ನವದೆಹಲಿ: ಆಹಾರವನ್ನು(Food) ಮನೆ ಬಾಗಿಲಿಗೆ ವಿತರಣೆ ಮಾಡುವ ಜೊಮ್ಯಾಟೊ(Zomato), ಸ್ವಿಗ್ಗಿಯಂತಹ(Swiggy) ಆಪ್ಗಳು ಬಿಡುವಿಲ್ಲದ ಹೈಟೆಕ್ ಬದುಕು ನಡೆಸುವವರಿಗೆ ಸುಲಭ ಮಾರ್ಗವಾಗಿದೆ ಎನ್ನಬಹುದು. ಏನು ಬೇಕೋ ಅದನ್ನು, ಯಾವ ಹೋಟೆಲ್ನಿಂದ(Hotel) ಬೇಕೋ ಆ ಆಹಾರವನ್ನು ಆರ್ಡರ್(Order) ಮಾಡಿ ಕ್ಷಣಾರ್ಧದಲ್ಲಿ ತರಿಸಿಕೊಂಡು ತಿನ್ನಬಹುದು. ದೊಡ್ಡ ದೊಡ್ಡ ಮಹಾನಗರಗಳಲ್ಲಿ ಜೊಮ್ಯಾಟೊ, ಸ್ವಿಗ್ಗಿಯಂತಹ ಆಹಾರ ವೇದಿಕೆಗಳು ಜನರ ಜೀವನ ಭಾಗವಾಗಿ ಬಿಟ್ಟಿವೆ.
ಜನರಿಗೆ ಸೇವೆಸಲ್ಲಿಸುತ್ತಿರುವ ಜೊತೆಗೆ ಸಾವಿರಾರು ಜನರಿಗೆ ಬದುಕು ಕಟ್ಟಿಕೊಳ್ಳಲು ಇದು ನೆರವಾಗಿದೆ. ಜೊಮ್ಯಾಟೊ ಯಾವಾಗಲೂ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತದೆ. ಹೊಸ ವರ್ಷದಲ್ಲಿ ಜೊಮ್ಯಾಟೋದ ವಿಷಯವಾಗಿದ್ದು ಕಂಪನಿಯ ಸಹ-ಸಂಸ್ಥಾಪಕ ಮತ್ತು ಮುಖ್ಯಸ್ಥ ದೀಪಿಂದರ್ ಗೋಯಲ್.
ಗ್ರಾಹಕರಿಗೆ ಫುಡ್ ಡೆಲಿವರಿ ಮಾಡಿದ ಜೊಮ್ಯಾಟೊ ಸಿಇಒ
ಇಯರ್ ಎಂಡ್ ದಿನ ಸಹಜವಾಗಿಯೇ ಜನ ಪಾರ್ಟಿ, ಅದು ಇದು ಅಂತಾ ತಿಂದು, ಕುಡಿದು ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿರುತ್ತಾರೆ. ಈ ವೇಳೆ ಜೊಮ್ಯಾಟೊದಂತಹ ಆಹಾರ ವಿತರಣೆ ವೇದಿಕೆಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿರುತ್ತದೆ.
ಇದನ್ನೂ ಓದಿ: Ayushman Bharat Yojana: ಕೇಂದ್ರದ ಬಂಪರ್ ಆಫರ್, ಉಚಿತ 1 ಲಕ್ಷ ಪಡೆಯೋಕೆ ಇನ್ನೂ ಹತ್ತೇ ದಿನ ಬಾಕಿ!
ಬಿಡುವಿಲ್ಲದ ಆರ್ಡರ್ಗಳನ್ನು ಡೆಲಿವರಿ ಬಾಯ್ಗಳ ಪಡೆಯುತ್ತಿರುತ್ತಾರೆ. ಸಾವಿರಾರು ಡೆಲಿವರಿ ಬಾಯ್ಗಳು ತಮ್ಮ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಅವರು ಮಾಡಿದಂತಹ ಆರ್ಡರ್ಗಳನ್ನು ನೀಡಲು ಬದ್ಧರಾಗಿರುತ್ತಾರೆ.
ಇಯರ್ ಎಂಡ್ ದಿನ ಇಂತಹ ಉತ್ತಮ ಕೆಲಸ ಮಾಡಿದ್ದು ಅದೇ ಕಂಪನಿಯ ಮುಖ್ಯಸ್ಥ ದೀಪಿಂದರ್ ಗೋಯಲ್. ಹೌದು, ಜೊಮ್ಯಾಟೋ ಕಂಪನಿಯ ಸಹ-ಸಂಸ್ಥಾಪಕ ಮತ್ತು ಮುಖ್ಯಸ್ಥ ದೀಪಿಂದರ್ ಸ್ವತಃ ಡೆಲಿವರಿ ಬಾಯ್ ಕೆಲಸ ಮಾಡಿದರ ಮೂಲಕ ಸುದ್ದಿಯಾಗಿದ್ದಾರೆ.
ದೀಪಿಂದರ್ ಗೋಯಲ್ ಹೊಸ ವರ್ಷದ ಮುನ್ನಾ ದಿನದಂದು ಆಹಾರ ವಿತರಣಾ ವೇದಿಕೆಯ ಡೆಲಿವರಿ ಬಾಯ್ ಆಗಿ ಹಲವು ಗ್ರಾಹಕರಿಗೆ ಫುಡ್ ಡೆಲಿವರಿ ಮಾಡಿದ್ದಾರೆ.
ಟ್ವೀಟ್ನಲ್ಲಿ ಹಂಚಿಕೊಂಡ ಗೋಯಲ್
ಈ ಬಗ್ಗೆ ತಮ್ಮ ಟ್ವಿಟರ್ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ ಎಲ್ಲಾ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಗೋಯಲ್ ಕೆಲಸಕ್ಕೆ ನೆಟ್ಟಿಗರಂತೂ ಪ್ರಶಂಸೆಗಳ ಮಳೆ ಸುರಿಸಿದ್ದಾರೆ.
My first delivery brought me back to the zomato office. Lolwut! https://t.co/zdt32ozWqJ pic.twitter.com/g5Dr8SzVJP
— Deepinder Goyal (@deepigoyal) December 31, 2022
ಟ್ವಿಟರ್ನಲ್ಲಿ ನಾನು ಮೊದಲ ಫುಡ್ ಆರ್ಡರ್ನ್ನು ಪಡೆದುಕೊಂಡಿದ್ದೇನೆ, ಅದನ್ನು ಸರಿಯಾದ ಸಮಯಕ್ಕೆ ಡೆಲಿವರಿ ಮಾಡುವುದಾಗಿ ಟ್ವೀಟ್ ಮಾಡಿದ್ದರು.
ಮೊದಲ ಆರ್ಡರ್ ಅನ್ನು ಡೆಲಿವರಿ ಮಾಡಿದ ನಂತರ ಗೋಯಲ್ ಆಫೀಸಿಗೆ ಮರಳಿದ್ದಾಗಿ ತಿಳಿಸಿದ್ದಾರೆ. ಇನ್ನೂ ಮತ್ತೊಂದು ಟ್ವೀಟ್ನಲ್ಲಿ ದೀಪಿಂದರ್ ಗೋಯಲ್ ತಾವು ಯಾರಿಗೆ ಫುಡ್ ಡೆಲಿವರಿ ಮಾಡಿದ್ದೇನೆ ಎಂದು ಸಹ ತಿಳಿಸಿದ್ದಾರೆ.
ಇದನ್ನೂ ಓದಿ: Jandhan Account: ಜನ್ಧನ್ ಖಾತೆ ಇದ್ದರೆ ನಿಮ್ಮ ಅಕೌಂಟ್ಗೆ ಬರಲಿದೆ 10 ಸಾವಿರ ಹಣ!
ಮತ್ತೊಂದು ಟ್ವೀಟ್ನಲ್ಲಿ ಗೋಯಲ್ ಮೊಮ್ಮಕ್ಕಳೊಂದಿಗೆ ಹೊಸ ವರ್ಷವನ್ನು ಆಚರಿಸುತ್ತಿರುವ ವಯಸ್ಸಾದ ದಂಪತಿಗಳಿಗೆ ಆಹಾರ ವಿತರಣೆ ಮಾಡಿದ್ದಾಗಿ ಹೀಗೆ ಸುಮಾರು ನಾಲ್ಕು ಆರ್ಡರ್ಗಳನ್ನು ಡೆಲಿವರಿ ಮಾಡಿದ್ದಾಗಿ ಅವರು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ದೀಪಿಂದರ್ ಗೋಯಲ್ ನಡೆಗೆ ಮೆಚ್ಚುಗೆ
ನೆಟಿಜನ್ಗಳು ದೀಪಿಂದರ್ ಗೋಯಲ್ ಅವರ ಪ್ರಯತ್ನ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ. ರಾಧಿಕಾ ಗುಪ್ತಾ ಎಂಬ ಬಳಕೆದಾರರು “ದೀಪಿಂದರ್ ಅವರನ್ನು ಈ ವಿಷಯದಲ್ಲಿ ಗೌರವಿಸಲೇಬೇಕು. ಎಂತಹ ಅದ್ಭುತ ಕೆಲಸ" ಎಂದು ಬರೆದುಕೊಂಡಿದ್ದಾರೆ.
ಜೊಮ್ಯಾಟೊಗೆ ಭಾರಿ ಲಾಭ
ಆಹಾರ ವಿತರಣಾ ಅಪ್ಲಿಕೇಶನ್ಗಳು ಹೊಸ ವರ್ಷದ ಮುನ್ನಾದಿನದಂದು ಭಾರಿ ಬೇಡಿಕೆಗಳನ್ನು ಪಡೆದುಕೊಂಡಿದ್ದವು ಎಂದು ವರದಿಗಳು ಹೇಳಿವೆ.
ಇನ್ನೂ ಜೊಮ್ಯಾಟೋ ಸಹ ಈ ದಿನ ಸಾಕಷ್ಟು ಲಾಭದಾಯಕವಾಗಿ ಸಾಗಿದೆ. ಇಯರ್ ಎಂಡ್ ದಿನ ಕಂಪನಿಯು ಸ್ವೀಕರಿಸಿದ ಆರ್ಡರ್ಗಳ ಮೊತ್ತವು ಮೊದಲ ಮೂರು ವರ್ಷಗಳಲ್ಲಿ ಕಂಪನಿಯು ಪಡೆದ ಆರ್ಡರ್ಗಳ ಮೊತ್ತಕ್ಕೆ ಸಮನಾಗಿತ್ತು ಎಂಬ ಸಂಗತಿಯನ್ನು ಗೋಯಲ್ ತಮ್ಮ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
ಡಿಸೆಂಬರ್ 31, 2022 ರಂದು ಕಂಪನಿಯ ಆರ್ಡರ್ಗಳು ಹಿಂದಿನ ವರ್ಷಕ್ಕಿಂತ 45% ಹೆಚ್ಚಾಗಿದೆ. ಇದು ನಮ್ಮ ಮತ್ತೊಂದು ಮೈಲಿಗಲ್ಲು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ