ಭಾರತ ಸರ್ಕಾರದ (Central Govt) ಕೇಂದ್ರ ಆಯುಷ್ ಸಚಿವಾಲಯದ (Central Ayush Ministry) ಬಗ್ಗೆ ಬಹುತೇಕ ಎಲ್ಲರಿಗೂ ಗೊತೇ ಇದೆ. ಪರ್ಯಾಯ ಔಷಧದ ಪ್ರಗತಿಗೆ ನಿರ್ದಿಷ್ಟವಾಗಿ ಮೀಸಲಾದ ಸಚಿವಾಲಯವನ್ನು ಹೊಂದಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಭಾರತ ಸರ್ಕಾರದ ಕೇಂದ್ರ ಆಯುಷ್ ಸಚಿವಾಲಯವು ದೇಶದಲ್ಲಿ ಸ್ಥಳೀಯ ಪರ್ಯಾಯ ಔಷಧ ವ್ಯವಸ್ಥೆಗಳ ಶಿಕ್ಷಣ, ಸಂಶೋಧನೆ ಮತ್ತು ಪ್ರಸರಣವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ.
AYUSH ಎಂದರೆ ಆಯುರ್ವೇದ, ಯೋಗ ಮತ್ತು ಪ್ರಕೃತಿಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಎಂಬ ಅರ್ಥ ಬರುತ್ತದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಆಯುಷ್ ವ್ಯವಸ್ಥೆಯ ಜನಪ್ರಿಯತೆ ದೇಶದಲ್ಲಿ ಮುನ್ನೆಲೆಗೆ ಬಂದಿತು. ಸಾಂಪ್ರದಾಯಿಕ ಔಷಧಿಗಳು, ಆಯುರ್ವೇದ ಆರೋಗ್ಯ ಸೇವೆಗಳ ಬೇಡಿಕೆಯು ಹೆಚ್ಚುತ್ತಿದ್ದು, ಇದರಲ್ಲಿ ವೃತ್ತಿಜೀವನದ ಆಯ್ಕೆಯೂ ಸಹ ಉತ್ತಮವಾಗಿದ್ದು, ಇಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು ಹಲವಾರು ಪರ್ಯಾಯ ಆಯ್ಕೆಗಳಿವೆ.
ಆಯುಷ್ ವೈದ್ಯರಿಗೆ ವೃತ್ತಿ ಪರ್ಯಾಯಗಳು
ಆಯುಷ್ ವೈದ್ಯರಿಗೆ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಹಲವಾರು ಆಯ್ಕೆಗಳಿದ್ದು, ಅವುಗಳು ಈ ಕೆಳಕಂಡಂತಿವೆ.
* MBBS (ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ) ಪದವೀಧರರಂತೆ, ಆಯುಷ್ ಪದವೀಧರರು ತಮ್ಮದೇ ಆದ ಕ್ಲಿನಿಕ್ ಅಥವಾ ಆಸ್ಪತ್ರೆಗಳಲ್ಲಿ ಸಲಹೆಗಾರರಾಗಿ ಅಥವಾ ಆನ್-ಕಾಲ್ ವೈದ್ಯರಾಗಿ ಸೇವೆ ಸಲ್ಲಿಸಬಹುದು. ಅದರ ಜೊತೆಗೆ, ಆಯುಷ್ ವೈದ್ಯರಾಗಿಯೂ ಸೇವೆ ಸಲ್ಲಿಸಬಹುದು.
* ಫ್ಯಾರಾಮೆಡಿಕಲ್ ಉದ್ಯಮದಲ್ಲಿ ಮತ್ತು ಆಯುರ್ವೇದ ಉತ್ಪನ್ನಗಳನ್ನು ತಯಾರಿಸುವ ಔಷಧೀಯ ಉದ್ಯಮದಲ್ಲಿ ಕೆಲಸ ಮಾಡಬಹುದು.
* ಆಯುಷ್ನ ಪದವೀಧರರು ತಾವು ಆಯ್ಕೆಮಾಡಿದ ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನೆಯನ್ನು ಮುಂದುವರಿಸಬಹುದು. ಈ ಮೂಲಕ ಅವರು ಆಯ್ಕೆ ಮಾಡಿದ ವಿಭಾಗಗಳಲ್ಲಿ, ಸರ್ಕಾರದ ಅಥವಾ ಖಾಸಗಿ ಸಂಶೋಧನೆಗಳಲ್ಲಿ ಕೆಲಸ ಮಾಡಬಹುದು.
* ಆಯುಷ್ ವೈದ್ಯರು ಔಷಧೀಯ ಕಂಪನಿಗಳಿಗೆ ಗುಣಮಟ್ಟದ ವ್ಯವಸ್ಥಾಪಕರಾಗಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಕೆಲಸ ಆರಂಭಿಸಲು ಅರ್ಹರಾಗಿರುತ್ತಾರೆ.
* ಆಯುಷ್ ವೈದ್ಯರು ವಿಶೇಷವಾಗಿ ಸ್ನಾತಕೋತ್ತರ ಪದವಿಯ ನಂತರ ಆಯುಷ್ ವೈದ್ಯಕೀಯ ಅಧಿಕಾರಿ ಹುದ್ದೆಗಳನ್ನು ಪಡೆಯಲು ಯುಪಿಎಸ್ಸಿ ಪರೀಕ್ಷೆಗಳಿಗೆ ಹಾಜರಾಗಬಹುದು.
* ಆರೋಗ್ಯ ನಿರ್ವಾಹಕರಾಗಿ ಕೆಲಸ ಮಾಡಲು ಬಯಸುವ ಆಯುಷ್ ವೈದ್ಯರಿಗೆ ಆಸ್ಪತ್ರೆ ನಿರ್ವಹಣೆಯಲ್ಲಿ ಎಂಬಿಎ ಅತ್ಯುತ್ತಮ ಆಯ್ಕೆಯಾಗಿದೆ.
* ಪ್ರಪಂಚದಾದ್ಯಂತ ಆಯುರ್ವೇದ ಔಷಧಿಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ, ಗಿಡಮೂಲಿಕೆ ಔಷಧಗಳ ಕೃಷಿ ಮತ್ತು ವ್ಯಾಪಾರವು ಇವರಿಗೆ ಆಸಕ್ತಿದಾಯಕ ವೃತ್ತಿಜೀವನದ ಆಯ್ಕೆಗಳಲ್ಲಿ ಒಂದಾಗಿದೆ.
* ಇವರು ಹೋಟೆಲ್, ರೆಸ್ಟೋರೆಂಟ್ನಲ್ಲಿ ಆರೋಗ್ಯ ಮತ್ತು ಕ್ಷೇಮ ತಜ್ಞರಾಗಿ ವೃತ್ತಿ ಜೀವನವನ್ನು ಆಯ್ಕೆ ಮಾಡಬಹುದು.
* ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಕಾರ್ಯಕ್ರಮಗಳ ಅಡಿಯಲ್ಲಿ ವೈದ್ಯಕೀಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಮತ್ತು ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಸೌಲಭ್ಯಗಳಲ್ಲಿ ಇರಿಸಲು ರಾಜ್ಯ ಸರ್ಕಾರಗಳು ಆಯುಷ್ ವೈದ್ಯರನ್ನು ನೇಮಿಸಿಕೊಳ್ಳುತ್ತವೆ.
ಕೆಲವು ಬಲ್ಲ ಮೂಲಗಳು ಮಾಹಿತಿ ಪ್ರಕಾರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs) ಮಾರ್ಚ್ 2022 ರ ಹೊತ್ತಿಗೆ ಸುಮಾರು 7,459 ಆಯುಷ್ ವೈದ್ಯರನ್ನು ನೇಮಿಸಿಕೊಂಡಿದೆ ಎನ್ನಲಾಗಿದೆ.
* ಸ್ನಾತಕೋತ್ತರ ಸಾರ್ವಜನಿಕ ಆರೋಗ್ಯ ಪದವಿಯನ್ನು ಪೂರ್ಣಗೊಳಿಸಿದ ನಂತರ, ಆಯುಷ್ ವೈದ್ಯರು ವಿವಿಧ ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಸಾರ್ವಜನಿಕ ಆರೋಗ್ಯ ವೈದ್ಯರಾಗಿ ಕೆಲಸ ಮಾಡಬಹುದು.
ಪ್ರಸ್ತುತ ರಾಷ್ಟ್ರದಲ್ಲಿರುವ ಆಯುಷ್ ವೈದ್ಯರಿಗೆ ವಿಶೇಷವಾದ ಆನ್ಲೈನ್ ವೈದ್ಯಕೀಯ ಪ್ರಮಾಣೀಕರಣ ಮತ್ತು ತರಬೇತಿ ಕೋರ್ಸ್ಗಳು ಲಭ್ಯವಿದೆ.
ಇದು ವೈದ್ಯರಿಗೆ ತಮ್ಮ ಕೌಶಲ್ಯಗಳನ್ನು ಸುಧಾರಿಸಲು, ಅವರ ವಿಶ್ವಾಸಾರ್ಹತೆಯನ್ನು ಸ್ಥಾಪಿಸಲು ಮತ್ತು PHC ಮತ್ತು ಸಮುದಾಯ ಆರೋಗ್ಯ ಕೇಂದ್ರ (CHC) ವೈದ್ಯರಾಗಿ ನೇಮಕಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ