Neal Mohan: ತುಂಬಾ ನಾಚಿಕೆ ಸ್ವಭಾವದವರಂತೆ ಯೂಟ್ಯೂಬ್​ನ​​ ಹೊಸ ಸಿಇಓ ನೀಲ್‌ ಮೋಹನ್!

ನೀಲ್​ ಮೋಹನ್​

ನೀಲ್​ ಮೋಹನ್​

ಯೂಟ್ಯೂಬ್‌ನ ಮುಂದಿನ ಸಿಇಒ ಆಗಿ 49 ವರ್ಷದ ನೀಲ್ ಮೋಹನ್ ಅವರ ಹೆಸರನ್ನು ಘೋಷಿಸಿದಾಗ, ಸಾವಿರಾರು ಕಿಲೋಮೀಟರ್‌ ದೂರದ ಲಕ್ನೋದಲ್ಲಿ (Lucknow) ಸಂಭ್ರಮಾಚರಣೆ ನಡೆದಿತ್ತು.

  • Trending Desk
  • 5-MIN READ
  • Last Updated :
  • Share this:

ವಿಶ್ವದ ಅತಿದೊಡ್ಡ ಆನ್‌ಲೈನ್ ವೀಡಿಯೋ ಸ್ಟ್ರೀಮಿಂಗ್ (Online Video Streamming) ಫ್ಲಾಟ್‌ಫಾರ್ಮ್ 'ಯೂಟ್ಯೂಬ್'ಗೆ ನೂತನ ಸಿಇಒ (Youtube New CEO) ಆಗಿ ಭಾರತೀಯ ಮೂಲದ ಅಮೆರಿಕನ್ ಪ್ರಜೆ 'ನೀಲ್ ಮೋಹನ್' (Neal Mohan) ಅವರು ನೇಮಕಗೊಂಡಿದ್ದಾರೆ. ಈ ಮೂಲಕ ಕಳೆದ ಒಂಬತ್ತು ವರ್ಷಗಳಿಂದ ಯೂಟ್ಯೂಬ್ ಕಾರ್ಯನಿರ್ವಹಣಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ 'ಸುಸಾನ್ ವೊಜ್ಸಿಕಿ' ಸ್ಥಾನವನ್ನು ತುಂಬುತ್ತಿದ್ದಾರೆ. ‌ ಈ ಮಧ್ಯೆ ಯೂಟ್ಯೂಬ್‌ನ ಮುಂದಿನ ಸಿಇಒ ಆಗಿ 49 ವರ್ಷದ ನೀಲ್ ಮೋಹನ್ ಅವರ ಹೆಸರನ್ನು ಘೋಷಿಸಿದಾಗ, ಸಾವಿರಾರು ಕಿಲೋಮೀಟರ್‌ ದೂರದ ಲಕ್ನೋದಲ್ಲಿ (Lucknow) ಸಂಭ್ರಮಾಚರಣೆ ನಡೆದಿತ್ತು. ಅವರು ಐದು ವರ್ಷಗಳ ಕಾಲ ಅಧ್ಯಯನ ಮಾಡಿದ ಸೇಂಟ್ ಫ್ರಾನ್ಸಿಸ್ ಕಾಲೇಜಿನ ಅವರ ಬ್ಯಾಚ್‌ಮೇಟ್‌ಗಳು ಅವರ ಸಾಧನೆಯ ಬಗ್ಗೆ ಸಂಭ್ರಮ ಆಚರಿಸಿದ್ದರು.


ನಾಚಿಕೆ ಸ್ವಭಾವದವರಾಗಿದ್ದರಂತೆ ನೀಲ್‌ ಮೋಹನ್‌


ಸೇಂಟ್ ಫ್ರಾನ್ಸಿಸ್ ಕಾಲೇಜಿನ ಅವರ ಬ್ಯಾಚ್‌ಮೇಟ್‌ಗಳು ನೀಲ್‌ ಮೋಹನ್‌ ಅವರು ಅದ್ಭುತ ವ್ಯಕ್ತಿಯಾಗಿದ್ದರು. ಆದರೆ ತುಂಬಾ ನಾಚಿಕೆ ಸ್ವಭಾವದ ವ್ಯಕ್ತಿಯಾಗಿದ್ದರು ಎಂಬುದಾಗಿ ಹೇಳುತ್ತಾರೆ. "ಕಡಿಮೆ ಮಾತನಾಡುವ ಮತ್ತು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅಷ್ಟೇನೂ ಆಕ್ಟಿವ್‌ ಆಗಿ ಇಲ್ಲದಿದ್ದ ನಮ್ಮ ಬ್ಯಾಚ್‌ಮೇಟ್‌, ಇದೀಗ ವಿಶ್ವದ ಅತಿದೊಡ್ಡ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದನ್ನು ಮುನ್ನಡೆಸುತ್ತಿದ್ದಾರೆ ಎಂಬುದು ನಮಗೆ ವಿಪರೀತ ಹೆಮ್ಮೆ ಎನಿಸುತ್ತಿದೆ” ಎಂಬುದಾಗಿ ಹೇಳುತ್ತಾರೆ.


ಯಾವುದೇ ಸಾಮಾಜಿಕ ಮಾಧ್ಯಮದಲ್ಲೂ ಇಲ್ಲ!


"ಲಿಂಕ್ಡ್‌ಇನ್ ಹೊರತುಪಡಿಸಿ, ನೀಲ್ ಅವರು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಇಲ್ಲ. ಆದಾಗ್ಯೂ ತುಂಬ ಕಡಿಮೆ ಮಾತನಾಡುತ್ತಿದ್ದ ನಮ್ಮ ಕ್ಲಾಸ್‌ಮೇಟ್‌ ನೀಲ್‌ ಮೋಹನ್‌ ಸಾಧನೆ ಸೇಂಟ್ ಫ್ರಾನ್ಸಿಸ್ ಕಾಲೇಜಿನ 1991 ರ ಬ್ಯಾಚ್‌ನ ಎಲ್ಲಾ ವಿದ್ಯಾರ್ಥಿಗಳಿಗೂ ಹೆಮ್ಮೆ” ಎಂಬುದಾಗಿ ಶಿಕ್ಷಣ ತಜ್ಞರಾಗಿರುವ ಶಾಂತನು ಕುಮಾರ್‌ ಹೇಳುತ್ತಾರೆ.


ನೀಲ್‌ ಮೋಹನ್‌ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರಂತೆ!


"ನಾವು VII ನೇ ತರಗತಿಯ ಒಂದೇ ವಿಭಾಗದಲ್ಲಿ ಇದ್ದೆವು. ನೀಲ್‌ ಮೋಹನ್‌ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಆದರೆ ಅವರು US ನಿಂದ ಬಂದಿದ್ದರಿಂದ ಅವರಿಗೆ ಹಿಂದಿ ತಿಳಿದಿರಲಿಲ್ಲ. ಆದರೆ, ಸ್ವಲ್ಪ ಸಮಯದ ನಂತರ, ಅವರು ಅದನ್ನು ಕಲಿತರು ಮತ್ತು ಹತ್ತನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದರು ಎಂಬುದಾಗಿ ಶಾಂತನು ಹೇಳುತ್ತಾರೆ.


ಇದನ್ನೂ ಓದಿ: ಈ ಬ್ಯಾಂಕ್​ನಲ್ಲಿ ನಿಮ್ಮ ಖಾತೆ ಇದ್ಯಾ? ಹಾಗಿದ್ರೆ ಈ ಸುದ್ದಿ ನಿಮಗೆ ಶಾಕ್ ನೀಡುತ್ತೆ!


7 – 12 ನೇ ಕ್ಲಾಸ್‌ ವರೆಗೆ ಸೇಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ಅಭ್ಯಾಸ


ಲಕ್ನೋದಲ್ಲಿ ಜನಿಸಿದ ನೀಲ್‌ ಮೋಹನ್‌ ನಗರದ ರಿವರ್ ಬ್ಯಾಂಕ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ನೀಲ್‌ ಮೋಹನ್ ಪೋಷಕರಾದ ಡಾ. ಆದಿತ್ಯ ಮೋಹನ್ ಮತ್ತು ತಾಯಿ ಡಾ. ದೀಪಾ ಮೋಹನ್ ಅವರು ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದ್ದರಿಂದ ಅವರು ತಮ್ಮ ಬಾಲ್ಯದ ವರ್ಷಗಳನ್ನು ಮಿಚಿಗನ್‌ನಲ್ಲಿ ಕಳೆದರು.


ಆನಂತರದಲ್ಲಿ ನೀಲ್‌ ಮೋಹಲ್‌ ಕುಟುಂಬವು 1985 ರಲ್ಲಿ ಭಾರತಕ್ಕೆ ಮರಳಿತು. ಬಳಿಕ ನೀಲ್ ಅವರು ಸೇಂಟ್ ಫ್ರಾನ್ಸಿಸ್ ಕಾಲೇಜಿಗೆ ಸೇರಿಕೊಂಡರು. ಅಲ್ಲಿ ಅವರು 7 ರಿಂದ 12 ನೇ ತರಗತಿಯವರೆಗೆ ಅಧ್ಯಯನ ಮಾಡಿದರು. 1991 ರಲ್ಲಿ ಉತ್ತೀರ್ಣರಾದ ನಂತರ, ಅವರು ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಕೋರ್ಸ್‌ಗೆ ಸೇರಿ ತನ್ನ ಓದನ್ನು ಮುಂದುವರಿಸಿದರು.


ಯಾರೊಂದಿಗೂ ಹೆಚ್ಚು ಮಾತನಾಡ್ತಿರಲಿಲ್ವಂತೆ!


ಇನ್ನು “ನೀಲ್‌ ಮೋಹನ್‌ ನಮ್ಮ ಕ್ಲಾಸ್ ಟಾಪರ್ ಎಂದು ನನಗೆ ನೆನಪಿದೆ. ಅವರು ತುಂಬಾ ಖಾಸಗಿ ವ್ಯಕ್ತಿಯಾಗಿದ್ದರು. ಶಾಲಾ ದಿನಗಳಲ್ಲಿ ಅವರು ತುಂಬಾ ಪ್ರಾಮಾಣಿಕ ವಿದ್ಯಾರ್ಥಿಯಾಗಿದ್ದರು. ಅಲ್ದೇ ಕ್ರಿಕೆಟ್ ಆಡಲು ಇಷ್ಟಪಡುತ್ತಿದ್ದರು. ಇಂದು ಅವರು ತಮ್ಮ ಸಾಧನೆಯಿಂದ ನಮಗೆಲ್ಲ ಹೆಮ್ಮೆ ತಂದಿದ್ದಾರೆ” ಎಂದು ಅವರ ಇನ್ನೊಬ್ಬ ಕ್ಲಾಸ್‌ಮೇಟ್‌ ಉದ್ಯಮಿ ಮೋಹಿತ್‌ ಜಗ್ಗಿ ಹೇಳಿದ್ದಾರೆ.


ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಖ್ಯಾತ ಹೃದ್ರೋಗ ತಜ್ಞ ಡಾ.ರಿಷಿ ಸೇಥಿ, "ನೀಲ್ ಅವರು ಎನ್‌ಟಿಎಸ್‌ಇ ವಿದ್ವಾಂಸರಾಗಿದ್ದರು. ಅವರ ಶಾಲಾ ದಿನಗಳಿಂದಲೂ ಸಂಭಾವಿತ ವ್ಯಕ್ತಿಯಾಗಿದ್ದರು ಎಂಬುದಾಗಿ ಹೇಳಿದ್ದಾರೆ.




ಒಟ್ಟಾರೆ, ನೀಲ್‌ ಮೋಹನ್‌ ಅವರು, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಅಡೋಬ್ ಸಿಇಒ ಶಾಂತನು ನಾರಾಯಣ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಸೇರಿದಂತೆ ಅಮೆರಿಕ ಮೂಲದ ಜಾಗತಿಕ ದೈತ್ಯ ಕಂಪೆನಿಗಳಲ್ಲಿನ ಭಾರತೀಯ ಮೂಲದ ಸಿಇಓಗಳ ಪೈಕಿ ಒಬ್ಬರಾಗುತ್ತಿದ್ದಾರೆ ಅನ್ನೋದು ಹೆಮ್ಮೆ ವಿಷಯ.

Published by:ವಾಸುದೇವ್ ಎಂ
First published: