Work from Home: 90% ಉದ್ಯೋಗಿಗಳಿಗೆ ಪರ್ಮನೆಂಟ್ ವರ್ಕ್​ ಫ್ರಂ ಹೋಂ ಕೊಟ್ಟ ಕಂಪನಿ, ಎಲ್ರೂ ಖುಷ್

ಪ್ರಮುಖ ಹಣಕಾಸು ಸೇವಾ ಕಂಪನಿ ಝೆರೋಧಾ ಹೆಸರನ್ನು ನೀವು ಕೇಳಿರಬೇಕಲ್ಲವೇ? ಅದೇ ಏಪ್ರಿಲ್ ನಲ್ಲಿ ತನ್ನ ಉದ್ಯೋಗಿಗಳು ದೇಹದ ತೂಕ ಇಳಿಸಿಕೊಂಡರೆ ಅರ್ಧ ತಿಂಗಳ ಸಂಬಳವನ್ನು ಬೋನಸ್ ಘೋಷಿಸಿತ್ತು. ಸಿಇಒ ನಿತಿನ್ ಕಾಮತ್ ಅವರು 1100 ಉದ್ಯೋಗಿಗಳಲ್ಲಿ ಸುಮಾರು 950 ಉದ್ಯೋಗಿಗಳು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
ಸುಮಾರು ಎರಡು ವರ್ಷಗಳಿಂದ ಕೋವಿಡ್-19 (Covide-19) ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಅನೇಕ ಕಂಪನಿಗಳು (Company) ಬೀಗ (Lock) ಹಾಕಿಕೊಂಡು ತಮ್ಮ ಉದ್ಯೋಗಿಗಳಿಗೆ (Employee) ಮನೆಯಲ್ಲಿಯೇ ಕುಳಿತು ಕೆಲಸ ಮಾಡುವಂತೆ (Work from Home) ಹೇಳಿದ್ದವು. ಈಗ ಮತ್ತೆ ಕೋವಿಡ್-19 ಪ್ರಕರಣಗಳು (Case) ದಿನೇ ದಿನೇ ಕಡಿಮೆ ಆಗುತ್ತಾ ಬರುತ್ತಿದ್ದು, ಎಲ್ಲಾ ಕಂಪನಿಗಳು ನಿಧಾನವಾಗಿ ಬೀಗವನ್ನು ತೆಗೆದಿದ್ದು, ಉದ್ಯೋಗಿಗಳನ್ನು ಆಫೀಸಿಗೆ (Office) ಬಂದು ಕೆಲಸ (Work) ಮಾಡುವಂತೆ ಕೇಳುತ್ತಿದ್ದಾರೆ. ಆದರೆ ಕೆಲವು ದೊಡ್ಡ ದೊಡ್ಡ ಕಂಪನಿಗಳ ಉದ್ಯೋಗಿಗಳು ಆಫೀಸಿಗೆ ಮರಳಿ ಬರುವ ನಿರ್ಧಾರವನ್ನು ತಳ್ಳಿ ಹಾಕುತ್ತಿದ್ದಾರೆ.

ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ
ಮೊನ್ನೆ ತಾನೇ ನಾವು ಆ್ಯಪಲ್ ಕಂಪನಿಯ ಮಷಿನ್ ಲರ್ನಿಂಗ್ ನಿರ್ದೇಶಕ ಇಯಾನ್ ಗುಡ್ ಫೆಲೋ ಕೂಡ ಇದೇ ರೀತಿ ಭಾವಿಸಿ ಅವರು ಕಚೇರಿಗೆ ಮರಳಲು ಕೇಳಿದ ನಂತರ ಆ್ಯಪಲ್ ನಲ್ಲಿರುವ ತಮ್ಮ ಕೆಲಸವನ್ನು ತೊರೆದಿದ್ದರು. ಈಗ ಮತ್ತೆ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಂಪನಿಗೆ ಕರೆಯಿಸಿಕೊಳ್ಳುವ ನಿರ್ಧಾರವನ್ನು ಮರು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಝೆರೋಧಾ ಸಿಇಒ ನಿತಿನ್ ಕಾಮತ್ ವರ್ಕ್ ಫ್ರಮ್ ಹೋಮ್ ಬಗ್ಗೆ ಹೇಳಿದ್ದೇನು?
ಪ್ರಮುಖ ಹಣಕಾಸು ಸೇವಾ ಕಂಪನಿ ಝೆರೋಧಾ ಹೆಸರನ್ನು ನೀವು ಕೇಳಿರಬೇಕಲ್ಲವೇ? ಅದೇ ಏಪ್ರಿಲ್ ನಲ್ಲಿ ತನ್ನ ಉದ್ಯೋಗಿಗಳು ದೇಹದ ತೂಕ ಇಳಿಸಿಕೊಂಡರೆ ಅರ್ಧ ತಿಂಗಳ ಸಂಬಳವನ್ನು ಬೋನಸ್ ಘೋಷಿಸಿತ್ತು. ಇದನ್ನು ಝೆರೋಧಾ ಸಿಇಒ ನಿತಿನ್ ಕಾಮತ್ ಅವರು ಸಾಮಾಜಿಕ ಮಾಧ್ಯಮಗಳಾಗಿರುವ ಟ್ವಿಟ್ಟರ್ ಮತ್ತು ಲಿಂಕ್ಡ್ ಇನ್ ಮೂಲಕ ಸ್ವತಃ ಘೋಷಿಸಿದ್ದರು. ಝೆರೋಧಾ ನೌಕರರು ತಮ್ಮ ಆರೋಗ್ಯ, ಫಿಟ್ನೆಸ್ ಪ್ರಯಾಣ ಆರಂಭಿಸಲು ಇದು ಉಪಯುಕ್ತ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:  SBI Alert: ನೀವು ಸ್ಟೇಟ್ ಬ್ಯಾಂಕ್ ಗ್ರಾಹಕರೇ? ಇದನ್ನು ತಪ್ಪದೇ ಓದಿ

ಈಗ ಮತ್ತೂಮ್ಮೆ ಝೆರೋಧಾ ಕಂಪನಿಯು ತನ್ನ ಉದ್ಯೋಗಿ ಪರ ಚಿಂತನೆಗಳಿಂದ ಸುದ್ದಿಯಲ್ಲಿದೆ ಎಂದು ಹೇಳಬಹುದು. ಸಿಇಒ ನಿತಿನ್ ಕಾಮತ್ ಅವರು 1100 ಉದ್ಯೋಗಿಗಳಲ್ಲಿ ಸುಮಾರು 950 ಉದ್ಯೋಗಿಗಳು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಕಾಮತ್ ಅವರು ಮನಿ ಕಂಟ್ರೋಲ್ ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಕೋರ್ ತಂಡವು ಹೈಬ್ರಿಡ್ ಮಾದರಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಸಂದರ್ಭದಲ್ಲಿ ಅನೇಕ ಕಚೇರಿಗಳು ಮತ್ತು ಕೆಲಸದ ಸ್ಥಳಗಳನ್ನು ಮುಚ್ಚಿದ ನಂತರ ಕಂಪನಿಯು ಆನ್‌ಲೈನ್ ಕಾರ್ಯಾಚರಣೆಯನ್ನು ಸ್ಥಳಾಂತರಿಸಿತ್ತು.

ಸೆಟಲೈಟ್ ಕಚೇರಿಗಳ ಪ್ರಾರಂಭ
ಮನೆಯಿಂದ ಕೆಲಸ ಮಾಡುವ ತನ್ನ ಉದ್ಯೋಗಿಗಳಿಗಾಗಿ, ಕಂಪನಿಯು ಕರ್ನಾಟಕದ ಸಣ್ಣ ಪಟ್ಟಣಗಳಲ್ಲಿ ಸೆಟಲೈಟ್ ಕಚೇರಿಗಳನ್ನು ಸ್ಥಾಪಿಸಲು ಪ್ರಾರಂಭಿಸಿದೆ ಎಂದು ಅವರು ಈ ಹಿಂದೆ ಉಲ್ಲೇಖಿಸಿದ್ದರು. "ನಮ್ಮ ತಂಡದ 85 ರಿಂದ 90 ಪ್ರತಿಶತದಷ್ಟು ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಮತ್ತು ನಾವು ಅದನ್ನು ಹಾಗೆಯೇ ಮುಂದುವರಿಸುತ್ತೇವೆ" ಎಂದು ಕಾಮತ್ ಹೇಳಿದರು. ನಾವು ಕರ್ನಾಟಕದಲ್ಲಿರುವ ಬೆಳಗಾವಿಯಲ್ಲಿ ಒಂದು ಕಚೇರಿಯನ್ನು ಸ್ಥಾಪಿಸಿದ್ದೇವೆ.

"ನಾವು ಮನೆಯಿಂದ ಶಾಶ್ವತ ಕೆಲಸ ಮಾಡುತ್ತೇವೆ ಮತ್ತು ಜನರು ತಮ್ಮ ಸಣ್ಣ ಪಟ್ಟಣಗಳಲ್ಲಿ ವಾಸಿಸುವುದನ್ನು ಆನಂದಿಸುತ್ತಿದ್ದಾರೆ ಎಂದು ನಮಗೆ ಅನೇಕರು ಕರೆ ಮಾಡಿ ತಿಳಿಸಿದ್ದಾರೆ” ಎಂದು ಹೇಳಿದರು.

ಭಾರತದ ಅತ್ಯಂತ ಮೌಲ್ಯಯುತ ಸ್ಟಾರ್ಟ್ ಅಪ್ ಗಳಲ್ಲಿ ಒಂದಾದ ಝೆರೋಧಾ
ಝೆರೋಧಾ ಭಾರತದ ಅತ್ಯಂತ ಮೌಲ್ಯಯುತ ಸ್ಟಾರ್ಟ್ ಅಪ್ ಗಳಲ್ಲಿ ಒಂದಾಗಿದೆ ಮತ್ತು ಬಾಹ್ಯ ಧನ ಸಹಾಯದಲ್ಲಿ ಒಂದೇ ಒಂದು ಪೈಸೆಯನ್ನು ಸಂಗ್ರಹಿಸದ ಕೆಲವೇ ಕೆಲವು ಭಾರತೀಯ ಯುನಿಕಾರ್ನ್ ಗಳಲ್ಲಿ ಇದು ಒಂದಾಗಿದೆ. ಇದಲ್ಲದೆ, ಇದು ಲಾಭದಾಯಕವಾಗಿದೆ. ಸಂಸ್ಥಾಪಕರಾದ - ಬಿಲಿಯನೇರ್ ಸಹೋದರರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಕಂಪನಿಯ ಹೂಡಿಕೆಯ ಗಮನಾರ್ಹ ಶೇಕಡಾವಾರು ಹೊಂದಿದ್ದಾರೆ.

ಇದನ್ನೂ ಓದಿ: China Economy Collapsed: ಚೀನಾದಲ್ಲಿ ಕುಸಿಯುತ್ತಿದೆ ಆರ್ಥಿಕ ಚಟುವಟಿಕೆ! ಏನು ಕಾರಣ?

ಈ ಕಂಪನಿಯನ್ನು ಆಗಸ್ಟ್ 2010 ರಲ್ಲಿ ಸ್ಥಾಪಿಸಲಾಯಿತು ಮತ್ತು ಇಂದು ಇದು ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕರ್ ಆಗಿದೆ, 9 ದಶಲಕ್ಷಕ್ಕೂ ಹೆಚ್ಚು ಗ್ರಾಹಕರು ದೇಶದ ಚಿಲ್ಲರೆ ವ್ಯಾಪಾರದ ಪರಿಮಾಣದ 15 ಪ್ರತಿಶತಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದಾರೆ. ಇದು ರೈನ್ ಮ್ಯಾಟರ್, ಫಿನ್ಟೆಕ್ ಫಂಡ್ ಮತ್ತು ಸ್ಟಾರ್ಟ್ಅಪ್ ಗಳಲ್ಲಿ ಹಣವನ್ನು ಹೂಡಿಕೆ ಮಾಡಿದ ಇನ್ಕ್ಯುಬೇಟರ್ ಅನ್ನು ಸಹ ನಡೆಸುತ್ತದೆ.
Published by:Ashwini Prabhu
First published: