• Home
 • »
 • News
 • »
 • career
 • »
 • Working Women: ಹೆರಿಗೆ ರಜೆಯ ಬಳಿಕ ಉದ್ಯೋಗಕ್ಕೆ ಮರಳುವ ತಾಯಂದಿರಿಗೆ 4 ಟಿಪ್ಸ್ ಇಲ್ಲಿದೆ

Working Women: ಹೆರಿಗೆ ರಜೆಯ ಬಳಿಕ ಉದ್ಯೋಗಕ್ಕೆ ಮರಳುವ ತಾಯಂದಿರಿಗೆ 4 ಟಿಪ್ಸ್ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಗುವಿಗೆ ಜನ್ಮ ನೀಡಿದ ನಂತರ ಮತ್ತೆ ಕೆಲಸವನ್ನು ಶುರು ಮಾಡುವುದಿದೆಯಲ್ಲ, ಅದು ಹೊಸ ತಾಯಂದಿರಿಗೆ ದೊಡ್ಡ ಸವಾಲಿನ ಕೆಲಸ ಅಂತಾನೆ ಹೇಳಬಹುದು.

 • Share this:

  ಒಬ್ಬ ಮಹಿಳೆ (Woman) ದಿನ ಬೆಳಗಾದರೆ ತನ್ನ ಮನೆಯಲ್ಲಿ ಒಬ್ಬ ಗೃಹಿಣಿಯಾಗಿ ( Housewife) ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿ, ತನ್ನ ಮಕ್ಕಳನ್ನು ತಯಾರು ಮಾಡಿ ಶಾಲೆಗೆ ಕಳುಹಿಸಿದ ನಂತರ ಆಕೆಯ ಉದ್ಯೋಗದ ಕಡೆಗೆ ಗಮನ ನೀಡುತ್ತಾಳೆ ಅಂತ ಹೇಳಬಹುದು.  ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡುತ್ತಿಲ್ಲ ಎಂದರೆ ಅವರಿಗೆ ಮನೆಯಲ್ಲಿರುವ ಕೆಲಸಗಳ ಮಧ್ಯೆ ಅಲ್ಪ ಸ್ವಲ್ಪ ವಿರಾಮ ದೊರೆಯುತ್ತದೆ. ಆದರೆ ಉದ್ಯೋಗಸ್ಥ ಮಹಿಳೆಯರು (Working Women) ವಾರದ ಆರು ದಿನಗಳು ಕೆಲಸ ಮಾಡಲೇಬೇಕು. ಕೆಲಸದ ಬಳಿಕ ವಿಶ್ರಾಂತಿ ಪಡೆಯೋಣ ಅಂತ ಅಂದು ಕೊಂಡರೂ ಸಮಯ ಸಿಗುವುದಿಲ್ಲ.


  ಅದರಲ್ಲೂ ಈ ಮಗುವಿಗೆ ಜನ್ಮ ನೀಡಿದ ನಂತರ ಮತ್ತೆ ಕೆಲಸವನ್ನು ಶುರು ಮಾಡುವುದಿದೆಯಲ್ಲ, ಅದು ಹೊಸ ತಾಯಂದಿರಿಗೆ ದೊಡ್ಡ ಸವಾಲಿನ ಕೆಲಸ ಅಂತಾನೆ ಹೇಳಬಹುದು. ಏಕೆಂದರೆ ಮಗು ಹುಟ್ಟುವ ಮೊದಲು ಬರೀ ಮನೆ ಕೆಲಸ ಮತ್ತು ಅವರ ಉದ್ಯೋಗವಷ್ಟೆ ಇರುತ್ತದೆ. ಅದೇ ಮಗು ಹುಟ್ಟಿದ ನಂತರ ದಿನದ ಬಹುತೇಕ ಭಾಗ ಆ ಹಸುಗೂಸಿನ ಜೊತೆಯಲ್ಲಿಯೇ ಇರಬೇಕಾಗುತ್ತದೆ. ಇಂತಹ ಸಮಯದಲ್ಲಿ ಹೆರಿಗೆ ರಜೆ ಮುಗಿಸಿ ಕೆಲಸಕ್ಕೆ ಹಾಜರಾಗುವ ಮಹಿಳೆಯರ ಕಷ್ಟ ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ ಅಂತ ಹೇಳಬಹುದು.


  ಕೆಲಸಕ್ಕೆ ಮರಳಿದಾಗ ಕೆಲವು ವಾರಗಳು ಕಠಿಣ ಅಂತ ಅನ್ನಿಸಬಹುದು..


  ಮಗು ಹುಟ್ಟಿದ ನಂತರ ಹೆರಿಗೆ ರಜೆಗಳನ್ನ ಮುಗಿಸಿಕೊಂಡು ಕೆಲಸಕ್ಕೆ ಬಂದ ತಾಯಂದಿರಿಗೆ ಮೊದಲ ಕೆಲವು ವಾರಗಳು ತುಂಬಾನೇ ಕಠಿಣ ಅಂತ ಅನ್ನಿಸುತ್ತವೆ. ಏಕೆಂದರೆ ಮಗು ರಾತ್ರಿ ಹಗಲು ಎನ್ನದೆ ಹಸಿವಾದಾಗ ಹಾಲು ಕುಡಿಯಲು ಎದ್ದೇಳುತ್ತದೆ. ಆಗ ತಾಯಂದಿರು ಎಷ್ಟೇ ಗಾಢ ನಿದ್ರೆಯಲ್ಲಿದ್ದರೂ ಸಹ ಎದ್ದು ಮಗುವಿಗೆ ಹಾಲುಣಿಸಬೇಕು. ಹೀಗಾಗಿ ನಿದ್ರೆಯ ಕೊರತೆ, ಭಾವನಾತ್ಮಕ ವಿಪ್ಲವಗಳು, ಕೆಲಸದಲ್ಲಿ ಕಠಿಣ ಗಡುವುಗಳು ಮತ್ತು ವೃತ್ತಿಪರ ಬದ್ಧತೆಗಳು ನಿಮ್ಮಲ್ಲಿ ಕಲ್ಪನೆಗೂ ಮೀರಿ ತಾಳ್ಮೆಯನ್ನು ಪರೀಕ್ಷಿಸುತ್ತವೆ ಅಂತ ಹೇಳಬಹುದು.


  These companies have given permanent work from home to their employees stg asp
  ಸಾಂಕೇತಿಕ ಚಿತ್ರ


  ಇದಲ್ಲದೆ, ಹೊಸ ತಾಯಿಯಾಗಿ, ನೀವು ಕೆಲವು ತಿಂಗಳುಗಳ ಕಾಲ ಕಚೇರಿಯಿಂದ ದೂರವಿರುವಾಗ ಕೆಲಸದ ಸ್ಥಳ ಅಥವಾ ಅವರ ಪಾತ್ರವು ಹೇಗೆ ಬದಲಾಗಿರುತ್ತದೆ ಎಂದು ತಿಳಿದು ನೀವು ಆಶ್ಚರ್ಯ ಸಹ ಪಡಬಹುದು. ಆದ್ದರಿಂದ, ಹೆಚ್ಚಿನ ಹೊಸ ತಾಯಂದಿರು ಕೆಲಸಕ್ಕೆ ಮರಳುವಾಗ ಒತ್ತಡವನ್ನು ಅನುಭವಿಸುವುದರಲ್ಲಿ ಆಶ್ಚರ್ಯವೇನಿಲ್ಲ.


  ನಿಮ್ಮ ಜೀವನದ ಹೊಸ ಹಂತವನ್ನು ಒತ್ತಡವನ್ನು ತೆಗೆದುಕೊಳ್ಳದೆ ಉತ್ತಮವಾಗಿ ನಿರ್ವಹಿಸಲು ನೀವು ಏನು ಮಾಡಬಹುದು ಎಂಬುದು ಇಲ್ಲಿದೆ ನೋಡಿ.


  1. ನಿಮ್ಮ ವೃತ್ತಿಪರ ಗುರಿಗಳ ಬಗ್ಗೆ ಕೇಳಿ ತಿಳಿದುಕೊಳ್ಳಿರಿ


  ನಿಮಗೆ ಮಗುವಾದ ನಂತರ ಮತ್ತೆ ಕಚೇರಿಗೆ ಮರಳಿದಾಗ ನೀವು ಈಗ ತಾಯಿಯಾಗಿರುವುದರಿಂದ ನೀವು ಈ ಹಿಂದೆ ಮಾಡುತ್ತಿದ್ದ ಕೆಲಸದ ಗುರಿಗಳು ಬದಲಾಗಿವೆಯೇ ಅಥವಾ ಹಾಗೆಯೇ ಇವೆಯೇ ಎಂಬುದನ್ನು ಮೊದಲು ಕೇಳಿ ತಿಳಿದುಕೊಳ್ಳಿರಿ. ನಿಮ್ಮ ವೃತ್ತಿಪರ ಗುರಿಗಳು ಬದಲಾಗದೆ ಹಾಗೆಯೇ ಉಳಿದಿದ್ದರೆ, ಆಗ ಹೊಸ ಯೋಜನೆಯನ್ನು ರೂಪಿಸಿಕೊಳ್ಳುವ ಅಗತ್ಯವಿಲ್ಲ. ಆದಾಗ್ಯೂ, ನಿಮ್ಮ ವೃತ್ತಿಪರ ಗುರಿಗಳು ಬದಲಾಗಿದ್ದರೆ, ನಿಮ್ಮ ಹೊಸ ಆದ್ಯತೆಗಳನ್ನು ಬೆಂಬಲಿಸುವ ವೃತ್ತಿಜೀವನದ ಆಯ್ಕೆಗಳನ್ನು ಹುಡುಕಿ, ಅವು ಹೊಂದಿಕೊಳ್ಳುವ ಕೆಲಸದ ಸಮಯ ಅಥವಾ ಒಪ್ಪಂದದ ಯೋಜನೆಗಳಾಗಿರಬಹುದು.


  Here are some tips for managing home and office work while working from home here know
  ಸಾಂದರ್ಭಿಕ ಚಿತ್ರ


  2. ನಿಮ್ಮ ಮ್ಯಾನೇಜರ್ ನೊಂದಿಗೆ ಸಂಪರ್ಕದಲ್ಲಿರಿ


  ನಿಮ್ಮ ಮ್ಯಾನೇಜರ್ ನೀವು ವೃತ್ತಿಪರ ಜೀವನಕ್ಕೆ ಮರಳಲು ಸುಗಮ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ರಜೆಯಲ್ಲಿರುವಾಗ ಅಥವಾ ನೀವು ಮತ್ತೆ ಕೆಲಸಕ್ಕೆ ಸೇರಿದ ನಂತರವೂ ಸಹ ನೀವು ನಿಮ್ಮ ಬಾಸ್ ನೊಂದಿಗೆ ನಿಯತಕಾಲಿಕ ಆಧಾರದ ಮೇಲೆ ಸಣ್ಣ ಸಭೆಗಳನ್ನು ನಿಗದಿಪಡಿಸಬೇಕು. ಇದು ನಿಮ್ಮ ವೃತ್ತಿಪರ ಗುರಿಗಳನ್ನು ಮರುಹೊಂದಿಸಲು ನಿಮಗೆ ಸಹಾಯ ಮಾಡುವುದಲ್ಲದೆ, ಆರಂಭಿಕ ಕೆಲವು ತಿಂಗಳುಗಳಲ್ಲಿ ಕೆಲಸ ಸುಗಮವಾಗಿ ಶುರುವಾಗುವುದಕ್ಕೆ ಅಗತ್ಯವಾದ ಬೆಂಬಲ ಸಿಗುತ್ತದೆ.


  ಇದನ್ನೂ ಓದಿ: UPSC Inspirational: ಹೆಂಡತಿ IAS ಆಫೀಸರ್, ಗಂಡ IPS ಅಧಿಕಾರಿ: ಇವರ ಜೀವನ ನಿಜಕ್ಕೂ ಇಂಟ್ರೆಸ್ಟಿಂಗ್


  3. ಸ್ವಲ್ಪ ತಾಳ್ಮೆಯಿಂದಿರಿ


  ಮಗು ಜನಿಸಿದ ನಂತರ ಮತ್ತೆ ಕೆಲಸ ಶುರು ಮಾಡಿಕೊಂಡ ತಾಯಂದಿರು ಹೊಸ ಜವಾಬ್ದಾರಿಗಳಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯವನ್ನು ನೀಡುವುದು ಬಹಳ ಮುಖ್ಯವಾಗುತ್ತದೆ. ನೀವು ಈಗ ಮಗುವನ್ನು ಹೊಂದಿದ್ದೀರಿ ಎಂದ ಮಾತ್ರಕ್ಕೆ ನಿಮ್ಮ ಮಹತ್ವಾಕಾಂಕ್ಷೆ ಕಡಿಮೆಯಾಗಬೇಕು ಅಂತಲ್ಲ. ನಿಮ್ಮ ಕೆಲಸ ಮತ್ತು ವೃತ್ತಿಜೀವನವು ನಿಮ್ಮ ಕುಟುಂಬದಂತೆಯೇ ನಿಮ್ಮ ಸಮಯಕ್ಕೆ ಅರ್ಹವಾಗಿದೆ. ಆದ್ದರಿಂದ ಬೇಸರಗೊಳ್ಳಬೇಡಿ, ಸಮಯ ಮತ್ತು ತಾಳ್ಮೆಯಿಂದ, ನೀವು ಎರಡೂ ಪಾತ್ರಗಳನ್ನು ನಿರಾಯಾಸವಾಗಿ ನಿಭಾಯಿಸಬಹುದು.
  4. ನಿಮ್ಮ ಕೆಲಸದ ಸ್ಥಳದ ನೀತಿಗಳನ್ನು ತಿಳಿದುಕೊಳ್ಳಿ


  ನಿಮ್ಮ ವೃತ್ತಿಪರ ಜೀವನದಲ್ಲಿ ಕಡಿಮೆ ತೊಂದರೆಗಳನ್ನು ಎದುರಿಸಲು ಕೆಲಸದ ಸ್ಥಳದ ನೀತಿಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ನಿಮ್ಮ ಕಂಪನಿಯು ವರ್ಕ್ ಫ್ರಮ್ ಹೋಮ್ ನಂತಹ ಫ್ಲೆಕ್ಸಿಬಲ್ ಕೆಲಸದ ಆಯ್ಕೆಗಳನ್ನು ನಿಮಗೆ ಒದಗಿಸಿದರೆ, ಮಗುವಿನೊಂದಿಗೆ ವೃತ್ತಿಪರ ಬದ್ಧತೆಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಹೊಸ ಪೋಷಕರಿಗೆ ನಿಮ್ಮ ಉದ್ಯೋಗದಾತರು ನೀಡುವ ವಿವಿಧ ನೀತಿಗಳ ಬಗ್ಗೆ ತಿಳಿಯಲು ನಿಮ್ಮ ಎಚ್ ಆರ್ ನೊಂದಿಗೆ ಮಾತನಾಡಿ.

  Published by:Kavya V
  First published: