• Home
  • »
  • News
  • »
  • career
  • »
  • Success Story: ಇಂಗ್ಲಿಷ್ ಕಲಿಯಲು ಒದ್ದಾಡಿದ್ದ ಹುಡುಗಿ ಈಗ ದೊಡ್ಡ ಸರ್ಕಾರಿ ಅಧಿಕಾರಿ

Success Story: ಇಂಗ್ಲಿಷ್ ಕಲಿಯಲು ಒದ್ದಾಡಿದ್ದ ಹುಡುಗಿ ಈಗ ದೊಡ್ಡ ಸರ್ಕಾರಿ ಅಧಿಕಾರಿ

ಅಪೂರ್ವ ಯಾದವ್

ಅಪೂರ್ವ ಯಾದವ್

ಮೈನ್‌ಪುರಿಯ ಮೊದಲ ಮಹಿಳೆ ಎಸ್‌ಡಿಎಂ ಇಂಗ್ಲಿಷ್ ಭಾಷೆಯ ಮೇಲೆ ತನ್ನ ಹಿಡಿತವನ್ನು ಸಾಧಿಸಲು ಶ್ರಮಿಸಿದ್ದಾರೆ. ಇದಕ್ಕಾಗಿ ಟಿವಿಯಲ್ಲಿ ಇಂಗ್ಲಿಷ್ ಕಾರ್ಯಕ್ರಮಗಳನ್ನು ನೋಡುತ್ತಿದ್ದರಂತೆ. ಇಂಗ್ಲಿಷ್ ಕಾದಂಬರಿಗಳನ್ನು ಸಹ ಓದುತ್ತಿದ್ದರು.

  • News18 Kannada
  • Last Updated :
  • New Delhi, India
  • Share this:

ಸ್ಪರ್ಧಾತ್ಮಕ ಪರೀಕ್ಷೆಯ (Competitive Exam) ಮೊದಲ ಪ್ರಯತ್ನದಲ್ಲಿಯೇ ಎಲ್ಲರೂ ಯಶಸ್ವಿಯಾಗುವುದಿಲ್ಲ. ಕೆಲವರು ತಮ್ಮ ಕನಸುಗಳನ್ನು ನನಸಾಗಿಸಲು ಕಷ್ಟಪಡಬೇಕಾಗುತ್ತದೆ. ಉತ್ತರ ಪ್ರದೇಶದ ಸಣ್ಣ ಪಟ್ಟಣವಾದ ಮೈನ್‌ಪುರಿ ನಿವಾಸಿ ಅಪೂರ್ವ ಯಾದವ್ (Apoorva Yadav) ಮೂರು ಬಾರಿ ಯುಪಿಸಿಎಸ್ ಪರೀಕ್ಷೆಯಲ್ಲಿ (UPSC Exam) ವಿಫಲರಾಗಿದ್ದರು. ಆದರೆ ಛಲ ಬಿಡದೆ ಕೊನೆಗೆ ನಾಲ್ಕನೇ ಪ್ರಯತ್ನದಲ್ಲಿ ಎಸ್ ಡಿಎಂ ಆದರು. ಅಪೂರ್ವ ಯಾದವ್ ತನ್ನ ಶಾಲಾ ಶಿಕ್ಷಣವನ್ನು ಹಿಂದಿ ಮಾಧ್ಯಮದ ಶಾಲೆಯಲ್ಲಿ ಮಾಡಿದ್ದಾರೆ. ಆದರೆ, ಇಂಜಿನಿಯರಿಂಗ್ ಪದವಿ ಪಡೆಯಲು ಆಕೆಗೆ ಇಂಗ್ಲಿಷ್ ಅರ್ಥವಾಗುವುದು ಕೂಡ ಅಗತ್ಯವಾಗಿತ್ತು.


ಸರಿಯಾಗಿ ಇಂಗ್ಲಿಷ್​ ಬರುತ್ತಿರಲಿಲ್ಲ


ಮೈನ್‌ಪುರಿಯ ಮೊದಲ ಮಹಿಳೆ ಎಸ್‌ಡಿಎಂ ಇಂಗ್ಲಿಷ್ ಭಾಷೆಯ ಮೇಲೆ ತನ್ನ ಹಿಡಿತವನ್ನು ಸಾಧಿಸಲು ಶ್ರಮಿಸಿದ್ದಾರೆ. ಇದಕ್ಕಾಗಿ ಟಿವಿಯಲ್ಲಿ ಇಂಗ್ಲಿಷ್ ಕಾರ್ಯಕ್ರಮಗಳನ್ನು ನೋಡುತ್ತಿದ್ದರಂತೆ. ಇಂಗ್ಲಿಷ್ ಕಾದಂಬರಿಗಳನ್ನು ಓದುತ್ತಿದ್ದರು. ಕಷ್ಟಪಟ್ಟು ಇಂಜಿನಿಯರಿಂಗ್ ಮುಗಿಸಿದ್ದಲ್ಲದೆ ಟಿಸಿಎಸ್ ನಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದರು. ಟಿಸಿಎಸ್ ನಂತಹ ಬಹುರಾಷ್ಟ್ರೀಯ ಕಂಪನಿಯಲ್ಲಿ ಮೂರು ವರ್ಷ ಕೆಲಸ ಮಾಡಿದ ಆಕೆಗೆ ಅಮೆರಿಕಕ್ಕೆ ಹೋಗುವ ಅವಕಾಶ ಸಿಕ್ಕಿತು. ಅದರ ಹೊರತಾಗಿಯೂ, ಅಪೂರ್ವ ಅವರು ಯಾವಾಗಲೂ ನಾಗರಿಕ ಸೇವೆಗಳಿಗೆ ಹೋಗಲು ಬಯಸಿದ್ದರು.


4ನೇ ಪ್ರಯತ್ನದಲ್ಲಿ ಯಶಸ್ವಿ


ಅಪೂರ್ವ ಅವರು UPSC ನಾಗರಿಕ ಸೇವಾ ಪರೀಕ್ಷೆ ಮತ್ತು UPPCS ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಮೂರು ಬಾರಿ ವಿಫಲವಾದ ನಂತರ, ಅವರು ಅಂತಿಮವಾಗಿ UPPCS 2016 ರಲ್ಲಿ ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಇದರಲ್ಲಿ 13 ನೇ ಶ್ರೇಯಾಂಕವನ್ನು ಪಡೆಯುವ ಮೂಲಕ, ಅವರು ತಮ್ಮ ನಗರ ಮೈನ್‌ಪುರಿಯ ಮೊದಲ ಮಹಿಳಾ SDM ಆದರು.


ಇದನ್ನೂ ಓದಿ: Success Story: ಡಿಗ್ರಿಯಲ್ಲಿ ಅನೇಕ ಸಬ್ಜೆಕ್ಟ್ ಫೇಲ್ ಆಗಿದ್ದ ಹುಡ್ಗ IAS ಆದ ಸ್ಟೋರಿ ಇಲ್ಲಿದೆ


ಎಸ್‌ಡಿಎಂ ಅಪೂರ್ವ ಯಾದವ್ ಅವರ ಗಂಡನ ಹೆಸರು ವಿಶಾಲ್ ತ್ಯಾಗಿ. ಉತ್ತರಾಖಂಡದ ಶಿವಪುರಿಯಲ್ಲಿ ಇಬ್ಬರೂ ಅದ್ಧೂರಿಯಾಗಿ ವಿವಾಹವಾದರು. ಅಪೂರ್ವ ಸಾಮಾಜಿಕ ಜಾಲತಾಣಗಳಲ್ಲೂ ಬಹಳ ಜನಪ್ರಿಯ. ಅವರು Instagram ನಲ್ಲಿ 11,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅಪೂರ್ವ ಯೂಟ್ಯೂಬ್ ನಲ್ಲಿ ಚಾನೆಲ್ ಕೂಡ ಹೊಂದಿದ್ದಾರೆ. ಇಷ್ಟೇ ಅಲ್ಲ, ಅಪೂರ್ವ ಯಾದವ್ ಮತ್ತು ವಿಶಾಲ್ ತ್ಯಾಗಿ ಇನ್ಸ್ಟಾಗ್ರಾಮ್ನಲ್ಲಿ ದಂಪತಿಗಳ ಖಾತೆಯನ್ನು ಹೊಂದಿದ್ದಾರೆ, ಅವರ ಹೆಸರು ವಿಪೂರ್ವಾ.


ಆಟೋ ಡ್ರೈವರ್ ಪುತ್ರ ಈಗ ಅತ್ಯಂತ ಕಿರಿಯ IAS ಅಧಿಕಾರಿ


ಚಿಕ್ಕ ವಯಸ್ಸಿನಲ್ಲಿಯೇ ಈ ಪರೀಕ್ಷೆಯನ್ನು ಪಾಸು ಮಾಡಿದ ಅನ್ಸಾರ್ ಶೇಖ್ ಅವರ ಬಗ್ಗೆ ನೀವು ತಿಳಿಯಲೇಬೇಕು. ಪರೀಕ್ಷೆ ಬರೆಯುವ, ತಯಾರಿ ಮಾಡಿಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ಈ ಕಥೆಗಳು ನಿಜಕ್ಕೂ ಸ್ಪೂರ್ತಿಯಾಗುತ್ತವೆ. 2016ರಲ್ಲಿ ಕೇವಲ 21 ವರ್ಷ ವಯಸ್ಸಿನಲ್ಲಿ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾದ ಕಿರಿಯ ಐಎಎಸ್ ಅಧಿಕಾರಿ ಅನ್ಸಾರ್ ಶೇಖ್ ಅವರ ಕಥೆ ಕೂಡ ಹಲವರಿಗೆ ಸ್ಪೂರ್ತಿ ತುಂಬುವುದರಲ್ಲಿ ಸಂದೇಹವೇ ಇಲ್ಲ.


ಅನ್ಸಾರ್‌ ಶೇಖ್‌ ಪರೀಕ್ಷೆಯಲ್ಲಿ 275 ರಲ್ಲಿ 199 ಅಂಕಗಳನ್ನು ಗಳಿಸಿ, ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ 2016 ಅನ್ನು ತೇರ್ಗಡೆಗೊಳಿಸಿದರು. ಪ್ರಸ್ತುತ ಪಶ್ಚಿಮ ಬಂಗಾಳ ಕೇಡರ್‌ನಲ್ಲಿ ಐಎಎಸ್‌ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ಕಷ್ಟಗಳ ನಡುವೆಯೂ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ತೇರ್ಗಡೆಯಾದ ಅವರ ಪ್ರಯಾಣ ನಿಜಕ್ಕೂ ಶ್ಲಾಘನೀಯ. ಕಷ್ಟಗಳು ಮತ್ತು ಆರ್ಥಿಕ ಸ್ಥಿತಿಯು ಅನ್ಸಾರ್‌ ಶೇಖ್‌ ಅವರ ಶಿಕ್ಷಣಕ್ಕೆ ಮತ್ತು ತಮ್ಮ ಕನಸಿನ ಕೆಲಸವನ್ನು ಸಾಧಿಸಲು ಎಂದೂ ಅಡ್ಡಿಯಾಗಿಲ್ಲ. ಅನ್ಸಾರ್ ಅವರ ಯಶಸ್ಸಿಗೆ ಅವರ ಸಹೋದರ, ಸಹೋದರಿಯರು, ತಾಯಿ, ಸ್ನೇಹಿತರು ಎಲ್ಲರೂ ಶ್ರಮವಹಿಸಿದ್ದಾರೆ ಎಂದು ಇವರು ನೆನಸಿಕೊಳ್ಳುತ್ತಾರೆ.

Published by:Kavya V
First published: