Hyperpure: ಅಧಿಕ ಲಾಭ ನೀಡುವ ಹೈಪರ್‌ಪ್ಯೂರ್‌ನತ್ತ ಚಿತ್ತ ನೆಟ್ಟಿರುವ ಝೊಮ್ಯಾಟೋ!

ಹೈಪರ್‌ಪ್ಯೂರ್ ಎಂಬುದು ಝೊಮ್ಯಾಟೋ ಆರಂಭಿಸಿರುವ ಉದ್ಯಮ. ಇದರಲ್ಲಿ ರೆಸ್ಟೋರೆಂಟ್‌ಗಳಿಗೆ ತರಕಾರಿ, ಹಣ್ಣು, ಕೋಳಿ, ದಿನಸಿ, ಮಾಂಸ, ಸಮುದ್ರಾಹಾರ ಡೈರಿ ಮತ್ತು ಪಾನೀಯಗಳು ಹೀಗೆ ಎಲ್ಲವನ್ನೂ ಖರೀದಿಸಬಹುದು.

ಜೊಮ್ಯಾಟೋ

ಜೊಮ್ಯಾಟೋ

  • Share this:
ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಝೊಮ್ಯಾಟೋ (Zomato), 'ಹೈಪರ್‌ಪ್ಯೂರ್' (Hyper pure) ಮತ್ತು ತ್ವರಿತ ವಾಣಿಜ್ಯದ ('ಆನ್-ಡಿಮಾಂಡ್ ಡೆಲಿವರಿ) ಮೂಲಕ ರೆಸ್ಟೋರೆಂಟ್‌ಗಳಿಗೆ ಸರಬರಾಜು ಮಾಡುವ ಇರಾದೆಯನ್ನು ಹೊಂದಿದೆ ಎಂದು ಕಂಪನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಕೌಶಿಕ್ ದತ್ತಾ ತಿಳಿಸಿದ್ದಾರೆ. ಹೈಪರ್‌ಪ್ಯೂರ್ ಎಂಬುದುಝೊಮ್ಯಾಟೋ ಆರಂಭಿಸಿರುವ ಉದ್ಯಮವಾಗಿದ್ದು (Business), ರೆಸ್ಟೋರೆಂಟ್‌ಗಳಿಗೆ ತರಕಾರಿಗಳು, ಹಣ್ಣುಗಳು, ಕೋಳಿ, ದಿನಸಿ, ಮಾಂಸ, ಸಮುದ್ರಾಹಾರ ಡೈರಿ ಮತ್ತು ಪಾನೀಯಗಳು ಹೀಗೆ ಎಲ್ಲವನ್ನೂ ಖರೀದಿಸಲು ಅನುಮತಿಸುತ್ತದೆ. ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (Meeting) ದತ್ತಾ ಇಂದಿನಿಂದ ಹತ್ತು ವರ್ಷಗಳ ನಂತರ ಅರ್ಥಪೂರ್ಣವಾಗಿ ದೊಡ್ಡ ವ್ಯವಹಾರಗಳಾಗಿ ಮಾರ್ಪಾಡಾಗುವ ಸಾಮರ್ಥ್ಯ ಹೊಂದಿರುವ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಕಾರ್ಯತಂತ್ರದ ಭಾಗವಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಕೌಶಿಕ್ ದತ್ತಾ ಏನು ಹೇಳಿದ್ದಾರೆ
ಆರ್ಥಿಕ ವರ್ಷ 2021-22 ರಲ್ಲಿ ಕೋವಿಡ್-19 ಸಾಂಕ್ರಾಮಿಕ, ಸ್ಥೂಲ-ಆರ್ಥಿಕ ಅನಿಶ್ಚಿತತೆ, ಏರುತ್ತಿರುವ ಹಣದುಬ್ಬರದಿಂದ ಉಂಟಾಗುವ ಅಡ್ಡಿಗಳಂತಹ ಅನೇಕ ಸವಾಲುಗಳ ಹೊರತಾಗಿಯೂ ಸಂಸ್ಥೆಯು EBITDA ಮೊತ್ತವನ್ನು ನಿಯಂತ್ರಣಲ್ಲಿಟ್ಟುಕೊಂಡು ಹೆಚ್ಚು ಸಾಮರ್ಥ್ಯದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಯಿತು ಎಂದು ದತ್ತಾ ಹೇಳಿದ್ದಾರೆ.

2022 ರಲ್ಲಿ ಸಂಸ್ಥೆಯಾಗಿ ಕಾರ್ಯತಂತ್ರದ ಆದ್ಯತೆಗಳನ್ನು ಪ್ರತಿಬಿಂಬಿಸಿದ ನಂತರ, ಇದೀಗ ಕಂಪನಿಯ ಗಾತ್ರ ಮತ್ತು ಅಳತೆಯನ್ನು ಆಧರಿಸಿ ಇಂದಿನಿಂದ 10 ವರ್ಷಗಳ ನಂತರ ಅರ್ಥಪೂರ್ಣವಾಗಿ ದೊಡ್ಡ ವ್ಯವಹಾರಗಳಾಗಿ ಮಾರ್ಪಡುವ ಕ್ಷೇತ್ರಗಳ ಮೇಲೆ ಮಾತ್ರ ಗಮನ ಹರಿಸುವ ಇರಾದೆ ಇದೆ ಎಂದು ದತ್ತಾ ಹೇಳಿದ್ದಾರೆ.

ಹೈಪರ್‌ಪ್ಯೂರ್‌ನ ಆದಾಯ ಹೇಗಿದೆ ?
FY23 ರ ಮೊದಲ ತ್ರೈಮಾಸಿಕದಲ್ಲಿ, ಹೈಪರ್‌ಪ್ಯೂರ್‌ನ ಕಾರ್ಯಾಚರಣೆಗಳ ಆದಾಯವು ಹಿಂದಿನ ತ್ರೈಮಾಸಿಕದಲ್ಲಿ ರೂ 194.2 ಕೋಟಿಯಿಂದ ರೂ 272.7 ಕೋಟಿಗೆ 40% ಏರಿಕೆಯಾಗಿದೆ. ಸಂಪೂರ್ಣ FY22 ಗಾಗಿ, ಹೈಪರ್‌ಪ್ಯೂರ್‌ನ ಹೊಂದಾಣಿಕೆಯ ಆದಾಯವು ರೂ 540 ಕೋಟಿಗಳಷ್ಟಿದ್ದರೆ, ಝೊಮಾಟೊ ನ ಫುಡ್ ಡೆಲಿವರಿ ವ್ಯವಹಾರವು ರೂ 4,760 ಕೋಟಿಗಳಷ್ಟಿದೆ. ಸಂಸ್ಥೆಯ ಫುಡ್ ಡೆಲಿವರಿ ವ್ಯವಹಾರವು ಸ್ಥಿರವಾಗಿದ್ದು ಲಾಭದತ್ತ ಮುನ್ನುಗ್ಗುತ್ತಿದೆ ಎಂಬುದು ದತ್ತಾ ಅನಿಸಿಕೆಯಾಗಿದೆ.

ಇದನ್ನೂ ಓದಿ: Investment Decisions: ಹೂಡಿಕೆ ಮಾಡುವಾಗ ಈ 5 ತಪ್ಪುಗಳನ್ನು ಮಾಡ್ಬೇಡಿ! ಅದ್ರಲ್ಲೂ ಯುವಜನತೆ ಹೆಚ್ಚಾಗಿ ಮಾಡೋ ಮಿಸ್ಟೆಕ್​ ಇದು

ಭಾರತದಲ್ಲಿ ಸಂಸ್ಥೆಯ ಅಭಿವೃದ್ಧಿಯು ಸಾಕಷ್ಟು ಉನ್ನತ ಮಟ್ಟಕ್ಕೆ ಏರಲಿದೆ ಎಂದು ಹೇಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ ರೆಸ್ಟೋರೆಂಟ್ ಆಹಾರ ಸೇವನೆಯ ಮಟ್ಟ ಹೆಚ್ಚಿದ್ದರೂ, ಜಾಗತಿಕ ಪ್ರತಿರೂಪಗಳಿಗೆ ಹೋಲಿಸಿದರೆ ಭಾರತದಲ್ಲಿ ಅದರ ಸಂಪೂರ್ಣ ತೀಕ್ಷ್ಣ ದೃಷ್ಟಿಯು ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದು ದತ್ತಾ ಹೇಳಿಕೆಯಾಗಿದೆ.

ಈ ವ್ಯಾಪಾರವು ಸಂಸ್ಥೆಯ ಫುಡ್ ಡೆಲಿವರಿ ವ್ಯವಹಾರಕ್ಕಿಂತ ದೊಡ್ಡದಾಗುವ ಸಾಧ್ಯತೆ
ರೆಸ್ಟೋರೆಂಟ್‌ಗಳಿಗಾಗಿ ತಾಜಾ ವಸ್ತುಗಳ ಪೂರೈಕೆಗಾಗಿ ಝೊಮ್ಯಾಟೋದ ಪೂರೈಕೆ ವೇದಿಕೆಯಾಗಿರುವ ಹೈಪರ್‌ಪ್ಯೂರ್‌ ಮೂಲಕ ಕಂಪೆನಿಯು ರೆಸ್ಟೋರೆಂಟ್ ಪಾಲುದಾರರಿಂದ ತನ್ನ ಸೇವೆಗಳನ್ನು ಪ್ರಬಲವಾಗಿ ಅಳವಡಿಸಿಕೊಳ್ಳುವತ್ತ ಸಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ವ್ಯಾಪಾರವು ಸಂಸ್ಥೆಯ ಫುಡ್ ಡೆಲಿವರಿ ವ್ಯವಹಾರಕ್ಕಿಂತ ದೊಡ್ಡದಾಗುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಭರವಸೆ ನಮಗಿದ್ದು ಇಲ್ಲಿ ಗುರುತಿಸಬಹುದಾದ ಮಾರುಕಟ್ಟೆಯು ಫುಡ್ ಡೆಲಿವರಿಗಿಂತ ದೊಡ್ಡದಾಗಿದೆ ಎಂಬುದು ದತ್ತಾ ಅಭಿಪ್ರಾಯವಾಗಿದೆ.

ಬ್ಲಿಂಕಿಟ್‌ನ ಸ್ವಾಧೀನ ಈ ತಿಂಗಳು ಪೂರ್ಣಗೊಂಡಿದ್ದು ಮತ್ತು ಎರಡು ತಂಡಗಳ ಏಕೀಕರಣವು ಪ್ರಾರಂಭವಾಗಿದೆ ಎಂದು ಅವರು ಹೇಳಿದರು. ತ್ವರಿತ ವಾಣಿಜ್ಯ ವ್ಯವಹಾರದಲ್ಲಿ ಹೂಡಿಕೆ ಮಾಡುವ ತನ್ನ ಕಾರ್ಯತಂತ್ರದ ಭಾಗವಾಗಿ ಷೇರು-ಸ್ವಾಪ್ ಒಪ್ಪಂದದಲ್ಲಿ ರೂ 4,447.48 ಕೋಟಿಗೆ ಬ್ಲಿಂಕ್ ಕಾಮರ್ಸ್ ಪ್ರೈವೇಟ್ ಲಿಮಿಟೆಡ್ (ಹಿಂದೆ ಗ್ರೋಫರ್ಸ್ ಎಂದು ಕರೆಯಲಾಗುತ್ತಿತ್ತು) ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ Zomato ಘೋಷಿಸಿತ್ತು.

ಝೊಮ್ಯಾಟೋ 4 ಸಿಇಒ ಗಳನ್ನು ನೇಮಿಸುತ್ತದೆ
ಮತ್ತೊಂದು ಡೆಲಿವರಿ ಸ್ಟಾರ್ಟ್ಅಪ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಅನುಮೋದನೆಯನ್ನು ಗೆದ್ದ ನಂತರ ಝೊಮಾಟೊ ತನ್ನ ಪ್ರಮುಖ ವ್ಯಾಪಾರ ಘಟಕಗಳನ್ನು ಮುನ್ನಡೆಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಿಸಲಿದೆ ಎಂಬುದು ಸುದ್ದಿಗಳಿಂದ ತಿಳಿದು ಬಂದಿದೆ. ಬ್ಲಿಂಕಿಟ್‌ನ ಒಪ್ಪಂದದ ನಂತರ ಕನಿಷ್ಟ ನಾಲ್ಕು ಘಟಕಗಳಿಗೆ ಸಿಇಒ ಗಳನ್ನು ನೇಮಿಸುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ: Multibagger Stock: 5 ವರ್ಷದಲ್ಲಿ 1 ಲಕ್ಷದಿಂದ 43 ಲಕ್ಷಕ್ಕೆ ಏರಿಕೆ ಕಂಡ ಮಲ್ಟಿಬ್ಯಾಗರ್ ಷೇರುಗಳು

ಜೂನ್ ಕ್ವಾರ್ಟರ್‌ನಲ್ಲಿ ಝೊಮ್ಯಾಟೋ ನಿವ್ವಳ ನಷ್ಟವು ₹186 ಕೋಟಿಗೆ ಅರ್ಧದಷ್ಟು ಕಡಿಮೆಯಾಗಿದೆ
ಈ ತಿಂಗಳ ಆರಂಭದಲ್ಲಿ, ಹೆಚ್ಚಿನ ಆದಾಯದ ಕಾರಣದಿಂದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅದರ ಏಕೀಕೃತ ನಿವ್ವಳ ನಷ್ಟವು ಸುಮಾರು ಅರ್ಧದಷ್ಟು ಕಡಿಮೆಯಾಗಿ ₹186 ಕೋಟಿಗೆ ತಲುಪಿದೆ ಎಂದು ಝೊಮ್ಯಾಟೋ ಹೇಳಿದೆ. ಕಂಪನಿಯ ಒಟ್ಟು ಆದಾಯವು ಕಳೆದ ವರ್ಷದ ಇದೇ ಅವಧಿಯಲ್ಲಿ ರೂ 916.6 ಕೋಟಿಗಳಿಗೆ ಪ್ರತಿಯಾಗಿ ರೂ 1,582 ಕೋಟಿಗೆ ಏರಿಕೆಯಾಗಿದೆ.
Published by:Ashwini Prabhu
First published: