• Home
 • »
 • News
 • »
 • career
 • »
 • Career Change: ವೃತ್ತಿಜೀವನದ ಮಧ್ಯೆಯೇ ಕೆಲಸ ಬದಲಾಯಿಸಬೇಕಾ? ಇಲ್ಲಿವೆ 5 ಸಲಹೆಗಳು

Career Change: ವೃತ್ತಿಜೀವನದ ಮಧ್ಯೆಯೇ ಕೆಲಸ ಬದಲಾಯಿಸಬೇಕಾ? ಇಲ್ಲಿವೆ 5 ಸಲಹೆಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೃತ್ತಿಜೀವನದ ಮಧ್ಯೆ ಬದಲಾವಣೆಯನ್ನು ಮಾಡಲು ಬಯಸುತ್ತಾರೆ ಆದರೆ ಅದನ್ನು ಯಾವ ರೀತಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಬಹಳ ಜನರಿಗೆ ಗೊತ್ತಿರುವುದಿಲ್ಲ. ಈ ಸಲಹೆಗಳನ್ನು ಫಾಲೋ ಮಾಡಿ.

 • Share this:

  ಕೆಲವರು ಒಂದೇ ರೀತಿಯ ಕೆಲಸವನ್ನು ತಮ್ಮ ಜೀವನದುದ್ದಕ್ಕೂ ಮಾಡುತ್ತಾ ಹೋಗಿ ನಿವೃತ್ತಿ (Retirement) ಹೊಂದಿದರೆ, ಇನ್ನೂ ಕೆಲವರು 35-40 ವರ್ಷ ವಯಸ್ಸಿಗೆ ತಮ್ಮ ಕೆಲಸದ ಬಗ್ಗೆ ಬೋರ್ ಆಗಿ ಬೇರೆ ರೀತಿಯ ಕೆಲಸವನ್ನು ಹುಡುಕಿಕೊಳ್ಳಲು ಇಷ್ಟ ಪಡುತ್ತಾರೆ. ಎಂದರೆ ಅವರಿಗೆ ಒಂದೇ ರೀತಿಯ ಕೆಲಸ ಮಾಡಿ ಬೋರ್ (Bore) ಆಗಿರುತ್ತದೆ ಮತ್ತು ಕೆಲವೊಮ್ಮೆ ಸಂಪಾದನೆ ಅಷ್ಟಾಗಿ ಆಗುತ್ತಿಲ್ಲ ಅಂತ ಸಹ ತಮ್ಮ ವೃತ್ತಿಯನ್ನು ಬದಲಾಯಿಸಲು (Change Career) ಪ್ರಯತ್ನಿಸುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


  ವೃತ್ತಿಯ ಹುಡುಕಾಟ ಜೀವನದ ಮೊದಲ ಇಪ್ಪತ್ತು ಮೂವತ್ತು ವರ್ಷಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಂದು ಸಮೀಕ್ಷೆಯ ಪ್ರಕಾರ, ವೃತ್ತಿಜೀವನವನ್ನು ಬದಲಾಯಿಸುವವರ ಸರಾಸರಿ ವಯಸ್ಸು 39 ವರ್ಷ ಅಂತ ಹೇಳಲಾಗುತ್ತಿದೆ. ಆಗಾಗ್ಗೆ, ವೃತ್ತಿಪರರು ವೃತ್ತಿಜೀವನದ ಮಧ್ಯೆ ಬದಲಾವಣೆಯನ್ನು ಮಾಡಲು ಬಯಸುತ್ತಾರೆ ಆದರೆ ಅದನ್ನು ಯಾವ ರೀತಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಬಹಳ ಜನರಿಗೆ ಗೊತ್ತಿರುವುದಿಲ್ಲ. ಇದರ ಪರಿಣಾಮವಾಗಿ, ಉದ್ಯೋಗ ಹುಡುಕಾಟದ ಪ್ರಕ್ರಿಯೆಯು ತುಂಬಾ ಕಠಿಣವಾಗಿ ತೋರಬಹುದು. ಅದರಲ್ಲೂ ವಿಶೇಷವಾಗಿ ನೀವು 10 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ್ದರೆ ಮುಗಿದೇ ಹೋಯಿತು.


  ವೃತ್ತಿಜೀವನದ ಮಧ್ಯೆದಲ್ಲಿ ಕೆಲಸ ಬದಲಾಯಿಸಲು ಹೀಗೆ ಮಾಡಿ


  ಆ ಸಮಯದಲ್ಲಿ, ನಿಮ್ಮಲ್ಲಿರುವ ಉದ್ಯೋಗಕ್ಕೆ ಬೇಕಾಗಿರುವ ಕೌಶಲ್ಯಗಳು ಹಳೆಯದಾಗಿರುತ್ತವೆ ಮತ್ತು ನಿಮ್ಮ ಇಡೀ ನೆಟ್ವರ್ಕ್ ನೀವು ಕೆಲಸ ಮಾಡುವ ಜನರನ್ನು ಒಳಗೊಂಡಿದೆ ಎಂದು ನೀವು ಭಾವಿಸುತ್ತಿರಿ. ನಂತರ ನೀವು ನಿಮ್ಮ ರೆಸ್ಯೂಮ್ ಅನ್ನು ಅಪ್ಡೇಟ್ ಮಾಡುತ್ತೀರಿ ಮತ್ತು ಅದಕ್ಕೆ ಸುಂದರವಾಗಿ ಕವರ್ ಲೆಟರ್ ಸಹ ಬರೆಯುತ್ತೀರಿ. ಹೊಸದಾಗಿ ಉದ್ಯೋಗ ಸಂದರ್ಶನಗಳ ಬಗ್ಗೆ ಯೋಚಿಸಲು ಪ್ರಾರಂಭಿಸುವ ಹೊತ್ತಿಗೆ, ಅದು ತುಂಬಾನೇ ತಲೆನೋವು ಅಂತ ಅನ್ನಿಸಬಹುದು.


  ಆದರೆ ಇಲ್ಲೊಂದು ಒಳ್ಳೆಯ ಸುದ್ದಿ ಇದೆ ನೋಡಿ.. ಹೊಸ ವೃತ್ತಿಜೀವನ ಅಥವಾ ಉದ್ಯಮಕ್ಕೆ ಪರಿವರ್ತನೆಗೊಳ್ಳುವುದು ನೀವು ಮೊದಲಿನಿಂದ ಪ್ರಾರಂಭಿಸಬೇಕಾದ ಅಗತ್ಯವಿದೆ ಎಂದು ಅರ್ಥವಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ನಿಮ್ಮ ಅನುಭವ ಮತ್ತು ವರ್ಗಾವಣೆ ಮಾಡಬಹುದಾದ ಕೌಶಲ್ಯಗಳು ನೀವು ಎಂದಿಗೂ ಕನಸು ಕಂಡಿರದ ಸ್ಥಾನಗಳಿಗೆ ನಿಮ್ಮನ್ನು ಕರೆದುಕೊಂಡು ಹೋಗಬಹುದು. ಇದಕ್ಕೆ ಮುಖ್ಯವಾದ ಒಂದು ಕಾರಣವೆಂದರೆ ಸಾಫ್ಟ್ ಸ್ಕಿಲ್ಸ್ ಅಂತೀವಲ್ಲ ಮೃದು ಕೌಶಲ್ಯಗಳು ಹಿಂದೆಂದಿಗಿಂತಲೂ ಹೆಚ್ಚು ಬೇಡಿಕೆಯಲ್ಲಿರುತ್ತವೆ. ಇದರರ್ಥ ನಾಯಕತ್ವ, ಸಮಸ್ಯೆ-ಪರಿಹಾರ ಮತ್ತು ತಂಡದ ಕೆಲಸದಲ್ಲಿ ನೀವು ಅಭಿವೃದ್ಧಿಪಡಿಸಿದ ಸಾಮರ್ಥ್ಯಗಳು ನಿಮಗೆ ಸ್ಪರ್ಧಾತ್ಮಕ ಅನುಭವ ನೀಡಿರುತ್ತವೆ, ಆದ್ದರಿಂದ ನೀವು ನಿಜವಾಗಿಯೂ ಬಯಸುವ ಕೆಲಸವನ್ನು ನೀವು ಪಡೆಯಬಹುದು.


  ಇದನ್ನೂ ಓದಿ: JOBS: ಜಲಸಂಪನ್ಮೂಲ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 62,000


  ನೀವು ಸ್ವಲ್ಪ ಸಮಯದಿಂದ ನಿಮ್ಮ ಮಧ್ಯೆ ವಯಸ್ಸಿನಲ್ಲಿ ಅಥವಾ ವೃತ್ತಿಜೀವನದ ಮಧ್ಯೆದಲ್ಲಿ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ಸ್ವಲ್ಪವೂ ತಡ ಮಾಡಬೇಡಿ. ಸ್ವಯಂ ಅನ್ವೇಷಣೆಯ ಹಾದಿಯಲ್ಲಿ ನಿಮ್ಮನ್ನು ಕರೆದೊಯ್ಯಲು ಐದು ಅಮೂಲ್ಯ ಸಲಹೆಗಳು ಇಲ್ಲಿವೆ ನೋಡಿ.


  1. ಏಕೆ ನೀವು ವೃತ್ತಿಯನ್ನು ಬದಲಾಯಿಸಬೇಕು ಅಂತ ಅರ್ಥಮಾಡಿಕೊಳ್ಳಿ


  ನಿಮ್ಮ ವೃತ್ತಿಜೀವನದ ಬದಲಾವಣೆಯ ಪಯಣದ ಮೊದಲ ಹೆಜ್ಜೆಯೆಂದರೆ ನಿಮ್ಮ ಸದ್ಯದ ವೃತ್ತಿಯನ್ನು ಏಕೆ ಬದಲಾಯಿಸಬೇಕು ಅನ್ನೋದನ್ನು ಅರ್ಥಮಾಡಿಕೊಳ್ಳುವುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ವೃತ್ತಿಜೀವನವನ್ನು ಏಕೆ ಬದಲಾಯಿಸಲು ಬಯಸುತ್ತೀರಿ? ನಿಮ್ಮ ಬಾಸ್ ಅನ್ನು ನೀವು ದ್ವೇಷಿಸುತ್ತೀರುವಿರಾ? ನಿಮ್ಮ ಕೆಲಸದ ರೀತಿ ಇಷ್ಟವಾಗುತ್ತಿಲ್ಲವೇ? ಅಥವಾ ನಿಮಗೆ ಕೆಲಸ ಬೋರ್ ಆಗಿದೆಯೇ? ಇದರಲ್ಲಿ ಯಾವುದು ಸರಿಯಾದ ಕಾರಣ ಅಂತ ಕಂಡುಕೊಳ್ಳಿರಿ. ನೀವು ಯಾವುದೋ ಒಂದು ಸನ್ನಿವೇಶದಿಂದ ಓಡಿ ಹೋಗುವ ಬದಲು ಯಾವುದರ ಕಡೆಗೆ ಓಡುತ್ತಿದ್ದೀರಿ ಎಂಬುದನ್ನು ನೋಡಿಕೊಳ್ಳಿ. ಅಂತಹ ಸಂದರ್ಭದಲ್ಲಿ ನೀವು ನಿಮ್ಮನ್ನೆ ಏಕೆ ಬದಲಾಯಿಸಬೇಕು ಕೆಲಸ ಅಂತ ಪ್ರಶ್ನೆ ಹಾಕಿಕೊಳ್ಳಿರಿ.


  • ನಾನು ನನ್ನ ಕೆಲಸಕ್ಕೆ ಸ್ವಂತ ಬಾಸ್ ಆಗಲು ಬಯಸುತ್ತೇನೆ, ಆದ್ದರಿಂದ ನಾನು ನನ್ನ ವೃತ್ತಿಜೀವನದ ಮೇಲೆ ಹೆಚ್ಚು ನಿಯಂತ್ರಣವನ್ನು ಹೊಂದಬಹುದು ಮತ್ತು ನಾನು ಎಲ್ಲಿ ಮತ್ತು ಯಾವಾಗ ಬೇಕಾದರೂ ಕೆಲಸ ಮಾಡುವ ನಮ್ಯತೆಯನ್ನು ಹೊಂದಬಹುದು.

  • ನಾನು ಚಿಕ್ಕವನಿದ್ದಾಗಿನಿಂದ, ನಾನು ಯಾವಾಗಲೂ ಅಡುಗೆಯ ಬಗ್ಗೆ ಉತ್ಸಾಹವನ್ನು ಹೊಂದಿದ್ದೇನೆ ಮತ್ತು ನನ್ನ ಸ್ವಂತ ರೆಸ್ಟೋರೆಂಟ್ ತೆರೆಯುವ ಕನಸು ಕಂಡಿದ್ದೇನೆ.

  • ನನ್ನ ಅಕೌಂಟಿಂಗ್ ಕೆಲಸವು ನನಗೆ ತೃಪ್ತಿ ನೀಡುತ್ತಿಲ್ಲ. ವಾಸ್ತವವಾಗಿ, ಇದು ನನ್ನ ಜೀವನವನ್ನು ತುಂಬಾನೇ ಬೇಸರವನ್ನಾಗಿಸುತ್ತಿದೆ. ನಾನು ಹೆಚ್ ಆರ್ ಕೆಲಸ ಮಾಡಲು ಬಯಸುತ್ತೇನೆ, ಅಲ್ಲಿ ನಾನು ಹೆಚ್ಚು ವೈಯಕ್ತಿಕ ಸಂವಹನವನ್ನು ಹೊಂದಬಹುದು ಮತ್ತು ಉದ್ಯೋಗಿಯ ಅನುಭವವನ್ನು ಸುಧಾರಿಸಬಹುದು.


  2. ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿರಿ


  ಈಗ ನಿಮ್ಮ ತಲೆಯಲ್ಲಿರುವ ಆ ಧ್ವನಿಯನ್ನು ನಿಭಾಯಿಸುವ ಸಮಯ ಬಂದಿದೆ, ಅದು ಈ ಕೆಳಗಿನ ವಿಷಯಗಳನ್ನು ಹೇಳುತ್ತಿರಬಹುದು ನೋಡಿ:


  • ಜನರು ಏನು ಯೋಚಿಸಲಿದ್ದಾರೆ

  • ವೃತ್ತಿಜೀವನವನ್ನು ಬದಲಾಯಿಸಲು ನಿಮಗೆ ತುಂಬಾ ವಯಸ್ಸಾಗಿದೆ

  • ನೀವು ಮತ್ತೆ ಎಲ್ಲವನ್ನೂ ಮೊದಲಿನಿಂದ ಪ್ರಾರಂಭಿಸಬೇಕಾಗುತ್ತದೆ

  • ನೀವು ತುಂಬಾ ಕಡಿಮೆ ವೇತನಕ್ಕೆ ಕೆಲಸಕ್ಕೆ ಸೇರಬೇಕಾಗುತ್ತದೆ

  • ನಿಮಗೆ ಅಗತ್ಯವಿರುವ ಕೌಶಲ್ಯಗಳನ್ನು ಪಡೆಯಲು ಇದು ನಿಮಗೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ

  • ನಿಮ್ಮ ಪ್ರಸ್ತುತ ವೃತ್ತಿಜೀವನದಲ್ಲಿ ನೀವು ಅನುಭವ ಪಡೆಯಲು ಈಗಾಗಲೇ ಹೆಚ್ಚು ಸಮಯವನ್ನು ಹೂಡಿಕೆ ಮಾಡಿದ್ದೀರಿ


  ಈ ಎಲ್ಲಾ ಕಾರಣಗಳು ಯಾವುದಾದರೂ ಭಯವನ್ನು ಆಧರಿಸಿವೆಯೇ ಅಥವಾ ನೀವು ನಿಜವಾಗಿಯೂ ವೃತ್ತಿಜೀವನದ ಮಧ್ಯೆದ ಬದಲಾವಣೆಗೆ ಬದ್ಧರಾಗಲು ಬಯಸಿದ್ದೀರಾ ಅನ್ನುವುದನ್ನು ಅರ್ಥ ಮಾಡಿಕೊಳ್ಳಿರಿ.


  3. ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆಯನ್ನು ಪಡೆಯಿರಿ ಮತ್ತು ಅನ್ವೇಷಿಸಿ


  ಈಗಾಗಲೇ ನೀವು ನಿಮ್ಮ ವೃತ್ತಿಜೀವನದ ಮಧ್ಯೆದಲ್ಲಿ ಕೆಲಸವನ್ನು ಏಕೆ ಬದಲಾಯಿಸಬೇಕು ಅನ್ನೋದರ ಬಗ್ಗೆ ತಿಳಿದುಕೊಂಡಿದ್ದೀರಿ. ಈಗ ನೀವು ನಿಮ್ಮ ಅಂತಿಮ ಗುರಿಯನ್ನು ಗುರುತಿಸುವ ಸಮಯ ಅಂತ ಹೇಳಬಹುದು. ಈ ಹಂತಕ್ಕೆ ಆತ್ಮಾವಲೋಕನ ಮತ್ತು ವೃತ್ತಿ ಅನ್ವೇಷಣೆ ಎರಡೂ ಅಗತ್ಯವಿದೆ. ಆಂತರಿಕ ದೃಷ್ಟಿಕೋನದಿಂದ, ಈ ಕೆಳಗಿನ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ:


  • ನನ್ನ ಸ್ವಾಭಾವಿಕ ಪ್ರತಿಭೆಗಳು ಯಾವುವು?

  • ಕೆಲಸಗಳಲ್ಲಿ ನಾನು ಯಾವುದರ ಬಗ್ಗೆ ಹೆಚ್ಚು ಭಾವೋದ್ರಿಕ್ತನಾಗಿದ್ದೇನೆ?

  • ಯಾವ ನಿರ್ದಿಷ್ಟ ಜನರ ಗುಂಪಿಗೆ ಸಹಾಯ ಮಾಡಲು ನಾನು ಹೆಚ್ಚು ಇಷ್ಟಪಡುತ್ತೇನೆ?

  • ಆ ಜನರ ಗುಂಪಿಗೆ ನಾನು ಯಾವ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತೇನೆ?

  • ಜಗತ್ತಿಗೆ ನಾನು ಯಾವ ರೀತಿಯ ಕೊಡುಗೆಯನ್ನು ನೀಡಲು ಬಯಸುತ್ತೇನೆ?


  ನಂತರ ನೀವು ಅನುಸರಿಸಲು ಬಯಸುವ ಪಾತ್ರಗಳ ಬಗ್ಗೆ ಯೋಚಿಸಿ ಮತ್ತು ಆ ಉದ್ಯಮಗಳಲ್ಲಿನ ಜನರನ್ನು ತಲುಪಲು ಪ್ರಾರಂಭಿಸಿ. ದೈನಂದಿನ ಕೆಲಸವು ಹೇಗಿರುತ್ತದೆ ಮತ್ತು ಯಾವ ಕೌಶಲ್ಯಗಳು, ಅನುಭವ ಮತ್ತು ಶಿಕ್ಷಣದ ಅಗತ್ಯವಿದೆ ಎಂಬುದನ್ನು ನೇರವಾಗಿ ಕಂಡುಕೊಳ್ಳಿರಿ.


  ವಿಭಿನ್ನ ವೃತ್ತಿಜೀವನಗಳನ್ನು ಅನ್ವೇಷಿಸುವುದು ಇತರ ರೂಪಗಳನ್ನು ತೆಗೆದುಕೊಳ್ಳಬಹುದು, ಅವುಗಳೆಂದರೆ:


  • ಪುಸ್ತಕಗಳನ್ನು ಓದುವುದು

  • ನೆಟ್ವರ್ಕಿಂಗ್ ಈವೆಂಟ್ ಗಳಿಗೆ ಹಾಜರಾಗುವುದು

  • ಪಾಡ್ಕಾಸ್ಟ್ ಗಳನ್ನು ಕೇಳುವುದು ಮತ್ತು ವೆಬಿನಾರ್ ಗಳಿಗೆ ಹಾಜರಾಗುವುದು

  • ಅರೆಕಾಲಿಕ ಉದ್ಯೋಗಗಳು, ಫುಲ್ ಟೈಮ್ ಕೆಲಸಗಳಲ್ಲಿರುವ ಸಮಸ್ಯೆಗಳನ್ನು ಅರಿತುಕೊಳ್ಳುವುದು


  ಈ ಹಂತವು ನಿರ್ಣಾಯಕವಾಗಿದೆ ಏಕೆಂದರೆ ನೀವು ಬಯಸುವ ಕೊನೆಯ ವಿಷಯವೆಂದರೆ ಹೊಸ ವೃತ್ತಿಜೀವನಕ್ಕೆ ಬದಲಾವಣೆ ಹೊಂದುವುದು ಮತ್ತು ನಂತರ ಅದು ನೀವು ಅಂದುಕೊಂಡಂತೆ ಅಲ್ಲ ಎಂದು ಅರಿತುಕೊಳ್ಳುವುದು.


  4. ನಿಮ್ಮಲ್ಲಿರುವ ಕೌಶಲ್ಯಗಳ ಮತ್ತು ಕೆಲಸಕ್ಕೆ ಬೇಕಾದ ಕೌಶಲ್ಯಗಳ ನಡುವಿನ ಅಂತರವನ್ನು ಭರ್ತಿ ಮಾಡಿ


  ನಿಮ್ಮ ಹೊಸ ಕೆಲಸಕ್ಕೆ ಯಾವ ರೀತಿಯ ಕೌಶಲ್ಯಗಳು ಮತ್ತು ಏನೆಲ್ಲಾ ಅಗತ್ಯವಿದೆ ಎಂದು ನೀವು ತಿಳಿದ ನಂತರ, ಆ ಅಂತರವನ್ನು ತುಂಬಿಸಲು ಪ್ರಾರಂಭಿಸಿ. ಇದರರ್ಥ ಆನ್ಲೈನ್ ಕೋರ್ಸ್ ತೆಗೆದುಕೊಳ್ಳುವುದು ಅಥವಾ ಪ್ರಮಾಣಪತ್ರವನ್ನು ಪಡೆಯುವುದು. ದುಡಿಯುವ ವೃತ್ತಿಪರರನ್ನು ಗುರಿಯಾಗಿಸಿಕೊಂಡು ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಪ್ರಸ್ತುತ ಉದ್ಯೋಗದಲ್ಲಿ ಇನ್ನೂ ಕೆಲಸ ಮಾಡುತ್ತಿರುವಾಗ ನೀವು ಇದೆಲ್ಲವನ್ನೂ ಮಾಡಬಹುದು ಎಂಬುದನ್ನು ನೆನಪಿನಲ್ಲಿಡಿ. ಇದಲ್ಲದೆ, ಬ್ಲಾಗ್ ಗಳು, ಪಾಡ್ಕಾಸ್ಟ್ ಗಳು, ವೀಡಿಯೋಗಳು ಮತ್ತು ಇತರ ಆನ್ಲೈನ್ ಸ್ವತ್ತುಗಳಂತಹ ಉಚಿತ ಸಂಪನ್ಮೂಲಗಳ ಲಾಭವನ್ನು ಪಡೆಯಿರಿ. ವೃತ್ತಿಯನ್ನು ಅವಲಂಬಿಸಿ, ಕೆಲಸ ಮಾಡಲು ನಿಮಗೆ ತರಬೇತಿ ನೀಡಲು ಸಿದ್ಧವಿರುವ ಕಂಪನಿಯ ಅವಕಾಶಗಳನ್ನು ಸಹ ನೀವು ನೋಡಬಹುದು.


  5. ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಿ


  ಈ ಹಂತದಲ್ಲಿ, ನಿಮ್ಮ ರೆಸ್ಯೂಮ್ ಅನ್ನು ಅಪ್ಡೇಟ್ ಮಾಡಿಕೊಳ್ಳಿರಿ ಮತ್ತು ನಿಮ್ಮ ಸಂದರ್ಶನ ಕೌಶಲ್ಯಗಳನ್ನು ಹೆಚ್ಚಿಸಲು ನೀವು ಸಿದ್ಧರಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೀವು ಅಂತರ್ಜಾಲದಲ್ಲಿ ನೀಡುವ ಎಲ್ಲಾ ಉಚಿತ ಸಂಪನ್ಮೂಲಗಳ ಮೇಲೆ ಅವಲಂಬಿತರಾಗಲು ಬಯಸಬಹುದು ಅಥವಾ ವೃತ್ತಿಜೀವನದ ತರಬೇತುದಾರನನ್ನು ನೇಮಿಸಿಕೊಳ್ಳುವುದನ್ನು ಸಹ ಪರಿಗಣಿಸಬಹುದು. ಲೈವ್ ವೀಡಿಯೋಗಳನ್ನು ರಚಿಸುವುದು ಅಥವಾ ಜನರ ದೊಡ್ಡ ಗುಂಪಿನ ಮುಂದೆ ಮಾತನಾಡುವಂತಹ ನೀವು ಅಭಿವೃದ್ಧಿಪಡಿಸಬೇಕಾದ ಹೊಸ ಕೌಶಲ್ಯಗಳಿವೆಯೇ? ಯಾವುದೇ ವಿಷಯದಲ್ಲಿ ಉತ್ತಮರಾಗಲು ಉತ್ತಮ ಮಾರ್ಗವೆಂದರೆ ಚೆನ್ನಾಗಿ ಅಭ್ಯಾಸ ಮಾಡುವುದು ಆಗಿದೆ.


  ಆ ನಿರ್ದಿಷ್ಟ ಕೌಶಲ್ಯದಲ್ಲಿ ಉತ್ಕೃಷ್ಟತೆ ಸಾಧಿಸಿದ ಜನರನ್ನು ಹುಡುಕಿ ಮತ್ತು ಅವರನ್ನು ಅನುಕರಿಸಿ. ನೆನಪಿಡಿ, ನೀವು ಅದನ್ನು ಹೆಚ್ಚು ಮಾಡಿದಷ್ಟೂ ಕೆಲಸ ಗಿಟ್ಟಿಸಿಕೊಳ್ಳುವುದು ತುಂಬಾನೇ ಸುಲಭವಾಗುತ್ತದೆ.


  ಇದನ್ನೂ ಓದಿ: NHM Karnataka Recruitment: 1048 ಸಮುದಾಯ ಆರೋಗ್ಯಾಧಿಕಾರಿ ಹುದ್ದೆಗಳು ಖಾಲಿ, ಬಿಎಸ್ಸಿ ನರ್ಸಿಂಗ್ ಆದವರು Apply ಮಾಡಿ


  ವೃತ್ತಿಜೀವನದ ಮಧ್ಯೆದ ಬದಲಾವಣೆಯ ಆಲೋಚನೆಯು ಏಕಕಾಲದಲ್ಲಿ ಕೆಲವರಿಗೆ ರೋಮಾಂಚನಕಾರಿಯಾಗಿ ಮತ್ತು ಇನ್ನೂ ಕೆಲವರಿಗೆ ಭಯಾನಕವಾಗಿ ಅನ್ನಿಸಬಹುದು. ಇದು ಯೋಗ್ಯವಾಗಿದೆಯೇ? ವಾಸ್ತವವಾಗಿ ಸಮೀಕ್ಷೆಯ ಪ್ರಕಾರ 88 ಪ್ರತಿಶತದಷ್ಟು ವೃತ್ತಿಜೀವನವನ್ನು ಬದಲಾಯಿಸುವವರು ತಮ್ಮ ನಡೆಯನ್ನು ತೀರ್ಮಾನ ಮಾಡಿದಾಗಿನಿಂದ ತಾವು ಸಂತೋಷವಾಗಿದ್ದೇವೆ ಎಂದು ಹೇಳುತ್ತಾರೆ. ನಿಮ್ಮ ಜಡತ್ವವು ನೀವು ದ್ವೇಷಿಸುವ ಕೆಲಸದಲ್ಲಿ ನಿಮ್ಮನ್ನು ಶಾಶ್ವತವಾಗಿ ಸಿಲುಕಿಸಲು ಬಿಡಬೇಡಿ.

  Published by:ಪಾವನ ಎಚ್ ಎಸ್
  First published: