Monthly Income: 42 ರೂ. ಠೇವಣಿ ಇರಿಸಿ ತಿಂಗಳಿಗೆ ಸಾವಿರ ರೂ. ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳ

ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ (Economic Survey) 2022 ರ ಪ್ರಕಾರ ಸೆಪ್ಟೆಂಬರ್ 2021 ರ ವೇಳೆಗೆ ಈ ಯೋಜನೆಗೆ ಸೇರುವ 43 ಪ್ರತಿಶತದಷ್ಟು ಜನರು 18 ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Atal Pension Scheme: ಪಿಂಚಣಿಯು ಜನರಿಗೆ ಮಾಸಿಕ ಆದಾಯ (Monthly Income)ವನ್ನು ನೀಡುತ್ತದೆ. ಪ್ರಸ್ತುತ, ಸರ್ಕಾರವು ಅನೇಕ ಪಿಂಚಣಿಗಳನ್ನು ನಡೆಸುತ್ತಿದೆ. ಈ ಯೋಜನೆಗಳಲ್ಲಿ ಒಳಗೊಂಡಿರುವ ಅಟಲ್ ಪಿಂಚಣಿ ಯೋಜನೆ (APY) ಯುವಕರು ಮತ್ತು ಮಹಿಳೆ (Youth And Women)ಯರನ್ನು ಆಕರ್ಷಿಸುತ್ತಿದೆ. ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ (Economic Survey) 2022 ರ ಪ್ರಕಾರ ಸೆಪ್ಟೆಂಬರ್ 2021 ರ ವೇಳೆಗೆ ಈ ಯೋಜನೆಗೆ ಸೇರುವ 43 ಪ್ರತಿಶತದಷ್ಟು ಜನರು 18 ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ. ಮಾರ್ಚ್ 2016 ರಲ್ಲಿ, ಅಟಲ್ ಪಿಂಚಣಿ ಯೋಜನೆಯಲ್ಲಿ ಈ ವಯಸ್ಸಿನವರ ಪಾಲು ಶೇಕಡಾ 29 ರಷ್ಟಿತ್ತು.

ಅಟಲ್ ಪಿಂಚಣಿ ಯೋಜನೆ (APY) ಕೂಡ ಹೆಚ್ಚಿನ ಮಹಿಳೆಯರನ್ನು ಆಕರ್ಷಿಸುತ್ತಿದೆ. ಮಾರ್ಚ್ 2016 ರಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇಕಡಾ 37 ರಷ್ಟಿತ್ತು. ಇದು ಸೆಪ್ಟೆಂಬರ್ 2021 ರ ವೇಳೆಗೆ ಶೇಕಡಾ 44 ಕ್ಕೆ ಏರಿದೆ. ಹೆಚ್ಚಿನ ಜನರು ಮಾಸಿಕ 1,000 ರೂಪಾಯಿಗಳ ಪಿಂಚಣಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಆರ್ಥಿಕ ಸಮೀಕ್ಷೆ ತೋರಿಸುತ್ತದೆ.

ಪಿಂಚಣಿ ಆಯ್ಕೆ ನಿಮ್ಮದು

ಮಾರ್ಚ್ 2016 ರಲ್ಲಿ 38 ಪ್ರತಿಶತ ಜನರು ರೂ 1,000 ಮಾಸಿಕ ಪಿಂಚಣಿ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ. ಆದರೆ ಸೆಪ್ಟೆಂಬರ್ 2021 ರಲ್ಲಿ ಈ ಅಂಕಿ ಅಂಶವು 78 ಪ್ರತಿಶತಕ್ಕೆ ಏರಿದೆ. 2,000, 3,000 ಮತ್ತು 4,000 ರೂಪಾಯಿಗಳ ಮಾಸಿಕ ಪಿಂಚಣಿ ಆಯ್ಕೆಯನ್ನು ಈ ಯೋಜನೆಯಡಿ ಒಳಗೊಂಡಿರುವ ಒಟ್ಟು ಶೇಕಡಾ 8 ರಷ್ಟು ಜನರು ಆಯ್ಕೆ ಮಾಡಿದ್ದಾರೆ. ಶೇ.14 ರಷ್ಟು ಜನರು ರೂ 5,000 ಮಾಸಿಕ ಪಿಂಚಣಿ ಆಯ್ಕೆಗೆ ಆದ್ಯತೆ ನೀಡಿದ್ದಾರೆ.

ಇದನ್ನೂ ಓದಿ:  ಬಜೆಟ್ ಮಂಡನೆಗೂ ಮುನ್ನ LPG ಸಿಲಿಂಡರ್ ಬೆಲೆಯಲ್ಲಿ 91 ರೂಪಾಯಿ ಇಳಿಕೆ

ಏನಿದು ಅಟಲ್ ಪಿಂಚಣಿ ಯೋಜನೆ?

18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾರಾದರೂ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 18 ವರ್ಷ ವಯಸ್ಸಿನವರು ತಿಂಗಳಿಗೆ 42 ರೂ. ಠೇವಣಿ ಇಟ್ಟರೆ, 60 ವರ್ಷ ವಯಸ್ಸಿನಲ್ಲಿ ಅವರು ತಿಂಗಳಿಗೆ 1,000 ರೂಪಾಯಿ ಪಿಂಚಣಿ ಪಡೆಯುತ್ತಾರೆ.

18 ನೇ ವಯಸ್ಸಿನಲ್ಲಿ ಪ್ರತಿ ತಿಂಗಳು 210 ರೂಪಾಯಿಗಳ ಪಿಂಚಣಿಯನ್ನು ಠೇವಣಿ ಮಾಡಿದರೆ, ನಿವೃತ್ತಿಯ ನಂತರ 5,000 ರೂಪಾಯಿಗಳ ಮಾಸಿಕ ಪಿಂಚಣಿ ಲಭ್ಯವಿದೆ. ಆದಾಗ್ಯೂ, ಪ್ರೀಮಿಯಂ ಮೊತ್ತವು ವಯಸ್ಸಿನೊಂದಿಗೆ ಹೆಚ್ಚಾಗುತ್ತದೆ.

40 ವರ್ಷ ವಯಸ್ಸಿನವರು ಅಟಲ್ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆಯಲು ಬಯಸಿದರೆ, ಅವರು ತಿಂಗಳಿಗೆ ರೂ 1 ಸಾವಿರ ಪಿಂಚಣಿಗೆ ತಿಂಗಳಿಗೆ ರೂ 291 ಠೇವಣಿ ಮಾಡಬೇಕಾಗುತ್ತದೆ. ಆದರೆ ರೂ 5 ಸಾವಿರ ಪಿಂಚಣಿಗೆ ರೂ 1,454 ರೂ ಪಾವತಿಸಬೇಕು.

APY ಪ್ರಯೋಜನಗಳು

ಅಟಲ್ ಪಿಂಚಣಿ ಯೋಜನೆಯ ಪ್ರೀಮಿಯಂನಲ್ಲಿ ಆದಾಯ ತೆರಿಗೆಯ ಸೆಕ್ಷನ್ 80CCD ಅಡಿಯಲ್ಲಿ ತೆರಿಗೆಯ ಪ್ರಯೋಜನ ಲಭ್ಯವಿದೆ. ಸೆಕ್ಷನ್ 80CCD ಅಡಿಯಲ್ಲಿ ಕಡಿತದ ಗರಿಷ್ಠ ಮಿತಿ 2 ಲಕ್ಷ ರೂ. ಇದು ರೂ 50,000 ಹೆಚ್ಚುವರಿ ಕಡಿತದ ಪ್ರಯೋಜನವನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ:  Saving Scheme: ಹಿರಿಯ ನಾಗರಿಕರ ಉಳಿತಾಯ ಯೋಜನೆ ನಿಮಗೆಷ್ಟು ಗೊತ್ತು?

APY ಆಯ್ಕೆ ಮಾಡಿಕೊಂಡ 3 ಕೋಟಿ 90 ಲಕ್ಷ ಜನ

12 ಅಕ್ಟೋಬರ್ 2021 ರ ಹೊತ್ತಿಗೆ 3 ಕೋಟಿ 90 ಲಕ್ಷ ಜನರು ಅಟಲ್ ಪಿಂಚಣಿ ಯೋಜನೆಗೆ ಸೇರಿದ್ದಾರೆ. ಈ ಯೋಜನೆಯಲ್ಲಿ ಈ ಜನರ ಕೊಡುಗೆ 16109 ಕೋಟಿ ರೂ. ಅಟಲ್ ಪಿಂಚಣಿ ಯೋಜನೆ ಪ್ರತಿಯೊಂದು ಬ್ಯಾಂಕ್ ಮತ್ತು ಅಂಚೆ ಕಛೇರಿಯಲ್ಲಿ ಲಭ್ಯವಿದೆ.

ಒಂದು ವರ್ಷದಲ್ಲಿ ಶೇ.29ರಷ್ಟು ಹೆಚ್ಚಳ

ಹೊಸ ಪಿಂಚಣಿ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರ ಸಂಖ್ಯೆಯು ಸೆಪ್ಟೆಂಬರ್ 2020 ರಿಂದ ಸೆಪ್ಟೆಂಬರ್ 2021 ರವರೆಗೆ 23.7% ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 2020 ರಲ್ಲಿ, 37.4 ಮಿಲಿಯನ್ ಜನರು ಪಿಂಚಣಿ ಯೋಜನೆ ಹೊಂದಿದ್ದರು. ಇದು 2021 ರಲ್ಲಿ 46.3 ಮಿಲಿಯನ್‌ಗೆ ಏರಿತು. NPS ಅಡಿಯಲ್ಲಿ ಒಟ್ಟಾರೆ ಕೊಡುಗೆಯು ಒಂದು ವರ್ಷದಲ್ಲಿ 29 ಪ್ರತಿಶತದಷ್ಟು ಹೆಚ್ಚಾಗಿದೆ.
Published by:Mahmadrafik K
First published: