಾ ತರಬೇತಿಗಳಿಗೆ ನೋಂದಾಯಿಸಿಕೊಳ್ಳುವ ಮಹಿಳೆಯರ ಪ್ರಮಾಣದಲ್ಲಿ ಎರಡು ಪಟ್ಟು ಏರಿಕೆಯಾಗಿರುವುದನ್ನು ಅಂದಾಜಿಸಿದೆ. ಇಲ್ಲಿ ಸಿಂಪ್ಲಿಲರ್ನ್ ನಡೆಸಿದ್ದ 2021 ವರ್ಷಾಂತ್ಯದ ಸಮೀಕ್ಷೆಯ ಫಲಿತಾಂಶವು ಕೋರ್ಸೆರಾ ಸಮೀಕ್ಷೆಯ ಫಲಿತಾಂಶದೊಂದಿಗೆ ಸಾಮ್ಯತೆ ಹೊಂದಿರುವುದನ್ನು ಗಮನಿಸಬಹುದಾಗಿದೆ. ಸಿಂಪ್ಲಿಲರ್ನ್ ಪ್ರಕಾರ, 38% ರಷ್ಟು ಮಹಿಳೆಯರು ಕೋವಿಡ್ ಬಿಕಟ್ಟಿನ ಸಮಯದಲ್ಲಿ ತಮ್ಮ ಕೌಶಲ್ಯ ಸುಧಾರಣಾ ಕಲಿಕೆಗೆ ಹೆಚ್ಚಿನ ಅವಕಾಶ ಸಿಕ್ಕಿರುವುದಾಗಿ ಹೇಳಿದ್ದಾರೆ.
  ಇದೇ ಸಂದರ್ಭದಲ್ಲಿ ಸಿಂಪ್ಲಿಲರ್ನ್ ವೇದಿಕೆಯ ಮುಖ್ಯ ಉತ್ಪನ್ನ ಅಧಿಕಾರಿಯಾದ ಆನಂದ್ ನಾರಾಯಣನ್ ಅವರು "2019 ಕ್ಕೆ ಹೋಲಿಸಿದರೆ ಕೌಶಲ್ಯ ತರಬೇತಿಗಳಿಗೆ 2022 ರಲ್ಲಿ ನೋಂದಾಯಿಸಿಕೊಂಡ ಮಹಿಳೆಯರ ಪ್ರಮಾಣದಲ್ಲಿ ಶೇ. 97 ರಷ್ಟು ಏರಿಕೆಯಾಗಿದೆ" ಎಂದು ಹೇಳುತ್ತಾರೆ.


  ಆನ್ಲೈನ್ ಕಲಿಕಾ ಟ್ರೆಂಡ್


  ಒಂದು ರೀತಿಯಲ್ಲಿ ಕೋವಿಡ್ ಬಿಕ್ಕಟ್ಟಿನ ಸಮಯವೇ ಆನ್ಲೈನ್ ಕಲಿಕಾ ಟ್ರೆಂಡ್ ಅನ್ನು ಹುಟ್ಟುಹಾಕಿದೆ ಎನ್ನಲಾಗಿದೆ. ಈ ಸಮಯದಲ್ಲಿ ಸೃಷ್ಟಿಯಾದ ಮನೆಯಿಂದಲೇ ಕೆಲಸದಂತಹ ಆಯಾಮಗಳು ಹೆಚ್ಚಿನ ಜನರಿಗೆ ಕೌಶಲ್ಯ ಪಡೆಯುವಂತೆ ಪ್ರೇರಣೆ ನೀಡಿವೆ ಎಂದು ಹೇಳಲಾಗಿದೆ. ಎಷ್ಟೋ ಜನರು ತಮಗಿದ್ದ ಕೆಲಸ ಕಳೆದುಕೊಂಡ ನಂತರ ಮನೆಯಿಂದಲೇ ಕೆಲಸ ಪ್ರಾರಂಭಿಸಲು ಆಸಕ್ತಿ ತೋರಿ ಕೌಶಲ್ಯ ಸುಧರಣಾ ತರಬೇತಿಗಳಿಗೆ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆಂದು ಕಂಡುಬಂದಿದೆ. ಈ ವಿಷಯದಲ್ಲಿ ಮಹಿಳೆಯರೂ ಹಿಂದೆ ಉಳಿದಿಲ್ಲ. ಅವರೂ ಸಹ ತಮ್ಮ ಕೌಶಲ್ಯ ಸುಧರಣೆಗಳನ್ನು ಹೆಚ್ಚಿಸಿಕೊಂಡಿದ್ದಾರೆ.


  ಇದನ್ನೂ ಓದಿ: Success Story: ಕೇವಲ 22 ವರ್ಷಕ್ಕೇ IAS ಅಧಿಕಾರಿಯಾದ ಯುವತಿ: ಡಿಗ್ರಿ-UPSC ಎರಡರಲ್ಲೂ ಒಟ್ಟಿಗೆ ಯಶಸ್ವಿ


  ಅನ್ವೇಶಿಸಲಾಗದ ಪ್ರತಿಭೆಗಳು


  ಹಾಗೆ ನೋಡಿದರೆ ಸಂಸ್ಥೆಗಳು ಸದಾ ತಮಗೆ ಸರಿಯಾದ ಪ್ರತಿಭೆ, ಕೌಶಲ್ಯವುಳ್ಳ ಅಭ್ಯರ್ಥಿಗಳಿಗಾಗಿ ಹುಡುಕಾಡುತ್ತಿರುತ್ತವೆ. ಈ ವಿಷಯದಲ್ಲಿ ಇನ್ನೂ ಅನ್ವೇಷಿಸಲಾಗದ ಪ್ರತಿಭೆಗಳೆಂದರೆ ಪ್ರತಿಭೆ ಹಾಗೂ ಕೌಶಲ್ಯವುಳ್ಳ ಮಹಿಳಾ ಅಭರ್ಥಿಗಳು ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ಜೀವನದ ಯಾವುದೋ ಒಂದು ಕಾರಣಕ್ಕಾಗಿ ಅಥವಾ ಕೋವಿಡ್ ನಿಂದಾಗಿ ಕೆಲಸ ಕಳೆದುಕೊಂಡಿರುವ ಮಹಿಳೆಯರು ಈಗ ಮತ್ತೆ ಮಂಚೂಣಿಯಲ್ಲಿ ಬರಲು ಪ್ರಯತ್ನಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ರಾಜು ಮಾಥೂರ್ ಎಂಬ ಕನ್ಸೆಲ್ಟಂಟ್ ವ್ಯಕ್ತಪಡಿಸುತ್ತಾರೆ. ಅವರ ಪ್ರಕಾರ, ವೆಚ್ಚದ ತರಬೇತಿ ನೀಡಬೇಕಾದ ಫ್ರೆಶರ್ಸ್ ಗಳಿಗೆ ಹೋಲಿಸಿದಾಗ ಅಂತಹ ಮಹಿಳೆಯರಿಗಾಗಿ ಕಡಿಮೆ ತರಬೇತಿಯಷ್ಟೇ ಸಾಕಾಗುತ್ತದೆ, ಏಕೆಂದರೆ ಅವರಿಗೆ ಹಿಂದೆ ಅನುಭವದ ಜೊತೆಗೆ ಸಾಕಷ್ಟು ಮಟ್ಟಿಗಿನ ಕೌಶಲ್ಯಗಳೂ ಇರುತ್ತವೆ ಎಂದು ಹೇಳುತ್ತಾರೆ ಮಾಥೂರ್.
  ಸ್ಪರ್ಧಾತ್ಮಕತೆಗೆ ಒಗ್ಗಿಕೊಳ್ಳುವುದು


  ಇನ್ನು ಅಕ್ಸೆಂಚರ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಅಧಿಕಾರಿಯಾಗಿರುವ ಲಕ್ಷ್ಮಿ ಸಿ ಅವರು ಹೇಳುವಂತೆ ಮಹಿಳೆಯರು ತಮ್ಮ ಕರಿಯರ್ ಮಧ್ಯ ಭಾಗದಲ್ಲಿ ಹಲವಾರು ಕಾರಣಗಳಿಂದ ಬ್ರೆಕ್ ತೆಗೆದುಕೊಂಡಿರುತ್ತಾರೆ. ಹಾಗೆ ದೀರ್ಘ ವಿರಾಮ ತೆಗೆದುಕೊಂಡ ಮಹಿಳೆಯರು ಮತ್ತೆ ತಮ್ಮ ವೃತ್ತಿಜೀವನ ಪ್ರಾರಂಭಿಸುವುದು ಅಷ್ಟೊಂದು ಸುಲಭವಗಿರುವುದಿಲ್ಲ. ಹಾಗಾಗಿ ತಮ್ಮನ್ನು ತಾವು ಇನ್ನಷ್ಟು ಅಪ್ ಸ್ಕಿಲ್ ಮಾಡಿಕೊಳ್ಳುವುದು ಹಾಗೂ ಅಂಥವರಿಗೆ ಅಲ್ಪ ಪ್ರಮಾಣದ ಮಾರ್ಗದರ್ಶನ ಕೊಟ್ಟಾಗ ಅವರು ಸಾಕಷ್ಟು ಅದರಿಂದ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ ಲಕ್ಷ್ಮಿ.


  ಅಡೆಕ್ಕೊ ಸಂಸ್ಥೆಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿರುವ ಗೊರ್ಡಾನಾ ಲಾಂಡೆನ್ ಅವರ ಪ್ರಕಾರ, ಅಪ್ ಸ್ಕಿಲ್ಲಿಂಗ್ ಮಹಿಳೆಯರಿಗೆ ಒಂದು ಅತ್ಯುತ್ತಮ ಅವಕಾಶವಾಗಿದ್ದು ಆ ಮೂಲಕ ಅವರು ದಿನನಿತ್ಯ 9 ರಿಂದ 5 ರವರೆಗಿನ ಉದ್ಯೋಗಕ್ಕೆ ಬೈ ಹೇಳುತ್ತ ಖುದ್ದಾಗಿ ಫ್ರೀಲ್ಯಾನ್ಸ್ ಆಗಿ ವೃತ್ತಿಜೀವನ ಕಟ್ಟಿಕೊಳ್ಳಬಹುದು. ನಾವು ಈಗಾಗಲೇ ಅನೇಕ ಮಹಿಳೆಯರು ಸಾಕಷ್ಟು ಹೊಸ ಹೊಸ ಕೌಶಲ್ಯಗಳನ್ನು ಕಲಿಯುತ್ತಿರುವುದನ್ನು ನೋಡುತ್ತಿದ್ದು ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ ಎಂಬ ವಿಶ್ವಾಸವನ್ನು ಗೊರ್ಡಾನಾ ವ್ಯಕ್ತಪಡಿಸುತ್ತಾರೆ.


  ಭಾರತದಲ್ಲಿ ಹೇಗಿದೆ ಸ್ಥಿತಿ?


  ಇನ್ನು ಭಾರತದಂತಹ ದೇಶದಲ್ಲಿ ಮಹಿಳೆಯರ ಸ್ಥಿತಿ ವಿಭಿನ್ನವಾಗಿದೆ ಅಂತಾನೇ ಹೇಳಬಹುದು. ಅತಿ ಕಡಿಮೆ ಸಂಖ್ಯೆಯ ಮಹಿಳಾ ಉದ್ಯೋಗಿಗಳ ದರದಲ್ಲಿ ಭಾರತ ಇಂದಿಗೂ ಗುರುತಿಸಲ್ಪಡುತ್ತದೆ. ಪ್ಯಾಂಡೆಮಿಕ್ ಆರಂಭಿಕ ಸಮಯದಲ್ಲಿ ನಗರ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗ ತೊರೆದ ಅಥವಾ ಕಳೆದುಕೊಂಡ ಉದಾಹರಣೆಗಳಿವೆ.
  2020 ರ ಮೊದಲ ಲಾಕ್ಡೌನ್ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿನ ಮಹಿಳಾ ಉದ್ಯೋಗಿಗಳ ಪ್ರಮಾಣದಲ್ಲಿ 15.5% ರಷ್ಟು ಕುಸಿತವನ್ನು ಕಾಣಲಾಯಿತು. ಸದ್ಯ ಈ ವರ್ಷದ ಏಪ್ರಿ-ಜೂನ್ ಸಮಯದಲ್ಲಿ ಆ ಸಂಖ್ಯೆ 20.9% ರಷ್ಟಿದ್ದು ಸ್ವಲ್ಪ ಚೇತರಿಕೆ ಕಂಡಿದೆ ಅಂದಷ್ಟೇ ಹೇಳಬಹುದು. ಆದಾಗ್ಯೂ ಈ ದಿಶೆಯಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಮಹಿಳೆಯರ ಕೌಶಲ್ಯ ಹಾಗೂ ಪ್ರತಿಭೆಗೆ ತಕ್ಕಂತೆ ಸಿಗುವಂತಾಗಬೇಕಿದೆ.

  Published by:Kavya V
  First published: