Debit Card ಇಲ್ಲದೆಯೇ ATMನಿಂದ ಹಣವನ್ನು ಸುಲಭವಾಗಿ ಪಡೆಯಬಹುದು; ಇಲ್ಲಿದೆ ನೋಡಿ Smart ವಿಧಾನ

ನೀವು ಕಾರ್ಡ್​ ಇಲ್ಲದೆಯೂ ವಹಿವಾಟು ಮಾಡಲು ಸಾಧ್ಯವಾಗುತ್ತದೆ., ನಿಮ್ಮ ಡೆಬಿಟ್ ಕಾರ್ಡ್ ಅನ್ನು ಬಳಸದೆಯೇ ನೀವು ಸ್ವಯಂಚಾಲಿತ ಟೆಲ್ಲರ್ ಮೆಷಿನ್ (ATM) ನಿಂದ ಹಣವನ್ನು ಪಡೆಯಬಹುದು. ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ATMಗಳಲ್ಲಿ ಡೆಬಿಟ್​​ ಕಾರ್ಡ್​​ಗಳನ್ನು(Debit Card) ಬಳಸಿ ನಗದು (Cash) ಪಡೆಯುವುದು ಭಾರತೀಯರ ಜೀವನ ಶೈಲಿಯ ಭಾಗವಾಗಿ ವರ್ಷಗಳೇ ಉರುಳಿವೆ. ಆದರೆ ಅನೇಕರಿಗೆ ಇದು ಜಂಜಾಟವಾಗಿದೆ. ಏಕೆಂದರೆ ಇದು ಸಮಯ ತೆಗೆದುಕೊಳ್ಳುತ್ತದೆ ಮತ್ತು ಕೆಲವೊಮ್ಮೆ ತಾಂತ್ರಿಕ ದೋಷಗಳಿಂದಾಗಿ (Technical Glitches) ಡೆಬಿಟ್ ಕಾರ್ಡ್ ಯಂತ್ರದ ಸ್ಲಾಟ್‌ನಲ್ಲಿ ಸಿಲುಕಿಕೊಳ್ಳಬಹುದು. ನೀವು ಎಟಿಎಂನಿಂದ ಹಣವನ್ನು ಪಡೆಯಲು ಬಯಸಿದರೆ ಆದರೆ ಡೆಬಿಟ್ ಕಾರ್ಡ್ ಅನ್ನು ಮನೆಯಲ್ಲಿ ಅದನ್ನು ಮರೆತಿದ್ದರೆ, ಚಿಂತಿಸಬೇಡಿ. ಏಕೆಂದರೆ ನೀವು ಕಾರ್ಡ್​ ಇಲ್ಲದೆಯೂ ವಹಿವಾಟು ಮಾಡಲು ಸಾಧ್ಯವಾಗುತ್ತದೆ., ನಿಮ್ಮ ಡೆಬಿಟ್ ಕಾರ್ಡ್ ಅನ್ನು ಬಳಸದೆಯೇ ನೀವು ಸ್ವಯಂಚಾಲಿತ ಟೆಲ್ಲರ್ ಮೆಷಿನ್ (ATM) ನಿಂದ ಹಣವನ್ನು ಪಡೆಯಬಹುದು. ಹೇಗೆ ಅಂತ ಮುಂದೆ ಓದಿ..

SBIನಿಂದ ಸ್ಮಾರ್ಟೆಸ್ಟ್​​ ವಿಧಾನ ಪರಿಚಯ

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ನೀವು ATM ಮೂಲಕ 'ಕಾರ್ಡ್ ರಹಿತ ವಹಿವಾಟು' ಮಾಡುವ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. SBI ನಲ್ಲಿ ಲಭ್ಯವಿರುವ YONO ಕ್ಯಾಶ್ ಸೌಲಭ್ಯವನ್ನು ಬಳಸಿಕೊಂಡು ನಿಮ್ಮ ಡೆಬಿಟ್ ಕಾರ್ಡ್ ಅನ್ನು ಬಳಸದೆಯೇ  ಹಣವನ್ನು ಡ್ರಾ ಮಾಡಬಹುದು.

YONOದಿಂದ ನಿಮ್ಮ ಜೀವನ ಸೂಪರ್​ Easy!

SBI ಯ YONO ಕ್ಯಾಶ್ ಆಯ್ಕೆಯೊಂದಿಗೆ, ಇನ್ನು ಮುಂದೆ ATM ಗೆ ಕಾರ್ಡ್ ಅನ್ನು ಕೊಂಡೊಯ್ಯುವುದು ಕಡ್ಡಾಯವಲ್ಲ.  SBI ಕಾರ್ಡ್‌ದಾರರು ಎಟಿಎಂಗಳಿಂದ ಎಲ್ಲಿ ಬೇಕಾದರೂ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಕಾರ್ಡ್ ಹೊಂದಿರುವವರು ತಮ್ಮ ಫೋನ್‌ನಲ್ಲಿ SBI ಯ YONO ಅಪ್ಲಿಕೇಶನ್ ಅನ್ನು ಡೌನ್​​ ಲೋಡ್​ ಮಾಡಿಕೊಂಡಿರಬೇಕು ಎಂಬುದನ್ನು ಗಮನಿಸಿ. ಈ ಸೌಲಭ್ಯದ ಮೂಲಕ ಒಬ್ಬರು ಕನಿಷ್ಠ 500 ಮತ್ತು ಗರಿಷ್ಠ 10,000 ರೂ.ವರೆಗೆ ಹಣ ತೆಗೆಯಬಹುದು. ಇದರ ಸಂಪೂರ್ಣ ಪ್ರಕ್ರಿಯೆಯನ್ನು ಕೆಳಗೆ ಪರಿಶೀಲಿಸಿ.

SBI ಡೆಬಿಟ್ ಕಾರ್ಡ್ ಇಲ್ಲದೆ ಹಣವನ್ನು ಪಡೆಯುವುದು ಹೇಗೆ?

  • ಹಂತ 1: ನಿಮ್ಮ ಫೋನ್‌ನಲ್ಲಿ YONO SBI ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ ಮತ್ತು YONO ಕ್ಯಾಶ್ ಆಯ್ಕೆಯನ್ನು ಕ್ಲಿಕ್ ಮಾಡಿ

  • ಹಂತ 2: ಈಗ, YONO ಕ್ಯಾಶ್‌ನ ATM ವಿಭಾಗದ ಮೇಲೆ ಕ್ಲಿಕ್ ಮಾಡಿ.

  • ಹಂತ 3: ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು 6-ಅಂಕಿಯ PIN ಅನ್ನು ರಚಿಸಿ.

  •  ಹಂತ 4: ನಿಮ್ಮ ಮೊಬೈಲ್ ಫೋನ್‌ನಲ್ಲಿ YONO ನಗದು ವಹಿವಾಟು ಸಂಖ್ಯೆಯನ್ನು ಸ್ವೀಕರಿಸಲಾಗುತ್ತದೆ.

  • ಹಂತ 5: ನಿಮ್ಮ ಹತ್ತಿರದ SBI ATM ಗೆ ಭೇಟಿ ನೀಡಿ ಮತ್ತು YONO ಕ್ಯಾಶ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

  • ಹಂತ 6: ವಹಿವಾಟು ಸಂಖ್ಯೆ ಮತ್ತು 6-ಅಂಕಿಯ ಪಿನ್ ಸಂಖ್ಯೆಯನ್ನು ನಮೂದಿಸಿ.

  • ಹಂತ 7: ಎಟಿಎಂ ಈಗ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಮೂದಿಸಿದ ಮೊತ್ತದಲ್ಲಿ ಹಣವನ್ನು ನೀಡುತ್ತದೆ.


ಇದನ್ನೂ ಓದಿ: Daughter's Marriage: ಮಗಳ ಮದುವೆಗೆ ಬರೋಬ್ಬರಿ ₹65 ಲಕ್ಷ ನೀಡುತ್ತೆ ಈ Scheme; ಸಂಪೂರ್ಣ ಮಾಹಿತಿ ಇಲ್ಲಿದೆ

ಗಮನಿಸಿ- YONO ನಗದು ವಹಿವಾಟು ಸಂಖ್ಯೆಯು ಕೇವಲ 6 ಗಂಟೆಗಳವರೆಗೆ ಮಾತ್ರ ಸಕ್ರಿಯವಾಗಿರುತ್ತದೆ . ಈ ನಿಗದಿತ ಸಮಯದ ಚೌಕಟ್ಟಿನಲ್ಲಿ ನೀವು ATM ಗೆ ಭೇಟಿ ನೀಡಬೇಕು ಎಂಬುದನ್ನು ಕಾರ್ಡ್ ಹೊಂದಿರುವವರು ಮರೆಯಬಾರದು.

ಕಾರ್ಡ್​​ ಕಳೆದು ಹೋದರೆ ಹೀಗೆ ಮಾಡಿ

SBI ತನ್ನ ಗ್ರಾಹಕರಿಗೆ ತಮ್ಮ ನೋಂದಾಯಿತ ಫೋನ್ ಸಂಖ್ಯೆಯಿಂದ ಕಳೆದುಹೋದ ಡೆಬಿಟ್ ಕಾರ್ಡ್ ನ್ನು ನಿರ್ಬಂಧಿಸಬಹುದು. ಕೆಲವು ಸರಳ ಹಂತಗಳಲ್ಲಿ ಬದಲಿ ಅಥವಾ ಹೊಸ ಡೆಬಿಟ್ ಕಾರ್ಡ್ಗಾಗಿ ಮನವಿ ಸಲ್ಲಿಸಬಹುದು ಎಂದು ತಿಳಿಸಿದೆ.ಡೆಬಿಟ್ ಕಾರ್ಡ್ ಕಳೆದುಕೊಂಡಾಗ ಗ್ರಾಹಕರು ಬ್ಯಾಂಕ್ ನ ಟೋಲ್-ಫ್ರೀ ಸಂಖ್ಯೆ 1800 11 2211 ಅಥವಾ 1800 425 3800 ಗೆ ಕರೆ ಮಾಡಬೇಕು. ಕಾರ್ಡ್ ಅನ್ನು ನಿರ್ಬಂಧಿಸಲು ನೀಡಿರುವ ಹಂತಗಳನ್ನು ಅನುಸರಿಸಬೇಕು ಎಂದು SBI ಹೇಳಿದೆ.
Published by:Kavya V
First published: