ಉಚಿತವಾಗಿ LPG Cylinder ಪಡೆಯುವ ಅವಕಾಶ: ನೀವು ಮಾಡಬೇಕಿರೋದು ಇಷ್ಟೇ!

ಈ ಕೊಡುಗೆ(Offer)ಯ ಅಡಿಯಲ್ಲಿ ನೀವು ಉಚಿತವಾಗಿ LPG ಸಿಲಿಂಡರ್ ಅನ್ನು ಪಡೆಯಬಹುದು. ಅಂದರೆ ನೀವು ಒಂದು ಪೈಸೆಯನ್ನೂ ಕೊಡಬೇಕಾಗಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
LPG ಸಿಲಿಂಡರ್‌ಗಳನ್ನು ಬುಕಿಂಗ್ ಮಾಡಲು Paytm ತನ್ನ ಬಳಕೆದಾರರಿಗೆ ಉತ್ತಮ ಕೊಡುಗೆಯನ್ನು ನೀಡಿದೆ. Paytm ನಿಂದ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ. ಒಂದು ಆಫರ್ ಅಡಿಯಲ್ಲಿ ನೀವು ₹ 25 ರ ರಿಯಾಯಿತಿಯನ್ನು ಪಡೆಯಬಹುದು. ನಂತರ ನೀವು ₹ 30 ಅನ್ನು Paytm ಕ್ಯಾಶ್‌ ಬ್ಯಾಕ್ ಆಗಿ ಪಡೆಯಬಹುದು. ಇದಲ್ಲದೇ ಇದೀಗ ಮೂರನೇ ಆಫರ್ ಜಾರಿಯಲ್ಲಿದೆ. ಈ ಕೊಡುಗೆಯ ಅಡಿಯಲ್ಲಿ ನೀವು ಉಚಿತವಾಗಿ LPG ಸಿಲಿಂಡರ್ ಅನ್ನು ಪಡೆಯಬಹುದು. ಅಂದರೆ ನೀವು ಒಂದು ಪೈಸೆಯನ್ನೂ ಕೊಡಬೇಕಾಗಿಲ್ಲ. ಈ ಎಲ್ಲಾ ಡೀಲ್ ‌ಗಳಿಗೆ ಸಾಮಾನ್ಯ ಮತ್ತು ಪ್ರಮುಖ ಷರತ್ತು ಎಂದರೆ ಈ ಬುಕಿಂಗ್ Paytm ಮೂಲಕ ನಿಮ್ಮ ಮೊದಲ ಗ್ಯಾಸ್ ಸಿಲಿಂಡರ್ ಬುಕಿಂಗ್ ಆಗಿರಬೇಕು.

Paytm ಗ್ರಾಹಕರು ಎಲ್ಲಾ ಮೂರು ಆಯ್ಕೆಗಳನ್ನು ಹೊಂದಿರುತ್ತಾರೆ. 25 ರೂಪಾಯಿ ರಿಯಾಯಿತಿ ಬೇಕಿದ್ದರೆ ತಕ್ಷಣ ಸಿಗುತ್ತದೆ. ನೀವು ರೂ 30 ಕ್ಯಾಶ್ ಬ್ಯಾಕ್ ಬಯಸಿದರೆ ನೀವು Paytm ಕ್ಯಾಶ್ ಅನ್ನು ಪಡೆಯುತ್ತೀರಿ. ಇವುಗಳಿಗೆ ವಿವಿಧ ಪ್ರೋಮೋಕೋಡ್‌ಗಳನ್ನು ನೀಡಲಾಗಿದ್ದು, ಇವುಗಳನ್ನು ಬುಕ್ ಮಾಡುವ ಸಮಯದಲ್ಲಿ ಅನ್ವಯಿಸಬೇಕಾಗುತ್ತದೆ. ಆದರೆ ಉಚಿತವಾಗಿ ಅಂದರೆ 100% ಕ್ಯಾಶ್‌ ಬ್ಯಾಕ್ ಪಡೆಯಲು, ನಿಮ್ಮ ಅದೃಷ್ಟವೂ ನಿಮಗೆ ಸಾಥ್ ನೀಡಬೇಕು.

ಉಚಿತ ಸಿಲಿಂಡರ್ ಪಡೆಯಲು ಏನು ಮಾಡಬೇಕು?

ಉಚಿತ LPG ಸಿಲಿಂಡರ್ ಪಡೆಯಲು, ಬುಕಿಂಗ್ ಸಮಯದಲ್ಲಿ ನೀವು FREECYLINDER ಪ್ರೋಮೋಕೋಡ್ ಅನ್ನು ಬಳಸಬೇಕಾಗುತ್ತದೆ. ಬುಕಿಂಗ್ ಸಮಯದಲ್ಲಿ ನಿಮ್ಮ ಸಿಲಿಂಡರ್ ಅನ್ನು ಪೂರ್ಣವಾಗಿ ಪಾವತಿಸಬೇಕಾಗುತ್ತದೆ. ಇದರ ನಂತರ, Paytm ನ ಪ್ರತಿ 100 ನೇ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದ ಗ್ರಾಹಕರಿಗೆ ಪೂರ್ಣ ಕ್ಯಾಶ್‌ಬ್ಯಾಕ್ (100% ಕ್ಯಾಶ್‌ಬ್ಯಾಕ್) ನೀಡಲಾಗುತ್ತದೆ.

ಇದನ್ನೂ ಓದಿ:  ಬಜೆಟ್ ಮಂಡನೆಗೂ ಮುನ್ನ LPG ಸಿಲಿಂಡರ್ ಬೆಲೆಯಲ್ಲಿ 91 ರೂಪಾಯಿ ಇಳಿಕೆ

ಗರಿಷ್ಠ 1000 ರೂ.ವರೆಗೆ ಕ್ಯಾಶ್‌ಬ್ಯಾಕ್ ನೀಡಲಾಗುವುದು, ಅಂದರೆ ನೀವು ಕೇವಲ ಒಂದು ಸಿಲಿಂಡರ್ ಅನ್ನು ಮಾತ್ರ ಬುಕ್ ಮಾಡಬೇಕು. ಮೇಲಿನ ಕೊಡುಗೆ(Offer)ಗಳು ಫೆಬ್ರವರಿ 28, 2022 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ. ನೀವು 100ನೇ ಅದೃಷ್ಟಶಾಲಿ ಗ್ರಾಹಕರಾದರೆ 24 ಗಂಟೆಗಳಲ್ಲಿ ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ.

paytm ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ

ನೀವು ಇಂಡೇನ್, HP ಗ್ಯಾಸ್ ಮತ್ತು ಭಾರತ್‌ಗ್ಯಾಸ್‌ನಿಂದ ಯಾವುದೇ ಕಂಪನಿಯ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ನೀವು 'ಬುಕ್ ಮೈ ಸಿಲಿಂಡರ್' (Book My Cylinder) ಟ್ಯಾಬ್‌ಗೆ ಹೋಗಬೇಕು. ಇಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಅಥವಾ LPG ID ಅಥವಾ ಗ್ರಾಹಕ ಸಂಖ್ಯೆ (ಗ್ರಾಹಕರ ಸಂಖ್ಯೆ) ಅನ್ನು ನಮೂದಿಸಬೇಕು. ಇದನ್ನು ನಮೂದಿಸುವ ಮೂಲಕ, ನಿಮ್ಮ ಏಜೆನ್ಸಿಯ ಬಗ್ಗೆ ನೀವು ಮಾಹಿತಿಯನ್ನು ಪಡೆಯುತ್ತೀರಿ. ಅದರ ನಂತರ ನೀವು ಪಾವತಿ ಮಾಡಬಹುದು.

ಪಾವತಿಗಾಗಿ, ನೀವು Paytm Wallet, Paytm UPI, ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಆಯ್ಕೆಯನ್ನು ಹೊಂದಿರುತ್ತೀರಿ. ಬುಕಿಂಗ್ ಮಾಡಿದ ನಂತರ ಈ ಸಿಲಿಂಡರ್ ಅನ್ನು ಏಜೆನ್ಸಿಯು ನಿಮ್ಮ ನಿರ್ದಿಷ್ಟ ವಿಳಾಸಕ್ಕೆ ತಲುಪಿಸುತ್ತದೆ.

ಇದನ್ನೂ ಓದಿ:  Business Idea: ಈ ವ್ಯವಹಾರ ಆರಂಭಿಸಿ, ಪ್ರತಿ ತಿಂಗಳು ನಿಮ್ಮದಾಗಿಸಿಕೊಳ್ಳಿ 2 ಲಕ್ಷ; ಸರ್ಕಾರದಿಂದಲೂ ಸಿಗುತ್ತೆ ಸಹಾಯ

ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ

ಇಂಡಿಯನ್ ಆಯಿಲ್ (IOC) 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ (Commercial Gas Cylinder Price) ಬೆಲೆಯನ್ನು 91.5 ರೂ ಕಡಿತಗೊಳಿಸಿದೆ. ಬೆಲೆ ಕಡಿತದ ನಂತರ ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 1907 ರೂ. ಆಗಿದೆ. ಈ ತಿಂಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು ಫೆಬ್ರವರಿ ತಿಂಗಳ ದೇಶೀಯ ಅನಿಲ ಬೆಲೆಗಳನ್ನು (LPG ಗ್ಯಾಸ್ ಸಿಲಿಂಡರ್ ಬೆಲೆ) ಬಿಡುಗಡೆ ಮಾಡಿದೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಏರಿಕೆ ಮಾಡಿಲ್ಲ.
Published by:Mahmadrafik K
First published: