• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Zerodha: ಕ್ಯಾನ್ಸರ್‌ ಗೆದ್ದ ಝೆರೋಧಾ ಸಿಇಒ ನಿತಿನ್​ ಕಾಮತ್​ ಪತ್ನಿ, ಸೀಮಾ ಗೆಲುವನ್ನು ವಿಶೇಷವಾಗಿ ಸಂಭ್ರಮಿಸಿದ ಪತಿ!

Zerodha: ಕ್ಯಾನ್ಸರ್‌ ಗೆದ್ದ ಝೆರೋಧಾ ಸಿಇಒ ನಿತಿನ್​ ಕಾಮತ್​ ಪತ್ನಿ, ಸೀಮಾ ಗೆಲುವನ್ನು ವಿಶೇಷವಾಗಿ ಸಂಭ್ರಮಿಸಿದ ಪತಿ!

ನಿತಿನ್​ ಕಾಮತ್​, ಸೀಮಾ

ನಿತಿನ್​ ಕಾಮತ್​, ಸೀಮಾ

ಕಳೆದ ವರ್ಷ ನವೆಂಬರ್‌ನಲ್ಲಿ ಸೀಮಾ ಅವರಲ್ಲಿ 2ನೇ ಹಂತದ ಸ್ತನ ಕ್ಯಾನ್ಸರ್ ಇದ್ದದ್ದು ಪತ್ತೆಯಾಗಿತ್ತು. ಸದ್ಯ ಈ ಎಲ್ಲಾ ಹೋರಾಟಗಳನ್ನು ಜಯಿಸಿ ಬಂದಿದ್ದು, ಇತರೆ ರೋಗಿಗಳಿಗೆ ಸೀಮಾ ಮಾದರಿಯಾಗಿ, ಸ್ಪೂರ್ತಿಯಾಗಿದ್ದಾರೆ.

  • Trending Desk
  • 5-MIN READ
  • Last Updated :
  • Share this:

ಬ್ರೋಕರೇಜ್​ ಕಂಪನಿ ಝೆರೋಧಾ (Zerodha) ಸಿಇಒ ನಿತಿನ್​ ಕಾಮತ್​ (CEO Nitin Kamath) ತಮ್ಮ ಪತ್ನಿ ಸೀಮಾ ಕ್ಯಾನ್ಸರ್‌ (Cancer) ವಿರುದ್ಧ ಹೇಗೆ ಹೋರಾಡಿದ್ದರು ಎಂಬುದರ ಬಗ್ಗೆ ಈ ಹಿಂದೆಯೂ ಸಾಕಷ್ಟು ಪೋಸ್ಟ್‌ಗಳನ್ನು ಮಾಡಿದ್ದರು. ಆರೋಗ್ಯ ತಪಾಸಣೆ, ಆರೋಗ್ಯ ವಿಮೆ ಹೀಗೆ ಕ್ಯಾನ್ಸರ್ ಕುರಿತು ಜಾಗೃತಿ (Cancer Awareness) ಮೂಡಿಸಲು ನಿತಿನ್​ ಕಾಮತ್ ಪತ್ನಿಯ ಚೇತರಿಕೆ ಬಗ್ಗೆ ಅಪ್ಡೇಟ್‌ ಪೋಸ್ಟ್‌ ಮಾಡುತ್ತಲೇ ಬಂದಿದ್ದಾರೆ. ನಿತಿನ್‌ ಕಾಮತ್‌ ಅವರ ಇತ್ತೀಚಿನ ಪೋಸ್ಟ್‌ ತುಂಬಾ ವಿಶೇಷವಾಗಿದ್ದು, ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ.


ಕ್ಯಾನ್ಸರ್‌ ಗೆದ್ದ ನಿತಿನ್​ ಕಾಮತ್​ ಪತ್ನಿ ಸೀಮಾ


ಪ್ರಸ್ತುತ ಸೀಮಾ ಕ್ಯಾನ್ಸರ್‌ ಅನ್ನು ಸಂಪೂರ್ಣವಾಗಿ ಗೆದ್ದು ಚೇತರಿಸಿಕೊಂಡಿದ್ದಾರೆ. ಈ ವಿಷಯವನ್ನು ಸ್ವತಹಃ ಅವರ ಪತಿ ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಪತ್ನಿ ಮಾರಾಣಾಂತಿಕ ಕ್ಯಾನ್ಸರ್‌ ವಿರುದ್ಧ ಗೆದ್ದ ಖುಷಿಯನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ.

ಪತ್ನಿಯ ಗೆಲುವನ್ನು ವಿಶೇಷವಾಗಿ ಸಂಭ್ರಮಿಸಿದ ಕಾಮತ್


"ಸೀಮಾ ಈಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ನಾವು @zerodhaonline ನಿಂದ ಕಳೆದ ವಾರ ಸೂಪರ್ ಫನ್ ಡೆವಿಲ್ಸ್ ಸರ್ಕ್ಯೂಟ್ ಅನ್ನು ನಡೆಸುವ ಮೂಲಕ ಸೀಮಾ ಕ್ಯಾನ್ಸರ್‌ ವಿರುದ್ಧದ ಗೆಲುವನ್ನು ಆಚರಿಸಿದ್ದೇವೆ. ರೋಗನಿರ್ಣಯದಿಂದ ಶಸ್ತ್ರಚಿಕಿತ್ಸೆಯಿಂದ ಕಿಮೊಥೆರಪಿ ಚಿಕಿತ್ಸೆಯಿಂದ ಸಂಪೂರ್ಣ ಚೇತರಿಸಿಕೊಂಡು ಫಿಟ್‌ನೆಸ್‌ಗೆ ಹಿಂತಿರುಗಲು 1 ವರ್ಷ ತೆಗೆದುಕೊಂಡಿತು" ಎಂದು ಕೆಲವು ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಪೋಸ್ಟ್‌ ಮಾಡಿದ್ದಾರೆ.ಕೆಲವು ಕ್ರೀಡೆಗಳೊಂದಿಗೆ ಕಾಮತ್‌ ತಮ್ಮ ಪತ್ನಿ ಸೀಮಾ ಅವರ ಕ್ಯಾನ್ಸರ್‌ ವಿರುದ್ಧದ ಗೆಲುವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ. ಕ್ಯಾನ್ಸರ್‌ ರೋಗವನ್ನು ನಿರ್ಣಯಿಸಿ ಒಂದು ವರ್ಷದ ನಂತರ ಎಲ್ಲಾ ಚಿಕಿತ್ಸೆಗಳು ಮುಗಿದಿದ್ದು ಸೀಮಾ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ, ಅವಳ ಗೆಲುವನ್ನು ನಾವು ಈ ರೀತಿಯಾಗಿ ಸಂಭ್ರಮಿಸಿದ್ದೇವೆ ಎಂದಿದ್ದಾರೆ.


ಈ ಹಿಂದೆಯೂ  ಮಾಹಿತಿ ಹಂಚಿಕೊಂಡಿದ್ದ ಕಾಮತ್​!


ಇದಕ್ಕೂ ಮೊದಲು, ಅಂತರರಾಷ್ಟ್ರೀಯ ಮಹಿಳಾ ದಿನದಂದು, ನಿತಿನ್​ ಕಾಮತ್​ ಪತ್ನಿಯ ಕ್ಯಾನ್ಸರ್ ದಿನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. "ನನ್ನ ಪತ್ನಿ ಸೀಮಾ ಕಳೆದ ನವೆಂಬರ್‌ನಲ್ಲಿ ಸ್ತನ ಕ್ಯಾನ್ಸರ್​ಗೆ ತುತ್ತಾಗಿದ್ದರು ಎಂದು ಹೇಳುವ ಮೂಲಕ, ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಮತ್ತು ನಿಯಮಿತ ಆರೋಗ್ಯ ತಪಾಸಣೆ, ಆರೋಗ್ಯ ವಿಮೆ ಮತ್ತು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಜಾಗೃತಿ ಮೂಡಿಸಲು ಅವರು ತಮ್ಮ ಕ್ಯಾನ್ಸರ್​ನಿಂದ ಪಟ್ಟ ಪಾಡು ಮತ್ತು ಕಲಿತ ಪಾಠಗಳನ್ನು ಹಂಚಿಕೊಳ್ಳಲು ಆಕೆ ಬಯಸಿದ್ದಾರೆ.


ಮಹಿಳಾ ದಿನಾಚರಣೆಯ ಶುಭಾಶಯಗಳು" ಎಂದು ಕಾಮತ್ ಅವರು ಸೀಮಾ ಬ್ಲಾಗ್ ಪುಟದ ಲಿಂಕ್‌ನೊಂದಿಗೆ ಟ್ವೀಟ್ ಮಾಡಿದ್ದರು.ಅಲ್ಲಿ ಸೀಮಾ ಅವರು ತಮ್ಮ ಕ್ಯಾನ್ಸರ್ ಪ್ರಯಾಣವನ್ನು ವಿವರವಾಗಿ ವಿವರಿಸಿದ್ದರು.‌ಕ್ಯಾನ್ಸರ್​ ದಿನಗಳ ಬಗ್ಗೆ ಸೀಮಾ ಪೋಸ್ಟ್


ಸೀಮಾ ತಮ್ಮ ಬ್ಲಾಗ್​ನಲ್ಲಿ ಕ್ಯಾನ್ಸರ್​ ದಿನಗಳ ಬಗ್ಗೆ ಬರೆದುಕೊಂಡಿದ್ದರು. "ನಾನು ಸಂಪೂರ್ಣವಾಗಿ ಆರೋಗ್ಯವಾಗಿರಲು ಏನು ಬೇಕು ಎಲ್ಲವನ್ನೂ ಮಾಡಿದ್ದೇನೆ. ಕ್ಯಾನ್ಸರ್‌ ಇದೆ ಎಂದು ಗೊತ್ತಾಗಿನಿಂದ ಇಲ್ಲಿಯವರೆಗೂ ಯಾವುದೂ ದೈಹಿಕವಾಗಿ ನನ್ನನ್ನು ನಿಧಾನಗೊಳಿಸಿಲ್ಲ ಎಂದು ನಾನು ಭಾವಿಸಿದ್ದೇನೆ.ನನ್ನ ಚಿಕಿತ್ಸೆಗಳು ನನ್ನನ್ನು ದೈಹಿಕವಾಗಿ ದುರ್ಬಲಗೊಳಿಸಿವೆ. ಹೀಗಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ನಾನು ಶಕ್ತಳಾಗಲು ಕೆಲವು ವ್ಯಾಯಾಮಗಳನ್ನು ಮಾಡಬೇಕಿದೆ" ಎಂದು ಅವರು ತಮ್ಮ ಹಿಂದಿನ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು.


ಹಲವಾರು ಚಿಕಿತ್ಸೆಗಳು, ಸ್ತನಛೇದನದ ಬಳಿಕವೂ ತಮ್ಮ ಹಳೆಯ ಲೈಫ್‌ಸ್ಟೈಲ್‌ ಅನ್ನು ಕಾಪಾಡಿಕೊಳ್ಳಲು ಚಿಕಿತ್ಸೆಯ ನಂತರವೂ ಸೀಮಾ ವ್ಯಾಯಾಮಗಳನ್ನು ಮುಂದುವರಿಸಿದ್ದರು.


ಕ್ಯಾನ್ಸರ್‌ ರೋಗಿಗಳಿಗೆ ಸ್ಪೂರ್ತಿ ಇವರು


ಕಳೆದ ವರ್ಷ ನವೆಂಬರ್‌ನಲ್ಲಿ ಸೀಮಾ ಅವರಲ್ಲಿ 2ನೇ ಹಂತದ ಸ್ತನ ಕ್ಯಾನ್ಸರ್ ಇದ್ದದ್ದು ಪತ್ತೆಯಾಗಿತ್ತು. ಸದ್ಯ ಈ ಎಲ್ಲಾ ಹೋರಾಟಗಳನ್ನು ಜಯಿಸಿ ಬಂದಿದ್ದು, ಇತರೆ ರೋಗಿಗಳಿಗೆ ಸೀಮಾ ಮಾದರಿಯಾಗಿ, ಸ್ಪೂರ್ತಿಯಾಗಿದ್ದಾರೆ. ಪತಿ ಝೆರೋಧ ಸಿಇಒ ನಿತಿನ್​ ಕಾಮತ್ ಅವರ ಬೆಂಬಲ ಕೂಡ ಇತರರಿಗೆ ಮಾದರಿ ಎನ್ನಬಹುದು.

Published by:ವಾಸುದೇವ್ ಎಂ
First published: