• Home
 • »
 • News
 • »
 • career
 • »
 • Campus Placement: ವಿದ್ಯಾರ್ಥಿಗಳೇ, ಕ್ಯಾಂಪಸ್ ಸೆಲೆಕ್ಷನ್​ಗೆ ನಿಮ್ಮ ತಯಾರಿ ಹೀಗಿದ್ದರೆ ಕೆಲಸ ಸಿಗೋದು ಪಕ್ಕಾ

Campus Placement: ವಿದ್ಯಾರ್ಥಿಗಳೇ, ಕ್ಯಾಂಪಸ್ ಸೆಲೆಕ್ಷನ್​ಗೆ ನಿಮ್ಮ ತಯಾರಿ ಹೀಗಿದ್ದರೆ ಕೆಲಸ ಸಿಗೋದು ಪಕ್ಕಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಂಪನಿಯ ಸಂದರ್ಶನ ಸಮಿತಿಯು ಖಂಡಿತವಾಗಿಯೂ ಜ್ಞಾನವುಳ್ಳ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಪ್ಲೇಸ್‌ಮೆಂಟ್ ನಲ್ಲಿ ಆಯ್ಕೆ ಮಾಡಿಕೊಳ್ಳುತ್ತದೆ. ಸುದ್ದಿ ವೆಬ್‌ಸೈಟ್ ಗಳನ್ನು ಹುಡುಕಿ ಮತ್ತು ರಾಜಕೀಯ, ವ್ಯವಹಾರ, ಪರಿಸರ, ಇತ್ಯಾದಿಗಳಲ್ಲಿ ಟ್ರೆಂಡಿಂಗ್ ವಿಷಯಗಳ ಬಗ್ಗೆ ನಿಮಗೆ ಸಾಧ್ಯವಾದಷ್ಟು ಮಾಹಿತಿಯನ್ನು ಸಂಗ್ರಹಿಸಿ.

ಮುಂದೆ ಓದಿ ...
 • Share this:

  ಕಾಲೇಜಿನಲ್ಲಿ ಪದವಿ (Graduation) ಶಿಕ್ಷಣ ಮುಗಿಸಿ ಅಥವಾ ಸ್ನಾತಕೋತ್ತರ ಪದವಿಯನ್ನು (Post Graduation) ಪಡೆದ ನಂತರ ಕೈಯಲ್ಲಿ  ರೆಸ್ಯೂಮ್ (Resume)  ಹಿಡಿದುಕೊಂಡು ಕೆಲಸ ಹುಡುಕಿಕೊಂಡು ಅಲೆಯೋ ತಾಪತ್ರೆ ಬೇಡ ಅನ್ನೋರಿಗೆ ಈ ಕ್ಯಾಂಪಸ್ ಪ್ಲೇಸ್‌ಮೆಂಟ್ (Campus Placement) ಎನ್ನುವುದು ತುಂಬಾನೇ ದೊಡ್ಡ ಅವಕಾಶವಾಗಿರುತ್ತದೆ ಅಂತ ಹೇಳಬಹುದು. ಹೌದು.. ಕಾಲೇಜಿನಲ್ಲಿ ಕೊನೆಯ ವರ್ಷದಲ್ಲಿ ಓದುತ್ತಿರುವಾಗ ಅನೇಕ ಕಂಪನಿಗಳ ಸಿಬ್ಬಂದಿಗಳು ಕಾಲೇಜಿಗೆ ಬಂದು ಸಂದರ್ಶನ ಮಾಡಿ ಕೆಲವು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಒಂದು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು, ಏಕೆಂದರೆ ಓದು ಮುಗಿಸಿಕೊಂಡು ನೇರವಾಗಿ ಕೆಲಸಕ್ಕೆ ಹೋಗಿ ದುಡಿಮೆ ಮಾಡುವುದಕ್ಕೆ ಶುರು ಮಾಡಿಕೊಳ್ಳಬಹುದು.


  ಕ್ಯಾಂಪಸ್ ಪ್ಲೇಸ್‌ಮೆಂಟ್ ಎನ್ನುವುದು ಔಪಚಾರಿಕ ಉಡುಗೆಯನ್ನು ತೊಡುವುದರಿಂದ ಹಿಡಿದು ಸಂದರ್ಶನಗಳಿಗೆ ತಯಾರಿ ನಡೆಸುವವರೆಗೆ ಅಪೇಕ್ಷಿತ ಕಂಪನಿಗಳಲ್ಲಿ ಕೆಲಸವನ್ನು ಗಿಟ್ಟಿಸಲು ವಿದ್ಯಾರ್ಥಿಗಳು ಅನೇಕ ವರ್ಷಗಳ ಕಾಲ ತಮ್ಮ ಕಠಿಣ ಪರಿಶ್ರಮವನ್ನು ಹಾಕಿರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ತಮ್ಮ ಕನಸಿನ ಉದ್ಯೋಗಕ್ಕೆ ಒಂದು ಹೆಜ್ಜೆ ಹತ್ತಿರಕ್ಕೆ ಹೋಗುವ ಸಮಯ ಇದು ಅಂತ ಹೇಳಬಹುದು.


  ಕ್ಯಾಂಪಸ್ ಪ್ಲೇಸ್ಮೆಂಟ್ ಎಂದರೇನು?


  ಕ್ಯಾಂಪಸ್ ಪ್ಲೇಸ್‌ಮೆಂಟ್ ಗಳು ಎಂದರೆ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿ ಪದವಿಗಳ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಅವರನ್ನು ನೇಮಕ ಮಾಡುವ ಸಂಭಾವ್ಯ ಉದ್ಯೋಗದಾತರನ್ನು ಒಟ್ಟುಗೂಡಿಸುವ ಗುರಿಯೊಂದಿಗೆ ಸ್ಥಾಪಿಸಲಾದ ನೇಮಕಾತಿಗೆ ಒಂದು ವೇದಿಕೆಯಾಗಿದೆ.


  Karnataka state vijnana parishat science conference students can register by his steps
  ಸಾಂದರ್ಭಿಕ ಚಿತ್ರ


  ಪ್ರೇರೇಪಿತ ಮತ್ತು ಉತ್ಪಾದಕ ಕಾರ್ಯಪಡೆಯನ್ನು ಆರಂಭದಲ್ಲಿಯೇ ಹುಡುಕುವುದು ಮತ್ತು ನೇಮಿಸಿಕೊಳ್ಳುವುದು ಕ್ಯಾಂಪಸ್ ಪ್ಲೇಸ್‌ಮೆಂಟ್ ಗಳ ಮುಖ್ಯ ಉದ್ದೇಶವಾಗಿದೆ. ಇದು ವೈಯಕ್ತಿಕ ಮಟ್ಟದಲ್ಲಿ ತಮ್ಮ ಆದರ್ಶ ವೃತ್ತಿಜೀವನವನ್ನು ಕಂಡು ಹಿಡಿಯುವಲ್ಲಿ ವಿದ್ಯಾರ್ಥಿಗಳ ಸಮಯ ಮತ್ತು ಶ್ರಮವನ್ನು ಉಳಿಸುವುದು ಮಾತ್ರವಲ್ಲದೆ, ಅಭ್ಯರ್ಥಿಗಳು ತಮ್ಮ ಪದವಿಗಳನ್ನು ಪೂರ್ಣಗೊಳಿಸಿದ ನಂತರ ತಮ್ಮ ಆಯ್ಕೆಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ವಿವಿಧ ಅವಕಾಶಗಳನ್ನು ಸೃಷ್ಟಿಸುತ್ತದೆ.


  ಕ್ಯಾಂಪಸ್ ಪ್ಲೇಸ್ಮೆಂಟ್ ಗೆ ತಯಾರಿ ನಡೆಸಲು ಕೆಲವು ಸಲಹೆಗಳು


  ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲ ಹಂತವೆಂದರೆ ಪ್ಲೇಸ್‌ಮೆಂಟ್ ಗಳಿಗೆ ತಯಾರಿ ನಡೆಸುವುದು. ಇದು ಭರವಸೆಯ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. ಕ್ಯಾಂಪಸ್ ಪ್ಲೇಸ್‌ಮೆಂಟ್ ಗೆ ಪರಿಣಾಮಕಾರಿಯಾಗಿ ಹೇಗೆ ತಯಾರಿ ನಡೆಸಬೇಕು ಅಂತ ವಿದ್ಯಾರ್ಥಿಗಳಲ್ಲಿ ತುಂಬಾನೇ ಗೊಂದಲಗಳಿರುತ್ತವೆ. ಆದರೆ ಈ ಸಲಹೆಗಳೊಂದಿಗೆ, ನೀವು ಆ ಕ್ಯಾಂಪಸ್ ಪ್ಲೇಸ್‌ಮೆಂಟ್ ಸಂದರ್ಶನಕ್ಕೆ ಪರಿಣಾಮಕಾರಿಯಾಗಿ ತಯಾರಿ ನಡೆಸಲು ಸಾಧ್ಯವಾಗುತ್ತದೆ.


  1. ರೆಸ್ಯೂಮ್ ಅನ್ನು ಚೆನ್ನಾಗಿ ತಯಾರು ಮಾಡುವುದು


  ಓದು ಮುಗಿಸಿದ ನಂತರ ಕೆಲಸಗಳಿಗೆ ಅಂತ ಅರ್ಜಿಗಳನ್ನು ಭರ್ತಿ ಮಾಡುವ ಕಿರಿಕಿರಿಯನ್ನು ಕ್ಯಾಂಪಸ್ ಪ್ಲೇಸ್‌ಮೆಂಟ್ ದೂರ ಮಾಡುತ್ತದೆ ಅಂತ ಹೇಳಬಹುದು. ಆದ್ದರಿಂದ ನೀವು ನಿಮ್ಮ ರೆಸ್ಯೂಮ್ ಅನ್ನು ಪರಿಣಾಮಕಾರಿಯಾಗಿ ತಯಾರು ಮಾಡಬೇಕು. ಎಂದರೆ ಅದು ಸಂಕ್ಷಿಪ್ತವಾಗಿ ಮತ್ತು ನೋಡುಗರಿಗೆ ಸುಲಭವಾಗಿ ಅರ್ಥ ಮಾಡಿಕೊಳ್ಳುವಂತಿರಬೇಕು.
  ಕಂಪನಿಯು ಒದಗಿಸಿದ ಕೆಲಸದ ವಿವರಣೆಗೆ ನಿಮ್ಮ ರೆಸ್ಯೂಮ್ ಹೊಂದುವಂತೆ ತಯಾರಿಸಿ. ಅದರಲ್ಲಿ ನಿಮಗಿರುವ ಕೌಶಲ್ಯಗಳನ್ನು ಒತ್ತಿ ಹೇಳಲು ಮರೆಯಬೇಡಿ, ಇದರಿಂದ ನಿಮ್ಮ ಬುದ್ದಿವಂತಿಕೆಯನ್ನು ಕಂಪನಿಯವರ ಮುಂದೆ ಸಮರ್ಥಿಸಿಕೊಳ್ಳಬಹುದು.


  2. ಪ್ರಭಾವಶಾಲಿಯಾದ ಕವರ್ ಲೆಟರ್ ಸಹ ಬರೀಬೇಕು


  ರೆಸ್ಯೂಮ್ ಜೊತೆಗೆ, ನೀವು ವಿದ್ಯಾಭ್ಯಾಸದ ಸಮಯದಲ್ಲಿ ಮಾಡಿದ ಸಾಧನೆಗಳು ಮತ್ತು ನೀಡಿದ ಕೊಡುಗೆಯನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಒಂದು ಕವರ್ ಲೆಟರ್ ನಲ್ಲಿ ಬರೆಯಬೇಕು. ಇದು ನಿಮ್ಮ ಹಿನ್ನೆಲೆಯ ಸಂಕ್ಷಿಪ್ತ ಸಾರಾಂಶವನ್ನು ನೀಡಬೇಕು ಮತ್ತು ಅರ್ಜಿ ಸಲ್ಲಿಸಲು ನಿಮ್ಮ ಪ್ರೇರಣೆಯನ್ನು ಚರ್ಚಿಸಬೇಕು. ನಿಮ್ಮ ಕವರ್ ಲೆಟರ್ ನಿಮ್ಮ ಸಿವಿಯನ್ನು ಪರಿಶೀಲಿಸಲು ಸಂಭಾವ್ಯ ಉದ್ಯೋಗದಾತರನ್ನು ಮನವೊಲಿಸಬೇಕು ಮತ್ತು, ಆದರ್ಶಪ್ರಾಯವಾಗಿ, ಸಂದರ್ಶನದ ಪ್ರಸ್ತಾಪವನ್ನು ವಿಸ್ತರಿಸಬೇಕು.


  3. ಆಪ್ಟಿಟ್ಯೂಡ್ ಟೆಸ್ಟ್ ಗಳಿಗೆ ಸಂಪೂರ್ಣವಾಗಿ ತಯಾರಾಗಿ


  ವಿವಿಧ ಕೈಗಾರಿಕೆಗಳಲ್ಲಿ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಉದ್ಯೋಗ ಅರ್ಜಿದಾರರನ್ನು ಮೌಲ್ಯಮಾಪನ ಮಾಡಲು ಆಪ್ಟಿಟ್ಯೂಡ್ ಪರೀಕ್ಷೆಗಳನ್ನು ಬಳಸಲಾಗುತ್ತದೆ. ಉದ್ಯೋಗ ಅರ್ಜಿದಾರರನ್ನು ತೆಗೆದು ಹಾಕುವಲ್ಲಿ ಇದು ಆರಂಭಿಕ ಹಂತವಾಗಿದೆ. "ಅಭ್ಯಾಸವು ಮನುಷ್ಯನನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ" ಎಂಬುದನ್ನು ನೆನಪಿನಲ್ಲಿಡಿ.


  ಸಾಂದರ್ಭಿಕ ಚಿತ್ರ


  ನಿಮ್ಮ ಫೀಡ್ ಬ್ಯಾಕ್ ವರದಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಬಂದಿರುವ ನಿರಂತರ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಆಲೋಚಿಸಿ. ಕ್ಯಾಂಪಸ್ ಪ್ಲೇಸ್‌ಮೆಂಟ್ ಗಳಿಗಾಗಿ ಆಪ್ಟಿಟ್ಯೂಡ್ ಪರೀಕ್ಷೆಗಳಲ್ಲಿ ಉತ್ಕೃಷ್ಟತೆ ಸಾಧಿಸಲು ಆನ್ಲೈನ್ ಕೌಶಲ್ಯ ಪರೀಕ್ಷೆಗಳ ಜೊತೆಗೆ ಅಭ್ಯಾಸ ಪೇಪರ್ ಗಳನ್ನು ಅಭ್ಯಾಸ ಮಾಡುವುದು ಮತ್ತು ಸೆಟ್ ಪುಸ್ತಕಗಳನ್ನು ಅಭ್ಯಾಸ ಮಾಡುವುದು ಮುಂತಾದ ಸಾಧನಗಳನ್ನು ಬಳಸುವುದನ್ನು ಮರೆಯಬೇಡಿ.


  4. ಗುಂಪು ಚರ್ಚೆಗಾಗಿ ಸ್ಪಷ್ಟವಾದ ಆಲೋಚನೆಯನ್ನು ರೂಢಿಸಿಕೊಳ್ಳಿ


  ಕ್ಯಾಂಪಸ್ ಪ್ಲೇಸ್‌ಮೆಂಟ್ ಗಳ ಸಮಯದಲ್ಲಿ, ಒಂದು ಗುಂಪು ಚರ್ಚೆಯು ಸಂದರ್ಶಕರಿಗೆ ಅಭ್ಯರ್ಥಿಗಳ ಗುಂಪನ್ನು ಗಮನಿಸಲು ಮತ್ತು ಅವರು ವಿವಿಧ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಮೌಲ್ಯಮಾಪನ ಮಾಡಲು ಅನುವು ಮಾಡಿಕೊಡುತ್ತದೆ, ಸಮಸ್ಯೆಯನ್ನು ಪರಿಹರಿಸುವ ವಿಧಾನದಲ್ಲಿ ಅವರ ಪ್ರಯತ್ನ ಹೇಗಿದೆ ಅಂತ ಇದರಿಂದ ಉದ್ಯೋಗದಾತರು ತಿಳಿದುಕೊಳ್ಳುತ್ತಾರೆ.


  ನಿಮ್ಮ ಆಲೋಚನಾ ಪ್ರಕ್ರಿಯೆಯಲ್ಲಿ ಸ್ಥಿರವಾಗಿ ಕೆಲಸ ಮಾಡುವುದು ಮತ್ತು ಪರಿಹಾರ ಆಧಾರಿತ ಕಾರ್ಯ ತಂತ್ರವನ್ನು ಅಳವಡಿಸಿಕೊಳ್ಳುವುದು ನಿಮಗೆ ಅತಿಯಾದ ಆಲೋಚನೆಯಿಂದ ನಿಜ ಜೀವನದಲ್ಲಿ ಹೆಚ್ಚು ಸಂಶೋಧನೆ ಆಧಾರಿತ ಮಾರ್ಗಕ್ಕೆ ಬದಲಾಯಿಸಲು ಸಹಾಯ ಮಾಡುತ್ತದೆ.


  5. ಟೆಕ್ನಿಕಲ್ ರೌಂಡ್ ಗಾಗಿ ವಿಷಯವನ್ನ ವಿವರವಾಗಿ ತಿಳಿದುಕೊಂಡು ತಯಾರಾಗಿ


  ಕ್ಯಾಂಪಸ್ ಪ್ಲೇಸ್‌ಮೆಂಟ್ ಪ್ರಕ್ರಿಯೆಯಲ್ಲಿ ಒಂದು ಟೆಕ್ನಿಕಲ್ ರೌಂಡ್ ಅಂತ ಸಹ ಇರುತ್ತದೆ, ಎಂದರೆ ಇದನ್ನು ತಾಂತ್ರಿಕ ಸುತ್ತು ಎಂದು ಹೇಳಬಹುದು. ಒಂದು ಸಂಪೂರ್ಣ ಸಂದರ್ಶನ ಅಥವಾ ಪ್ರಸ್ತುತಿಯಾಗಿದ್ದು, ಇದು ನಿಮ್ಮ ಅಗತ್ಯ ಕೌಶಲ್ಯಗಳ ಬಗ್ಗೆ ನಿಮ್ಮ ಪಾಂಡಿತ್ಯವನ್ನು ಪ್ರದರ್ಶಿಸುತ್ತದೆ ಅಥವಾ ಹಲವಾರು ಭಾಷೆಗಳ ಮೇಲೆ ನಿಮಗಿರುವ ಹಿಡಿತವನ್ನು ಮತ್ತು ನೀವು ನಿರ್ದಿಷ್ಟವಾಗಿ ಪ್ರಶ್ನಾರ್ಹ ಸ್ಥಾನಕ್ಕೆ ಏನನ್ನು ಒದಗಿಸುತ್ತೀರಿ ಎಂಬುದನ್ನು ಪ್ರದರ್ಶಿಸುತ್ತದೆ.
  ನಿಮ್ಮನ್ನು ಕೇಳಬಹುದಾದ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರಿಸಲು ಮತ್ತು ಕಂಪನಿಯವರನ್ನು ಇಂಪ್ರೆಸ್ ಮಾಡಲು ನೀವು ಮುಂಚಿತವಾಗಿಯೇ ಸಿದ್ಧರಾಗಿರಬೇಕು. ವ್ಯವಹಾರವು ಕಾರ್ಯನಿರ್ವಹಿಸುವ ಕೈಗಾರಿಕೆಗಳು ಮತ್ತು ಅದರ ಉತ್ಪನ್ನಗಳು ಅಥವಾ ಸೇವೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಅದು ಹೊಂದಿರುವ ವಿಶಿಷ್ಟ ತೊಂದರೆಗಳೊಂದಿಗೆ ಪ್ರಾರಂಭಿಸಿ. ಕೊರಾ, ಗ್ಲಾಸ್ ಡೋರ್ ಮತ್ತು ಇತರ ವೆಬ್‌ಸೈಟ್ ಗಳಲ್ಲಿ ಕಂಪನಿ ಅಥವಾ ಅದರ ನಿಕಟ ಪ್ರತಿಸ್ಪರ್ಧಿಗಳೊಂದಿಗಿನ ಸಂದರ್ಶನದ ಅನುಭವಗಳನ್ನು ಸಹ ನೋಡಿ ತಿಳಿದುಕೊಳ್ಳಿರಿ.


  6. ಪ್ರತಿಯೊಂದು ವಿಷಯಗಳ ಬಗ್ಗೆ ಅಪ್ಡೇಟ್ ಆಗಿರಿ


  ಕಂಪನಿಯ ಸಂದರ್ಶನ ಸಮಿತಿಯು ಖಂಡಿತವಾಗಿಯೂ ಜ್ಞಾನವುಳ್ಳ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಪ್ಲೇಸ್‌ಮೆಂಟ್ ನಲ್ಲಿ ಆಯ್ಕೆ ಮಾಡಿಕೊಳ್ಳುತ್ತದೆ. ಸುದ್ದಿ ವೆಬ್‌ಸೈಟ್ ಗಳನ್ನು ಹುಡುಕಿ ಮತ್ತು ರಾಜಕೀಯ, ವ್ಯವಹಾರ, ಪರಿಸರ, ಇತ್ಯಾದಿಗಳಲ್ಲಿ ಟ್ರೆಂಡಿಂಗ್ ವಿಷಯಗಳ ಬಗ್ಗೆ ನಿಮಗೆ ಸಾಧ್ಯವಾದಷ್ಟು ಮಾಹಿತಿಯನ್ನು ಸಂಗ್ರಹಿಸಿ. ಇದು ನೀವು ಪ್ರಸ್ತುತವಾಗಿ ನಡೆಯುತ್ತಿರುವ ವಿಷಯಗಳ ಬಗ್ಗೆ ಅಪ್ಡೇಟ್ ಆಗಿದ್ದೀರಿ ಅನ್ನೋದನ್ನು ತೋರಿಸುತ್ತದೆ.


  7. ಅಣಕು ಸಂದರ್ಶನಗಳಿಗೆ ಹಾಜರಾಗಿ


  ಕ್ಯಾಂಪಸ್ ಪ್ಲೇಸ್‌ಮೆಂಟ್ ಗಳಿಗೆ ಹೋಗುವ ಮುಂಚೆ ಅದೇ ರೀತಿಯ ಅನೇಕ ಅಣಕು ಎಂದರೆ ಮಾಕ್ ಸಂದರ್ಶನಗಳಿಗೆ ಹಾಜರಾಗಿ ಮತ್ತು ಅದರ ಬಗ್ಗೆ ಅನುಭವವನ್ನು ಪಡೆದುಕೊಳ್ಳಿರಿ. ಸಂದರ್ಶನ ಪ್ರಕ್ರಿಯೆಯನ್ನು ನೇರವಾಗಿ ಅನುಭವಿಸಲು ವಿದ್ಯಾರ್ಥಿಗಳಿಗೆ ಅಣಕು ಸಂದರ್ಶನದ ಸಮಯದಲ್ಲಿ ಅವಕಾಶವನ್ನು ಒದಗಿಸಲಾಗುತ್ತದೆ, ಇದು ಉದ್ಯೋಗ ಸಂದರ್ಶನವನ್ನು ಪುನರಾವರ್ತಿಸುತ್ತದೆ.
  ಸಾಕಷ್ಟು ಉದ್ಯಮದ ಅನುಭವವನ್ನು ಹೊಂದಿರುವ ಯಾರಾದರೂ ಹಳೆಯ ವಿದ್ಯಾರ್ಥಿಗಳು, ವೃತ್ತಿ ಸಲಹೆಗಾರರು, ಸ್ವಯಂ ಸೇವಕರು ಮತ್ತು ಇತರರು ಸೇರಿದಂತೆ ಸಂದರ್ಶನವನ್ನು ನಡೆಸಲು ಅರ್ಹರಾಗಿರುತ್ತಾರೆ. ಅಣಕು ಸಂದರ್ಶನ ಪ್ರಕ್ರಿಯೆಯು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಬಹುದಾದ ಒಂದು ಮಾರ್ಗವೆಂದರೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.


  ಇದು ವಿದ್ಯಾರ್ಥಿಗಳಿಗೆ ತಮ್ಮ ಅಮೌಖಿಕ ಸಂವಹನ ಸಾಮರ್ಥ್ಯಗಳನ್ನು ಪರಿಗಣಿಸುವ ಅವಕಾಶವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಸಂದರ್ಶಕರ ಎದುರು ಮಾಡುವ ತಪ್ಪುಗಳನ್ನು ಸುರಕ್ಷಿತ ವಾತಾವರಣದಲ್ಲಿ ಸರಿಪಡಿಸಲು ಪ್ರಯತ್ನಿಸಲು ಇದು ಒಂದು ಅವಕಾಶವನ್ನು ಒದಗಿಸುತ್ತದೆ.


  ಒಟ್ಟಿನಲ್ಲಿ ಹೇಳುವುದಾದರೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಗಳು, ಹೆಚ್ಚಾಗಿ ತುಂಬಾನೇ ಸವಾಲಿನದ್ದಾಗಿರುತ್ತವೆ, ಇದನ್ನು ಒಬ್ಬ ವಿದ್ಯಾರ್ಥಿಯು ಕೆಲಸ ಮಾಡುವ ವೃತ್ತಿಪರನಾಗಿ ಪರಿವರ್ತನೆಗೊಳ್ಳುವ ಮೊದಲ ಹೆಜ್ಜೆಯಾಗಿ ನೋಡಲಾಗುತ್ತದೆ. ಒಬ್ಬ ವ್ಯಕ್ತಿಯು ಸರಿಯಾದ ಮನಸ್ಥಿತಿಯನ್ನು ಹೊಂದುವ ಮೂಲಕ ಮತ್ತು ಸರಿಯಾಗಿ ಸಿದ್ಧರಾಗುವ ಮೂಲಕ ಇಂತಹ ಕ್ಯಾಂಪಸ್ ಪ್ಲೇಸ್‌ಮೆಂಟ್ ಗಳಲ್ಲಿಯೇ ಒಳ್ಳೆಯ ಕಂಪನಿಯಿಂದ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬಹುದು. ಆದ್ದರಿಂದ, ಮೇಲೆ ತಿಳಿಸಿದ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಸಮೀಪಿಸುತ್ತಿರುವ ಕ್ಯಾಂಪಸ್ ಪ್ಲೇಸ್‌ಮೆಂಟ್ ಗಳಿಗೆ ನೀವು ಸಿದ್ಧರಾಗಿದ್ದೀರಿ ಎಂದು ಮೊದಲೇ ಖಚಿತಪಡಿಸಿಕೊಳ್ಳಿ.

  Published by:Kavya V
  First published: