Salary Offer: ದೇಹದ ತೂಕ ಇಳಿಸಿದ್ರೆ ಉದ್ಯೋಗಿಗಳಿಗೆ ಸಿಗುತ್ತೆ ಬೋನಸ್! ಯಾವ ಕಂಪನಿ ಇದು?

ಉದ್ಯೋಗಿಗಳು ತಮ್ಮ BMI ಅನ್ನು 24 ಕ್ಕಿಂತ ಕಡಿಮೆಗೆ ಯಶಸ್ವಿಯಾಗಿ ಇಳಿಸಿದರೆ ಅವರು ಅರ್ಧ ತಿಂಗಳ ಸಂಬಳವನ್ನು ಬೋನಸ್ ಆಗಿ ಪಡೆಯುತ್ತಾರೆ. ಇದೊಂದು ಮೋಜಿನ ರೀತಿಯ ಆಫರ್ ಎಂದು ಸಹ ಝೆರೋಧಾ ಸಿಇಒ ನಿತಿನ್ ಕಾಮತ್ ಸ್ಪಷ್ಟಪಡಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಹಬ್ಬಗಳು ಮತ್ತು ಇತರ ಸಂದರ್ಭಗಳಲ್ಲಿ ಕಂಪನಿಗಳು ಉದ್ಯೋಗಿಗಳಿಗೆ ಉಡುಗೊರೆ ಮತ್ತು ಸಂಬಳದ ಬೋನಸ್ (Bonus Salary) ನೀಡುವುದನ್ನು ಕೇಳಿದ್ದೇವೆ. ಆದರೆ ಇತ್ತೀಚಿನ ಹೊಸ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹೊಸ ರೀತಿಯ ಬಹುಮಾನಗಳನ್ನು ಘೋಷಿಸುತ್ತಿವೆ. ಪ್ರಮುಖ ಹಣಕಾಸು ಸೇವಾ ಕಂಪನಿ ಝೆರೋಧಾ ಉದ್ಯೋಗಿಗಳು (Zerodha Employees) ತೂಕ ಇಳಿಸಿಕೊಂಡರೆ ಅರ್ಧ ತಿಂಗಳ ಸಂಬಳವನ್ನು ಬೋನಸ್ ಘೋಷಿಸಿದೆ. ಇದನ್ನು ಝೆರೋಧಾ ಸಿಇಒ ನಿತಿನ್ ಕಾಮತ್ ( Zerodha co-founder Nithin Kamath) ಟ್ವಿಟರ್ ಮತ್ತು ಲಿಂಕ್ಡ್‌ಇನ್ ಮೂಲಕ ಸ್ವತಃ ಘೋಷಿಸಿದ್ದಾರೆ. ಝೆರೋಧಾ ನೌಕರರು ತಮ್ಮ ಆರೋಗ್ಯ, ಫಿಟ್ನೆಸ್ ಪ್ರಯಾಣ ಆರಂಭಿಸಲು ಇದು ಉಪಯುಕ್ತ ಎಂದು ಅವರು ವ್ಯಾಖ್ಯಾನಿಸಿದ್ದಾರೆ.  

    Zerodha ಸಂಸ್ಥಾಪಕ ಮತ್ತು CEO ನಿತಿನ್ ಕಾಮತ್ ಅವರು ವಿಶ್ವ ಆರೋಗ್ಯ ದಿನದಂದು ತಮ್ಮ ಕಂಪನಿಯ ಸಿಬ್ಬಂದಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದ್ದಾರೆ. ನಮ್ಮ ತಂಡದಲ್ಲಿ BMI <25 (BMI ಅಂದರೆ ಬಾಡಿ ಮಾಸ್ ಇಂಡೆಕ್ಸ್)  ಹೊಂದಿರುವ ಯಾರಾದರೂ ಅರ್ಧ ತಿಂಗಳ ಸಂಬಳವನ್ನು ಬೋನಸ್ ಆಗಿ ಪಡೆಯುತ್ತಾರೆ ಎಂದು ನಿತಿನ್ ಕಾಮತ್ ಹೊಸ ಬಗೆಯ ಆಫರ್ ಘೋಷಿಸಿದ್ದಾರೆ.

    ನಿತಿನ್ ಕಾಮತ್ ಅವರ ಪ್ರಕಾರ ಝೆರೋಧಾ ಉದ್ಯೋಗಿಗಳ ಸರಾಸರಿ ಬಾಡಿ ಮಾಸ್ ಇಂಡೆಕ್ಸ್ 25.3 ಆಗಿದೆ.  ಉದ್ಯೋಗಿಗಳು ತಮ್ಮ BMI ಅನ್ನು 24 ಕ್ಕಿಂತ ಕಡಿಮೆಗೆ ಯಶಸ್ವಿಯಾಗಿ ಇಳಿಸಿದರೆ ಅವರು ಅರ್ಧ ತಿಂಗಳ ಸಂಬಳವನ್ನು ಬೋನಸ್ ಆಗಿ ಪಡೆಯುತ್ತಾರೆ. ಇದೊಂದು ಮೋಜಿನ ರೀತಿಯ ಆಫರ್ ಎಂದು ಸಹ ಝೆರೋಧಾ ಸಿಇಒ ನಿತಿನ್ ಕಾಮತ್ ಸ್ಪಷ್ಟಪಡಿಸಿದ್ದಾರೆ.



    ಇದನ್ನೂ ಓದಿ: Business Idea: ಬೆಂಗಳೂರಲ್ಲಿ 50 ಸಾವಿರ ಹಣಕ್ಕೆ ಭರ್ಜರಿ ಲಾಭ ತರಬಲ್ಲ ಬ್ಯುಸಿನೆಸ್ ಇದು!

    Zerodha ನ ಸಂಸ್ಥಾಪಕ ನಿತಿನ್ ಕಾಮತ್ ಮುಂದುವರೆದು, BMI ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ಪತ್ತೆಹಚ್ಚುವ ಅಳತೆಯಲ್ಲ ಆದರೆ ಬಾಡಿ ಮಾಸ್ ಇಂಡೆಕ್ಸ್ ಇಳಿಕೆಯನ್ನು ಪ್ರಾರಂಭಿಸಲು ಸುಲಭವಾದ ಮಾರ್ಗವಾಗಿದೆ ಎಂದು ಹಕ್ಕು ನಿರಾಕರಣೆಯನ್ನೂ ಮಾಡಿದ್ದಾರೆ. ಅಂದಹಾಗೆ, ನೀವು ಆರೋಗ್ಯವಾಗಿರಲು ಬಯಸಿದರೆ ಪ್ರತಿದಿನ 10,000 ಹೆಜ್ಜೆಗಳನ್ನು ನಡೆಯುವುದು ಉತ್ತಮ ಆರಂಭವಾಗಿದೆ" ಎಂದು ಕಾಮತ್ ತೀರ್ಮಾನಿಸಿದ್ದಾರಂತೆ.


    ಇದನ್ನೂ ಓದಿ: ATM Card ಇಲ್ಲದೆಯೂ ATMನಿಂದ ಹಣ ವಿತ್ ಡ್ರಾ ಮಾಡೋದು ಹೇಗೆ?

    ಬಾಡಿ ಮಾಸ್ ಇಂಡೆಕ್ಸ್ (BMI) ಎತ್ತರ ಮತ್ತು ತೂಕದ ಆಧಾರದ ಮೇಲೆ ದೇಹದ ಕೊಬ್ಬಿನ ಅಳತೆಯಾಗಿದ್ದು ಅದು ವಯಸ್ಕ ಪುರುಷರು ಮತ್ತು ಮಹಿಳೆಯರಿಗೆ ಅನ್ವಯಿಸುತ್ತದೆ.
    Published by:guruganesh bhat
    First published: