Zomato Swiggy Offers: ಜೋಮಾಟೊ ಸ್ವಿಗ್ಗಿಯಿಂದ ಗ್ರಾಹಕರಿಗೆ ಭರ್ಜರಿ ಆಫರ್!

ಕೋವಿಡ್ ಹೊಡೆತದ ನಂತರ ಈದೀಗ ಹಲವಾರು ವ್ಯವಹಾರಗಳು ಚೇತರಿಕೆ ಕಾಣಲು ಪ್ರಾರಂಭಿಸಿವೆ. ಬಹುತೇಕ ಎಲ್ಲಾ ವ್ಯವಹಾರಗಳು ಮತ್ತು ಕಂಪನಿಗಳು ತಮ್ಮ ಬೆಳವಣಿಗೆಯನ್ನು ಹೆಚ್ಚಿಸಲು ಹೊಸ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋವಿಡ್ (Covid) ಹೊಡೆತದ ನಂತರ ಈದೀಗ ಹಲವಾರು ವ್ಯವಹಾರಗಳು ಚೇತರಿಕೆ ಕಾಣಲು ಪ್ರಾರಂಭಿಸಿವೆ. ಬಹುತೇಕ ಎಲ್ಲಾ ವ್ಯವಹಾರಗಳು (Business) ಮತ್ತು ಕಂಪನಿಗಳು ತಮ್ಮ ಬೆಳವಣಿಗೆಯನ್ನು ಹೆಚ್ಚಿಸಲು ಹೊಸ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದನ್ನೇ ಗಮನದಲ್ಲಿಟ್ಟುಕೊಂಡು ಆಹಾರ ವಿತರಣಾ ಕಂಪನಿಗಳಾದ (Food Delivery Company) ಜೋಮಾಟೊ (Zomato) ಮತ್ತು ಸ್ವಿಗ್ಗಿ (Swiggy) ಹೈದರಾಬಾದ್‌ನಲ್ಲಿ ಪೈಲಟ್ ಡೈನ್-ಇನ್ ಯೋಜನೆಗಳನ್ನುಆರಂಭಿಸಿದ್ದು, ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು (Discount) ಸಹ ನೀಡುತ್ತಿದೆ. ಈ ರಿಯಾಯಿತಿಗಳನ್ನು ಪಡೆಯಲು ಗ್ರಾಹಕರು ಜೋಮಾಟೋದ ಡೈನ್-ಇನ್ ಪೈಲಟ್ ಪಾವತಿಯನ್ನು ಬಳಸಬಹುದು. ಅಲ್ಲದೇ ಜೋಮಾಟೋ ಪೇ ವೈಬ್ಸ್ ಎಂಬ ವೈಶಿಷ್ಟ್ಯವನ್ನು ಸಹ ಪರಿಚಯಿಸಿದೆ.

ಪಾಲುದಾರ ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ತಮ್ಮ ಆಹಾರ ಮಳಿಗೆಯ ಕುರಿತು ಚಿತ್ರಗಳು ಮತ್ತು ಮಾಹಿತಿಯನ್ನು ಅಪ್‌ಲೋಡ್ ಮಾಡಲು ವೈಬ್ಸ್ ವೈಶಿಷ್ಟ್ಯವನ್ನು ನೀಡಿದೆ.

ಗ್ರಾಹಕರಿಗೆ 25% ರಿಯಾಯಿತಿ
ರೆಸ್ಟೋರೆಂಟ್ ಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಈ ಫುಡ್ ಅಗ್ರಿಗೇಟರ್ ಕಂಪನಿಗಳು ಈ ಯೋಜನೆ ಮೂಲಕ ತಮ್ಮ ಅಪ್ಲಿಕೇಶನ್‌ಗಳಲ್ಲಿ ಆಹಾರ ಬಿಲ್‌ಗಳನ್ನು ಪಾವತಿಸುವ ಗ್ರಾಹಕರಿಗೆ ಶೇಕಡಾ 25ರಷ್ಟು ರಿಯಾಯಿತಿಯನ್ನು ನೀಡುತ್ತಿವೆ. ಅಂದರೆ ನೀವು ಸ್ವಿಗ್ಗಿ ಮತ್ತು ಜೋಮಾಟೊ ಜೊತೆ ಪಾಲುದಾರರಾದ ರೆಸ್ಟೋರೆಂಟ್ ನಲ್ಲಿ ನಿಮ್ಮ ಬಿಲ್ ಪಾವತಿಯನ್ನು ಈ ಎರಡೂ ಕಂಪನಿಗಳ ಅಪ್ಲಿಕೇಷನ್ ಮೂಲಕ ಮಾಡುವುದರಿಂದ ರಿಯಾಯಿತಿ ಪಡೆಯಬಹುದು.

ಅಪ್ಲಿಕೇಶನ್‌ನಲ್ಲಿನ ಜೋಮಾಟೊ ಪೇ (Zomato Pay) ವೈಶಿಷ್ಟ್ಯದ ಮೂಲಕ ಊಟಕ್ಕೆ ಪಾವತಿಸಲು ಆಯ್ಕೆ ಮಾಡುವ ಬಳಕೆದಾರರು, ಬಿಲ್‌ನಲ್ಲಿ 25 ಪ್ರತಿಶತದವರೆಗೆ ರಿಯಾಯಿತಿಯನ್ನು ಪಡೆಯಬಹುದು. ಪಾವತಿ ಮುಗಿದ ನಂತರ, ಜೋಮಾಟೊ ಗ್ರಾಹಕರಿಗೆ 100 ಪ್ರತಿಶತ ಕ್ಯಾಶ್‌ಬ್ಯಾಕ್ ನೀಡುತ್ತದೆ.

ಮುಂಬೈನಂತಂಹ ನಗರಗಳಿಗೂ ಯೋಜನೆ ವಿಸ್ತರಿಸುವ ಆಶಯ
ಜೋಮಾಟೋ ಪ್ರಸ್ತುತ ಹೈದರಾಬಾದ್‌ನಲ್ಲಿ 1000ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳೊಂದಿಗೆ ಪ್ರಾಯೋಗಿಕ ಯೋಜನೆಗಳನ್ನು ಹೊಂದಿದೆ. ಹೈದರಾಬಾದ್‌ನ ರೆಸ್ಟೋರೆಂಟ್‌ಗಳಲ್ಲಿ ಸ್ವಿಗ್ಗಿ ಸಹ ಇದೇ ರೀತಿ ರೆಸ್ಟೋರೆಂಟ್ ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆ ಯಶಸ್ವಿಯಾದರೆ ಮುಂಬೈನಂತಂಹ ನಗರಗಳಿಗೂ ಯೋಜನೆ ವಿಸ್ತರಿಸುವ ಆಶಯವನ್ನು ಕಂಪನಿಗಳು ಹೊಂದಿವೆ.

ಇದನ್ನೂ ಓದಿ: Business Idea: ಊರಿನಲ್ಲಿದ್ದು ಈ ವ್ಯವಹಾರ ಆರಂಭಿಸಿದ್ರೆ ನಿಮ್ಮದಾಗುತ್ತೆ ಬಂಪರ್ ಆದಾಯ

ಮೇ ತಿಂಗಳಲ್ಲಿ 50,000ಕ್ಕೂ ಹೆಚ್ಚು ರೆಸ್ಟೋರೆಂಟ್ ಪಾಲುದಾರರನ್ನು ಹೊಂದಿರುವ ಡೈನಿಂಗ್-ಔಟ್ ಮತ್ತು ರೆಸ್ಟೋರೆಂಟ್ ಟೆಕ್ ಪ್ಲಾಟ್‌ಫಾರ್ಮ್ ಅನ್ನು ಸ್ವಿಗ್ಗಿ ಸ್ವಾಧೀನಪಡಿಸಿಕೊಂಡ ನಂತರ ರೆಸ್ಟೋರೆಂಟ್ ಡೈನ್-ಇನ್‌ಗಳ ಲಾಭ ಪಡೆಯಲು ಪ್ರಯತ್ನಗಳನ್ನು ಹೆಚ್ಚಿಸಿದೆ. ಟೇಬಲ್ ಕಾಯ್ದಿರಿಸುವಿಕೆಗಳು ಮತ್ತು ಈವೆಂಟ್‌ಗಳು ಸೇರಿದಂತೆ ಡೈನ್‌ಔಟ್‌ನ ಕೊಡುಗೆಗಳನ್ನು ನಿಯಂತ್ರಣಕ್ಕೆ ತರಲು ಯೋಜಿಸಿದೆ ಮತ್ತು ಹೆಚ್ಚಿನ ಗ್ರಾಹಕರನ್ನು ತಲುಪಲು ಮತ್ತು ತಮ್ಮ ವ್ಯಾಪಾರವನ್ನು ವಿಸ್ತರಿಸಲು ರೆಸ್ಟೋರೆಂಟ್ ಪಾಲುದಾರರನ್ನು ಸಕ್ರಿಯಗೊಳಿಸಲು ಈ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸ್ವಿಗ್ಗಿ ಹೇಳಿದೆ. ಸಾಫ್ಟ್ ಬ್ಯಾಂಕ್ ಬೆಂಬಲಿತ ಕಂಪನಿಯಾಗಿರುವ ಸ್ವಿಗ್ಗಿ ತನ್ನ ಡೈನ್-ಔಟ್ ಕಾರ್ಯಕ್ರಮಕ್ಕೆ ಸ್ವಿಗ್ಗಿ ಡೈನರ್ಸ್ ಎಂದು ಹೆಸರಿಸಿದೆ.

ಆರಂಭಿಕ ರಿಯಾಯಿತಿ ಹೇಗಿರಲಿದೆ?
ಮುಂಬೈ ರೆಸ್ಟೋರೆಂಟ್ ಮಾಲೀಕರಿಗೆ ಕಳುಹಿಸಲಾದ ಸಂದೇಶದ ಪ್ರಕಾರ, ಸ್ವಿಗ್ಗಿ ವಿಧಿಸುವ ಕಮಿಷನ್ ಮೊದಲಿನಂತೆಯೇ 8 ಪ್ರತಿಶತದಷ್ಟು ಇರುತ್ತದೆ. ಆರಂಭಿಕ ರಿಯಾಯಿತಿಯನ್ನು ಪ್ರಸ್ತುತ 15 ಪ್ರತಿಶತದಿಂದ 10 ಪ್ರತಿಶತಕ್ಕೆ ಇಳಿಕೆ ಮಾಡಲಾಗಿದೆ. ಆದರೆ ರೆಸ್ಟೋರೆಂಟ್ ಗೆ ಮೂರು ಭೇಟಿಗಳ ನಂತರ ಮತ್ತೆ ಬಂದರೆ 5 ಪ್ರತಿಶತದಷ್ಟು ಹೆಚ್ಚುವರಿ ರಿಯಾಯಿತಿಗಳನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಿದೆ. ಜೋಮಾಟೊ 12 ಪ್ರತಿಶತದಷ್ಟು ಆರಂಭಿಕ ಆಫರ್ ನೀಡಬಹುದು ಎನ್ನಲಾಗುತ್ತಿದೆ, ಆದಾಗ್ಯೂ ಇನ್ನೂ ರಿಯಾಯಿತಿ ಅಧಿಕೃತವಾಗಿಲ್ಲ. ಏಕೆಂದರೆ ಜೋಮಾಟೊ ರೆಸ್ಟೋರೆಂಟ್ ಆಧಾರದ ಮೇಲೆ ಒಪ್ಪಂದಗಳನ್ನು ಇನ್ನೂ ಮಾತುಕತೆಯ ಮೂಲಕ ನಿರ್ಧರಿಸುತ್ತಿದೆ.

ಜೋಮಾಟೊ ಪ್ರಕಾರ, “ಕ್ಯಾಶ್‌ಬ್ಯಾಕ್‌ಗಳು ತಕ್ಷಣವೇ ಜೋಮಾಟೊ ಕ್ರೆಡಿಟ್‌ಗಳಾಗಿ ಕ್ರೆಡಿಟ್ ಆಗುತ್ತವೆ. ಭವಿಷ್ಯದ ಊಟದ ಬಿಲ್‌ಗಳು ಅಥವಾ ಆಹಾರ ವಿತರಣೆಗಾಗಿ ಈ ಕ್ರೆಡಿಟ್‌ಗಳನ್ನು ಬಳಸಬಹುದು. ಕ್ರೆಡಿಟ್‌ಗಳು ಪಾವತಿಯ ದಿನಾಂಕದಿಂದ 90 ದಿನಗಳವರೆಗೆ ಮಾನ್ಯವಾಗಿರುತ್ತವೆ.

ಈ ಬಗ್ಗೆ ರೆಸ್ಟೋರೆಂಟ್‌ ಮಾಲೀಕರು ಹೇಳಿದ್ದೇನು?
“ಮೊದಲನೆಯದಾಗಿ, ಅವರು ಮಂಡಿಸಿದ ನಿಯಮಗಳು ನಮಗೆ ಇಷ್ಟವಾಗಲಿಲ್ಲ. ಅದರ ನಂತರ, ನಾವು ಜೊಮಾಟೊ ಪ್ರೊ ಪ್ಲಸ್ ಮತ್ತು ಜೊಮಾಟೊ ಪೇ ರಿಯಾಯಿತಿಗಳನ್ನು ಒಂದೇ ಸಮಯದಲ್ಲಿ ಭರಿಸಲಾಗುವುದಿಲ್ಲ ಎಂದು ಹೇಳಿದ್ದೇವೆ”ಎಂದು ಹೈದರಾಬಾದ್‌ನಲ್ಲಿ ಅನೇಕ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿರುವ ಅನುಭವಿ ಆಹಾರ ಉದ್ಯಮದ ಕಾರ್ಯನಿರ್ವಾಹಕ ಶಂಕರ್ ಕೃಷ್ಣಮೂರ್ತಿ ಹೇಳಿದರು.

ಇದನ್ನೂ ಓದಿ:  Business: ನಟನೆಯಲ್ಲಿ ಯಶಸ್ಸು ಕಾಣದೆ ಇದ್ರೂ ಬಹುಕೋಟಿ ವ್ಯವಹಾರಕ್ಕೆ ಮಾಲೀಕರಾದ ನಟ ನಟಿಯರಿವರು

“ಹೊಸ ಕಾರ್ಯಕ್ರಮದಿಂದಾಗಿ ರೆಸ್ಟೋರೆಂಟ್ ಫುಟ್‌ಫಾಲ್‌ಗಳು ಹೆಚ್ಚಾಗುತ್ತವೆ ಎಂದು ಜೊಮಾಟೊ ನಮಗೆ ತಿಳಿಸಿದೆ. ಆದರೆ ನನ್ನ ವಿಷಯದಲ್ಲಿ, ಪೈಲಟ್‌ಗೆ ಸೈನ್ ಅಪ್ ಮಾಡಿದ ಮೊದಲ ವಾರದಲ್ಲಿ ಫುಟ್‌ಫಾಲ್‌ಗಳು ವಾಸ್ತವವಾಗಿ 40 ಪ್ರತಿಶತಕ್ಕಿಂತ ಕಡಿಮೆಯಾಗಿದೆ,” ಎಂದು ಕೃಷ್ಣಮೂರ್ತಿ ಹೇಳಿದರು.
Published by:Ashwini Prabhu
First published: