Daughter's Marriage: ಮಗಳ ಮದುವೆಗೆ ಬರೋಬ್ಬರಿ ₹65 ಲಕ್ಷ ನೀಡುತ್ತೆ ಈ Scheme; ಸಂಪೂರ್ಣ ಮಾಹಿತಿ ಇಲ್ಲಿದೆ

Sukanya Samriddhi Yojana: ಮದುವೆ ಮಾತ್ರವಲ್ಲ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೂಹಣ ಬೇಕಾಗುತ್ತೆ. ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕೆ ಆರ್ಥಿಕ ಅಡಿಪಾಯ ಹಾಕುವುದು ಬಹಳ ಮುಖ್ಯ. ಇಂದು ನಾವು ಅಂತಹದೊಂದು ಯೋಜನೆ ಬಗ್ಗೆ ನಿಮಗೆ ಇಲ್ಲಿ ತಿಳಿಸುತ್ತಿದ್ದೇವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ (Indian Family System) ಮಗಳ ಮದುವೆ (Daughter's Marriage) ಎಂಬುವುದು ಪ್ರತಿಯೊಬ್ಬ ತಂದೆಗಿರುವ ದೊಡ್ಡ ಜವಾಬ್ದಾರಿ(Father Responsibility). ಎಷ್ಟೋ ತಂದೆಯರು ತಮ್ಮ ಆದಾಯದ ಬಹುಪಾಲನ್ನು ಮಗಳ ಮದುವೆಗೆ ಉಳಿತಾಯ (Savings) ಮಾಡುತ್ತಾರೆ. ಮದುವೆ ಮಾತ್ರವಲ್ಲ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೂ (Education) ಹಣ ಬೇಕಾಗುತ್ತೆ. ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕೆ ಆರ್ಥಿಕ ಅಡಿಪಾಯ ಹಾಕುವುದು ಬಹಳ ಮುಖ್ಯ. ಇಂದು ನಾವು ಅಂತಹದೊಂದು ಯೋಜನೆ ಬಗ್ಗೆ ನಿಮಗೆ ಇಲ್ಲಿ ತಿಳಿಸುತ್ತಿದ್ದೇವೆ. ಆ ಯೋಜನೆಯೇ ಸುಕನ್ಯಾ ಸಮೃದ್ಧಿ ಯೋಜನೆ(Sukanya Samriddhi Yojana). ಈ ಯೋಜನೆ ಅಡಿಯಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗಳಿಗೆ ಖಾತೆಯನ್ನು ತೆರೆಯಬಹುದು. ದಿನಕ್ಕೆ 100 ರೂಪಾಯಿಗಳನ್ನು ಉಳಿಸುವ ಮೂಲಕ ನೀವು 15 ಲಕ್ಷ ರೂಪಾಯಿಗಳನ್ನು ಪಡೆಯಬಹುದು. 416 ರೂಪಾಯಿಗಳನ್ನು ಉಳಿಸುವ ಮೂಲಕ 65 ಲಕ್ಷ ರೂಪಾಯಿವರೆಗೆ ಲಾಭ ಪಡೆಯಬಹುದು. ಇದು ನಿಮ್ಮ ಮಗಳ ಉತ್ತಮ ಭವಿಷ್ಯಕ್ಕೆ ಸದೃಢ ಆರ್ಥಿಕ ಬಲವಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು?

ಸುಕನ್ಯಾ ಸಮೃದ್ಧಿ ಯೋಜನೆ (SSY) ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರ ರೂಪಿಸಿದರು ಸಣ್ಣ ಉಳಿತಾಯ ಯೋಜನೆಯಾಗಿದೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಇದನ್ನು ಪ್ರಾರಂಭಿಸಲಾಗಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿಯೇ ಸುಕನ್ಯಾ ಯೋಜನೆಗೆ ಉತ್ತಮ ಬಡ್ಡಿ ದರ ಇದೆ.

 ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯುವುದು ಹೇಗೆ? (How to open an account)

ಈ ಯೋಜನೆಯಲ್ಲಿ ಯಾವುದೇ ವ್ಯಕ್ತಿ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಖಾತೆ ತೆರೆಯಬಹುದು. ಕನಿಷ್ಠ 250 ರೂಪಾಯಿ ಠೇವಣಿಯೊಂದಿಗೆ ಹೆಣ್ಣು ಮಗು ಜನಿಸಿದ 10 ವರ್ಷಗಳೊಳಗೆ  ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಯನ್ನು ತೆರೆಯಬಹುದು.

ಎಲ್ಲಿ ಖಾತೆ ತೆರೆಯಬೇಕು?  

ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ, ಅಂಚೆ ಕಚೇರಿ ಅಥವಾ ವಾಣಿಜ್ಯ ಶಾಖೆಯ ಯಾವುದೇ ಅಧಿಕೃತ ಶಾಖೆಯಲ್ಲಿ ಖಾತೆಯನ್ನು ತೆರೆಯಬಹುದು. 21 ನೇ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಈ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.

ಇದನ್ನೂ ಓದಿ: FD ಮೇಲೆ ಇತರೆ Bankಗಳಿಗಿಂತ Post Officeನಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತೆ: ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

ಎಷ್ಟು ಹೂಡಿಕೆ ಮಾಡಬಹುದು? (How much you can invest)

ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ನೀವು ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು. ಸದ್ಯ ಶೇ.7.6ರಷ್ಟು ಬಡ್ಡಿ ಸಿಗುತ್ತಿದೆ. ಈ ಯೋಜನೆಯಲ್ಲಿ ಮೊತ್ತವು 9 ವರ್ಷ, 4 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ.

65 ಲಕ್ಷ ರೂಪಾಯಿ ಹೇಗೆ ಸಿಗುತ್ತೆ? (Know how you will get 65 lakh rupees)

  •  >> ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 3,000 ರೂ. ಅಂದರೆ ವಾರ್ಷಿಕ 36,000 ರೂ. ಹೂಡಿಕೆ ಮಾಡಿದರೆ, ನೀವು 14 ವರ್ಷಗಳ ನಂತರ 7.6% ವಾರ್ಷಿಕ ಬಡ್ಡಿಯೊಂದಿಗೆ 9,11,574 ರೂ. ಪಡೆಯುತ್ತೀರಿ.

  • >> 21 ವರ್ಷಗಳು ಅಂದರೆ ಮೆಚ್ಯೂರಿಟಿ ಅವಧಿ ಮುಗಿದ ಬಳಿಲ ಈ ಮೊತ್ತವು ಸುಮಾರು 15,22,221 ರೂ ಆಗಿರುತ್ತದೆ. ಅಂದರೆ ನಿತ್ಯ 100 ರೂಪಾಯಿ ಉಳಿಸಿ ಠೇವಣಿ ಇಟ್ಟರೆ ಮಗಳಿಗಾಗಿ 15 ಲಕ್ಷ ರೂಪಾಯಿ ನಿಧಿ ಮಾಡಬಹುದು.

  •  >> ಇದೇ ರೀತಿ ಪ್ರತಿದಿನ 416 ರೂ.ವರೆಗೆ ಉಳಿಸುವ ಮೂಲಕ, ನೀವು 65 ಲಕ್ಷ ರೂಪಾಯಿಗಳನ್ನು ಸೇರಿಸಬಹುದು.


ಈ ಖಾತೆಯು ಎಷ್ಟು ಕಾಲ ಮುಂದುವರಿಯುತ್ತದೆ?

ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆದ ನಂತರ, ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ಅಥವಾ 18 ವರ್ಷ ವಯಸ್ಸಿನ ನಂತರ ಅವಳು ಮದುವೆಯಾಗುವವರೆಗೆ ಅದನ್ನು ಮುಂದುವರಿಸಬಹುದು. ಇನ್ನೇಕೆ ತಡ ನಿಮ್ಮ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.
Published by:Kavya V
First published: