Gold Rules: ಹಳೆಯ ಆಭರಣಗಳನ್ನು ಇನ್ನು ಮುಂದೆ ಮಾರಾಟ ಮಾಡುವಂತಿಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಹಿಂದೆ ಹೊಸ ಆಭರಣ ಖರೀದಿಗೆ ಮಾತ್ರ ಹಾಲ್‌ಮಾರ್ಕ್‌ ಅನ್ವಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಹಾಗಾಗುವುದಿಲ್ಲ. ಮನಿ ಕಂಟ್ರೋಲ್ ವರದಿಯ ಪ್ರಕಾರ, ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. 

  • Share this:

ನಿಮ್ಮ ಹಳೆಯ ಆಭರಣಗಳನ್ನು (Old Jewelery) ಮಾರಿ ಹೊಸ ಆಭರಣಗಳನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಯಾಕಂದ್ರೆ ಆಭರಣ ಮಾರಾಟಕ್ಕೆ ಸರ್ಕಾರ (Central Government) ಹೊಸ ನಿಯಮಗಳನ್ನು ಮಾಡಿದೆ. ಈಗ ಮನೆಯಲ್ಲಿ ಇಟ್ಟಿರುವ ಹಳೆಯ ಆಭರಣಗಳನ್ನು ಹಾಲ್ ಮಾರ್ಕ್ (Hallmark)​ ಇಲ್ಲದೆ ಮಾರುವಂತಿಲ್ಲ. ಚಿನ್ನದ ಹಾಲ್‌ಮಾರ್ಕ್ (Gold Hallmark)  , ಚಿನ್ನದ ಖರೀದಿ ಮತ್ತು ಮಾರಾಟಕ್ಕೆ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದೆ. ಈ ನಿಯಮಗಳ ಪ್ರಕಾರ, ಮನೆಗಳಲ್ಲಿ ಇರಿಸಲಾಗಿರುವ ಹಳೆಯ ಚಿನ್ನದ ಆಭರಣಗಳ ಹಾಲ್‌ಮಾರ್ಕ್ ಅನ್ನು ಸಹ ಕಡ್ಡಾಯಗೊಳಿಸಲಾಗಿದೆ. ಹೊಸ ನಿಯಮಗಳು ಏಪ್ರಿಲ್ 1, 2023 ರಿಂದ ಎಲ್ಲಾ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳು ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರಬೇಕು ಎಂದು ಹೇಳುತ್ತದೆ.


ಹಳೆಯ ಚಿನ್ನದ ಆಭರಣ ಮಾರುವಂತಿಲ್ಲ!


ಈ ಹಿಂದೆ ಹೊಸ ಆಭರಣ ಖರೀದಿಗೆ ಮಾತ್ರ ಹಾಲ್‌ಮಾರ್ಕ್‌ ಅನ್ವಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಹಾಗಾಗುವುದಿಲ್ಲ. ಮನಿ ಕಂಟ್ರೋಲ್ ವರದಿಯ ಪ್ರಕಾರ, ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.


ಹಳೆಯ ಆಭರಣಗಳನ್ನು ಮಾರಾಟ ಮಾಡಲು ಈಗ ಹಾಲ್‌ಮಾರ್ಕ್ ಕಡ್ಡಾಯವಾಗಿದೆ. ಬಿಐಎಸ್ ಪ್ರಕಾರ, ಹಾಲ್‌ಮಾರ್ಕ್‌ಗಳಿಲ್ಲದ ಚಿನ್ನಾಭರಣ ಹೊಂದಿರುವ ಗ್ರಾಹಕರು ಅದನ್ನು ಮಾರಾಟ ಮಾಡುವ ಮೊದಲು ಅಥವಾ ಹೊಸ ವಿನ್ಯಾಸಕ್ಕಾಗಿ ವಿನಿಮಯ ಮಾಡಿಕೊಳ್ಳುವ ಮೊದಲು ಹಾಲ್‌ಮಾರ್ಕ್ ಅನ್ನು ಪಡೆಯಬೇಕಾಗುತ್ತದೆ.


ಹಾಲ್​ಮಾರ್ಕಿಂಗ್​ ಮಾಡುವುದು ಹೇಗೆ?


ಬಳಸಿದ ಆಭರಣಗಳನ್ನು ಹಾಲ್‌ಮಾರ್ಕ್ ಮಾಡಲು ಗ್ರಾಹಕರು 2 ಆಯ್ಕೆಗಳನ್ನು ಹೊಂದಿರುತ್ತಾರೆ. ಬಿಐಎಸ್ ನೋಂದಾಯಿತ ಆಭರಣಕಾರರಿಂದ ಹಾಲ್‌ಮಾರ್ಕ್ ಇಲ್ಲದ ಹಳೆಯ ಆಭರಣಗಳನ್ನು ಹಾಲ್‌ಮಾರ್ಕ್ ಮಾಡಬಹುದು. ಬಿಐಎಸ್ ನೋಂದಾಯಿತ ಆಭರಣ ವ್ಯಾಪಾರಿಗಳು ಹಾಲ್‌ಮಾರ್ಕ್ ಮಾಡದ ಚಿನ್ನಾಭರಣಗಳನ್ನು ಬಿಐಎಸ್ ಅಸ್ಸೇಯಿಂಗ್ ಮತ್ತು ಹಾಲ್‌ಮಾರ್ಕಿಂಗ್ ಕೇಂದ್ರಕ್ಕೆ ಕೊಂಡೊಯ್ಯುತ್ತಾರೆ.


ಇದನ್ನೂ ಓದಿ: 6 ಅಂಕಿಯ ಈ ಕೋಡ್ ಇಲ್ಲದ ಚಿನ್ನದ ವ್ಯಾಪಾರ ನಿಷೇಧ, ಏಪ್ರಿಲ್ 1ರಿಂದಲೇ ಜಾರಿ


BIS-ಮಾನ್ಯತೆ ಪಡೆದ ಯಾವುದೇ ಹಾಲ್‌ಮಾರ್ಕಿಂಗ್ ಕೇಂದ್ರಗಳಲ್ಲಿ ಆಭರಣಗಳನ್ನು ಪರೀಕ್ಷಿಸಿ ಮತ್ತು ಹಾಲ್‌ಮಾರ್ಕ್ ಮಾಡುವುದು ಗ್ರಾಹಕರಿಗೆ ಮತ್ತೊಂದು ಆಯ್ಕೆಯಾಗಿದೆ.


ಹಾಲ್​ಮಾರ್ಕ್​ಗೆ ಎಷ್ಟು ಪಾವತಿಸಬೇಕು?


ಆಭರಣಗಳ ಸಂಖ್ಯೆ 5 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಹಾಲ್‌ಮಾರ್ಕ್‌ಗಾಗಿ ಗ್ರಾಹಕರು ಪ್ರತಿ ಆಭರಣಕ್ಕೆ ರೂ.45 ಪಾವತಿಸಬೇಕಾಗುತ್ತದೆ. 4  ಹಾಲ್‌ಮಾರ್ಕ್ ಪಡೆಯಲು 200 ರೂಪಾಯಿ ಬೇಕು. BIS ನಿಂದ ಗುರುತಿಸಲ್ಪಟ್ಟಿರುವ ಹಾಲ್‌ಮಾರ್ಕಿಂಗ್ ಕೇಂದ್ರವು ಆಭರಣಗಳನ್ನು ಪರಿಶೀಲಿಸಿ ಅದರ ಪ್ರಮಾಣಪತ್ರವನ್ನು ನೀಡುತ್ತದೆ.


ಗ್ರಾಹಕನು ತನ್ನ ಹಾಲ್‌ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಮಾರಾಟ ಮಾಡಲು ಈ ವರದಿಯೊಂದಿಗೆ ಯಾವುದೇ ಅಕ್ಕಸಾಲಿಗರನ್ನು ಸಂಪರ್ಕಿಸಬಹುದು.


ಚಿನ್ನಾಭರಣ ಮಾಲೀಕರಿಗೆ ಕಾಲಾವಕಾಶ ನೀಡಿದ್ದ ಸರ್ಕಾರ


2021ರ ಜುಲೈ 1ರಲ್ಲೇ ಎಚ್‌ಯುಐಡಿ ನಂಬರ್ ಪರಿಚಯಿಸಲಾಗಿತ್ತು. ನಾಲ್ಕು ಸಂಖ್ಯೆಯ ಹಾಲ್​ಮಾರ್ಕ್ ಇರುವ ಚಿನ್ನಾಭರಣ ಮಾರಾಟಕ್ಕೆ, ತಮ್ಮ ಬಳಿ ಇರುವ ಹಳೆಯ ಉತ್ಪನ್ನಗಳನ್ನು ಮಾರಾಟ ಮಾಡಲು ಚಿನ್ನಾಭರಣ ಮಾಲೀಕರಿಗೆ ಒಂದು ವರ್ಷ ಒಂಬತ್ತು ತಿಂಗಳು ಸರ್ಕಾರ ಅವಕಾಶ ನೀಡಿತ್ತು. ಪ್ರಸ್ತುತ ಈ ನಿಯಮ 2023ರ ಏ.1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿದೆ.


ಇನ್ಮುಂದೆ 6-ಅಂಕಿಯ ಹಾಲ್‌ಮಾರ್ಕ್‌ ಮಾನ್ಯ


"ಹಿಂದೆ, HUID ನಾಲ್ಕು ಅಂಕೆಗಳಾಗಿತ್ತು. ಮಾರ್ಚ್ 31 ರ ನಂತರ 6-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ ಅನ್ನು ಮಾತ್ರ ಅನುಮತಿಸಲಾಗುವುದು. ಈಗ 6-ಅಂಕಿಯ ಹಾಲ್‌ಮಾರ್ಕ್‌ ಮಾತ್ರ ಮಾರಾಟಕ್ಕೆ ಮಾನ್ಯವಾಗಿರುತ್ತದೆ" ಎಂದು ಖರೆ ತಿಳಿಸಿದರು.
2022-23ರ ಅವಧಿಯಲ್ಲಿ ಇಲ್ಲಿಯವರೆಗೆ 10.56 ಕೋಟಿ ಚಿನ್ನಾಭರಣ ವಸ್ತುಗಳನ್ನು ಹಾಲ್‌ಮಾರ್ಕ್ ಮಾಡಲಾಗಿದೆ ಎಂದು ಖರೆ ಹೇಳಿದ್ದಾರೆ. 2022-23ರಲ್ಲಿ ಆಪರೇಟಿವ್ ಬಿಐಎಸ್ ನೋಂದಾಯಿತ ಆಭರಣಗಳ ಸಂಖ್ಯೆ 1,53,718 ರಿಂದ ಹೆಚ್ಚಾಗಿದೆ ಎಂದು ಅವರು ಹೇಳಿದರು.

top videos
    First published: