• Home
 • »
 • News
 • »
 • career
 • »
 • Best Jobs for Women: ಇವು ಮಹಿಳೆಯರಿಗೆ ಹೇಳಿ ಮಾಡಿಸಿದ ಉದ್ಯೋಗಗಳು: ಬದುಕೇ ಬದಲಾಗುತ್ತೆ

Best Jobs for Women: ಇವು ಮಹಿಳೆಯರಿಗೆ ಹೇಳಿ ಮಾಡಿಸಿದ ಉದ್ಯೋಗಗಳು: ಬದುಕೇ ಬದಲಾಗುತ್ತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಂಟರ್ನೆಟ್ ನಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಮಹಿಳೆಯರಿಗಾಗಿ ಕೆಲವು ಉದ್ಯೋಗಗಳ ಬಗ್ಗೆ ಮಾಹಿತಿ ನೀಡಲಾಗಿದೆ. ನಿಮ್ಮ ಕನಸಿನ ಉದ್ಯೋಗವನ್ನು ಹಿಡಿಯಲು ನೀವು ಏನು ಓದಬೇಕು ಎಂಬುದರ ಮಾಹಿತಿಯನ್ನು ಸಹ ಇಲ್ಲಿ ನಾವು ಒದಗಿಸಿದ್ದೇವೆ.

 • Share this:

  ಈಗಂತೂ ಮಹಿಳೆಯರು (Women) ಗಂಡಸರಿಗೆ ಸಮಾನ ಎಂಬುವಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಲಸ (Job) ಮಾಡುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಯಾವ ಕೆಲಸ (Career) ಮಾಡಿದರೆ ನಮಗೆ ಒಳ್ಳೆಯದು ಅಂತ ನೀವು ಗೊಂದಲದಲ್ಲಿದ್ದರೆ, ಇಲ್ಲಿದೆ ನೋಡಿ ಮಹಿಳೆಯರಿಗಂತೆ ಹೇಳಿ ಮಾಡಿಸಿದ ಹಾಗಿರುವ ಕೆಲವು ಉದ್ಯೋಗಗಳು. ವೃತ್ತಿಜೀವನದ (Professional Life) ಆಯ್ಕೆಯನ್ನು ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ಮಹಿಳೆಯರಿಗೆ ಮನೆಯಲ್ಲಿ ಎಲ್ಲಾ ಕೆಲಸ ಮಾಡಿಕೊಂಡು ಮಕ್ಕಳಿಗೆ ಶಾಲೆಗೆ ಹೋಗಲು ತಯಾರು ಮಾಡಿ, ನಂತರ ಆಫೀಸಿಗೆ ಬಂದು ಕೆಲಸ ಮಾಡುವುದು ಎಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ.


  ಹಾಗಾಗಿ ಕೆಲ ಮಹಿಳೆಯರು ಅತ್ಯುತ್ತಮ ಉದ್ಯೋಗಗಳು ಆಗಿದ್ದು, ಆರಾಮದಾಯಕವಾಗಿರುವ ಉದ್ಯೋಗಗಳನ್ನು ಹುಡುಕುತ್ತಿರುತ್ತಾರೆ ಅಂತ ಹೇಳಬಹುದು. ಮಹಿಳೆಯರಿಗೆ ಉತ್ತಮ ವೃತ್ತಿಗಳೆಂದರೆ ಸಾಫ್ಟ್‌ವೇರ್ ಡೆವಲಪರ್, ಎಂಜಿನಿಯರಿಂಗ್, ಬಾಹ್ಯಾಕಾಶ ಸಂಶೋಧನೆ, ವೈದ್ಯಕೀಯ ಅಥವಾ ಬೋಧನೆಯಲ್ಲಿ ಮಹಿಳೆಯರು ಉದ್ಯೋಗಗಳನ್ನು ಅವರ ಓದಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.


  ಇಂಟರ್ನೆಟ್ ನಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಮಹಿಳೆಯರಿಗಾಗಿ ಕೆಲವು ಉದ್ಯೋಗಗಳ ಬಗ್ಗೆ ಮಾಹಿತಿ ನೀಡಲಾಗಿದೆ. ನಿಮ್ಮ ಕನಸಿನ ಉದ್ಯೋಗವನ್ನು ಹಿಡಿಯಲು ನೀವು ಏನು ಓದಬೇಕು ಎಂಬುದರ ಮಾಹಿತಿಯನ್ನು ಸಹ ಇಲ್ಲಿ ನಾವು ಒದಗಿಸಿದ್ದೇವೆ.


  1. ಸಾಫ್ಟ್ವೇರ್ ಡೆವಲಪರ್: ಇದು ಕಂಪ್ಯೂಟರ್ ಸೈನ್ಸ್ ಪದವಿ ಪಡೆದ ಮಹಿಳೆಯರಿಗೆ ಅತ್ಯಂತ ಜನಪ್ರಿಯ ಉದ್ಯೋಗಗಳಲ್ಲಿ ಒಂದಾಗಿದೆ. ಕಾರಣಗಳು ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ, ಫ್ಲೆಕ್ಸಿಬಲ್ ಆಗಿರುವ ಕೆಲಸದ ಸಮಯ ಎಲ್ಲವೂ ಅವರಿಗೆ ಸಹಾಯಕವಾಗುತ್ತವೆ. ವಿವಿಧ ಪ್ರತಿಷ್ಠಿತ ಸಂಸ್ಥೆಗಳು ಲಿಂಗ ಅಸಮಾನತೆಯನ್ನು ಸಮತೋಲನಗೊಳಿಸಲು ಮಾತ್ರವಲ್ಲದೆ ಮಹಿಳೆಯರು ವಿಭಿನ್ನ ದೃಷ್ಟಿಕೋನಗಳೊಂದಿಗೆ ಬರುವುದರಿಂದ ಸಾಫ್ಟ್‌ವೇರ್ ಅಭಿವೃದ್ಧಿ ಪಾತ್ರಗಳಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳಲು ಆದ್ಯತೆ ನೀಡುತ್ತಿವೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಲು ವೃತ್ತಿಪರ ಬಿಟೆಕ್ ಅಥವಾ ಉನ್ನತ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಬಿ.ಎಸ್ಸಿ ಪದವಿ ಪಡೆದಿರಬೇಕು.


  US Company Firing Employee Who Refused To Turn On Webcam during work from home stg asp
  ಸಾಂಕೇತಿಕ ಚಿತ್ರ


  2. ಮಾನವ ಸಂಪನ್ಮೂಲ ಅಧಿಕಾರಿ(ಎಚ್ ಆರ್): ಜನರ ನಿರ್ವಹಣೆಯಲ್ಲಿ ಮಹಿಳೆಯರು ಉತ್ತಮರಾಗಿರುತ್ತಾರೆ ಮತ್ತು ಈ ವೃತ್ತಿಯು ಸಂಭಾವ್ಯ ಮಹಿಳಾ ಅಭ್ಯರ್ಥಿಗಳಿಗೆ ಸಾಕಷ್ಟು ಅವಕಾಶವನ್ನು ಹೊಂದಿದೆ. ಈ ವೃತ್ತಿಯು ಮಹಿಳೆಗೆ ವಿವಿಧ ಪಾತ್ರಗಳಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ, ಇದು ವೇತನ ನಿರ್ವಹಣೆ, ಉದ್ಯೋಗಿಯ ನೇಮಕಾತಿಯಂತಹ ಕೆಲಸಗಳನ್ನು ಒಳಗೊಂಡಿರುತ್ತದೆ. ಎಚ್ ಆರ್ ಅಧಿಕಾರಿಯಾಗಿ ನಿಮ್ಮ ವೃತ್ತಿಪರ ಪ್ರಯಾಣವನ್ನು ಪ್ರಾರಂಭಿಸಲು, ಎಚ್ ಆರ್ ಮ್ಯಾನೇಜ್ಮೆಂಟ್ ನಲ್ಲಿ ಪದವಿಯನ್ನು ತೆಗೆದುಕೊಳ್ಳಬೇಕು.


  3. ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್: ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸಬೇಕೆಂದು ತಿಳಿದಿರುವ ಮಹಿಳೆಯರಿಗೆ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಉತ್ತಮ ಉದ್ಯೋಗಾವಕಾಶವಾಗಿದೆ. ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಕೆಲಸದ ಪ್ರಮುಖ ಪ್ರಯೋಜನವೆಂದರೆ ಅನೇಕ ಸಂಸ್ಥೆಗಳು ನೀವು ಕಚೇರಿಯಲ್ಲಿ ಭೌತಿಕವಾಗಿ ಹಾಜರಿರುವ ಅಗತ್ಯವಿಲ್ಲ. ಅಂತಹ ರೀತಿಯ ಉದ್ಯೋಗಗಳು ಸಾಮಾನ್ಯವಾಗಿ ಮಹಿಳೆಯರಿಗೆ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ನೀಡುತ್ತದೆ. ಸಾಮಾಜಿಕ ಮಾಧ್ಯಮ ಸಮಾಲೋಚನೆಯು ನಿರ್ದಿಷ್ಟ ಕೌಶಲ್ಯಗಳನ್ನು ಬಯಸುವ ಒಂದು ವೃತ್ತಿಯಾಗಿದೆ ಮತ್ತು ಅಂತಹ ಕೌಶಲ್ಯಗಳು ಮತ್ತು ಜ್ಞಾನವನ್ನು ಪಡೆಯಲು ಡಿಜಿಟಲ್ ಮಾರ್ಕೆಟಿಂಗ್, ಮಾರ್ಕೆಟಿಂಗ್ ನಲ್ಲಿ ಎಂಬಿಎ ಕೋರ್ಸ್ ಗೆ ಆದ್ಯತೆ ನೀಡಬೇಕು.


  government impose rules on social media
  ಸಾಂದರ್ಭಿಕ ಚಿತ್ರ


  4. ಫೈನಾನ್ಷಿಯಲ್ ಅನಾಲಿಸ್ಟ್/ ಬ್ಯಾಂಕರ್/ ಚಾರ್ಟೆಡ್ ಅಕೌಂಟೆಂಟ್: ಫೈನಾನ್ಸ್ ನಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶಗಳಿವೆ. ಈ ವಲಯದ ವಿವಿಧ ಕಂಪನಿಗಳು ಮಹಿಳೆಯರನ್ನು ಉನ್ನತ ಸ್ಥಾನದಲ್ಲಿ ಹೊಂದಿವೆ, ಇದು ಈ ಕಂಪನಿಗಳು ಮಹಿಳಾ ಸ್ನೇಹಿ ನೀತಿಗಳನ್ನು ಹೊಂದಿವೆ ಎಂದು ಖಚಿತಪಡಿಸುತ್ತದೆ. ಇವು ಹೆರಿಗೆ ರಜೆಗಳು, ಮಕ್ಕಳ ಆರೈಕೆ ಸೌಲಭ್ಯಗಳು, ಅಥವಾ ಫ್ಲೆಕ್ಸಿ ಕೆಲಸದ ಸಮಯವಾಗಿರಬಹುದು. ಫೈನಾನ್ಸ್ ನಲ್ಲಿ ವೃತ್ತಿಜೀವನವನ್ನು ಮಾಡಲು ಬಿ.ಕಾಂ, ಎಂ. ಕಾಂ, ಸಿಎ ಅಥವಾ ಫೈನಾನ್ಸ್ ನಲ್ಲಿ ಎಂಬಿಎ ಪದವಿ ಪಡೆದಿರಬೇಕು.


  5. ಡೇಟಾ ಎಂಟ್ರಿ ಉದ್ಯೋಗಗಳು: ಗೃಹಿಣಿಯರು, ತಾಯಂದಿರು ಮತ್ತು ವಿದ್ಯಾರ್ಥಿಗಳಿಗೆ ಡೇಟಾ ಎಂಟ್ರಿ ಉದ್ಯೋಗಗಳು ಅತ್ಯಂತ ಸಾಮಾನ್ಯ ಉದ್ಯೋಗಗಳಾಗಿವೆ. ಈ ಉದ್ಯೋಗಗಳು ಮಹಿಳೆಯರಿಗೆ ಮನೆಯಿಂದ ಕೆಲಸ ಮಾಡಲು ನಮ್ಯತೆಯನ್ನು ನೀಡುತ್ತವೆ. ಡೇಟಾ ಎಂಟ್ರಿ ಉದ್ಯೋಗಗಳನ್ನು ಮೂಲ ಶೈಕ್ಷಣಿಕ ಅರ್ಹತೆಯೊಂದಿಗೆ ಅಂದರೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಉದ್ಯೋಗವನ್ನು ಮಾಡಬಹುದು.


  These companies have given permanent work from home to their employees stg asp
  ಸಾಂಕೇತಿಕ ಚಿತ್ರ


  6. ಅಫಿಲಿಯೇಟ್ ಮಾರ್ಕೆಟರ್: ಈ ವೃತ್ತಿಯು ಅನಿಯಮಿತ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಮಹಿಳೆಯರಿಗೆ ಆನ್ಲೈನ್ ಉದ್ಯೋಗಾವಕಾಶವಾಗಬಹುದು. ವೆಬ್ ಟ್ರಾಫಿಕ್ ಅನ್ನು ಹೇಗೆ ಪಡೆಯುವುದು ಮತ್ತು ಆದಾಯವನ್ನು ಗಳಿಸಲು ಅದನ್ನು ಹೇಗೆ ಪರಿವರ್ತಿಸುವುದು ಎಂಬುದರ ಬಗ್ಗೆ ನೀವು ತಿಳುವಳಿಕೆಯನ್ನು ಹೊಂದಿರಬೇಕು. ಇದು ಪ್ರಮುಖ ಮಾರ್ಕೆಟಿಂಗ್ ಪ್ರೊಫೈಲ್ ಗಳಲ್ಲಿ ಒಂದಾಗಿದೆ, ಆದ್ದರಿಂದ, ಹೆಚ್ಚಿನ ಕಂಪನಿಗಳು ಎಂಬಿಎ (ಮಾರ್ಕೆಟಿಂಗ್) ನಲ್ಲಿ ಪದವಿ ಪಡೆದ ವೃತ್ತಿಪರರನ್ನು ನೇಮಿಸಿಕೊಳ್ಳಲು ಬಯಸುತ್ತವೆ.


  7. ಶಿಕ್ಷಕ/ಉಪನ್ಯಾಸಕರು: ಬೋಧನೆಯು ಮಹಿಳೆಯರಿಗೆ ಅತ್ಯಂತ ಗೌರವಾನ್ವಿತ ಮತ್ತು ಜನಪ್ರಿಯ ಉದ್ಯೋಗಗಳಲ್ಲಿ ಒಂದಾಗಿದೆ. ಹೆಚ್ಚಿನ ಶಾಲೆಗಳು ಮತ್ತು ಕಾಲೇಜುಗಳು ಮಹಿಳಾ ಶಿಕ್ಷಣ ತಜ್ಞರಿಗೆ ಆದ್ಯತೆ ನೀಡುತ್ತವೆ. ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಇತರರಿಗೆ ಸಹಾಯ ಮಾಡಲು ಇಷ್ಟಪಡುವ ಮಹಿಳೆಯರು ಈ ಕೆಲಸವನ್ನು ತೆಗೆದುಕೊಳ್ಳಬಹುದು. ಶಿಕ್ಷಕರಾಗಿ ಕೆಲಸ ಮಾಡಲು ಬಿ.ಎಡ್, ಎಂ.ಎಡ್, ಎಂ.ಫಿಲ್ ಅಥವಾ ಪಿಎಚ್.ಡಿ ಮಾಡಬೇಕು.
  8. ಗಗನಸಖಿ: ಇದು ಮಹಿಳೆಯರಿಗೆ ಮತ್ತೊಂದು ಜನಪ್ರಿಯ ಕನಸಿನ ವೃತ್ತಿಜೀವನವಾಗಿದೆ. ಏರ್ ಹೋಸ್ಟೆಸ್ ಮಹಿಳೆಯರಿಗೆ ಹೆಚ್ಚು ಸಂಬಳ ಪಡೆಯುವ ವೃತ್ತಿಗಳಲ್ಲಿ ಒಂದಾಗಿದೆ. ಅತ್ಯುತ್ತಮ ಸಂವಹನ, ಉಲ್ಲಾಸಭರಿತ ಸ್ವಭಾವ ಮತ್ತು ತೀವ್ರ ಒತ್ತಡದಲ್ಲಿ ಶಾಂತವಾಗಿಡುವ ಸಾಮರ್ಥ್ಯ ಇವುಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳಾಗಿವೆ. ನೀವು ಈ ಕೌಶಲ್ಯಗಳನ್ನು ಹೊಂದಿದ್ದರೆ, ಇದು ನಿಮಗೆ ಸರಿಯಾದ ವೃತ್ತಿಜೀವನದ ಆಯ್ಕೆಯಾಗಬಹುದು. ಈ ಕೆಲಸವನ್ನು ಮಾಡಲು ನೋಂದಾಯಿತ ಗಗನಸಖಿಯ ತರಬೇತಿ ಸಂಸ್ಥೆಯಿಂದ ಮೂಲ ಶಿಕ್ಷಣ ಮತ್ತು ವಾಯುಯಾನ ಡಿಪ್ಲೊಮಾವನ್ನು ಹೊಂದಿರಬೇಕು.

  Published by:Kavya V
  First published: