ಕೇಂದ್ರ ಸರ್ಕಾರ (Centrel Government) ಈ ವರ್ಷದ ಬಜೆಟ್ (Budget) ನಲ್ಲಿ ವಾರ್ಷಿಕ 7.5 ಲಕ್ಷ ರೂ.ವರೆಗೆ ಆದಾಯ (Income) ಹೊಂದಿರುವ ವ್ಯಕ್ತಿ ಯಾವುದೇ ತೆರಿಗೆ ಪಾವತಿಸಬೇಕಿಲ್ಲ ಎಂದು ಘೋಷಣೆ ಮಾಡಿದೆ. ಆದರೆ ನಿರ್ದಿಷ್ಟ ಆದಾಯದ ಸ್ಲ್ಯಾಬ್‌ಗಿಂತ (Tax Slabs) ಹೆಚ್ಚಿನ ವೇತನವನ್ನು ಹೊಂದಿರುವ ಪ್ರತಿಯೊಬ್ಬ ವೇತನದಾರರು ವಾರ್ಷಿಕವಾಗಿ ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು ನಿಗದಿಪಡಿಸಿದ ವಿನಾಯಿತಿ ಮಿತಿಯನ್ನು ಮೀರಿದ ಸಂಬಳ ಪಡೆಯುವವರು (Salaried Person) ಮತ್ತು ಯಾವುದೇ ಸಂಸ್ಥೆಯ ಮಾಲೀಕತ್ವವನ್ನು ಹೊಂದಿರುವವರು ITR ಅನ್ನು ಸಲ್ಲಿಕೆ ಮಾಡುವುದು ಅವರ ಕತ್ಯರ್ವ ಮತ್ತು ಜವಾಬ್ದಾರಿ ಕೂಡ ಹೌದು.
ವೈಯಕ್ತಿಕ ತೆರಿಗೆದಾರರಿಗೆ ಪ್ರತಿ ವರ್ಷ ಜುಲೈ 31ರವರೆಗೆ ಐಟಿಆರ್ ಸಲ್ಲಿಸಲು ಕಾಲಾವಕಾಶ ಇರುತ್ತದೆ ಜೊತೆಗೆ ದೊಡ್ಡ ದೊಡ್ಡ ಕಂಪನಿಗಳಿಗೂ ಡೆಡ್‌ಲೈನ್ ಇದ್ದು, ಅದರ ವರ್ಗಗಳನ್ನು ಆಧಾರಿಸಿ ಗಡುವು ನೀಡಲಾಗುತ್ತದೆ.
ಆದಾಯ ತೆರಿಗೆ ರಿಟರ್ನ್ ಫಾರ್ಮ್ ಸಲ್ಲಿಸುವಾಗ ಇರಲಿಪ ಗಮನ!
- ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಯೋಚಿಸಿದ್ದರೆ, ಸರಿಯಾದ ಫಾರ್ಮ್ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಒಂದೊಮ್ಮೆ ತಪ್ಪಾದ ಫಾರ್ಮ್ ಬಳಕೆ ಮಾಡಿದರೆ ನಿಮ್ಮ ತೆರಿಗೆ ರಿಟರ್ನ್ಸ್ ತಿರಸ್ಕೃತವಾಗುವ ಸಾಧ್ಯತೆ ಇದೆ.
- ಆದಾಯ ತೆರಿಗೆ ಇಲಾಖೆ ಐಟಿಆರ್-1 ರಿಂದ ಐಟಿಆರ್-7ರವರೆಗೆ ಒಟ್ಟು 7 ಫಾರ್ಮ್‌ಗಳನ್ನು ಬಿಡುಗಡೆ ಮಾಡಿದೆ. ಇಲ್ಲಿ ನಿಮಗೆ ಯಾವ ಫಾರ್ಮ್ ಅನ್ವಯವಾಗುತ್ತದೆ ಆ ಸೂಕ್ತವಾದ ITR ಫಾರ್ಮ್ ಅನ್ನು ಗುರುತಿಸಿ
- ಪ್ಯಾನ್, ವಿಳಾಸ, ಇ-ಮೇಲ್ ವಿಳಾಸ, ಬ್ಯಾಂಕ್ ಖಾತೆ ಮಾಹಿತಿ ಮತ್ತು ಮುಂತಾದ ವಿವರಗಳನ್ನು ನೀಡುವಾಗ ಎರಡೆರೆಡು ಬಾರಿ ಸರಿಯಾಗಿವೆಯೇ ಎಂದು ಪರಿಶೀಲಿಸಿ.
- ಪಾವತಿಸಿದ ನಿಜವಾದ TDS/TCS/ತೆರಿಗೆಯನ್ನು ನಿರ್ಧರಿಸಲು AIS ಮತ್ತು ಫಾರ್ಮ್ 26AS ಅನ್ನು ಡೌನ್‌ಲೋಡ್ ಮಾಡಿ. ನೀವು ವ್ಯತ್ಯಾಸವನ್ನು ಗಮನಿಸಿದರೆ, ನೀವು ಅದನ್ನು ನಿಮ್ಮ ಉದ್ಯೋಗದಾತ/ತೆರಿಗೆ ಕಡಿತಗಾರ/ಬ್ಯಾಂಕ್ ಜೊತೆಗೆ ಚರ್ಚಿಸಿ ಸರಿಯಾದ ಮಾಹಿತಿಯನ್ನು ನೀಡಿ.
ಇದನ್ನೂ ಓದಿ: ಈ ರೀತಿ ಮೆಸೇಜ್ ಬಂದ್ರೆ ಓಪನ್ ಮಾಡ್ಬೇಡಿ, ಪಕ್ಕಾ ದುಡ್ಡು ಕಳೆದುಕೊಳ್ತೀರಾ!
- ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಪಾಸ್‌ಬುಕ್‌ಗಳು, ಬಡ್ಡಿ ಪ್ರಮಾಣಪತ್ರಗಳು, ವಿನಾಯಿತಿಗಳು ಅಥವಾ ಕಡಿತಗಳನ್ನು ಕ್ಲೈಮ್ ಮಾಡುವ ರಸೀದಿಗಳು, ಫಾರ್ಮ್ 16, ಫಾರ್ಮ್ 26ಎಎಸ್ (ವಾರ್ಷಿಕ ಮಾಹಿತಿ ಹೇಳಿಕೆ), ಹೂಡಿಕೆ ಪುರಾವೆಗಳು ಹೀಗೆ ಇನ್ನೂ ಮುಂತಾದ ದಾಖಲೆಗಳ ಬಗ್ಗೆ ನಿಗಾ ಇರಲಿ. ಐಟಿಆರ್ ಅನ್ನು ಸಲ್ಲಿಸುವಾಗ ಉಲ್ಲೇಖಿಸಲಾಗುವ ದಾಖಲೆಗಳನ್ನು ಸಂಗ್ರಹಿಸಿ ಮತ್ತು ಸಂಪೂರ್ಣವಾಗಿ ಪರೀಕ್ಷಿಸಿಕೊಳ್ಳುವುದನ್ನು ಮರೆಯಬೇಡಿ.
- ಒಟ್ಟು ಆದಾಯ, ಕಡಿತಗಳು (ಯಾವುದಾದರೂ ಇದ್ದರೆ), ಬಡ್ಡಿ (ಯಾವುದಾದರೂ ಇದ್ದರೆ), ಪಾವತಿಸಿದ/ಸಂಗ್ರಹಿಸಿದ ತೆರಿಗೆಗಳು ಮತ್ತು ಮುಂತಾದ ಎಲ್ಲಾ ಸಂಬಂಧಿತ ಮಾಹಿತಿಯನ್ನು ರಿಟರ್ನ್‌ನಲ್ಲಿ ನಮೂದಿಸಿ.
- ನಿಮ್ಮ ITR ಅನ್ನು ಅಂತಿಮ ದಿನಾಂಕದಂದು ಅಥವಾ ಅದಕ್ಕೂ ಮುನ್ನ ಅಂದರೆ ಡೆಡ್‌ಲೈನ್ ಮುಗಿಯುವ ಮುನ್ನ ಫೈಲ್ ಮಾಡಿ.
- ಆದಾಯದ ರಿಟರ್ನ್‌ನಲ್ಲಿನ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಮತ್ತು ದೃಢೀಕರಿಸಿದ ನಂತರ, ಆದಾಯದ ರಿಟರ್ನ್ ಅನ್ನು ಸಲ್ಲಿಸಬಹುದು.
- ಇ-ಫೈಲಿಂಗ್ ನಂತರ, ರಿಟರ್ನ್ ಅನ್ನು ಇ-ಪರಿಶೀಲಿಸಿ.
ಆದಾಯ ತೆರಿಗೆ ರಿಟರ್ನ್ ಸ್ಟೇಟಸ್ ಅನ್ನು ಪರಿಶೀಲಿಸುವುದು ಹೇಗೆ?
- ಆದಾಯ ತೆರಿಗೆ ರಿಟರ್ನ್‌ನ ಸ್ಥಿತಿಯನ್ನು ಭಾರತದ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಸ್ಟೇಟಸ್ ಅನ್ನು ಪರಿಶೀಲಿಸಲು ನಿಮ್ಮ ಅಕೌಂಟ್ ನಂಬರ್ ಮತ್ತು ಪಾಸ್‌ವರ್ಡ್ ಅಗತ್ಯವಿರುತ್ತದೆ.
- ನಿಮ್ಮ ರಿಟರ್ನ್ ಅನ್ನು ಹಸ್ತಚಾಲಿತವಾಗಿ ಪರಿಶೀಲಿಸಲು ನೀವು ಬಯಸಿದರೆ, ITR-V ಸ್ವೀಕೃತಿಯ ಸಹಿ ಮಾಡಿದ ಭೌತಿಕ ಪ್ರತಿಯನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿ ಪಡೆಯಬಹುದು.
ಡೆಡ್‌ಲೈನ್ ಮೀರಿದರೆ ದಂಡ
- ಡೆಡ್‌ಲೈನ್ ಮುಗಿಯುದರೊಳಗೆ ITR-ಫೈಲಿಂಗ್ ಮಾಡಿದರೆ ಹಲವು ಲಾಭಗಳಿವೆ. ಆದರೆ ನಿಗದಿತ ದಿನಾಂಕದೊಳಗೆ ರಿಟರ್ನ್ಸ್ ಸಲ್ಲಿಸದಿದ್ದರೆ, ತೆರಿಗೆದಾರರು ದಂಡವನ್ನು ತೆತ್ತಬೇಕಾಗುತ್ತದೆ.
- ದಂಡದ ಹೊರತಾಗಿ, ವ್ಯಕ್ತಿಯು ಇತರ ಅನನುಕೂಲತೆಗಳು ಮತ್ತು ಪರಿಣಾಮಗಳನ್ನು ಎದುರಿಸಬಹುದು. ನಿಗದಿತ ದಿನಾಂಕ ಮುಗಿದ ನಂತರ ಅವರ ರಿಟರ್ನ್ಸ್ ಸಲ್ಲಿಸಿದರೆ ರೂ.1,000 ರಿಂದ ರೂ.10,000 ವರೆಗೆ ದಂಡ ಕಟ್ಟಬೇಕಾಗುವ ಸಾಧ್ಯತೆಗಳಿರುತ್ತವೆ.
ಐಟಿಆರ್ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
- ಪ್ಯಾನ್ ಕಾರ್ಡ್
- ಫಾರ್ಮ್ 26 ಎಎಸ್
- ಫಾರ್ಮ್ 16A, 16B, 16C
- ಸಂಬಳ ಪಾವತಿ ಚೀಟಿಗಳು
- ಬ್ಯಾಂಕ್ ಹೇಳಿಕೆಗಳು
- ಟಿಡಿಎಸ್ ಪ್ರಮಾಣಪತ್ರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ