• Home
 • »
 • News
 • »
 • business
 • »
 • ZED ಪ್ರಮಾಣೀಕರಣ ಸ್ಕೀಂ: ಭಾರತದ MSME ವ್ಯವಸ್ಥೆಯ ಬಲಪಡಿಸುವಿಕೆ

ZED ಪ್ರಮಾಣೀಕರಣ ಸ್ಕೀಂ: ಭಾರತದ MSME ವ್ಯವಸ್ಥೆಯ ಬಲಪಡಿಸುವಿಕೆ

ZED ಪ್ರಮಾಣೀಕರಣ ಸ್ಕೀಂ

ZED ಪ್ರಮಾಣೀಕರಣ ಸ್ಕೀಂ

MSME ಗಳು ಭಾರತದ ಆರ್ಥಿಕತೆಯ ಬೆಳವಣಿಗೆಯ ಎಂಜಿನ್‌ಗಳಾಗಿವೆ. ಅವುಗಳ ಅಗತ್ಯಗಳಿಗೆ ಬೆಂಬಲಿಸುವುದು ಮತ್ತು ಅವುಗಳ ಪ್ರಗತಿಗೆ ನೆರವಾಗುವುದು ದೇಶದ ಪ್ರಗತಿಯನ್ನು ಉತ್ತೇಜಿಸುವ ಖಚಿತ ವಿಧಾನವಾಗಿದೆ. ZED ಪ್ರಮಾಣೀಕರಣವು ವೇಗವರ್ಧಕವಾಗಿ ವರ್ತಿಸುತ್ತದೆ.

 • Share this:

  MSME ಗಳು ಭಾರತದ ಆರ್ಥಿಕತೆಯ ಬೆಳವಣಿಗೆಯ ಎಂಜಿನ್‌ಗಳಾಗಿವೆ. ಅವುಗಳ ಅಗತ್ಯಗಳಿಗೆ ಬೆಂಬಲಿಸುವುದು ಮತ್ತು ಅವುಗಳ ಪ್ರಗತಿಗೆ ನೆರವಾಗುವುದು ದೇಶದ ಪ್ರಗತಿಯನ್ನು ಉತ್ತೇಜಿಸುವ ಖಚಿತ ವಿಧಾನವಾಗಿದೆ. ZED ಪ್ರಮಾಣೀಕರಣವು ವೇಗವರ್ಧಕವಾಗಿ ವರ್ತಿಸುತ್ತದೆ.


  ಭಾರತೀಯ ಆರ್ಥಿಕತೆಯ ಬೆನ್ನೆಲುಬು ಆಗಿದ್ದುಕೊಂಡು GDP ಯ 30% ಪಾಲು ಹೊಂದಿರುವುದು 114 ಮಿಲಿಯನ್‌ಗೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡುತ್ತಿರುವುದು ಮತ್ತು ಭಾರತದ ರಫ್ತಿನ 50% ರಷ್ಟು ಕೊಡುಗೆ ನೀಡುತ್ತಿರುವುದು ಭಾರತದ MSME ಗಳು (ಮೈಕ್ರೋ, ಸ್ಮಾಲ್ ಆಂಡ್ ಮೀಡಿಯಂ ಎಂಟರ್‌ಪ್ರೈಸಸ್). MSME ಗಳ ಡಿಜಿಟಲೀಕರಣವೇ 2024 ರ ವೇಳೆಗೆ ಭಾರತದ GDP ಗೆ $158 ನಿಂದ 216 ಬಿಲಿಯನ್ ಸೇರಿಸಲಿದೆ.


  MSME ಉದ್ಯಮಕ್ಕೆ ಇಂದಿಗಿಂತ ಉತ್ತಮವಾದ ಸಮಯ ಬೇರೆ ಇಲ್ಲ. ಖಾಸಗಿ ಹೂಡಿಕೆ ಏರಿಕೆಯಾಗುತ್ತಿದೆ, ಸರ್ಕಾರದ ನೀತಿಯ ಬದಲಾವಣೆಗಳು ಉದ್ಯಮವನ್ನು ಆರಂಭಿಸುವುದು ಹಾಗೂ ನಡೆಸುವುದನ್ನು ತುಂಬಾ ಸುಗಮಗೊಳಿಸಿವೆ ಮತ್ತು ಭಾರತದ ಮೂಲಸೌಕರ್ಯ ಹೂಡಿಕೆಗಳು ಉದ್ಯಮಗಳ ವೇಗವರ್ಧಕಗಳಿಗೆ ವೇದಿಕೆಯಾಗಿವೆ. ಭಾರತದ ತಂತ್ರಜ್ಞಾನದ ಸಾಮರ್ಥ್ಯವು  ಈಗಾಗಲೇ ಕೋಟ್ಯಂತರ ವ್ಯಕ್ತಿಗಳು ಹಾಗೂ ಉದ್ಯಮಗಳಿಂದ ಅಳವಡಿಸಲ್ಪಟ್ಟ ಹಾಗೂ ಹಣಕಾಸು ಮತ್ತು ಸಾಮಾಜಿಕ ಅಂತರ್ವೇಶನದ ಹೊಸ ಯುಗದ ಮಾರ್ಗದರ್ಶಿಯಾಗಿರುವ ಇಂಡಿಯಾ ಸ್ಟೇಕ್ ನೊಂದಿಗೆ ಪ್ರದರ್ಶನದಲ್ಲಿದೆ. ಸುಧಾರಿತ ದೇಶಗಳಲ್ಲಿ ವಯೋವೃದ್ಧರ ಸಂಖ್ಯೆ ಹೆಚ್ಚುತ್ತಿರುವ ಮಧ್ಯೆಯೇ, ಭಾರತವು ಪ್ರಮುಖ ದೇಶಗಳ ಪೈಕಿ ವಿಶ್ವದಲ್ಲೇ ಅತಿದೊಡ್ಡ ಮಾನವ ಸಂಪನ್ಮೂಲ ಪೂರೈಕೆದಾರ ಆಗಿ ಹೊರಹೊಮ್ಮುತ್ತಿರುವುದು ಗಮನಾರ್ಹ.


  ಭಾರತದ $5 ಟ್ರಿಲಿಯನ್ ಆರ್ಥಿಕತೆಯ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಈ ಉದ್ಯಮಗಳನ್ನು ಬಳಸಿಕೊಳ್ಳುವುದು ಮುಖ್ಯ ಎಂಬುದು ಸ್ಪಷ್ಟ. ಇದು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (QCI) ಹಂಚಿಕೊಳ್ಳುವ ದೃಷ್ಟಿಯಾಗಿದೆ. ಸಿದ್ಧಗೊಂಡ ಸಮಗ್ರತೆ ಚಾಲಿತ ಉದ್ಯಮಗಳನ್ನು ಸೃಷ್ಟಿಸುವುದು ಮತ್ತು ಅವುಗಳು ತರುವ ಸುಸ್ಥಿರ ಪ್ರಗತಿಯ ಮೂಲಕ ಭಾರತವನ್ನು ಜಾಗತಿಕ ನಾಯಕನ ಅರ್ಹ ಸ್ಥಾನಕ್ಕೇರಿಸುವ ಕಾರ್ಯವನ್ನು QCI ಸಾಧ್ಯವಾಗಿಸುತ್ತಿದೆ. ಈ ದೃಷ್ಟಿಯೊಂದಿಗೆ ಒಗ್ಗೂಡಿದ ಪ್ರಮುಖ ಸೂತ್ರವೇ MSME ಸಚಿವಾಲಯದ ಅಡಿಯಲ್ಲಿ ಕೈಗೊಂಡ ಝೀರೋ ಡಿಫೆಕ್ಟ್, ಝೀರೋ ಎಫೆಕ್ಟ್ (ZED) ಪ್ರಮಾಣೀಕರಣ ಕಾರ್ಯಕ್ರಮ. ZED ಪ್ರಮಾಣೀಕರಣ ಕಾರ್ಯಕ್ರಮವು ಜನರು ಹಾಗೂ ಜಗತ್ತಿಗೆ ಒಳಿತಾಗುವಂತಹ ಪ್ರಗತಿಗೆ ರೂಪ ನೀಡುವ ಗುರಿಯನ್ನು ಹೊಂದಿದೆ.


  ಝೀರೋ ಡಿಫೆಕ್ಟ್ ಎಂದರೆ, ಭಾರತೀಯ ಉದ್ಯಮಗಳು ಉನ್ನತ ಗುಣಮಟ್ಟದ ಸ್ಟಾಂಡರ್ಡ್‌ಗಳನ್ನು ಅನುಸರಿಸಬೇಕು. ಇದು ಅವುಗಳನ್ನು ಅತ್ಯಂತ ಸ್ಪರ್ಧಾತ್ಮಕವಾಗಿಸುತ್ತದೆ ಮತ್ತು ಅವುಗಳ ಬೇಡಿಕೆ ಮತ್ತು ಪ್ರತಿಷ್ಠೆ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಸುವ್ಯವಸ್ಥಿತವಾಗಿ ಹೆಚ್ಚುತ್ತದೆ. ಭಾರತೀಯ ಉದ್ಯಮಗಳು ಈ ಸ್ಟಾಂಡರ್ಡ್‌ಗಳನ್ನು ಹೆಚ್ಚು ಹೆಚ್ಚು ಸಾಧಿಸಿದಂತೆ, ಉನ್ನತದ ಮಟ್ಟದ ಗುಣಮಟ್ಟ, ಸಕಾಲಿಕತೆ ಮತ್ತು ಸಮಗ್ರತೆಯೊಂದಿಗೆ ಭಾರತವನ್ನು ಪರ್ಯಾಯವಾಗೊಳಿಸುತ್ತಾ ಇದು ವೇಗವರ್ಧಕ ಪರಿಣಾಮವನ್ನೂ ಮೂಡಿಸುತ್ತದೆ.


  ಝೀರೋ ಎಫೆಕ್ಟ್ ಎಂದರೆ ಭಾರತೀಯ ಉದ್ಯಮಗಳು ಅನುಸರಿಸುವ, ಉನ್ನತ ಗುಣಮಟ್ಟದ ಸರಕುಗಳು ಮತ್ತು ಸೇವೆಗಳ ಉತ್ಪಾದನೆಯೊಂದಿಗೆ ಪರಿಸರದ ಮೇಲೆ ಶೂನ್ಯ ಅಡ್ಡಪರಿಣಾಮವನ್ನೂ ಖಾತ್ರಿಗೊಳಿಸುವ ವಿಧಾನಗಳನ್ನು ಕಂಡುಕೊಳ್ಳುವಂತೆ ಉದ್ಯಮಗಳಿಗೆ ಕಟ್ಟುನಿಟ್ಟಾಗಿ ಒತ್ತಾಯಿಸುವ ದೃಢವಾದ ಹಸಿರು ಸ್ಟಾಂಡರ್ಡ್‌ಗಳಾಗಿವೆ. ಸ್ವೀಕರಣಶೀಲತೆಯು ಹೆಚ್ಚಿದಂತೆ, ಭಾರತದ ಉದ್ಯಮಗಳು ಪರಿಸರ ಹಾಗೂ ಆರ್ಥಿಕೆ ಸುಸ್ಥಿರತೆಯನ್ನು ಜತೆಜತೆಯಾಗಿ ಸಾಧಿಸುವ ವಿಧಾನಗಳೊಂದಿಗೆ ಉದ್ಯಮಗಳು ಪ್ರಗತಿ ಸಾಧಿಸುವುದು ಹೇಗೆ ಎಂಬ ಬಗ್ಗೆ ಮಾನದಂಡ ನಿಗದಿಗೊಳಿಸಲಿವೆ.


  ಈ ಕಾರ್ಯಕ್ರಮದ ತರಂಗ ಪರಿಣಾಮಗಳು ಎಲ್ಲಾ ಭಾರತೀಯ ಉದ್ಯಮಗಳನ್ನು ಸಶಕ್ತಗೊಳಿಸುವಾಗ, MSME ಗಳಿಗೆ ZED ಸ್ಕೀಂ ಪ್ರಗತಿಗೆ ಭಾರೀ ಅವಕಾಶವನ್ನು ಸೃಷ್ಟಿಸುತ್ತದೆ. ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗಿದ್ದು, ZED ಪ್ರಮಾಣೀಕರಣವು ಈಗ ಉತ್ಪನ್ನಗಳು ಮತ್ತು ಸೇವೆಗಳಿಗೆ ಅನ್ವಯವಾಗುತ್ತದೆ. ZED ಪ್ರಮಾಣೀಕೃತ MSME ಗಳ ಗ್ರಾಹಕರು, ಹೂಡಿಕೆದಾರರು, ಪೂರೈಕೆದಾರರು ಹಾಗೂ ಉದ್ಯೋಗಿಗಳ ಮನಸ್ಸಲ್ಲಿ ಗುಣಮಟ್ಟ, ಮೌಲ್ಯ ಮತ್ತು ಸಮಗ್ರತೆಯ ಖಾತರಿಯನ್ನು ಹೊಂದಿರುತ್ತಾರೆ. ಇದರಿಂದಾಗಿ ಅತ್ಯುತ್ತಮವಾದ್ದನ್ನು ಆಯ್ದುಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ. ಇದು ಸಾಮರ್ಥ್ಯದ ಆಧಾರದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಅವಕಾಶವನ್ನು ಉತ್ತೇಜಿಸುತ್ತದೆ – ಪೂರೈಕೆದಾರರಿಗೆ ಯಾರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು, ಯಾರನ್ನು ನೇಮಿಸಬೇಕು ಎಂಬುದಾಗಿರಬಹುದು ಅಥವಾ ಯಾರಿಂದ ಹೂಡಿಕೆ ಸ್ವೀಕರಿಸಬೇಕು ಎಂಬುದೂ ಆಗಿರಬಹುದು. ಅದಕ್ಕಿಂತ ಮಿಗಿಲಾಗಿ, ZED ಪ್ರಮಾಣೀಕೃತ MSME ಗಳು ಹೆಚ್ಚಾಗಿ ಸಾಲ ಪಡೆಯಲು ಆದ್ಯತೆ ನೀಡುತ್ತವೆ, ಬ್ಯಾಂಕ್‌ಗಳ ಪ್ರೊಸೆಸಿಂಗ್ ಶುಲ್ಕಗಳು ಮತ್ತು ಬಡ್ಡಿ ದರಗಳಲ್ಲಿ ರಿಯಾಯಿತಿಗೆ ಅರ್ಹವಾಗುತ್ತವೆ. ಅವುಗಳು ಹೆಚ್ಚಾಗಿ ಉತ್ತಮ ಕ್ರೆಡಿಟ್ ರೇಟಿಂಗ್ ಅನ್ನು ಕೂಡಾ ಹೊಂದಿರುತ್ತವೆ.


  ಅವುಗಳ ಉತ್ಪನ್ನಗಳು ಮತ್ತು ಸೇವೆಗಳೆರಡೂ ಉನ್ನತ ಗುಣಮಟ್ಟ ಮತ್ತು ಸುಸ್ಥಿರ ಸ್ಟಾಂಡರ್ಡ್‌ಗಳಿಗೆ ಕಾರಣವಾಗಿದ್ದು, ZED ಪ್ರಮಾಣೀಕೃತ MSME ಗಳು ನಿರ್ದಿಷ್ಟವಾಗಿ ಪಶ್ಚಿಮಕ್ಕೆ ರಫ್ತಿನ ವಿಚಾರಕ್ಕೆ ಬಂದಾಗ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳುತ್ತವೆ ಮತ್ತು ಭೌಗೋಳಿಕತೆಗಳಿಗೆ ತೆರೆದುಕೊಳ್ಳುತ್ತವೆ. ಸ್ಟಾಲ್ ಶುಲ್ಕಗಳು, ವೈಮಾನಿಕ ದರ ಮತ್ತು ಸರಕು ಶುಲ್ಕಗಳಲ್ಲಿ ಸಬ್ಸಿಡಿಯ ಮೂಲಕ  ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಉದ್ಯಮ ವಸ್ತುಪ್ರದರ್ಶನಗಳಲ್ಲಿ ಮತ್ತು ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವುದನ್ನು ಕೂಡಾ GOI ಸುಲಭ ಮಾಡಿಕೊಟ್ಚಿದೆ.


  ಆದಾಗ್ಯೂ, ಈ ಸ್ಕೀಂನ ಪ್ರಯೋಜನವನ್ನು ಪಡೆಯಲು MSME ಗಳು ZED ಪ್ರಮಾಣೀಕರಣಕ್ಕೆ ಅರ್ಹತೆ ಪಡೆಯುವ ತನಕ ಕಾಯಬೇಕೆಂದೇನೂ ಇಲ್ಲ. The process of ZED ಪ್ರಮಾಣೀಕರಣದ ಪ್ರಕ್ರಿಯೆಯೇ ಉದ್ಯಮಗಳಿಗೆ ತಮ್ಮ ಅಂತರಗಳೆಲ್ಲಿದೆ, ಉದ್ಯಮವಾಗಿ ನಾವು ಎಲ್ಲಿ ಸುಧಾರಣೆ ಮಾಡಬೇಕಿದೆ ಎಂಬುದನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. QCI ಕನ್ಸಲ್ಟೆಂಟ್‌ಗಳು ಅಂತರ ವಿಶ್ಲೇಷಣೆಯನ್ನು ನಡೆಸಲು ಉದ್ಯಮಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ, ಬಳಿಕ ಅವರ ರೇಟಿಂಗ್ ಅನ್ನು ಸುಧಾರಿಸಲು ಹ್ಯಾಂಡ್‌ಹೋಲ್ಡಿಂಗ್ ಮತ್ತು ಕನ್ಸಲ್ಟೆನ್ಸಿಯನ್ನು ನಡೆಸುತ್ತಾರೆ. ರೇಟಿಂಗ್‌ಗಳು ಸುಧಾರಿಸಿದಂತೆ, ಉದ್ಯಮದ ಚೇತರಿಕೆ ಮತ್ತು ಸಾಮರ್ಥ್ಯವೂ ವೃದ್ಧಿಸುತ್ತದೆ.


  ಈ ರೀತಿಯಾಗಿ ಉದ್ಯಮಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ದೋಷಗಳು, ಮರುಕಾರ್ಯ ಮತ್ತು ಸ್ಕ್ರಾಪ್ ಅನ್ನು ತಗ್ಗಿಸುವ ಮೂಲಕ; ಉತ್ಪಾದಕತೆಯನ್ನು ಸುಧಾರಿಸುವ ಮೂಲಕ ಮತ್ತು ಮೊದಲಬಾರಿಯ ಪಾಸ್ ರೇಟ್‌ಗಳು, ಇದರಿಂದಾಗಿ ಅವುಗಳ ROI ಹೆಚ್ಚಾಗುತ್ತದೆ. ಕ್ಲಪ್ತ ಸಮಯದ ಡೆಲಿವರಿ ಮತ್ತು ಗ್ರಾಹಕ ದೂರುಗಳಲ್ಲಿನ ಇಳಿಕೆಯು ಬ್ರ್ಯಾಂಡ್ ಮೌಲ್ಯ ಮತ್ತು ಸದ್ಭಾವನೆ ಮೂಡಿಸಲು, ಜತೆಗೆ ಪುನರಾವರ್ತಿತ ವ್ಯಾಪಾರಕ್ಕೆ ನೆರವಾಗುತ್ತದೆ.


  ಒಟ್ಟಿನಲ್ಲಿ, ಗುಣಮಟ್ಟವು ಬಾಗಿಲುಗಳನ್ನು ತೆರೆಯುತ್ತದೆ.


  ZED ಪ್ರಮಾಣೀಕರಣಕ್ಕೆ ಪ್ರಕ್ರಿಯೆಯು ತೀರಾ ಸರಳ ಮತ್ತು ನಿರ್ದಿಷ್ಟವಾಗಿರುತ್ತದೆ. 5 ಹಂತಗಳ ಪ್ರಕ್ರಿಯೆ ಈ ರೀತಿಯಿರುತ್ತದೆ:


  1. ಉಚಿತ ಆನ್‌ಲೈನ್ ನೋಂದಣಿ ಮತ್ತು MSME ನಿಂದ ಪ್ರತಿಜ್ಞೆ

  2. ಪ್ರಾಥಮಿಕ ಮಾಹಿತಿಯ ಅಪ್‌ಲೋಡ್ ಮಾಡಿ ಮತ್ತು ಡಾಕ್ಯಮೆಂಟೇಶನ್

  3. ಅಪ್‌ಲೋಡ್ ಮಾಡಿದ ಮಾಹಿತಿಯ ಆಧಾರದಲ್ಲಿ ಡೆಸ್ಕ್‌ಟಾಪ್ / ರಿಮೋಟ್ / ಆನ್‌ ಸೈಟ್ ಮೌಲ್ಯಮಾಪನ

  4. ಪ್ರಮಾಣೀಕರಣ ಸ್ವೀಕರಿಸಿ ಮತ್ತು ಆ್ಯಪ್‌ನಿಂದ ಪ್ರಮಾಣಪತ್ರ ಡೌನ್‌ಲೋಡ್ ಮಾಡಿ

  5. ಪ್ರೋತ್ಸಾಹಧನಗಳನ್ನು ಪಡೆಯಿರಿ


  ಆಸಕ್ತ ವ್ಯಕ್ತಿಗಳು ಈಗಲೇ ಪ್ರಕ್ರಿಯೆಯನ್ನು ಇಲ್ಲಿ ಪ್ರಾರಂಭಿಸಬಹುದು.


  ZED ಪ್ರಮಾಣೀಕರಣವು ಮೂರು ಹಂತಗಳನ್ನು ಒಳಗೊಂಡಿದೆ - ಕಂಚು, ಬೆಳ್ಳಿ ಮತ್ತು ಚಿನ್ನ. MSME ಗಳು ತಮ್ಮ ಸಿದ್ಧತೆಯನ್ನು ಅವಲಂಬಿಸಿಕೊಂಡು ಯಾವುದೇ ಹಂತದ ಪ್ರಮಾಣೀಕರಣ ಮಟ್ಟಗಳಿಗೆ ಅರ್ಜಿ ಸಲ್ಲಿಸಬಹುದು. ಇನ್ನಷ್ಟು MSME ಗಳು ಅರ್ಜಿ ಸಲ್ಲಿಸುವಂತೆ ಪ್ರೋತ್ಸಾಹಿಸಲು, MSME ಗಳ ಸಚಿವಾಲಯವು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಕ್ರಮವಾಗಿ   80%, 60% ಮತ್ತು 50% ಸಬ್ಸಿಡಿಯನ್ನು ಘೋಷಿಸಿದೆ. MSME ಸಚಿವಾಲಯವು ವಿವಿಧ ಪ್ರೋತ್ಸಾಹಧನಗಳನ್ನು ನೀಡುವ ರಾಜ್ಯ ಸರ್ಕಾರಗಳು, ವಿವಿಧ ಸಚಿವಾಲಯಗಳು, ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳನ್ನು ಮನವೊಲಿಸಿದೆ. ಈ ಸ್ಕೀಂ ಮತ್ತು ಪ್ರಯೋಜನಗಳ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು.


  ಆದಾಗ್ಯೂ, ZED ಪ್ರಮಾಣೀಕರಣ, ಎಲ್ಲಾ ಮೌಲ್ಯಯುತ ಸಾಧನೆಗಳಂತೆ, ಸುಲಭವಾಗಿ ಬರುವುದಿಲ್ಲ. The aim of the ZED ಮೆಚ್ಯೂರಿಟಿ ಅಸೆಸ್‌ಮೆಂಟ್ ಮಾಡೆಲ್‌ನ ಗುರಿ ದರ, ನಿಗದಿಸುವಿಕೆ ಮತ್ತು ಹ್ಯಾಂಡ್‌ಹೋಲ್ಡ್ MSME ಗಳು ಮತ್ತು ಅವುಗಳನ್ನು ಉನ್ನತ ಮೆಚ್ಯೂರಿಟಿ ಹಂತಗಳಿಗೆ ಕೊಂಡೊಯ್ಯುವುದು, ಅವುಗಳನ್ನು ಜಾಗತಿಕ ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವುದು. ಇದೊಂದು ದೊಡ್ಡ ಕಾರ್ಯ. GOI ಯು, ZED ಸ್ಕೀಂ ಆರ್ಥಿಕತೆಯನ್ನು 2026 ರಲ್ಲಿ $5 ಟ್ರಿಲಿಯನ್‌ಗೆ ಮತ್ತು ನಂತರ 2033 ರಲ್ಲಿ $10 ಟ್ರಿಲಿಯನ್‌ಗೆ ಕೊಂಡೊಯ್ಯುವ ಸಾಧನವಾಗಿ ಪರಿಗಣಿಸಿದೆ. ಇದು ಪರಿಣಾಮಕಾರಿ ಯಾಗಬೇಕಾದರೆ ಇದು ಕಠಿಣವಾಗಿರಬೇಕು.


  ZED ಕಾರ್ಯಕ್ರಮದೊಂದಿಗೆ, QCI ಯು ತನ್ನ 25 ವರ್ಷಗಳ ಅನುಭವವನ್ನು, ಆತ್ಮವಿಶ್ವಾಸದೊಂದಿಗೆ MSME ಗಳು ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಪರಿಸರವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಭಾರತದಲ್ಲಿ ಗುಣಮಟ್ಟದ ಮಾನದಂಡವನ್ನೇ ಹೆಚ್ಚಿಸಲು ಬಳಸಿದೆ.


  QCI ಮತ್ತು ಭಾರತದ ಗುಣವತ್ತ ಸೇ ಆತ್ಮನಿರ್ಭರತಾ ಉಪಕ್ರಮ ಹಾಗೂ ಅದು ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಬೀರುವ ಪರಿಣಾಮ ಕುರಿತು ಇನ್ನಷ್ಟು ತಿಳಿಯಲು, ಭೇಟಿ ನೀಡಿ https://www.news18.com/qci/

  First published: