• Home
 • »
 • News
 • »
 • career
 • »
 • Elon Musk: ವಿಶ್ವಕ್ಕೇ ಶ್ರೀಮಂತನಾದರೂ ನಿದ್ದೆಗೆಟ್ಟು ವಾರಕ್ಕೆ 120 ಗಂಟೆ ಕೆಲಸ ಮಾಡ್ತಾರೆ ಮಸ್ಕ್

Elon Musk: ವಿಶ್ವಕ್ಕೇ ಶ್ರೀಮಂತನಾದರೂ ನಿದ್ದೆಗೆಟ್ಟು ವಾರಕ್ಕೆ 120 ಗಂಟೆ ಕೆಲಸ ಮಾಡ್ತಾರೆ ಮಸ್ಕ್

ಎಲೋನ್‌ ಮಸ್ಕ್‌

ಎಲೋನ್‌ ಮಸ್ಕ್‌

ನವೆಂಬರ್ 4 ರಂದು ನ್ಯೂಯಾರ್ಕ್ ನಲ್ಲಿ ನಡೆದ ವಾರ್ಷಿಕ ರಾನ್ ಬ್ಯಾರನ್ ಸಮ್ಮೇಳನದಲ್ಲಿ ಟ್ವಿಟ್ಟರ್ ಅನ್ನು ಪಡೆದ ನಂತರ,  ಈಗ ವಾರಕ್ಕೆ 120 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಮಸ್ಕ್ ಬಹಿರಂಗಪಡಿಸಿದರು.

 • Trending Desk
 • Last Updated :
 • New Delhi, India
 • Share this:

  ಎಷ್ಟೋ ದೊಡ್ಡ ದೊಡ್ಡ ಉದ್ಯಮಿಗಳಿಗೆ (Businessman) ಒಂದು ಕಂಪನಿಯನ್ನು ಮತ್ತು ಅದರಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನ (Employees) ನಿಭಾಯಿಸುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಅಂತಹದರಲ್ಲಿ ಇಲ್ಲೊಬ್ಬ ಜನಪ್ರಿಯ ಸಿಇಒ (CEO) ಒಂದಲ್ಲ, ಎರಡಲ್ಲ.. ಬರೋಬ್ಬರಿ ಐದು ಕಂಪನಿಗಳನ್ನು ನಿಭಾಯಿಸುತ್ತಾರೆ ನೋಡಿ. ಯಾರಪ್ಪಾ ಅವರು ಅಂತೀರಾ? ಅವರು ಬೇರೆ ಯಾರೂ ಅಲ್ಲ, ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಅಂತ ಹೇಳಬಹುದು.


  ಹೌದು.. ಎಲೋನ್ ಮಸ್ಕ್ ಅವರು ಈಗ ಟ್ವಿಟ್ಟರ್ ಸೇರಿದಂತೆ ಐದು ಕಂಪನಿಗಳನ್ನು ನಿಭಾಯಿಸುತ್ತಿದ್ದಾರೆ.  ಮಸ್ಕ್ ಈಗಾಗಲೇ ಟೆಸ್ಲಾ, ನ್ಯೂರಾಲಿಂಕ್, ಸ್ಪೇಸ್ಎಕ್ಸ್ ಮತ್ತು ಸೌಂದರ್ಯವರ್ಧಕ ಬ್ರ್ಯಾಂಡ್ ‘ದಿ ಬೋರಿಂಗ್’ ಕಂಪನಿಯನ್ನು ನಿರ್ವಹಿಸುತ್ತಿದ್ದರು. ತನ್ನ ಕೈಯಲ್ಲಿ ಈಗ ಐದು ಬ್ರ್ಯಾಂಡ್ ಗಳೊಂದಿಗೆ, ಮಸ್ಕ್ ಈಗ ತುಂಬಾ ಬ್ಯುಸಿ ವ್ಯಕ್ತಿಯಾಗಿದ್ದಾನೆ ಅಂತ ಹೇಳಬಹುದು.


  ನವೆಂಬರ್ 4 ರಂದು ನ್ಯೂಯಾರ್ಕ್ ನಲ್ಲಿ ನಡೆದ ವಾರ್ಷಿಕ ರಾನ್ ಬ್ಯಾರನ್ ಸಮ್ಮೇಳನದಲ್ಲಿ ಟ್ವಿಟ್ಟರ್ ಅನ್ನು ಪಡೆದ ನಂತರ,  ಈಗ ವಾರಕ್ಕೆ 120 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಮಸ್ಕ್ ಬಹಿರಂಗಪಡಿಸಿದರು.


  ಈಗ ವಾರಕ್ಕೆ 120 ಗಂಟೆಗಳ ಕಾಲ ಕೆಲಸ ಮಾಡ್ತಾರಂತೆ ಮಸ್ಕ್


  "ನನ್ನ ಕೆಲಸದ ಹೊರೆಯು ವಾರಕ್ಕೆ ಸುಮಾರು 70 ರಿಂದ 80 ಗಂಟೆಗಳಿಂದ ಬಹುಶಃ 120 ಕ್ಕೆ ಏರಿದೆ ಅಂತ ಅಂದುಕೊಳ್ಳುತ್ತೇನೆ. ಕೆಲಸ ಮುಗಿಸಿ ರಾತ್ರಿ ನಿದ್ರೆ ಮಾಡಿ, ನಂತರ ಬೆಳಿಗ್ಗೆ ಬೇಗನೆ ಎಚ್ಚರಗೊಳ್ಳುತ್ತೇನೆ, ಮತ್ತೆ ಕೆಲಸ ಮಾಡಲು ಕುಳಿತುಕೊಳ್ಳುತ್ತೇನೆ, ಮತ್ತೆ ಮಲಗುತ್ತೇನೆ.. ಹೀಗೆ ವಾರದಲ್ಲಿ ಏಳು ದಿನ ಅದನ್ನೇ ಮಾಡುತ್ತೇನೆ" ಎಂದು ಅವರು ಇತ್ತೀಚಿನ ಒಂದು ಸಂದರ್ಶನದಲ್ಲಿ ಹೇಳಿದರು.


  ಇದನ್ನೂ ಓದಿ: Twitterನಿಂದ Appleವರೆಗೆ ಎಲ್ಲೆಲ್ಲೂ ಉದ್ಯೋಗ ಕಡಿತ: ಹೊಸ ನೇಮಕಾತಿಗಳಿಗೂ ಬ್ರೇಕ್


  ಮಸ್ಕ್ ಸದ್ಯಕ್ಕೆ ತಮ್ಮ ಎಲ್ಲಾ ಸಮಯವನ್ನು ಟ್ವಿಟ್ಟರ್ ಗೆ ಮೀಸಲಿಡುತ್ತಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಟ್ವಿಟ್ಟರ್ ಸರಿಯಾದ ಹಾದಿಯಲ್ಲಿ ಸಾಗಿದರೆ, ಅವರು ತಮ್ಮ ಎಲ್ಲಾ ಗಮನವನ್ನು ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಕಡೆಗೆ ಬದಲಾಯಿಸುತ್ತಾರೆ ಎಂದು ಅವರು ಹೇಳಿದ್ದಾರೆ.


  ಅನೇಕ ತಿರುವುಗಳ ನಂತರ ಮಸ್ಕ್ ಅಂತಿಮವಾಗಿ ಟ್ವಿಟ್ಟರ್ ಅನ್ನು 44 ಬಿಲಿಯನ್ ಡಾಲರ್ ಒಪ್ಪಂದದಲ್ಲಿ ಸ್ವಾಧೀನಪಡಿಸಿಕೊಂಡರು. ಅವರು ತಮ್ಮ ಸ್ವಾಧೀನದ ನಂತರ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಕೆಲವು ತೀವ್ರ ಬದಲಾವಣೆಗಳನ್ನು ಸಹ ಮಾಡಿದರು.


  ಟ್ವಿಟ್ಟರ್ ನ 50 ಪ್ರತಿಶತದಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಮಸ್ಕ್..


  ಸಿಇಒ ಪರಾಗ್ ಅಗರವಾಲ್, ನೀತಿ ಮತ್ತು ಕಾನೂನು ಮುಖ್ಯಸ್ಥ ವಿಜಯಾ ಗಡ್ಡೆ ಮತ್ತು ಮುಖ್ಯ ಹಣಕಾಸು ಅಧಿಕಾರಿ ನೆಲ್ ಸೆಗಲ್ ಅವರನ್ನು ಒಳಗೊಂಡ ಉನ್ನತ ಟ್ವಿಟ್ಟರ್ ನಿರ್ವಹಣೆಯನ್ನು ಮಸ್ಕ್ ತೆಗೆದು ಹಾಕಿದರು.


  ಇದನ್ನೂ ಓದಿ: Success Story: ಆಟೋ ಡ್ರೈವರ್ ಪುತ್ರ ಈಗ ಅತ್ಯಂತ ಕಿರಿಯ IAS ಅಧಿಕಾರಿ: ಸಾಧನೆಯ ಕಥೆ ಇಲ್ಲಿದೆ


  ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ಟ್ವಿಟ್ಟರ್ ನ ಉದ್ಯೋಗಿಗಳ ಸಂಖ್ಯೆ ಸುಮಾರು 50 ಪ್ರತಿಶತದಷ್ಟು ಕಡಿಮೆ ಮಾಡಿದ್ದಾರೆ. ಜನರು ಮೈಕ್ರೋ-ಬ್ಲಾಗಿಂಗ್ ಅಪ್ಲಿಕೇಶನ್ ಅನ್ನು ಹೇಗೆ ಬಳಸುತ್ತಾರೆ ಎಂಬುದರಲ್ಲಿ ಮಸ್ಕ್ ಗಮನಾರ್ಹ ಬದಲಾವಣೆಗಳನ್ನು ಮಾಡಿದ್ದಾರೆ. ತಿಂಗಳಿಗೆ 650 ರೂಪಾಯಿ ಅಥವಾ 8 ಡಾಲರ್ ಪಾವತಿಸಲು ಒಪ್ಪುವ ಪ್ರತಿಯೊಬ್ಬ ಬಳಕೆದಾರನಿಗೆ ‘ಬ್ಲೂ ಟಿಕ್’ ನೀಡಲು ಅವರು ಮುಂದಾಗಿದ್ದಾರೆ.


  ಇನ್ನೂ ಏನೆಲ್ಲಾ ಬದಲಾವಣೆಗಳನ್ನ ತರಲಿದ್ದಾರೆ ಮಸ್ಕ್?


  ಐಒಎಸ್ ಬಳಕೆದಾರರಿಗಾಗಿ ಮಸ್ಕ್ ಅವರು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುಕೆ, ಈ ದೇಶಗಳಲ್ಲಿ ಟ್ವಿಟ್ಟರ್ ಪರಿಶೀಲನಾ ಚಂದಾದಾರಿಕೆಯನ್ನು (ಟ್ವಿಟ್ಟರ್ ವೇರಿಫಿಕೇಶನ್ ಸಬ್ಸ್ಕ್ರಿಪ್ಶನ್) ಪರಿಚಯಿಸಿದ್ದಾರೆ. ಚಂದಾದಾರಿಕೆಯನ್ನು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿಯೇ ಭಾರತದಲ್ಲಿ ಪ್ರಾರಂಭಿಸಲಾಗುವುದು ಎಂದು ಅವರು ದೃಢಪಡಿಸಿದರು. ‘ಬ್ಲ್ಯೂ ಟಿಕ್’ ಪಡೆಯಲು ಭಾರತದ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ.

  Published by:Kavya V
  First published: