• Home
  • »
  • News
  • »
  • business
  • »
  • STAGE OTT: ಉಪಭಾಷೆಗಳಿಗಾಗಿ ಹೊಸ ಓಟಿಟಿ ಸ್ಟೇಜ್‌, ಎರಡು ಸಾವಿರ ಜನರಿಗೆ ಉದ್ಯೋಗ

STAGE OTT: ಉಪಭಾಷೆಗಳಿಗಾಗಿ ಹೊಸ ಓಟಿಟಿ ಸ್ಟೇಜ್‌, ಎರಡು ಸಾವಿರ ಜನರಿಗೆ ಉದ್ಯೋಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

STAGE OTT: ಸ್ಥಳೀಯ ಭಾಷೆಗಳ ಚಿತ್ರಗಳನ್ನು, ಸರಣಿಗಳನ್ನು ಪ್ರಸಾರ ಮಾಡಲು ಈ ಮೂವರು ಸ್ಟೇಜ್‌ ಎಂಬ ಹೈಪರ್-ಲೋಕಲ್ OTT ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದರು.

  • Trending Desk
  • 4-MIN READ
  • Last Updated :
  • Share this:

ಒಂದು ಉದ್ಯಮದಲ್ಲಿ ಕೈ ಸುಟ್ಟುಕೊಂಡವರು ಇನ್ನೊಂದು ಉದ್ಯಮ (Business) ಆರಂಭಕ್ಕೆ ಕಾಲವಾಕಾಶ ತೆಗೆದುಕೊಳ್ಳುತ್ತಾರೆ, ಇನ್ನೂ ಕೆಲವರು ಇದರ ಸಹವಾಸನೇ ಬೇಡ ಅಂತಾ ಕೈಕಟ್ಟಿ ಕುಳಿತುಕೊಳ್ಳುತ್ತಾರೆ. ಆದರೆ ಇಲ್ಲಿ ನಾವು ಹೇಳುವ ಸಾಹಸಿ ಹುಡುಗರು 40 ಕೋಟಿ ರೂ ಆದಾಯದ ಕಂಪನಿಯನ್ನು ಕಳೆದುಕೊಂಡರೂ ಎದೆಗುಂದದೇ ಹೊಸ ಕಂಪನಿ ಸ್ಥಾಪಿಸಿ ಬರೋಬ್ಬರಿ ಎರಡು ಸಾವಿರ ಜನರಿಗೆ ಉದ್ಯೋಗ (Job) ನೀಡುತ್ತಿದ್ದಾರೆ.


ಮೂವರ ಕನಸಿನ ಕೂಸು STAGE:


ರಾತ್ರೋರಾತ್ರಿ 40 ಕೋಟಿ ರೂ ಆದಾಯದ ಕಂಪನಿಯನ್ನು ಕಳೆದುಕೊಂಡ ವಿನಯ್ ಸಿಂಘಾಲ್ ಎಂಬುವವರು ಸ್ವಲ್ಪ ದಿನ ಹುಟ್ಟೂರು ಹರಿಯಾಣದ ದಿವಾನಿ ಜಿಲ್ಲೆಯ ನೂನ್ಸರ್ ಗ್ರಾಮಕ್ಕೆ ತೆರಳುತ್ತಾರೆ. ಇಲ್ಲಿ ಅವರು ತಮ್ಮ ಸ್ನೇಹಿತ ಶಶಾಂಕ್ ವೈಷ್ಣವ್ ಮತ್ತು ಸಹೋದರ ಪ್ರವೀಣ್ ಸಿಂಘಾಲ್ ಜೊತೆಗೂಡುತ್ತಾರೆ. ಈ ಹಿಂದೆ ಮೂವರು ಅಲ್ಲಿ ವೈರಲ್ ಕಂಟೆಂಟ್ ಕಂಪನಿ ವಿಟ್ಟಿಫೀಡ್ ಅನ್ನು ಆರಂಭಿಸಿದ್ದರು.


ಅದು ರಾತ್ರೋರಾತ್ರಿ ಮುಚ್ಚುವ ಪ್ರಸಂಗಕ್ಕೆ ಬಂದಿತ್ತು. ತದನಂತರ ಹೊಸದಾಗಿ ಏನನ್ನಾದರೂ ಪ್ರಾರಂಭಿಸುವ ಮನಸ್ಸು ಮಾಡುತ್ತಾರೆ. ಹೀಗೆ ಈ ಮೂವರು ಹುಟ್ಟುಹಾಕಿದ ಕಂಪನಿಯೇ ಸ್ಟೇಜ್‌ (STAGE).


ಸ್ಥಳೀಯ ಭಾಷೆಗಳಲ್ಲಿ ಒಟಿಟಿ ವೇದಿಕೆ:


ಟಿವಿ ಪರದಯೆ ಮೇಲೆ ಅಥವಾ ನಿಮ್ಮ ಮೊಬೈಲ್ ಫೋನ್‌ನಲ್ಲಿ ಬರುವ ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್‌ನಂತಹ ಒಟಿಟಿ ವೇದಿಕೆ ಬಗ್ಗೆ ಈಗ ಎಲ್ಲರಿಗೂ ಗೊತ್ತಿದೆ. ಕಳೆದ ಒಂದೆರೆಡು ವರ್ಷದಿಂದ ಈ ಒಟಿಟಿ ವೇದಿಕೆಗಳ ಆಧಾರಿತ ಮನರಂಜನೆ ನಿಧಾನವಾಗಿ ಶ್ರೀಮಂತರು, ಮಧ್ಯಮ ವರ್ಗದವರೂ ಒಳಗೊಂಡಂತೆ ಬಹುಪಾಲು ಎಲ್ಲಾ ಕುಟುಂಬಗಳನ್ನೂ ಸಹ ಆವರಿಸುತ್ತಿದೆ.


ಇದೇ ರೀತಿ ಸ್ಥಳೀಯ ಭಾಷೆಗಳ ಚಿತ್ರಗಳನ್ನು, ಸರಣಿಗಳನ್ನು ಪ್ರಸಾರ ಮಾಡಲು ಈ ಮೂವರು ಸ್ಟೇಜ್‌ ಎಂಬ ಹೈಪರ್-ಲೋಕಲ್ OTT ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದರು.


ವಿನಯ್‌ ಸಿಂಘಾಲ್ ಮಾತು: 


ಈ ಬಗ್ಗೆ ಮಾತನಾಡಿದ ವಿನಯ್‌ ಸಿಂಘಾಲ್ "ಭಾರತದಲ್ಲಿ, 40 ಕ್ಕೂ ಹೆಚ್ಚು OTT ಪ್ಲಾಟ್‌ಫಾರ್ಮ್‌ಗಳಿವೆ. ಅವರು ಹಿಂದಿ, ತಮಿಳು, ತೆಲುಗಿನಂತೆ ಸ್ಥಳೀಯ ಭಾಷೆಯ ವಿಷಯದ ಹೆಸರಿನಲ್ಲಿ ಭಾಷಾ ಆಧಾರಿತ ವಿಷಯವನ್ನು ಪ್ರಸಾರ ಮಾಡುತ್ತಾರೆ. ಆದರೆ ಸ್ಥಳೀಯ ಉಪಭಾಷೆಗಳ ಮೇಲೆ ಕೇಂದ್ರೀಕರಿಸಿದ ಯಾವುದೇ ಸಿನಿಮಾ ಅಥವಾ ವೆಬ್ ಸರಣಿಗಳಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ರಾಜಸ್ಥಾನದಲ್ಲಿ, ಸುಮಾರು 70 ಮಿಲಿಯನ್ ಜನರು ರಾಜಸ್ಥಾನಿ, ಮಾರ್ವಾಡಿ ಮಾತನಾಡುತ್ತಾರೆ.


ಹಾಗೆಯೇ ಬಿಹಾರದಲ್ಲಿ ಜನರು ಭೋಜ್‌ಪುರಿ, ಮೈತ್ಲಿ, ಅಂಗಿಕಾ, ಬಜ್ಜಿಕಾ ಮಾತನಾಡುತ್ತಾರೆ. ಯುಪಿಯಲ್ಲಿ, ಅವಧಿ, ಬ್ರಜ್, ಭೋಜ್‌ಪುರಿ, ಬುಂದೇಲಿ, ಸಿಂಘಾಲ್ ಹೀಗೆ ಇತ್ಯಾದಿ ಭಾಷೇಗಳನ್ನು ಮಾತನಾಡುತ್ತಾರೆ. ನಾನು ಹರ್ಯಾನ್ವಿ ಮಾತನಾಡುತ್ತೇನೆ ಆದರೆ ಆ ಆಡುಭಾಷೆಯಲ್ಲಿ ಯಾವುದೇ ಮನರಂಜನೆಯ ಕಟೆಂಟ್‌ ಇಲ್ಲ ಎಂದು ನನಗೆ ಆಶ್ಚರ್ಯವಾಯಿತು. ಇದೇ ವಿಚಾರ ನಮ್ಮನ್ನು ಸ್ಟೇಜ್‌ (STAGE, OTT for Bharat) ಸ್ಥಾಪನೆಗೆ ಪ್ರೇರೇಪಿಸಿತು ಎನ್ನುತ್ತಾರೆ ವಿನಯ್‌.


ದೇಶದಲ್ಲಿ 700-800 ಉಪಭಾಷೆಗಳಿವೆ:


ಇನ್ನೂ ಹೆಚ್ಚು ವಿವರಿಸಿದ ವಿನಯ್‌ "ಹರ್ಯಾನ್ವಿಯಲ್ಲಿ 11 ವಿಭಿನ್ನ ಉಪಭಾಷೆಗಳಿವೆ. ಮತ್ತು ದೇಶಾದ್ಯಂತ ಜನರು ಬಳಸುವ ಸುಮಾರು 700-800 ಉಪಭಾಷೆಗಳಿವೆ. ಆದರೆ ಈ ಉಪಭಾಷೆಗಳು ಬರವಣಿಗೆ ರೂಪದಲ್ಲಿ ಇಲ್ಲದೇ ಇರುವುದರಿಂದ ಇವನ್ನು ನಿರ್ಲಕ್ಷಿಸಲಾಗಿದೆ” ಎಂದು ಅವರು ಹೇಳುತ್ತಾರೆ.


"ಭಾಷೆಯು ನಗರ ಪರಿಕಲ್ಪನೆಯಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ನೀವು ನಗರಗಳ ಆಚೆಗೆ ಹೋದರೆ ನೀವು ಅಲ್ಲಿ ಪ್ರತಿಯೊಬ್ಬರೂ ಸ್ಥಳೀಯ ಉಪಭಾಷೆಯಲ್ಲಿ ಮಾತನಾಡುವುದನ್ನು ಕಾಣಬಹುದು. ಹೀಗಾಗಿ STAGE ನಿಜವಾದ ಹೈಪರ್ ಲೋಕಲ್ ಕಂಟೆಂಟ್ ಸ್ಥಳೀಯ ಭಾಷೆಗಳಲ್ಲಿ ರೂಪಿಸುವ ಉದ್ದೇಶ ಹೊಂದಿದೆ ಎಂದಿದ್ದಾರೆ.


2019 ರಲ್ಲಿ STAGE ಪ್ರಾರಂಭ: 


STAGE, 2019 ರಲ್ಲಿ ಹರ್ಯಾನ್ವಿ ಭಾಷೆಯಿಂದ ಪ್ರಾರಂಭವಾಯಿತು. ಇದು ಡಿಜಿಟಲ್, ಹೈಪರ್-ಲೋಕಲೈಸ್ಡ್, ವೃತ್ತಿಪರವಾಗಿ-ರಚಿಸಿದ ವಿಷಯ ವೇದಿಕೆಯಾಗಿದ್ದು, ಬಹು ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಟ್ರೆಂಡಿಂಗ್, ಮನರಂಜನೆ ಮತ್ತು ತಿಳಿವಳಿಕೆ ವಿಷಯವನ್ನು ನೀಡುತ್ತದೆ. ವೇದಿಕೆಯು ಹರಿಯಾಣವಿಯಲ್ಲಿ ಅಖಾಡಾ, ಗ್ರೂಪ್-ಡಿ, ಕಾಲೇಜ್ ಕಾಂಡ್, ಓಪ್ರಿ ಪರೈ, ಇತ್ಯಾದಿ ಸೇರಿದಂತೆ ಹಲವು ವೆಬ್ ಸರಣಿಗಳನ್ನು ನಿರ್ಮಿಸಿದೆ.


ಹಲವು ಕಟೆಂಟ್‌ ಹೊಂದಿರುವ ಸ್ಟೇಜ್‌:


ಗೋಲು ಮೋಲು ರಿ ಶಾಯ್ರಿಯಿಂದ ಖೋಟೆ ಸಿಕ್ಕೆ, ಚೋರಿಯನ್ ಬೋಜ್ ನಾ ಹೋಟಿ ಮತ್ತು ಗ್ಯಾಂಗ್ಸ್ ಆಫ್ ಹಾನ್ಸಿಪುರದವರೆಗೆ, ಇದು ದೀರ್ಘಾವಧಿಯ ವೆಬ್ ಸರಣಿಗಳು, ಚಲನಚಿತ್ರಗಳು, ಕಿರುಚಿತ್ರಗಳು, ಸ್ಟ್ಯಾಂಡ್‌ಅಪ್ ಹಾಸ್ಯಗೋಷ್ಠಿಗಳು, ಕವನ, ಜಾನಪದ, ವಿಷಯಗಳಲ್ಲಿ 400 ಗಂಟೆಗಳ ವಿಷಯವನ್ನು ಹೊಂದಿದೆ. ವಿನಯ್ ಸಿಂಘಾಲ್ ತನ್ನ ಕಿರಿಯ ಸಹೋದರ ಪ್ರವೀಣ್ ಮತ್ತು ಕಾಲೇಜಿನ ಸಹಪಾಠಿ ಶಶಾಂಕ್ ಜೊತೆಗೂಡಿ STAGE ಪ್ರಾರಂಭಿಸಿದ್ದಾರೆ.


ರಾಜಸ್ಥಾನಿ ಉಪಭಾಷೆಗಳೂ ಒಟಿಟಿಯಲ್ಲಿ ಲಭ್ಯ:


STAGE ಪ್ರಸ್ತುತ ಹರಿರ್ಯಾನ್ವಿ ಮತ್ತು ರಾಜಸ್ಥಾನಿ ಉಪಭಾಷೆಗಳ ಮೇಲೆ ಕೇಂದ್ರೀಕರಿಸುತ್ತದೆ. ಜೂನ್ 2022 ರಲ್ಲಿ ರಾಜಸ್ಥಾನದಲ್ಲಿ ಪ್ರಾರಂಭವಾದ ವೇದಿಕೆಯು ರಾಜ್ಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಜನವರಿ 4 ರಂದು, OTT ಪ್ಲಾಟ್‌ಫಾರ್ಮ್ ತನ್ನ ಮೊದಲ ದೊಡ್ಡ ವೆಬ್ ಸೀರೀಸ್, ಸರ್ಪಂಚ್ ಅನ್ನು ರಾಜ್ಯದಲ್ಲಿ ಪ್ರಾರಂಭಿಸಿತು.


2.25 ಲಕ್ಷ ಚಂದಾದಾರರನ್ನು ಹೊಂದಿರುವ ವೇದಿಕೆ:


ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ. ಇದು ಹರಿಯಾಣದಲ್ಲಿ 2.25 ಲಕ್ಷ ಚಂದಾದಾರರನ್ನು ಮತ್ತು ರಾಜಸ್ಥಾನದಲ್ಲಿ 10,000 ಚಂದಾದಾರರನ್ನು ಹೊಂದಿರುವ ಪ್ರದೇಶದಲ್ಲಿ ಅತಿದೊಡ್ಡ OTT ಆಗಿದೆ.


ಪ್ಲಾಟ್‌ಫಾರ್ಮ್ ಹರಿಯಾಣ ಮತ್ತು ರಾಜಸ್ಥಾನದಾದ್ಯಂತ 2.25 ಲಕ್ಷಕ್ಕೂ ಹೆಚ್ಚು ಪಾವತಿಸಿದ ಚಂದಾದಾರರನ್ನು ಹೊಂದಿದೆ, ತಿಂಗಳಿನಿಂದ ತಿಂಗಳಿಗೆ 30 ಪ್ರತಿಶತದಷ್ಟು ಬೆಳೆಯುತ್ತಿದೆ ಎಂದು ಕಂಪನಿ ಹೇಳಿದೆ.


ಇದನ್ನೂ ಓದಿ: Zomato, Blinkit ವೈರಲ್ ಜಾಹೀರಾತನ್ನು ನಕಲು ಮಾಡಿದ ಹೋಂಡಾ ಕಂಪನಿ!


ಇತರೆ ಉಪಭಾಷೆಗೂ ವಿಸ್ತರಿಸಲು ಚಿಂತನೆ:


“2023ರಲ್ಲಿ, ನಾವು ಹರ್ಯಾನ್ವಿ ಮತ್ತು ರಾಜಸ್ಥಾನಿ ವಿಷಯಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತೇವೆ. ಪೂರ್ವ ಯುಪಿ ಮತ್ತು ಬಿಹಾರದ ಸುಮಾರು 100 ಮಿಲಿಯನ್ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಭೋಜ್‌ಪುರಿ, ಮಾಗಾಹಿ, ಮೈಥಿಲಿಯಲ್ಲಿ ಶೀಘ್ರದಲ್ಲೇ ವಿಷಯವನ್ನು ಪ್ರಾರಂಭಿಸಲು ನಾವು ಯೋಜಿಸುತ್ತಿದ್ದೇವೆ. ನಂತರ, ನಾವು ಬುಂದೇಲಿ, ಅವಧಿ, ಛತ್ತೀಸ್‌ಗಢಿ, ನೇಪಾಳಿ, ಕೊಂಕಣಿ, ಸಿಂಧಿ, ಅಸ್ಸಾಮಿ, ಒಡಿಯಾದಲ್ಲೂ ನಮ್ಮ ಕೆಲಸವನ್ನು ವಿಸ್ತರಿಸುತ್ತೇವೆ, ”ಎಂದು ಸಿಂಘಾಲ್ ಹೇಳಿದ್ದಾರೆ.


ಶಾರ್ಕ್ ಟ್ಯಾಂಕ್‌ನ ಸೀಸನ್ 2ಗೆ ಬಂದಿದ್ದ ಯುವಕರು:


STAGE ಸಹ-ಸಂಸ್ಥಾಪಕರಾದ ವಿನಯ್ ಸಿಂಘಾಲ್, ಪ್ರವೀಣ್ ಸಿಂಘಾಲ್ ಮತ್ತು ಶಶಾಂಕ್ ವೈಷ್ಣವ್ ಅವರು ತಮ್ಮ OTT ಪ್ಲಾಟ್‌ಫಾರ್ಮ್‌ಗಾಗಿ ಹಣವನ್ನು ಸಂಗ್ರಹಿಸಲು ಶಾರ್ಕ್ ಟ್ಯಾಂಕ್‌ನ ಸೀಸನ್ 2 ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ಅವರು ವೈರಲ್ ವಿಷಯ ಆಧಾರಿತ ಕಂಪನಿ ವಿಟ್ಟಿಫೀಡ್ ಅನ್ನು ಕಳೆದುಕೊಂಡ ಬಗ್ಗೆ ಹೇಳಿಕೊಳ್ಳುತ್ತಾರೆ. "ನಾವು ನಮ್ಮ ಕಂಪನಿಯನ್ನು ಕಳೆದುಕೊಂಡಿದ್ದೇವೆ. ಆದರೆ ನಮ್ಮ ಹೂಡಿಕೆದಾರರು ನಮ್ಮ ಬೆಂಬಲಕ್ಕೆ ನಿಂತರು. ನಾವು STAGE ಅನ್ನು ನಿರ್ಮಿಸಿದ್ದೇವೆ ಮತ್ತು ಹೊಸ ಕಂಪನಿಯಲ್ಲಿ ಅವರಿಗೆ ಇಕ್ವಿಟಿಯನ್ನು ನೀಡಿದ್ದೇವೆ. ಈ ಬಾರಿ ನಾವು ತುಂಬಾ ಜಾಗರೂಕರಾಗಿದ್ದೇವೆ. ಪ್ಲೇ ಸ್ಟೋರ್ ನಮ್ಮನ್ನು ನಿಷೇಧಿಸಿದರೂ ನಾವು ಬೆಳೆಯುತ್ತೇವೆ ಮತ್ತು ಬದುಕುತ್ತೇವೆ, ”ಎಂದು ವಿನಯ್ ಹೇಳುತ್ತಾರೆ.


40 ಜನರ  ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು 30 ಪ್ರೊಡಕ್ಷನ್ ಹೌಸ್‌:


ಸ್ಟೇಜ್‌ ಒಂದು ರೀತಿಯ ಲೋಕಲ್ ಬಾಲಿವುಡ್‌ ಅನುಭವ ನೀಡುತ್ತದೆ ಎನ್ನಬಹುದು. ದೇಶಾದ್ಯಂತ ಕೆಲಸ ಮಾಡುವ 40 ಜನರ ತಂಡದೊಂದಿಗೆ, STAGE ಪ್ರಧಾನ ಕಛೇರಿಯನ್ನು ನೋಯ್ಡಾದಲ್ಲಿ ಹೊಂದಿದೆ ಮತ್ತು 100% ರಿಮೋಟ್‌ ಕಾರ್ಯವಿಧಾನ ಹೊಂದಿದೆ.


ಇದಲ್ಲದೆ, ಇದು ಹರಿಯಾಣದಲ್ಲಿ 1,500 ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಮತ್ತು ರಚನೆಕಾರರನ್ನು ಮತ್ತು ರಾಜಸ್ಥಾನದಲ್ಲಿ 500 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ ಎಂದು ವಿನಯ್ ಹೇಳುತ್ತಾರೆ. ರೂ 199 ರಿಂದ ಪ್ರಾರಂಭವಾಗುವ ಪಾವತಿಸಿದ ಚಂದಾದಾರಿಕೆಗಳ ಹೊರತಾಗಿ, ಪ್ಲಾಟ್‌ಫಾರ್ಮ್ ನಲ್ಲಿ ನೂರಾರು ವೆಬ್ ಸರಣಿಗಳು, ಕವನ, ಹಾಸ್ಯ ಕಾರ್ಯಕ್ರಮಗಳು ಉಚಿತವಾಗಿಲಭ್ಯವಿದೆ. ಇನ್ನೂ ಸ್ಟೇಜ್‌ 30 ಪ್ರೊಡಕ್ಷನ್ ಹೌಸ್‌ಗಳನ್ನು ಸಹ ಹೊಂದಿದೆ.


OTT ಪ್ಲಾಟ್‌ಫಾರ್ಮ್ ಸ್ಟೇಜ್ ಬ್ಲೂಮ್ ವೆಂಚರ್ಸ್ ನೇತೃತ್ವದಲ್ಲಿ ರೂ 40 ಕೋಟಿ ಹಣವನ್ನು ಸಂಗ್ರಹಿಸಿದೆ. ಶಾರ್ಕ್ ಟ್ಯಾಂಕ್ ಸುತ್ತಿನಲ್ಲಿ ಎನ್‌ಬಿ ವೆಂಚರ್ಸ್, ಧೋಲಾಕಿಯಾ ವೆಂಚರ್ಸ್, ಟಿಎಸ್‌ಎಂ ವೆಂಚರ್ಸ್, ವೀಫೌಂಡರ್ ಸರ್ಕಲ್, ಮುಂಬೈ ಏಂಜಲ್ಸ್, ಟಾರ್ಮ್ಯಾಕ್ ವೆಂಚರ್ಸ್, ಟೈಲ್‌ವಿಂಡ್ ವೆಂಚರ್ಸ್, ಲಾಂಗ್‌ಟೇಲ್ ವೆಂಚರ್ಸ್, ಲೆಟ್ಸ್ ವೆಂಚರ್ ಮತ್ತು ಏಂಜೆಲಿಸ್ಟ್ ಭಾಗವಹಿಸಿದ್ದರು. ಕಂಪನಿಯು ಈ ಹಿಂದೆ 31 ಕೋಟಿ ರೂ.ಗಳನ್ನು ಸಂಗ್ರಹಿಸಿದೆ, ಒಟ್ಟು ಬಂಡವಾಳ 71 ಕೋಟಿ ರೂ ಆಗಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು