• Home
  • »
  • News
  • »
  • business
  • »
  • Zomato Layoff: ಎಲ್ರದ್ದೂ ಆಯ್ತು, ಈಗ ಜೊಮ್ಯಾಟೊ ಸರದಿ! ಇನ್ಮುಂದೆ ​ಲೇಟಾಗಿ ಬರಬಹುದು ನಿಮ್ಮ ಆರ್ಡರ್​!

Zomato Layoff: ಎಲ್ರದ್ದೂ ಆಯ್ತು, ಈಗ ಜೊಮ್ಯಾಟೊ ಸರದಿ! ಇನ್ಮುಂದೆ ​ಲೇಟಾಗಿ ಬರಬಹುದು ನಿಮ್ಮ ಆರ್ಡರ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟ್ವಿಟ್ಟರ್ (Twitter) ​, ಮೆಟಾ (Meta) ದಂತಹ ದೊಡ್ಡ ದೊಡ್ಡ ಕಂಪನಿಗಳ ಬಳಿಕ ಇದೀಗ ಜೊಮ್ಯಾಟೊ (Zomato) ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧಾರ ಮಾಡಿಕೊಂಡಿದೆ ಎಂದು ವರದಿಯಾಗಿದೆ.

  • Share this:

ವಿಶ್ವದಾದ್ಯಂತ ಉದ್ಯೋಗಿಗಳ ವಜಾ (Layoffs) ಪರ್ವ ನಿಲ್ಲುವಂತೆ ಕಾಣುತ್ತಿಲ್ಲ. ಒಂದೊಂದೇ ಪ್ರತಿಷ್ಠಿತ ಕಂಪನಿಗಳು (Big Company Layoffs) ತನ್ನ ವೆಚ್ಚವನ್ನು ನೀಗಿಸಲು, ಆರ್ಥಿಕ ಹಿಂಜರಿತ (Recession) ಎದುರಿಸಲು ತನ್ನ ಉದ್ಯೋಗಿಗಳನ್ನು ನಡು ನೀರಿನಲ್ಲಿ ಕೈಬಿಡುತ್ತಿದೆ (Job Cut). ಈಗಾಗಲೇ ಹಲವಾರು ಟಾಪ್‌ ಕಂಪನಿಗಳು ಈ ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ನಡೆಸಿವೆ. ಇನ್ನೂ ಹಲವು ಕಂಪನಿಗಳು ಈ ಬಗ್ಗೆ ಯೋಜನೆ ರೂಪಿಸಿವೆ. ಟ್ವಿಟ್ಟರ್ (Twitter) ​, ಮೆಟಾ (Meta) ದಂತಹ ದೊಡ್ಡ ದೊಡ್ಡ ಕಂಪನಿಗಳ ಬಳಿಕ ಇದೀಗ ಜೊಮ್ಯಾಟೊ (Zomato) ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧಾರ ಮಾಡಿಕೊಂಡಿದೆ ಎಂದು ವರದಿಯಾಗಿದೆ.


ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ!


ಈಗಾಗಲೇ ಜೊಮ್ಯಾಟೊವನ್ನು ಕಟ್ಟಿ ಬೆಳೆಸಿದ, ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಸಂಸ್ಥೆಯು ಸುಮಾರು ಶೇಕಡ 3ರಷ್ಟು ಉದ್ಯೋಗ ಕಡಿತವನ್ನು ಮಾಡುವುದಾಗಿ ಘೋಷಣೆ ಮಾಡಿದೆ. ಆ್ಯಪ್ ಆಧಾರಿತ ಖ್ಯಾತ ಆನ್‌ಲೈನ್ ಆಹಾರ ವಿತರಣಾ ಕಂಪನಿ ಜೊಮ್ಯಾಟೊ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.


ಟ್ವಿಟರ್​​ ಹಾದಿಹಿಡಿದ ಜೊಮ್ಯಾಟೊ!


ನಾಲ್ಕೂವರೆ ವರ್ಷಗಳ ಹಿಂದೆ ಜೊಮ್ಯಾಟೊಗೆ ಸೇರಿದ್ದ ಗುಪ್ತಾ, ಅದರ ಆಹಾರ ವಿತರಣಾ ವ್ಯವಹಾರದ ಸಿಇಒ ಸ್ಥಾನದಿಂದ 2020ರಲ್ಲಿ ಸಹ-ಸಂಸ್ಥಾಪಕರಾಗಿ ಬಡ್ತಿ ಪಡೆದಿದ್ದರು.ಪ್ರಮುಖವಾಗಿ ಸಂಸ್ಥೆಯಲ್ಲಿ ತನ್ನ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜೊಮ್ಯಾಟೊ ಈ ಹಾದಿಯನ್ನು ಹಿಡಿದಿದೆ. ಈ ಬಗ್ಗೆ ಶನಿವಾರ ಘೋಷಣೆ ಮಾಡಿದೆ. ಹಲವಾರು ಸಾಮಾಜಿಕ ಜಾಲತಾಣ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ನಷ್ಟವನ್ನು ಸರಿದೂಗಿಸಲು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವ ನಡುವೆಯೇ ಜೊಮ್ಯಾಟೊ ಈ ನಿರ್ಧಾರವನ್ನು ಕೈಗೊಂಡಿದೆ.


ಇದನ್ನೂ ಓದಿ: ಅಮೆಜಾನ್​​ನಿಂದ ಬಿಗ್ ಶಾಕ್: ಬರೋಬ್ಬರಿ 10 ಸಾವಿರ ಉದ್ಯೋಗಿಗಳ ವಜಾಕ್ಕೆ ಮುಂದಾದ ಕಂಪನಿ


ಶೇ.3ರಷ್ಟು ಉದ್ಯೋಗಿಗಳ ವಜಾ ನಿರ್ಧಾರ


ಇತ್ತೀಚಿನ LiveMint ವರದಿಯ ಪ್ರಕಾರ Zomato ಕಂಪನಿಯ ವಿವಿಧ ವಿಭಾಗಗಳಲ್ಲಿನ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಯತ್ನಿಸುತ್ತಿದೆ. ಕಂಪನಿಯ 3 ಪ್ರತಿಶತದಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಲು ಸಿದ್ಧವಾಗಿದೆ. ವಜಾಗೊಳಿಸುವಿಕೆಯ ಪರಿಣಾಮವು ಕಂಪನಿಯ ಹಲವು ವಿಭಾಗಗಳಲ್ಲಿ ಕಂಡುಬರುತ್ತದೆ ಎಂದು ಅದು ಹೇಳಿದೆ. ತಂತ್ರಜ್ಞಾನ, ಉತ್ಪನ್ನ ಮತ್ತು ಮಾರುಕಟ್ಟೆಯಂತಹ ವಿಭಾಗಗಳು ವಜಾಗೊಳಿಸುವಿಕೆಯಿಂದ ಪ್ರಭಾವಿತವಾಗಿವೆ.


ಮೇ 2020 ರಲ್ಲಿ ಕೊರೋನಾ ವೈರಸ್ ಕಾರಣದಿಂದಾಗಿ ಆಹಾರ ವಿತರಣಾ ಅಪ್ಲಿಕೇಶನ್ ವ್ಯಾಪಾರದಲ್ಲಿ ಕುಸಿತವನ್ನು ಎದುರಿಸಿತು. ಈ ಕಾರಣದಿಂದಾಗಿ, ಸುಮಾರು 520 ಉದ್ಯೋಗಿಗಳು, ಸುಮಾರು 13 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಯಿತು. ಇತ್ತೀಚಿನ ವಜಾಗೊಳಿಸಿದ ನಂತರ Zomato ಈಗ ಸುಮಾರು 3,800 ಉದ್ಯೋಗಿಗಳನ್ನು ಹೊಂದಿರುತ್ತದೆ. ಈಗಾಗಲೇ ವೆಚ್ಚವನ್ನು ಕಡಿತಗೊಳಿಸಲುಅಮೆಜಾನ್,Twitter, ಮೈಕ್ರೋಸಾಫ್ಟ್ ಮತ್ತು ಇತರ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿದವು ಭಾರತೀಯ ಕಂಪನಿಗಳೂ ಈ ವಿಷಯದತ್ತ ಗಮನಹರಿಸಿದವು.


ಇದನ್ನೂ ಓದಿ: ಎಲಾನ್ ಮಸ್ಕ್ ಅವರ ಅದೊಂದು ಮಾತು ಕೇಳಿ ಅಸ್ವಸ್ಥರಾದ ಟ್ವಿಟರ್ ಮ್ಯಾನೇಜರ್!


ರಾಜೀನಾಮೆ ಸರಣಿ


ಈ ತಿಂಗಳಿನಲ್ಲೇ ಜೊಮ್ಯಾಟೊದ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ತನ್ನ ರಾಜೀನಾಮೆಯನ್ನು ಘೋಷಣೆ ಮಾಡಿದ್ದಾರೆ. ಮೋಹಿತ್ ಗುಪ್ತಾ ಜೊಮ್ಯಾಟೊ ಸಂಸ್ಥೆಯಲ್ಲಿ ಸುಮಾರು 4.5 ವರ್ಷಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದರು. ಈ ಹಿಂದೆ ಸಿಇಒ ಆಗಿದ್ದರು. ಕಳೆದ ಹಲವು ವಾರಗಳಿಂದ ಜೊಮ್ಯಾಟೊದಿಂದ ಹೊರನಡೆಯುತ್ತಿರುವ ಮೂರನೇ ಪ್ರಮುಖ ಉದ್ಯೋಗಿ ಮೋಹಿತ್ ಗುಪ್ತಾ ಆಗಿದ್ದಾರೆ.

Published by:ವಾಸುದೇವ್ ಎಂ
First published: