• ಹೋಂ
  • »
  • ನ್ಯೂಸ್
  • »
  • ವೃತ್ತಿ
  • »
  • Career after Retirement: ನಿವೃತ್ತಿ ಬಳಿಕ ಪ್ರವೃತ್ತಿಯನ್ನೇ ಹೊಸ ವೃತ್ತಿಯನ್ನಾಗಿ ಮಾಡಿಕೊಳ್ಳಬಹುದು

Career after Retirement: ನಿವೃತ್ತಿ ಬಳಿಕ ಪ್ರವೃತ್ತಿಯನ್ನೇ ಹೊಸ ವೃತ್ತಿಯನ್ನಾಗಿ ಮಾಡಿಕೊಳ್ಳಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿವೃತ್ತಿ ನಂತರದ ಖಾಲಿ ದಿನಗಳನ್ನು ಕಳೆಯುವುದು ನಾವು ಊಹಿಸಿದಷ್ಟು ಸುಲಭವಲ್ಲ. ಹಾಗಂತ ಮತ್ತೆ ಕೆಲಸಕ್ಕೆ ಹೋಗೋಣ ಎಂದರೆ ದೇಹದಲ್ಲಿ ಅಷ್ಟೊಂದು ಶಕ್ತಿ ಇರುವುದಿಲ್ಲ. ಜೊತೆಗೆ ವಯಸ್ಸಾದವರಿಗೆ ಕೆಲಸ ಯಾರು ಕೊಡ್ತಾರೆ ಎಂದು ಯೋಚನೆಯೂ ಬರುತ್ತೆ.

  • Share this:

ಕೆಲಸದ (Job) ಜಂಜಾಟದಲ್ಲಿ ಕಳೆದು ಹೋಗಿರುವ ಪ್ರತಿಯೊಬ್ಬ ಉದ್ಯೋಗಿಯೂ ನಿವೃತ್ತಿಯ (Retirement) ನಂತರದ ದಿನಗಳ ಬಗ್ಗೆ ಯೋಚಿಸಿಯೇ ಇರುತ್ತಾರೆ. ನಿವೃತ್ತಿಯಾದ ಬಳಿಕ ಬದುಕಿನ ಸಂಜೆ ಕಾಲವನ್ನು ವಿಶ್ರಾಂತಿಯಲ್ಲಿ, ನೆಚ್ಚಿನ ಹವ್ಯಾಸಗಳಲ್ಲಿ (Hobbies) ಕಳೆಯಲು ಇಚ್ಛಿಸುತ್ತಾರೆ. ಕೆಲಸದ ಮಧ್ಯೆ 2-3 ದಿನಗಳ ರಜೆ ಸಿಕ್ಕರೆ ಸಾಕು ಎನ್ನುವವರಿಗೆ, ನಿವೃತ್ತಿ ಬಳಿಕ ಬದುಕಿರುವವರೆಗೂ ರಜೆಯೇ ಎನಿಸುತ್ತೆ. ಆದರೆ ಕೆಲಸದ ಮಧ್ಯೆ ತೆಗೆದುಕೊಳ್ಳುತ್ತಿದ್ದ ರಜೆಯಲ್ಲಿದ್ದ ಮಜಾ ಈಗ ಇರಲ್ಲ. ನಿವೃತ್ತಿ ಬಳಿಕ ಸಿಗುವ ಖಾಲಿ ದಿನಗಳು ಮಜಾ ಎನಿಸುವುದಿಲ್ಲ. ವರ್ಷಗಳ ಕಾಲ ನಿತ್ಯ ಎದ್ದು ಆಫೀಸ್​ಗೆ ಹೋಗುತ್ತಿದ್ದವರು ಏಕಾಏಕಿ ಎಲ್ಲಿಗೂ ಹೋಗಲು ಸಾಧ್ಯವಿಲ್ಲದೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ. ಇದು ಒಂದು ರೀತಿ ಜೈಲಿನಂತೆ ಅನಿಸಲು ಶುರುವಾಗುತ್ತೆ.


ನಿವೃತ್ತಿ ನಂತರದ ಖಾಲಿ ದಿನಗಳನ್ನು ಕಳೆಯುವುದು ನಾವು ಊಹಿಸಿದಷ್ಟು ಸುಲಭವಲ್ಲ. ಹಾಗಂತ ಮತ್ತೆ ಕೆಲಸಕ್ಕೆ ಹೋಗೋಣ ಎಂದರೆ ದೇಹದಲ್ಲಿ ಅಷ್ಟೊಂದು ಶಕ್ತಿ ಇರುವುದಿಲ್ಲ. ಜೊತೆಗೆ ವಯಸ್ಸಾದವರಿಗೆ ಕೆಲಸ ಯಾರು ಕೊಡ್ತಾರೆ ಎಂದು ಯೋಚನೆಯೂ ಬರುತ್ತೆ. ಇನ್ನು ಮನೆಯವರು ಕೂಡ ವಯಸ್ಸಾಗಿದೆ, ಈ ವಯಸ್ಸಿನಲ್ಲಿ ಕೆಲಸ ಏಕೆ ಮಾಡಬೇಕು ಎನ್ನುತ್ತಾರೆ. ಆದರೆ ನಿಮಗೆ ನಿಜಕ್ಕೂ ಆಸಕ್ತಿ ಇದ್ದರೆ ನಿವೃತ್ತಿಯ ಬಳಿಕವೂ ಒಂದು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಳಿವಯಸ್ಸಿನ ಏಕತಾನತೆ, ಬೇಸರವನ್ನು ಕಳೆಯಲು ಇಷ್ಟ ಬಂದ ಕೆಲಸ ಮಾಡಬಹುದು. ಆ ನಿಟ್ಟಿನಲ್ಲಿ ಕೆಲವೊಂದು ವೃತ್ತಿ ಆಯ್ಕೆ ಸಲಹೆಗಳು ಇಲ್ಲಿವೆ.
1) ಬ್ಲಾಗಿಂಗ್


ಬ್ಲಾಗಿಂಗ್‌ ಅನ್ನು ವೃತ್ತಿಯಾಗಿ ಆರಿಸಿಕೊಳ್ಳಬಹುದು. ಇದಕ್ಕೆ ನಿರ್ದಿಷ್ಟ ಶೈಕ್ಷಣಿಕ ಅಗತ್ಯತೆ ಅಥವಾ ತರಬೇತಿಯ ಅಗತ್ಯವಿರುವುದಿಲ್ಲ. ಜನ ಈಗ ಹೆಚ್ಚಿನ ವಿಷಯವನ್ನು ಆನ್‌ಲೈನ್‌ನಲ್ಲಿ ಓದುವುದರಿಂದ, ಆನ್‌ಲೈನ್ ಸೈಟ್‌ಗಳಿಗೆ ಬ್ಲಾಗಿಂಗ್ ಅಥವಾ ವಿಷಯವನ್ನು ಬರೆಯುವುದ್ದಕ್ಕೆ ಭಾರಿ ಬೇಡಿಕೆ ಇದೆ. ಈ ಕ್ಷೇತ್ರದಲ್ಲಿ ಚೆನ್ನಾಗಿ ಹಣವನ್ನು ಗಳಿಸಬಹುದು.


2) ಟ್ರಾವೆಲ್​ ಗೈಡ್​ ಆಗಬಹುದು


ನೀವು ಪ್ರಯಾಣಿಸಲು ಮತ್ತು ಹೊಸ ಸ್ಥಳಗಳನ್ನು ನೋಡಲು ಇಷ್ಟಪಡುತ್ತಿದ್ದರೆ, ನೀವು ಇದನ್ನು ನಿಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬಹುದು. ನಿವೃತ್ತಿಯ ನಂತರ ನೀವು ಟ್ರಾವೆಲ್ ಕಂಪನಿಗಳಲ್ಲಿ ಕೆಲಸ ಮಾಡಬಹುದು. ಆ ಮೂಲಕ ಟ್ರಾವೆಲ್ ಗೈಡ್ ಆಗಬಹುದು. ಇದರಿಂದ ಅನೇಕ ಸ್ಥಳಗಳನ್ನು ನೋಡುತ್ತೀರಿ, ಸಾಕಷ್ಟು ಹಣವನ್ನು ಸಹ ಗಳಿಸುತ್ತೀರಿ.
3) ಗುರುವಾಗಬಹುದು


ಇಷ್ಟು ವರ್ಷದ ಜೀವನ, ವೃತ್ತಿಯಲ್ಲಿ ನೀವು ಅನುಭವಸ್ಥರಾಗಿರುತ್ತೀರಿ. ಹೀಗಾಗಿ ನಿಮ್ಮಲ್ಲಿರುವ ಜ್ಞಾನವನ್ನು ಯುವ ಜನತೆಗೆ ಹಂಚಬಹುದು. ಬೋಧನಾ ಸಹಾಯಕ ಅಥವಾ ಬೋಧಕರಾಗಲು ಉತ್ತಮ ಅವಕಾಶವನ್ನು ಹೊಂದಿರಬಹುದು. ವಿಶ್ವವಿದ್ಯಾನಿಲಯಗಳು ಕೆಲವೊಮ್ಮೆ  ಬೋಧನಾ ಸಹಾಯಕರನ್ನು ನೇಮಿಸಿಕೊಳ್ಳುತ್ತವೆ. ಮತ್ತೊಂದೆಡೆ, ಶಿಕ್ಷಕರು ಸ್ವಯಂ ಉದ್ಯೋಗಿಗಳಾಗಿರಬಹುದು ಅಥವಾ ದೊಡ್ಡ ಸಂಸ್ಥೆಯೊಂದಿಗೆ ಕೆಲಸ ಮಾಡಬಹುದು. YouTube ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದು ಕೂಡ ಪ್ರಸ್ತುತ ಒಂದು ಪ್ರವೃತ್ತಿಯಾಗಿದೆ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು