• Home
  • »
  • News
  • »
  • business
  • »
  • Savings Tips: ನಿಮ್​ ಹತ್ರ 100 ರೂಪಾಯಿ ಇದ್ರೆ ಇಲ್ಲಿ ಹೂಡಿಕೆ ಮಾಡಿ, ಬ್ಯುಸಿನೆಸ್​ ಮೆನ್​ಗಳೆಲ್ಲ ಹೀಗೆ ದುಡ್ಡು ಮಾಡೋದು!

Savings Tips: ನಿಮ್​ ಹತ್ರ 100 ರೂಪಾಯಿ ಇದ್ರೆ ಇಲ್ಲಿ ಹೂಡಿಕೆ ಮಾಡಿ, ಬ್ಯುಸಿನೆಸ್​ ಮೆನ್​ಗಳೆಲ್ಲ ಹೀಗೆ ದುಡ್ಡು ಮಾಡೋದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾನ್ಯವಾಗಿ ಹೂಡಿಕೆದಾರರು ತಮಗೆ ಉತ್ತಮ ರಿಟರ್ನ್ಸ್ (Returns)  ಬರಬೇಕೆಂದರೆ ಎಲ್ಲಿ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಸಾಕಷ್ಟು ಗಮನವಹಿಸುತ್ತಿರುತ್ತಾರೆ.

  • Share this:

ಇಂದು ಷೇರು ಮಾರುಕಟ್ಟೆ (Share Market) ಎಂಬುದು ಸಾಕಷ್ಟು ಆಕರ್ಷಕ ಹೂಡಿಕೆ (Investment) ಯ ತಾಣವಾಗಿದೆ. ಹಾಗೆಂದ ಮಾತ್ರಕ್ಕೆ ಹಿಂದೆ ಇದಕ್ಕೆ ಬೇಡಿಕೆ ಇದ್ದಿದ್ದಿಲ್ಲ ಅಂತೇನಿಲ್ಲ. ಆದರೆ, ತಂತ್ರಜ್ಞಾನ (Technology) ಮುಂದುವರೆದಂತೆ, ಸಾಕಷ್ಟು ನವನವೀನ ಕ್ರಿಯಾತ್ಮಕ ಉದ್ದಿಮೆಗಳು ರೂಪಗೊಂಡಂತೆ ವೈವಿಧ್ಯಮಯ ಕಂಪನಿಗಳು ತಲೆ ಎತ್ತುತ್ತಿದ್ದು ಹಿಂದೆಂದಿಗಿಂತಲೂ ಇಂದು ಈಕ್ವಿಟೆ ಮಾರುಕಟ್ಟೆ (Equity Market) ಎಂಬುದು ಬಹಳಷ್ಟು ಹೂಡಿಕೆದಾರರ ಆಸಕ್ತದಾಯಕ ಕ್ಷೇತ್ರವಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ಹೂಡಿಕೆದಾರರು ತಮಗೆ ಉತ್ತಮ ರಿಟರ್ನ್ಸ್ (Returns)  ಬರಬೇಕೆಂದರೆ ಎಲ್ಲಿ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಸಾಕಷ್ಟು ಗಮನವಹಿಸುತ್ತಿರುತ್ತಾರೆ.


ಈ ಕುರಿತು ಬ್ಯುಸಿನೆಸ್ ಟುಡೇ ಯೊಂದಿಗೆ ಸಂದರ್ಶನವೊಂದನ್ನು ನೀಡಿರುವ ಜಿರೋಧಾ ಸಂಸ್ಥೆಯ ಮುಖ್ಯಸ್ಥರಾದ ನಿಖಿಲ್ ಅವರು ತಮ್ಮ ಬಳಿ ಅಕಸ್ಮಾತ್ ನೂರು ರೂಪಾಯಿ ಇದ್ದಿದ್ದರೆ ಅವರು ಆ ಹಣವನ್ನು NASDAQ ಅಥವಾ ಭಾರತದ ದೊಡ್ಡ ಕ್ಯಾಪ್ ಹೊಂದಿರುವಂತಹ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದುದಾಗಿ ಹೇಳಿದ್ದಾರೆ.


100 ಇದ್ರೆ ಇಲ್ಲಿ ಇನ್ವೆಸ್ಟ್​ ಮಾಡ್ತಿದ್ರಂತೆ ನಿಖಿಲ್​!


ಹೀಗೆ ಹೇಳುವುದರ ಹಿಂದೆ ಕಾರಣವೂ ಸಹ ಇದೆ ಎಂದು ಹೇಳಬಹುದು. ಏಕೆಂದರೆ ನಿಖಿಲ್ ಅವರು ಹೇಳುವಂತೆ ಇಂದು ಜಗತ್ತಿನಲ್ಲಿ ತರಾವರಿ ಉದ್ದಿಮೆಗಳು ತಲೆ ಎತ್ತುತ್ತಿದ್ದು ಯಶಸ್ಸನ್ನೂಗಳಿಸುತ್ತಿವೆ. ಅವುಗಳಲ್ಲಿ ನಾವಿನ್ಯತೆಯಿಂದ ಕೂಡಿರುವ ಹಲವು ಪರಿಕಲ್ಪನೆಗಳನ್ನು ಹೊಂದಿರುವ ಸಂಸ್ಥೆಗಳು ಮಂಚೂಣಿಗೆ ಬರುತ್ತಿದ್ದು ಅಂತಹ ಬಹುತೇಕ ಸಂಸ್ಥೆಗಳು NASDAQ ಪಟ್ಟಿಯಲ್ಲಿ ಸೇರಿಕೊಂಡಿವೆ. ಅಲ್ಲದೆ ಖಾಸಗಿಮಾರುಕಟ್ಟೆಗಳು ಸಾರ್ವಜನಿಕ ಮಾರುಕಟ್ಟೆಗಳಿಗಿಂತ ಸಾಕಷ್ಟು ಅಪಾಯಕಾರಿ ಹಾಗೂ ದುಬಾರಿಯಾಗಿವೆ ಎಂದು ವಿವರಿಸುತ್ತಾರೆ ನಿಖಿಲ್.‘


ಅದರಲ್ಲೂ ನಿರ್ದಿಷ್ಟವಾಗಿ ಯಾವ ಮಾರುಕಟ್ಟೆಯನ್ನು ಆಯ್ಕೆ ಮಾಡ ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ನಿಖಿಲ್ ಅವರು ಭಾರತೀಯ ಸಾರ್ವಜನಿಕ ಮಾರುಕಟ್ಟೆಗಳಿಗಿಂತಲೂ ಜಾಗತಿಕ ಮಟ್ಟದ ಮಾರುಕಟ್ಟೆಗಳಿಗೆ ತಮ್ಮ ಮೊದಲ ಆದ್ಯತೆಯಿರುವುದಾಗಿ ಹೇಳಿದ್ದಾರೆ.


ಇದನ್ನೂ ಓದಿ: ನೀವು ಮಸಾಲೆ ಉದ್ಯಮ ಆರಂಭಿಸಲು ಯೋಚಿಸುತ್ತಿದ್ದೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ


ಸ್ಟಾಕ್​ ಬ್ರೋಕರೇಜ್​ ಈ ಜಿರೋಧಾ!


2009 ರಲ್ಲಿ ನಿಖಿಲ್ ಅವರು ತಮ್ಮ ಸಹೋದರ ನಿತೀನ್ ಜೊತೆಗೂಡಿ ಜಿರೋಧಾ ಎಂಬ ಸ್ಟಾಕ್ ಬ್ರೋಕರೇಜ್ ಸಂಸ್ಥೆಯನ್ನು ಸ್ಥಾಪಿಸಿದರು. ತಮ್ಮ ಆರಂಭಿಕ ಎಂಟಿಟಿಗಳಾದ ರೈನ್ ಮ್ಯಾಟರ್ ಕ್ಲೈಮೆಟ್ ಹಾಗೂ ರೈನ್ ಮ್ಯಾಟರ್ ಫಿಂಟೆಕ್ ಗಳ ಮೂಲಕ ಸಹೋದರರಿಬ್ಬರು ಹಲವಾರು ಸ್ಟಾರ್ಟಪ್ ಗಳಲ್ಲಿ ತಮ್ಮ ಹೂಡಿಕೆಗಳನ್ನು ಮಾಡಿದ್ದಾರೆ. ಅಲ್ಲದೆ ಜಿರೋಧಾ ತನ್ನ ಸಂಪನ್ಮೂಲಗಳನ್ನು ಬಳಸಿ ತ್ವರಿತ ವೇಗ ಹಾಗೂ ಅಭಿವೃದ್ಧಿ ಹೊಂದಿದಂತಹ ಕಂಪನಿಗಳ ಪೈಕಿ ಎಲ್ಲಕ್ಕಿಂತಲೂ ಉತ್ತಮ ಉದಾಹರಣೆಯಾಗಿ ಸಾಮಾನ್ಯವಾಗಿ ಪರಿಗಣಿಸಲ್ಪಡುತ್ತದೆ.


ಇನ್ನು ನಿಖಿಲ್ ಅವರನ್ನು ಬಾಹ್ಯ ಮೂಲಗಳಿಂದ ನಿಧಿ ಸಂಗ್ರಹಿಸುವುದರ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಖಂಡಿತವಾಗಿಯೂ ಅದನ್ನು ಮಾಡಬಹುದು ಎಂಬ ತ್ವರಿತ ಪ್ರತಿಕ್ರಿಯೆ ನೀಡುತ್ತಾರೆ. ಜಿರೋಧಾ ಆರಂಭಿಸುವಾಗ ನಿಧಿ ಸಂಗ್ರಹಿಸುವ ಬಗ್ಗೆ ನಿಖಿಲ್ ಅವರು ಪ್ರಚೋದಿತರಾಗಿದ್ದಾಗಿಯೂ ಆದರೆ ಆ ಸಮಯದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತಾಗಿಯೂ ಹೇಳಿದ ಅವರು ಆ ಸಮಯದಲ್ಲಿ ನಮಗೆ ಹಣದ ಅವಶ್ಯಕತೆಯಿತ್ತು ಆದರೆ ಬಹು ಜನರು ಅದರಿಂದ ಹಿಂಜರಿದಿದ್ದರು ಎಂತಲೂ ಹೇಳುತ್ತಾರೆ.


ಇದನ್ನೂ ಓದಿ: ಭಾರತದಲ್ಲಿ ಆಹಾರ ವಿತರಣಾ ಸೇವೆಯನ್ನು ಶೀಘ್ರವೇ ಸ್ಥಗಿತಗೊಳಿಸಲಿದೆಯಂತೆ ಅಮೆಜಾನ್


ಆದರೆ, ತರುವಾಯ ಸಹಓದರರಿಬ್ಬರೂ ಕಂಪನಿ ಸ್ಥಾಪಿಸಿ ಎಂಟು ವರ್ಷಗಳು ಕಳೆದ ಬಳಿಕ ಸಾಕಷ್ಟು ಹೂಡಿಕೆದಾರರು ಹಣ ತೊಡಗಿಸುವ ಉದ್ದೇಶದಿಂದ ಅವರ ಬಳಿಗೆ ಬಂದರು. ಅಷ್ಟರಲ್ಲಾಗಲೇ ಜಿರೋಧಾ ಸಾಕಷ್ಟು ಲಾಭದಾಯಕ ಸಂಸ್ಥೆಯಾಗಿ ರೂಪಗೊಂಡಿತ್ತು ಹಾಗೂ ಆ ಸಮಯದಲ್ಲಿ ನಿಖಿಲ್ ಹಾಗೂ ನಿತೀನ್ ಅವರಿಗೆ ಯಾವ ಬಾಹ್ಯ ಹೂಡಿಕೆಗಳ ಅವಶ್ಯಕತೆಯೂ ಇರಲಿಲ್ಲ. ಸದ್ಯ ನಿಖಿಲ್ ಹೇಳುವಂತೆ ಅವರ ಸಂಸ್ಥೆ ಸಾರ್ವಜನಿಕ ವಲಯಕ್ಕೆ ಹೋಗುವ ಯಾವ ಲಕ್ಷಣವೂ ಇಲ್ಲ, ಇನ್ನೊಂದೆಡೆ ನಿಖಿಲ್ ತಮ್ಮ ಇನ್ನೊಂದು ಅನ್ವೇಷಣೆಯಾದ ಟ್ರೂಬಿಕಾನ್ ನಿರ್ಮಾಣದಲ್ಲಿ ನಿರತರಾಗಿದ್ದಾರೆ.

Published by:ವಾಸುದೇವ್ ಎಂ
First published: