BIS SSA Admit Card: ಬಿಐಎಸ್​ ನೇಮಕಾತಿಗೆ ಸೆ. 21ರಂದು ದೇಶಾದ್ಯಂತ ಪರೀಕ್ಷೆ; ಪ್ರವೇಶ ಪತ್ರ ಬಿಡುಗಡೆ

ಲಿಖಿತ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಬಿಐಎಸ್​ನ ಅಧಿಕೃತ ವೆಬ್‌ಸೈಟ್ - bis.gov.in ಅಡ್ಮಿಟ್​ ಕಾರ್ಡ್​ ಪರಿಶೀಲಿಸಿ, ಪಡೆಯಬಹುದಾಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (Bureau of Indian Standard- BIS) ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (ಎಸ್‌ಎಸ್‌ಎ) ಮತ್ತು ಪರ್ಸನಲ್ ಅಸಿಸ್ಟೆಂಟ್ ಹುದ್ದೆಗೆ ಇತ್ತೀಚೆಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳ ಲಿಖಿತ ಪರೀಕ್ಷೆಯ ನವೀಕೃತ ವೇಳಾಪಟ್ಟಿ ಮತ್ತು ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡಿದೆ. ಈಗಾಗಲೇ ಈ ಹುದ್ದೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಇದೇ ಸೆಪ್ಟೆಂಬರ್ 21 ರಂದು ನಡೆಯುವ ಹಿರಿಯ ಸೆಕ್ರೆಟರಿಯೇಟ್ ಸಹಾಯಕ (SSA) ಮತ್ತು ವೈಯಕ್ತಿಕ ಸಹಾಯಕ ಲಿಖಿತ ಪರೀಕ್ಷೆಗೆ ಹಾಜರಾಗಬಹುದಾಗಿದೆ.

    ಲಿಖಿತ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಬಿಐಎಸ್​ನ ಅಧಿಕೃತ ವೆಬ್‌ಸೈಟ್ - bis.gov.in ಅಡ್ಮಿಟ್​ ಕಾರ್ಡ್​ ಪರಿಶೀಲಿಸಿ, ಪಡೆಯಬಹುದಾಗಿದೆ.

    ದೇಶಾದ್ಯಂತ ನಡೆಯಲಿದೆ ಪರೀಕ್ಷೆ
    ಪರೀಕ್ಷೆ ಕುರಿತು ಮಾಹಿತಿ ಪ್ರಕಟಿಸಿರುವ ಬ್ಯೂರೋ ಆಫ್​ ಇಂಡಿಯನ್​ ಸ್ಟ್ಯಾಂಡರ್ಡ್ಸ್​​ ಹಿರಿಯ ಸೆಕ್ರೆಟರಿಯೇಟ್ ಸಹಾಯಕ (SSA) ಮತ್ತು ವೈಯಕ್ತಿಕ ಸಹಾಯಕ ಹುದ್ದೆಗೆ ದೇಶಾದ್ಯಂತ ಏಕ ಕಾಲದಲ್ಲಿ ವಿವಿಧ ಕೇಂದ್ರದಲ್ಲಿ ಸೆಪ್ಟೆಂಬರ್​ 21 ರಂದು ಲಿಖಿತ ಪರೀಕ್ಷೆ ನಡೆಸುವುದಾಗಿ ತಿಳಿಸಿದೆ.

    ಲಿಖಿತ ಪರೀಕ್ಷೆಯಲ್ಲಿ ಹಾಜರಾಗುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಲಿಂಕ್‌ಗೆ ತಮ್ಮ ಲಾಗಿನ್ ಆಗುವ ಮೂಲಕ ಅಧಿಕೃತ ವೆಬ್‌ಸೈಟ್‌ನಿಂದ ತಮ್ಮ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಅಡ್ಮಿಟ್​ ಕಾರ್ಡ್​ ಇಲ್ಲದೇ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ.

    ಇದನ್ನು ಓದಿ: ಡಿಆರ್​ಡಿಒದಲ್ಲಿ 1901 ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ನೇಮಕಾತಿ ಸಂಪೂರ್ಣ ಮಾಹಿತಿ

    ಹೇರಿರಲಿದೆ ಪರೀಕ್ಷೆಯ ಸ್ವರೂಪ

    ಈ ಹುದ್ದೆಗೆ ಲಿಖಿತ ಪರೀಕ್ಷೆ 150 ಅಂಕಗಳಿಗೆ ಇದ್ದು, ನಾಲ್ಕು ವಿಷಯದ ಪರೀಕ್ಷೆಗಳು ಇವೆ. ಅಭ್ಯರ್ಥಿಗಳ ಸಾಮರ್ಥ್ಯ ಪರೀಕ್ಷೆಗೆ ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್ ಪ್ರಶ್ನೆಗಳು ಇರಲಿದ್ದು, ಇದು 50 ಅಂಕಗಳಿಗೆ ಇರಲಿದೆ. ಇನ್ನು ದೇಶ, ರಾಜ್ಯ, ವಿದೇಶದ ಸೇರಿದಂತೆ ಇನ್ನಿತರ ಜನ ಸಾಮಾನ್ಯ ಪ್ರಶ್ನೆಗಳು 25 ಅಂಕಗಳಿಗೆ ಇರಲಿದೆ. ಅಭ್ಯರ್ಥಿಗಳ ತಾರ್ಕಿಕ ಗುಣಮಟ್ಟದ ಪರೀಕ್ಷೆ ನಡೆಸಲು 25 ಅಂಕಗಳಿಗೆ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಇರಲಿದೆ. ಜೊತೆಗೆ ಇಂಗ್ಲಿಷ್ ಭಾಷೆ ಪತ್ರಿಕೆ 50 ಪ್ರಶ್ನೆಗಳು ಇರಲಿದೆ.

    ಈ ಪರೀಕ್ಷೆಗಳು ಬಹು ಆಯ್ಕೆ ಆಗಿದ್ದು, ಲಿಖಿತ ಪರೀಕ್ಷೆಗೆ ಒಟ್ಟು 150 ಗರಿಷ್ಠ ಅಂಕಗಳಿರುತ್ತವೆ. ಅಭ್ಯರ್ಥಿಗಳು ಪರೀಕ್ಷೆ ಬರೆಯಲು 120 ನಿಮಿಷಗಳನ್ನು ನಿಗದಿಪಡಿಸಲಾಗುತ್ತದೆ.

    ಇದನ್ನು ಓದಿ: ಬಿಇಎಲ್​ನಲ್ಲಿದೆ ಪ್ರಾಜೆಕ್ಟ್​ ಇಂಜಿನಿಯರ್​ ಹುದ್ದೆಗೆ ಅರ್ಜಿ ಸಲ್ಲಿಕೆಗೆ ನಾಳೆಯೇ ಕಡೆಯ ದಿನ

    ಪ್ರವೇಶ ಪತ್ರ ಪಡೆಯಲು ಈ ಕ್ರಮ ಅನುಸರಿಸಿ
    ಇನ್ನು ಅಭ್ಯರ್ಥಿಗಳು ಅಧಿಕೃತ ವೆಬ್​​ಸೈಟ್​ನಿಂದ ಪರೀಕ್ಷೆಯ ಅಡ್ಮಿಟ್​ ಕಾರ್ಡ್​ ಪಡೆಯಲು ಈ ಕ್ರಮ ಅನುಸರಿಸುವು ಕಡ್ಡಾಯವಾಗಿದೆ.

    -ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ -bis.gov.in ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ

    - ಮುಖಪುಟದಲ್ಲಿ ಲಭ್ಯವಿರುವ ನೇಮಕಾತಿ/ತಾಂತ್ರಿಕ ಸಹಾಯಕ ವಿಭಾಗಕ್ಕೆ ಹೋಗಿ.
    ಲಿಂಕ್ ಅನ್ನು ಕ್ಲಿಕ್ ಮಾಡಿ- ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (ಎಸ್‌ಎಸ್‌ಎ) ಮತ್ತು ಪರ್ಸನಲ್ ಅಸಿಸ್ಟೆಂಟ್ ಹುದ್ದೆಗೆ ಪರೀಕ್ಷೆಯ ಅಧಿಸೂಚನೆಯನ್ನು ಕ್ಲಿಕ್​ ಮಾಡಿ

    - ವಿಂಡೋದಲ್ಲಿ ಒದಗಿಸಲಾದ ಜಾಗದಲ್ಲಿ ನಿಮ್ಮ ಲಾಗಿನ್ ರುಜುವಾತುಗಳನ್ನು ನೀವು ಒದಗಿಸಬೇಕಾಗುತ್ತದೆ.

    - ಬಳಿಕ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ.

    ವಿಶೇಷ ಸೂಚನೆ: 

    ಅಭ್ಯರ್ಥಿಗಳು ಈ  ಲಿಂಕ್​ ಕ್ಲಿಕ್​ ಮಾಡುವ ಮೂಲಕ ಕೂಡ ಪ್ರವೇಶ ಪತ್ರವನ್ನು ಡೌನ್​ಲೋಡ್​ ಮಾಡಬಹುದಾಗಿದೆ
    Published by:Seema R
    First published: