Business Idea: ಹೂಡಿಕೆ ಇಲ್ಲದೇ ಹಣ ಗಳಿಸುವ ವ್ಯವಹಾರಗಳ ಪಟ್ಟಿ ಇಲ್ಲಿದೆ

ಮೊಬೈಲ್, ಲ್ಯಾಪ್‍ಟಾಪ್ ಅಥವಾ ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ ಸೌಲಭ್ಯ ಇವಿಷ್ಟಿದ್ದರೆ ಸಾಕು ನೀವು ಕೂಡ ಉದ್ಯಮಿ ಆಗಬಹುದು. ಅಂತಹ ಕೆಲವು ಆನ್‍ಲೈನ್ ವ್ಯಾಪಾರ/ಉದ್ಯಮಗಳ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದು ಉದ್ದಿಮೆಯನ್ನು ಆರಂಭಿಸುವುದು ಎಂದರೆ ಸುಲಭವಲ್ಲ, ಕಚೇರಿ ಬಾಡಿಗೆ (Office Rent), ಕೆಲಸಗಾರರ ಸಂಬಳ (Salary) , ಮಾರ್ಕೆಟಿಂಗ್ (Marketing) ಮತ್ತಿತರ ಕಾರ್ಯಗಳಿಗೆ ಬಂಡವಾಳ  (capital) ಬೇಕಾಗುತ್ತದೆ. ಆದರೆ ಕಡಿಮೆ ಬಂಡವಾಳ ಅಥವಾ ಯಾವುದೇ ಬಂಡವಾಳವಿಲ್ಲದೆ ಮಾಡಲು ಸಾಧ್ಯವೇ? ಆನ್‍ಲೈನ್‍ ನಲ್ಲಿ ಸಾಧ್ಯವಿದೆ. ಯಾವುದೇ ಕಚೇರಿಯನ್ನು ಬಾಡಿಗೆ ಪಡೆಯದೆ, ಮಾರ್ಕೆಟಿಂಗ್‍ಗೆ ಅತಿಯಾಗಿ ಹೂಡಿಕೆ ಮಾಡದೆ ಮತ್ತು ಕೆಲಸಗಾರರಿಗೆ ಸಂಬಳ ಕೊಡುವ ಗೋಜಿಲ್ಲದೆ, ಮನೆಯಿಂದಲೇ ಮಾಡುವ ಕೆಲವು ಆನ್‍ಲೈನ್ ಬ್ಯುಸಿನೆಸ್‍ಗಳಿವೆ. ಮೊಬೈಲ್, ಲ್ಯಾಪ್‍ಟಾಪ್ ಅಥವಾ ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ ಸೌಲಭ್ಯ ಇವಿಷ್ಟಿದ್ದರೆ ಸಾಕು ನೀವು ಕೂಡ ಉದ್ಯಮಿ ಆಗಬಹುದು. ಅಂತಹ ಕೆಲವು ಆನ್‍ಲೈನ್ ವ್ಯಾಪಾರ/ಉದ್ಯಮಗಳ ಮಾಹಿತಿ ಇಲ್ಲಿದೆ.

ಬ್ಲಾಗಿಂಗ್ - ಬ್ಲಾಗಿಂಗ್ ಎಂದರೆ, ನಿಮ್ಮ ಆಲೋಚನೆಗಳು, ಜ್ಞಾನ, ಮಾಹಿತಿ ಮತ್ತು ಅನುಭವಗಳನ್ನು ವೆಬ್‍ಸೈಟ್ ಮೂಲಕ ಹಂಚಿಕೊಳ್ಳುವ ಒಂದು ಮಾರ್ಗ. ಅದನ್ನು ನೀವು ಆನ್‍ಲೈನ್ ಪುಸ್ತಕ ಎಂದು ಕೂಡ ಕರೆಯಬಹುದು.

ಇಲ್ಲಿ ನಿಮ್ಮ ಜ್ಞಾನ ಮತ್ತು ಮಾಹಿತಿಗಳನ್ನು ಪ್ರಕಟಿಸಿ, ಬದಲಿಗೆ ಓದುಗರಿಂದ ಚಂದಾದಾರಿಕೆಯ ಶುಲ್ಕ ಪಡೆಯುವ ಮೂಲಕ ಅಥವಾ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಆದಾಯ ಗಳಿಸಬಹುದು. ಒಬ್ಬ ವೃತ್ತಿಪರ ಬ್ಲಾಗರ್ ತಿಂಗಳಿಗೆ 50 ಡಾಲರ್‌ನಿಂದ 5000 ಡಾಲರ್‌ವರೆಗೆ ಹಣ ಗಳಿಸಬಹುದು.

zero investment online Business ideas list
ಸಾಂದರ್ಭಿಕ ಚಿತ್ರ


ಕನ್ಸಲ್ಟೆಂಟ್‌ ಬ್ಯುಸಿನೆಸ್ - ತಮ್ಮ ಗ್ರಾಹಕರಿಗೆ ವೃತ್ತಿಪರ ಸಲಹೆ ಅಥವಾ ಸೇವೆಗಳನ್ನು ಒಗದಿಸುವುದೇ ಕನ್ಸಲ್ಟೆಂಟ್ ಬ್ಯುಸಿನೆಸ್. ಮ್ಯಾನೇಜ್‍ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಎಲೆಕ್ಟ್ರಾನಿಕ್, ಹಣಕಾಸು, ಕಾನೂನು, ಆನ್‍ಲೈನ್, ಆಫ್‍ಲೈನ್ ಮಾರ್ಕೆಟಿಂಗ್, ಎಂಜಿನಿಯರಿಂಗ್ , ವಿಜ್ಞಾನ ಮತ್ತು ಮಾನವ ಸಂಪನ್ಮೂಲ ಸೇವೆ ಇತ್ಯಾದಿಗಳು ಇದರಲ್ಲಿ ಸೇರಿವೆ.

ಇದನ್ನೂ ಓದಿ: Online Food: ಜಾಸ್ತಿ ಆನ್​ಲೈನ್​ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಇದನ್ನು ಒಮ್ಮೆ ಓದಿ, ಇನ್ಮುಂದೆ ಆ ಯೋಚನೆ ಕೂಡ ಬರಲ್ಲ​

ನೇಮಕಾತಿ ಏಜೆನ್ಸಿ – ಕೆಲವು ಉದ್ಯಮಗಳು ಹೊರ ಗುತ್ತಿಗೆ ಆಧಾರದ ಮೇಲೆ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಬಯಸುತ್ತವೆ. ಅಂತಹ ಉದ್ಯಮಗಳಿಗೆ ಉದ್ಯೋಗಿಗಳನ್ನು ಒದಗಿಸುವ ಏಜೆನ್ಸಿಯೇ ನೇಮಕಾತಿ ಏಜನ್ಸಿ. ಆನ್‍ಲೈನ್‍ನಲ್ಲಿ ಆದಾಯ ಗಳಿಸಲು ನೇಮಕಾತಿ ಏಜೆನ್ಸಿ ಉತ್ತಮ ಆಯ್ಕೆ.

ರಿಯಲ್ ಎಸ್ಟೇಟ್ - ರಿಯಲ್ ಎಸ್ಟೇಟ್ ಬ್ರೋಕರ್ ಆಗಿ, ಬಿಲ್ಡರ್‌ಗಳಿಗಾಗಿ ಗ್ರಾಹಕರನ್ನು ಹುಡುಕಿ ಕೊಡುವ ಕೆಲಸ ಮಾಡಿ, ಒಪ್ಪಂದದ ಶೇಕಡಾವಾರು ಮೊತ್ತವನ್ನು ಗಳಿಸಲು ಸಾಧ್ಯವಿದೆ. ನೀವು ಆನ್‍ಲೈನ್‍ನಲ್ಲಿ ಮಾರ್ಕೆಟಿಂಗ್ ಮಾಡಿ, ಆನ್‍ಲೈನ್ ಮೂಲಕವೇ ಗ್ರಾಹಕರನ್ನು ಪಡೆಯಲು ಸಾಧ್ಯವಿದೆ.

ಯೂಟ್ಯೂಬರ್ - ಯೂಟ್ಯೂಬ್, ವಿಡಿಯೋಗಳನ್ನು ಮಾಡುವ ಮೂಲಕ ಹಣ ಗಳಿಸಲು ಸಾಧ್ಯವಿರುವ ಜನಪ್ರಿಯ ವೇದಿಕೆಯಾಗಿದೆ. ವೀಕ್ಷಕರು ನಿಮ್ಮ ವಿಡಿಯೋಗಳನ್ನು ವೀಕ್ಷಿಸಿದಷ್ಟು, ನಿಮ್ಮ ಚಾನಲ್‍ನ ಚಂದಾದಾರಿಕೆ ಹೆಚ್ಚಾದಷ್ಟು ಹಣ ಗಳಿಸಲು ಸಾಧ್ಯವಿದೆ. ಜಾಹಿರಾತಿನ ಮೂಲಕವೂ ಹಣ ಗಳಿಸಬಹುದು. ಇವೆಲ್ಲನ್ನು ಹೇಗೆ ಮಾಡುವುದು ಎಂದು ತಿಳಿಯಲು ಯೂಟ್ಯೂಬ್ ಚ್ಯಾನಲ್ ನೀತಿಗಳನ್ನು ಓದಿ ತಿಳಿಯಬಹುದು.

ಅಫಿಲಿಯೇಟ್ ಮಾರ್ಕೆಟಿಂಗ್ - ಅಫಿಲಿಯೇಟ್ ಮಾರ್ಕೆಟಿಂಗ್ ಎಂದರೆ, ಗ್ರಾಹಕರಿಗೆ ಇತರ ವೆಬ್‍ಸೈಟ್‍ಗಳ ಉತ್ಪನ್ನಗಳ ಕುರಿತು ಸೂಚನೆ ನೀಡುವುದು. ನಿಮ್ಮ ವೆಬ್‍ಸೈಟ್ ಅಥವಾ ಬ್ಲಾಗ್‍ನಲ್ಲಿ ವಿಡಿಯೋ ಮಾಡುವ ಮೂಲಕ, ಅಮೆಜಾನ್, ಫ್ಲಿಪ್‍ಕಾರ್ಟ್‍ನಂತ ವೇದಿಕೆಗಳ ಉತ್ಪನ್ನಗಳ ಉಲ್ಲೇಖ ಮಾಡಿ ಹಣ ಗಳಿಸಬಹುದು.

ಆನ್‍ಲೈನ್ ಲೆಕ್ಕಪತ್ರ ಬ್ಯುಸಿನೆಸ್ - ನಿಮಗೆ ಅಕೌಂಟಿಂಗ್ ಜ್ಞಾನವಿದ್ದರೆ, ಸಣ್ಣ ಸಂಸ್ಥೆಗಳಿಗೆ ಲೆಕ್ಕ ಪತ್ರ ಸೇವೆ ಒದಗಿಸಬಹುದು ಮತ್ತು ಐಟಿಆರ್ ಅಥವಾ ತೆರಿಗೆ ಸಂಬಂಧಿತ ಕೆಲಸಗಳನ್ನು ಭರ್ತಿ ಮಾಡುವ ಸೇವೆಗಳನ್ನು ಆರಂಭಿಸಬಹುದು. ನೀವು ಇಂತಹ ಕೆಲಸಗಳನ್ನು ಆರಂಭಿಸಲು ಸಹಾಯ ಮಾಡುವ ಕೆಲವು ವೆಬ್‍ಸೈಟ್‍ಗಳು ಇಂಟರ್‌ನೆಟ್‍ನಲ್ಲಿ ಲಭ್ಯವಿವೆ.

zero investment online Business ideas list
ಸಾಂದರ್ಭಿಕ ಚಿತ್ರ


ಗ್ರಾಫಿಕ್ ವಿನ್ಯಾಸ ಸೇವೆ - ನೀವು ಒಳ್ಳೆಯ ಗ್ರಾಫಿಕ್ ಡಿಸೈನರ್ ಆಗಿದ್ದರೆ, ಸ್ವತಂತ್ರ ವೆಬ್‍ಸೈಟ್ ಮೂಲಕ ಅಥವಾ ಫ್ರೀಲ್ಯಾನ್ಸಿಂಗ್ ವೆಬ್‍ಸೈಟ್‍ಗಳ ಮೂಲಕ ಗ್ರಾಫಿಕ್ ಡಿಸೈನಿಂಗ್ ಸೇವೆಗಳನ್ನು ಒದಗಿಸಬಹುದು.

ಇದನ್ನೂ ಓದಿ:  Business Startup: ತನ್ನದೇ ಆದ ಎರಡು ಮಲ್ಟಿ ಕ್ರೋರ್ ಮೆನ್ಸ್ ವೇರ್ ಬ್ರಾಂಡ್ ಅನ್ನು ನಿರ್ಮಿಸಿದ ಕೇರಳದ ಯುವಕ

ಆನ್‍ಲೈನ್ ಇನ್‍ಫ್ಲುಯೆನ್ಸರ್- ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ವೆಬ್‍ಸೈಟ್‍ಗಳಲ್ಲಿ , ಸಂಭಾವ್ಯ ಗ್ರಾಹಕರ ಜೊತೆ ಸಂವಹನ ನಡೆಸಿ, ಉತ್ಪನ್ನಗಳನ್ನು ಶಿಫಾರಸ್ಸು ಮಾಡುವ ಕಾರ್ಯವಿದು. ಈ ವ್ಯವಹಾರಗಳಲ್ಲದೆ, ಆನ್‍ಲೈನ್ ತೆರಿಗೆ ಸಲಹೆಗಾರ, ಶಿಕ್ಷಕ, ಅನುವಾದಕ ಮತ್ತಿತರ ಹಲವು ಕೆಲಸಗಳನ್ನು, ನಿಮ್ಮ ಪರಿಣಿತಿಗೆ ತಕ್ಕಂತೆ ಪ್ರಯತ್ನಿಸಿ ನೋಡಬಹುದು.
Published by:Mahmadrafik K
First published: