• Home
  • »
  • News
  • »
  • career
  • »
  • Success Story: ಆಟೋ ಡ್ರೈವರ್ ಪುತ್ರ ಈಗ ಅತ್ಯಂತ ಕಿರಿಯ IAS ಅಧಿಕಾರಿ: ಸಾಧನೆಯ ಕಥೆ ಇಲ್ಲಿದೆ

Success Story: ಆಟೋ ಡ್ರೈವರ್ ಪುತ್ರ ಈಗ ಅತ್ಯಂತ ಕಿರಿಯ IAS ಅಧಿಕಾರಿ: ಸಾಧನೆಯ ಕಥೆ ಇಲ್ಲಿದೆ

ಅನ್ಸಾರ್​ ಶೇಖ್​

ಅನ್ಸಾರ್​ ಶೇಖ್​

ಅನ್ಸಾರ್ ಶೇಖ್ ಮಹಾರಾಷ್ಟ್ರದ ಮರಾಠವಾಡ ಪ್ರದೇಶದವರು. ಅಲ್ಲಿ ಅವರು ಜಲ್ನಾ ಜಿಲ್ಲೆಯ ಬರಪೀಡಿತ ಶೆಲ್ಗಾಂವ್ ಗ್ರಾಮದಲ್ಲಿ ಬೆಳೆದರು. ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕರಾಗಿದ್ದ ಅವರ ತಂದೆ, ಮದ್ಯವ್ಯಸನಿ ಆಗಿದ್ದು, ಕುಟುಂಬಕ್ಕೆ ಆರ್ಥಿಕವಾಗಿ ಯಾವುದೇ ರೀತಿಯ ನೆರವಾಗಿರಲಿಲ್ಲ.

  • Share this:

    ಯುಪಿಎಸ್‌ಸಿ ಪರೀಕ್ಷೆ (UPSC Exam) ಪಾಸು ಮಾಡುವುದೆಂದರೆ ಸುಲಭವಲ್ಲ. ಅದಕ್ಕಾಗಿ ಸಾಕಷ್ಟು ಶ್ರಮ, ತಾಳ್ಮೆಯನ್ನು ವ್ಯಯಿಸಬೇಕಾಗುತ್ತದೆ. ಯುಪಿಎಸ್‌ಸಿ, ಪ್ರಸ್ತುತ ಇರುವ ಪರೀಕ್ಷೆಗಳಲ್ಲಿ ಅತ್ಯಂತ ಸವಾಲಿನ ಪರೀಕ್ಷೆಯಾಗಿದ್ದು, ಅದರಲ್ಲಿ ಯಶಗಳಿಸಲು ಹಲವಾರು ವರ್ಷಗಳ ತಪಸ್ಸು ಬೇಕಾಗುತ್ತದೆ. ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ವಾರ್ಷಿಕವಾಗಿ ನಾಗರಿಕ ಸೇವಾ ಪರೀಕ್ಷೆಯನ್ನು ನಡೆಸುತ್ತದೆ. ಹಲವಾರು ಐಎಎಸ್‌ ಆಕಾಂಕ್ಷಿಗಳು ಈ ಪರೀಕ್ಷೆಯನ್ನು ಶ್ರಮವಹಿಸಿ ಪಾಸು ಮಾಡುತ್ತಾರೆ.


    ಅಂತಹ ಸಾಧಕರಲ್ಲಿ ನಮಗೆ ನೆನಪಿರುವುದು ಟೀನಾ ದಾಬಿ. 22ನೇ ವಯಸ್ಸಿನ ಈ ಆಕಾಂಕ್ಷಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅತ್ಯಂತ ಕಿರಿಯ ಟಾಪರ್ ಆದರು. ಟೀನಾ ದಾಬಿಯಂತೆಯೇ ಚಿಕ್ಕ ವಯಸ್ಸಿನಲ್ಲಿಯೇ ಈ ಪರೀಕ್ಷೆಯನ್ನು ಪಾಸು ಮಾಡಿದ ಅನ್ಸಾರ್ ಶೇಖ್ ಅವರ ಬಗ್ಗೆ ನೀವು ತಿಳಿಯಲೇಬೇಕು. ಪರೀಕ್ಷೆ ಬರೆಯುವ, ತಯಾರಿ ಮಾಡಿಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ಈ ಕಥೆಗಳು ನಿಜಕ್ಕೂ ಸ್ಪೂರ್ತಿಯಾಗುತ್ತವೆ. 2016ರಲ್ಲಿ ಕೇವಲ 21 ವರ್ಷ ವಯಸ್ಸಿನಲ್ಲಿ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾದ ಕಿರಿಯ ಐಎಎಸ್ ಅಧಿಕಾರಿ ಅನ್ಸಾರ್ ಶೇಖ್ ಅವರ ಕಥೆ ಕೂಡ ಹಲವರಿಗೆ ಸ್ಪೂರ್ತಿ ತುಂಬುವುದರಲ್ಲಿ ಸಂದೇಹವೇ ಇಲ್ಲ.


    ಇದನ್ನೂ ಓದಿ: UPSC Interview: ಐಎಎಸ್ ಆಗಲು ಸಂದರ್ಶನದಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕೇ? ರಹಸ್ಯ ಇಲ್ಲಿದೆ


    ಅತ್ಯಂತ ಕಿರಿಯ ಐಎಎಸ್ ಅಧಿಕಾರಿ


    ಅನ್ಸಾರ್‌ ಶೇಖ್‌ ಪರೀಕ್ಷೆಯಲ್ಲಿ 275 ರಲ್ಲಿ 199 ಅಂಕಗಳನ್ನು ಗಳಿಸಿ, ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ 2016 ಅನ್ನು ತೇರ್ಗಡೆಗೊಳಿಸಿದರು. ಪ್ರಸ್ತುತ ಪಶ್ಚಿಮ ಬಂಗಾಳ ಕೇಡರ್‌ನಲ್ಲಿ ಐಎಎಸ್‌ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ಕಷ್ಟಗಳ ನಡುವೆಯೂ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ತೇರ್ಗಡೆಯಾದ ಅವರ ಪ್ರಯಾಣ ನಿಜಕ್ಕೂ ಶ್ಲಾಘನೀಯ.


    ಆಟೋ ಚಾಲಕನ ಮಗನ ಸಾಧನೆ


    ಅನ್ಸಾರ್ ಶೇಖ್ ಮಹಾರಾಷ್ಟ್ರದ ಮರಾಠವಾಡ ಪ್ರದೇಶದವರು. ಅಲ್ಲಿ ಅವರು ಜಲ್ನಾ ಜಿಲ್ಲೆಯ ಬರಪೀಡಿತ ಶೆಲ್ಗಾಂವ್ ಗ್ರಾಮದಲ್ಲಿ ಬೆಳೆದರು. ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕರಾಗಿದ್ದ ಅವರ ತಂದೆ, ಮದ್ಯವ್ಯಸನಿ ಆಗಿದ್ದು, ಕುಟುಂಬಕ್ಕೆ ಆರ್ಥಿಕವಾಗಿ ಯಾವುದೇ ರೀತಿಯ ನೆರವಾಗಿರಲಿಲ್ಲ. ಇದು ನೇರವಾಗಿ ಕುಟುಂಬದ ಮೇಲೆ ಪರಿಣಾಮ ಬೀರಿತು.


    ಪೋಷಕರೊಂದಿಗೆ ಅನ್ಸಾರ್ ಶೇಖ್


    “ರಿಕ್ಷಾ ಚಾಲಕರಾಗಿರುವ ನನ್ನ ತಂದೆಗೆ ಮೂವರು ಪತ್ನಿಯರಿದ್ದಾರೆ. ನನ್ನ ತಾಯಿ ಎರಡನೇ ಹೆಂಡತಿ. ನನ್ನ ಕಿರಿಯ ಸಹೋದರ ಶಾಲೆಯಿಂದ ಹೊರಗುಳಿದನು ಮತ್ತು ನನ್ನ ಇಬ್ಬರು ಸಹೋದರಿಯರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಲಾಯಿತು.


    ಹೀಗೆ ಕುಟುಂಬ ಹಲವು ಕಷ್ಟಗಳನ್ನು ಎದುರಿಸುತ್ತಲೇ ಇತ್ತು, ಈ ಸಂದರ್ಭದಲ್ಲಿ ಶಿಕ್ಷಣ ಎನ್ನುವುದು ಗಗನ ಕುಸುಮವಾಗಿತ್ತು. ಆದರೂ ನಾನು ಏನನ್ನಾದರೂ ಸಾಧಿಸಲೇಬೇಕು ಎಂದು ಹಠ ಹಿಡಿದು ಶಿಕ್ಷಣವನ್ನು ಮುಂದುವರಿಸಿದೆ. ಸತತ ಪ್ರಯತ್ನದಿಂದಾಗಿ ನಾನು ಯುಪಿಎಸ್‌ಸಿಯಲ್ಲಿ ತೇರ್ಗಡೆ ಹೊಂದಿದೆ ಮತ್ತು ಐಎಎಸ್ ಅಧಿಕಾರಿಯಾಗುವ ನನ್ನ ಕನಸನ್ನು ನನಸು ಮಾಡಿಕೊಂಡೆ" ಎನ್ನುತ್ತಾರೆ ಈ ಕಿರಿಯ ಐಎಎಸ್‌ ಅಧಿಕಾರಿ.


    ಸಾಧನೆಗೆ ಅಡ್ಡಿಯಾಗದ ಬಡತನ


    ಕಷ್ಟಗಳು ಮತ್ತು ಆರ್ಥಿಕ ಸ್ಥಿತಿಯು ಅನ್ಸಾರ್‌ ಶೇಖ್‌ ಅವರ ಶಿಕ್ಷಣಕ್ಕೆ ಮತ್ತು ತಮ್ಮ ಕನಸಿನ ಕೆಲಸವನ್ನು ಸಾಧಿಸಲು ಎಂದೂ ಅಡ್ಡಿಯಾಗಿಲ್ಲ. ಅನ್ಸಾರ್ ಅವರ ಯಶಸ್ಸಿಗೆ ಅವರ ಸಹೋದರ, ಸಹೋದರಿಯರು, ತಾಯಿ, ಸ್ನೇಹಿತರು ಎಲ್ಲರೂ ಶ್ರಮವಹಿಸಿದ್ದಾರೆ ಎಂದು ಇವರು ನೆನಸಿಕೊಳ್ಳುತ್ತಾರೆ.


    ಅನ್ಸಾರ್ ಅಹ್ಮದ್ ಶೇಖ್, ಮಾತನಾಡಿ, “ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ನನ್ನ ಹೋರಾಟದ ಸಮಯದಲ್ಲಿ, ನನ್ನ ಸ್ನೇಹಿತರು ನನಗೆ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸಾಕಷ್ಟು ಸಹಾಯ ಮಾಡಿದರು ಮತ್ತು ನನ್ನ ಮನೆಯ ಆರ್ಥಿಕ ಪರಿಸ್ಥಿತಿ ನೋಡಿ ನನ್ನ ಕೋಚಿಂಗ್ ಅಕಾಡೆಮಿ ಕೂಡ ಶುಲ್ಕದ ಒಂದು ಭಾಗವನ್ನು ಮನ್ನಾ ಮಾಡಿತ್ತು" ಎನ್ನುತ್ತಾರೆ ಕಿರಿಯ ಐಎಎಸ್‌ ಅಧಿಕಾರಿ.

    Published by:Kavya V
    First published: