• Home
  • »
  • News
  • »
  • career
  • »
  • Bengaluru: ಪಾರ್ಟ್​ ಟೈಮ್​ ಉದ್ಯೋಗಿಗಳಿಗೆ ಬಿಗ್​ ಶಾಕ್​!

Bengaluru: ಪಾರ್ಟ್​ ಟೈಮ್​ ಉದ್ಯೋಗಿಗಳಿಗೆ ಬಿಗ್​ ಶಾಕ್​!

ಉಡಾನ್

ಉಡಾನ್

ಬೆಂಗಳೂರಿನಲ್ಲಿ ಪಾರ್ಟ್​ ಟೈಂ ಕೆಲಸ ಮಾಡುವ ಉದ್ಯೋಗಿಗಳಿಗೆ ಖಾಸಗಿ ಕಂಪನಿಯೊಂದು ಆಘಾತಕಾರಿ ಸುದ್ದಿ ತಿಳಿಸಿದೆ. ಆ ಕಂಪನಿಯೇ ಬೆಂಗಳೂರಿನ ಯುನಿಕಾರ್ನ್ ಉಡಾನ್ ಬೀದಿಬದಿಯಲ್ಲಿ ಕೆಲಸ ಮಾಡುವವರು ಅಂದರೆ ಸ್ಟ್ರೀಟ್ ವರ್ಕರ್ ಮತ್ತು ಮಾರಾಟ ಮೇಲ್ವಿಚಾರಕರನ್ನು ವಜಾಗೊಳಿಸುತ್ತಿದೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರಿನಲ್ಲಿ ಪಾರ್ಟ್​ ಟೈಂ (Part Time) ಕೆಲಸ ಮಾಡುವ ಉದ್ಯೋಗಿಗಳಿಗೆ ಖಾಸಗಿ ಕಂಪನಿಯೊಂದು (Company) ಆಘಾತಕಾರಿ ಸುದ್ದಿ ತಿಳಿಸಿದೆ. ಆ ಕಂಪನಿಯೇ ಬೆಂಗಳೂರಿನ ಯುನಿಕಾರ್ನ್ ಉಡಾನ್ ಬೀದಿಬದಿಯಲ್ಲಿ ಕೆಲಸ ಮಾಡುವವರು ಅಂದರೆ ಸ್ಟ್ರೀಟ್ ವರ್ಕರ್ (Street Workers) ಮತ್ತು ಮಾರಾಟ ಮೇಲ್ವಿಚಾರಕರನ್ನು ವಜಾಗೊಳಿಸುತ್ತಿದೆ. ಈ ವಜಾಗೊಳಿಸುವಿಕೆಯ (Layoff) ಪ್ರಕ್ರಿಯೆಯು ಹೆಚ್ಚಾಗಿ ಗುತ್ತಿಗೆ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ. ಉಡಾನ್ ಅನ್ನು ಲಾಭದಾಯಕ (Profit Gaining) ಕಂಪನಿಯನ್ನಾಗಿ ಮಾಡುವತ್ತ ನಾವು ಗಮನಹರಿಸುತ್ತಿದ್ದೇವೆ ಎಂದು ಹೇಳಿದೆ.  


ಈ ಸಂಸ್ಥೆಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅನೇಕ ಪ್ರದೇಶಗಳಲ್ಲಿ ಈ ಉದ್ಯೋಗಗಳು ಹಲವು ಕಡೆ ಅನಗತ್ಯವಾಗಿದೆ. ಈ ವರ್ಷದ ಜೂನ್‌ನಲ್ಲಿ ಸುಮಾರು 200 ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಉಡಾನ್‌ನಲ್ಲಿ ಇದು ಎರಡನೇ ಬಾರಿ ವಜಾಗೊಳಿಸಲಾಗುತ್ತಿದೆ. ಆ ಸಮಯದಲ್ಲಿ ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ತನ್ನ ವ್ಯವಹಾರ ಮಾದರಿಯನ್ನು ಮರುಶೋಧಿಸುತ್ತಿದೆ ಎಂದು ಸ್ಟಾರ್ಟಪ್ ಈ ಮೊದಲು ತಿಳಿಸಿತ್ತು.


ಬೆಂಗಳೂರು ಮೂಲದ ಉಡಾನ್ ಅನ್ನು 2016ರಲ್ಲಿ ಫ್ಲಿಪ್‌ಕಾರ್ಟ್ ಮಾಜಿ ಕಾರ್ಯನಿರ್ವಾಹಕರಾದ ಅಮೋದ್ ಮಾಳವಿಯಾ, ಸುಜೀತ್ ಕುಮಾರ್ ಮತ್ತು ವೈಭವ್ ಗುಪ್ತಾ ಸ್ಥಾಪಿಸಿದ್ದಾರೆ.


ಇದನ್ನೂ ಓದಿ: ಬಹುಬೇಡಿಕೆಯ ವೃತ್ತಿಯಾದ ಮಾರ್ಕೆಟ್ ರಿಸರ್ಚ್​ ಅನಾಲಿಸ್ಟ್​ ಆಗಲು ಇಲ್ಲಿದೆ ಮಾಹಿತಿ


ಕಳೆದ 2020ರ ಏಪ್ರಿಲ್ ತಿಂಗಳಿನಲ್ಲಿ ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ಪ್ರಭಾವದಿಂದಾಗಿ ಉಡಾನ್ ಮಾರಾಟ ಮತ್ತು ವಿತರಣಾ ಕಾರ್ಮಿಕರ ತಂಡದಲ್ಲಿ ಸುಮಾರು 1,000 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಉಡಾನ್ ಪ್ರಸ್ತುತ 3000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.


ಹೊಸ ಮಾದರಿಯ ಕೆಲಸಗಳನ್ನು ಆರಂಭಿಸುತ್ತಿರುವ ಉಡಾನ್ ತಮ್ಮ ಕಂಪನಿಯ ಲಾಭವನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದೆ.  ಉಡಾನ್ ಅನ್ನು ಲಾಭದಾಯಕ ಕಂಪನಿಯನ್ನಾಗಿ ಮಾಡುವತ್ತ ತಮ್ಮ ಗಮನವಿದೆ ಎಂದು ತಿಳಿದುಬಂದಿದೆ.  ಕೆಲವು ವ್ಯವಸ್ಥೆಯಲ್ಲಿ ಕೆಲಸಗಾರರ ಪುನರಾವರ್ತನೆಗಳಾಗಿದೆ ಅಷ್ಟು ಜನರ ಅವಶ್ಯಕತೆ ಇಲ್ಲ ಎಂಬ ನಿರ್ಧಾರಕ್ಕೆ ಬಂದ ಕಂಪನಿ ಕೆಲವರನ್ನು ತೆಗೆದು ಹಾಕಿದೆ. ಜವಾಬ್ದಾರಿಯುತ ಸಂಸ್ಥೆಯಾಗಿ ಪ್ರಭಾವಿತ ಉದ್ಯೋಗಿಗಳಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.


ಇದನ್ನೂ ಓದಿ: ಆಫೀಸ್ ಕಿರಿಕಿರಿ ಎನಿಸುತ್ತಿದೆಯಾ, ಕೆಲಸ ಮಾಡಲು ಮೂಡ್ ಇಲ್ವಾ: ಹೀಗೆ ಮಾಡಿ


ಇಮೇಲ್​ನಲ್ಲಿರುವಮಾಹಿತಿ


ಕಳೆದ ಜೂನ್ 2022ರಲ್ಲಿ ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್‌ನಲ್ಲಿ 2022ರ ಆರಂಭದಲ್ಲಿ ಉಡಾನ್‌ನ ವೆಚ್ಚದಲ್ಲಿ ಸುಮಾರು ಶೇ.40ರಷ್ಟು ಕಡಿಮೆಯಾಗಿದೆ ಎಂದು CEO ವೈಭವ್ ಗುಪ್ತಾ ಹೇಳಿದ ಹೊರತಾಗಿಯೂ ಎರಡನೇ ಸುತ್ತಿನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಅದೇ ಇಮೇಲ್‌ನಲ್ಲಿ ಅವರು ಕಂಪನಿಯು ಜೂನ್ 30ರಂದು ಕೊನೆಗೊಂಡ ಪ್ರಸಕ್ತ ತ್ರೈಮಾಸಿಕದಲ್ಲಿ ಯುನಿಟ್ ಎಕನಾಮಿಕ್ಸ್-ಪಾಸಿಟಿವ್ ಆಗುವ ಹಾದಿಯಲ್ಲಿದೆ ಹೇಳಿದ್ದಾರೆ.


ಒಟ್ಟು 350 ಮಿಲಿಯನ್ ಡಾಲರ್ ಸಂಗ್ರಹಿಸಿದ ಉಡಾನ್
ಒಟ್ಟು 350 ಮಿಲಿಯನ್ ಡಾಲರ್ ಸಂಗ್ರಹಿಸಿದ ಉಡಾನ್ ಕಳೆದ ವಾರವಷ್ಟೇ ತನ್ನ ಅಸ್ತಿತ್ವದಲ್ಲಿರುವ ಹೂಡಿಕೆದಾರರು ಮತ್ತು ಬಾಂಡ್ ಹೋಲ್ಡರ್‌ಗಳಿಂದ ಕನ್ವರ್ಟಿಬಲ್ ನೋಟ್ ಮೂಲಕ 120 ಮಿಲಿಯನ್ ಡಾಲರ್ ಮೌಲ್ಯದ ಹಣವನ್ನು ಪಡೆದುಕೊಂಡಿದೆ.


ಇದು ಲೈಟ್‌ಸ್ಪೀಡ್ ವೆಂಚರ್ ಪಾರ್ಟ್‌ನರ್ಸ್, ಟೆನ್ಸೆಂಟ್, ಡಿಎಸ್‌ಟಿ ಗ್ಲೋಬಲ್, ಜಿಜಿವಿ ಕ್ಯಾಪಿಟಲ್, ಟಾರ್ ಇನ್ವೆಸ್ಟ್‌ಮೆಂಟ್, ಅರೆನಾ ಹೂಡಿಕೆದಾರರು ಮತ್ತು ಎಂ.ಜಿ ಇನ್ವೆಸ್ಟ್‌ಮೆಂಟ್‌ಗಳನ್ನು ಅದರ ಬೆಂಬಲವಾಗಿ ಪರಿಗಣಿಸುತ್ತದೆ. ಈ ಹಿಂದೆ ಸಂಗ್ರಹಿಸಿದ ನಗದು ಮತ್ತು ಸಾಲದ ಮೂಲಕ ಉಡಾನ್  ಪಡೆದ ಒಟ್ಟು ನಿಧಿಯು 350 ಮಿಲಿಯನ್ ಡಾಲರ್ ದಾಟಿದೆ. ಇದರಲ್ಲಿ ಜನವರಿ 2022ರಲ್ಲಿ ಕನ್ವರ್ಟಿಬಲ್ ನೋಟುಗಳ ಮೂಲಕ ಪಡೆದುಕೊಂಡ 200 ಮಿಲಿಯನ್ ಮತ್ತು ಕೊನೆಯ ತ್ರೈಮಾಸಿಕದಲ್ಲಿ ಬಹಿರಂಗಪಡಿಸದ ಹೂಡಿಕೆದಾರರಿಂದ 50 ಮಿಲಿಯನ್ ಡಾಲರ್ ಸಾಲ ಕೂಡ ಸೇರಿಕೊಂಡಿದೆ.

First published: