ಪ್ರತಿಯೊಬ್ಬರಿಗೂ ತಾನೂ ಒಂದು ಸ್ವಂತ ಬ್ಯುಸಿನೆಸ್ (Business) ಶುರು ಮಾಡಿ ಹಣ (Money) ಸಂಪಾದಿಸಬೇಕೆಂಬ ಆಸೆ ಇರುತ್ತದೆ. ಆದರೆ, ಯಾವ ಬ್ಯುಸಿನೆಸ್ ಶುರು ಮಾಡಿದರೆ ಏನೆಲ್ಲಾ ಸಿಗುತ್ತೆ. ಹಾಗೇ ಏನೆಲ್ಲಾ ರಿಸ್ಕ್ (Risk) ಇರುತ್ತದೆ ಎಂದು ಗೊತ್ತಿರಲ್ಲ. ಕಡಿಮೆ ಹೂಡಿಕೆ (Invest) ಮಾಡಿ ಹೆಚ್ಚಿನ ಲಾಭ ಮಾಡಬೇಕು ಅಂತ ಇರುತ್ತಾರೆ. ಡಾ ರಾಜ್ಕುಮಾರ್ (Dr Rajkumar) ಅಭಿನಯದ ಬಂಗಾರದ ಮನುಷ್ಯ ಸಿನಿಮಾ ನೋಡಿ, ಅದೆಷ್ಟೋ ಮಂದಿ ಸಿಟಿ ಬಿಟ್ಟು ಹಳ್ಳಿಗಳಿಗೆ ವಾಪಸ್ ಆಗಿದ್ದರು. ಕೈಲಾಗದು ಎಂದು ಕೈ ಕಟ್ಟಿ ಕುಳಿತರೇ ಸಾಗದು ಕೆಲಸವು ಮುಂದೆ ಎಂಬ ಸಾಲನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕೃಷಿ (Agriculture) ಯತ್ತ ಮುಖಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಕೆಲಸ ಬಿಟ್ಟು ಕೃಷಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಹೀಗೆ ಇಂಥ ಒಂದು ಬೆಳೆ ತೆಗೆದರೆ ಒಳ್ಳೆಯ ಆದಾಯ ಸಿಗುತ್ತೆ.
ಜೀರಿಗೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!
ಕೊರೋನಾ ಮಹಾಮಾರಿ ಅನೇಕ ಜನರ ಬದುಕನ್ನೇ ಬದಲಿಸಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಗಳನ್ನು ಬೆಳೆದರೆ ಲಕ್ಷಗಟ್ಟಲೆ ಆದಾಯ ಪಡೆಯಬಹುದು. ಅದರಲ್ಲಿ ಜೀರಿಗೆ ಕೃಷಿಯೂ ಒಂದು. ಪ್ರತಿಯೊಂದು ಕುಟುಂಬವೂ ಇದನ್ನು ಬಳಸುತ್ತದೆ. ಇದು ಅಡುಗೆಮನೆಯಲ್ಲಿ ಇರಲೇಬೇಕಾದ ವಸ್ತುವಾಗಿದೆ. ಇದಲ್ಲದೆ, ಜೀರಿಗೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿಯೇ ಜೀರಿಗೆ ಮಾರುಕಟ್ಟೆಯಲ್ಲಿ ವರ್ಷವಿಡೀ ಬೇಡಿಕೆ ಇರುತ್ತದೆ. ಮತ್ತು ಜೀರಿಗೆಯನ್ನು ಹೇಗೆ ಬೆಳೆಸುವುದು? ಎಷ್ಟು ದಿನ ಫಸಲು ಬರುತ್ತದೆ? ಇಲ್ಲಿ ಎಷ್ಟು ಲಾಭ ಬರುತ್ತದೆ ಎಂದು ಇಲ್ಲಿದೆ ನೋಡಿ
ಗುಜರಾತ್ನಲ್ಲೇ ಹೆಚ್ಚು ಜೀರಿಗೆ ಉತ್ಪಾದನೆ!
ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಶೇಕಡ 80 ಕ್ಕಿಂತ ಹೆಚ್ಚು ಜೀರಿಗೆ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಬೆಳೆಯಲಾಗುತ್ತದೆ. ಹೆಚ್ಚಿನ ರೈತರು ರಾಜಸ್ಥಾನದಲ್ಲಿ ಈ ಬೆಳೆಯನ್ನು ಬೆಳೆಯುತ್ತಾರೆ. ದೇಶದ ಒಟ್ಟು ಉತ್ಪಾದನೆಯ ಶೇಕಡಾ 28 ರಷ್ಟನ್ನು ರಾಜಸ್ಥಾನ ಮಾತ್ರ ಹೊಂದಿದೆ. ದಕ್ಷಿಣದ ರಾಜ್ಯಗಳಲ್ಲಿ ಈ ಬೆಳೆ ವ್ಯಾಪಕವಾಗಿ ಕಂಡುಬರುವುದಿಲ್ಲ.
ಇದನ್ನೂ ಓದಿ: ಮನೆಯಲ್ಲೇ ಈ ಬ್ಯುಸಿನೆಸ್ ಸ್ಟಾರ್ಟ್ ಮಾಡಿ! ವರ್ಷಕ್ಕೆ ಏನಿಲ್ಲ ಅಂದ್ರು 5 ಲಕ್ಷ ಆದಾಯ
ಜೀರಿಗೆ ಕೃಷಿ ಮಾಡುವುದು ಹೇಗೆ?
ಜೀರಿಗೆ ಬಿತ್ತುವ ಮೊದಲು ಹೊಲವನ್ನು ಎಲ್ಲ ರೀತಿಯಲ್ಲಿ ಸಿದ್ಧಗೊಳಿಸಬೇಕು. ಚೆನ್ನಾಗಿ ಉಳುಮೆ ಮಾಡಬೇಕು.ಇದರಿಂದ ಮಣ್ಣು ಮೃದುವಾಗಿರುತ್ತದೆ. ಜೀರಿಗೆ ಹಗುರವಾದ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇಳುವರಿ ಹೆಚ್ಚು. ಗಟ್ಟಿಯಾದ ಮಣ್ಣಿನಲ್ಲಿ ಜೀರಿಗೆ ಬೇಸಾಯ ಮಾಡುವುದರಿಂದ ನಿರೀಕ್ಷಿತ ಇಳುವರಿ ಬರುವುದಿಲ್ಲ. ಮೂರು ವಿಧದ ಜೀರಿಗೆ ಬೀಜಗಳು ಜನಪ್ರಿಯವಾಗಿವೆ. RZ 19, 209, RZ 223, GC 1-2-3 ಪ್ರಭೇದಗಳು ಮಾರುಕಟ್ಟೆಯಲ್ಲಿ ಉತ್ತಮವೆಂದು ತಿಳಿದುಬಂದಿದೆ. ಈ ರೀತಿಯ ಬೀಜಗಳನ್ನು ಹಾಕಿದರೆ 120-125 ದಿನಗಳಲ್ಲಿ ಫಸಲು ಬರುತ್ತದೆ. ಪ್ರತಿ ಹೆಕ್ಟೇರ್ಗೆ 510 ರಿಂದ 530 ಕೆಜಿ ಇಳುವರಿ ಬರುತ್ತದೆ. ಆದ್ದರಿಂದ ಈ ರೀತಿಯ ಬೀಜಗಳೊಂದಿಗೆ ಜೀರಿಗೆ ಕೃಷಿ ಉತ್ತಮ ಆದಾಯವನ್ನು ಪಡೆಯಬಹುದು.
ಇದನ್ನೂ ಓದಿ: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ
ಜೀರಿಗೆ ಬೇಸಾಯಕ್ಕೆ ಹೆಕ್ಟೇರ್ಗೆ ಸುಮಾರು 30,000 ರಿಂದ 35,000 ರೂಪಾಯಿ ಬೇಕು. ಬೆಳೆ ಚೆನ್ನಾಗಿ ಬೆಳೆದರೆ, ಹೆಕ್ಟೇರಿಗೆ 7-8 ಕ್ವಿಂಟಲ್ ಜೀರಿಗೆ ಸಿಗುತ್ತದೆ. ಜೀರಿಗೆ ಬೆಲೆ ಕೆ.ಜಿ.ಗೆ 100 ರೂಪಾಯಿ. ನಿವ್ವಳ ಲಾಭ ಹೆಕ್ಟೇರಿಗೆ ರೂ.40,000ದಿಂದ 50,000. 5 ಎಕರೆ ಜಮೀನಿನಲ್ಲಿ ಜೀರಿಗೆ ಕೃಷಿ ಮಾಡಿದರೆ ರೂ.2 ರಿಂದ 2.50 ಲಕ್ಷ ಆದಾಯ ಬರುತ್ತದೆ. 4 ತಿಂಗಳ ಕಟಾವಿಗೆ ಎರಡೂವರೆ ಲಕ್ಷ ಆದಾಯ.. ಅಂದರೆ ತಿಂಗಳಿಗೆ ಸುಮಾರು 60 ಸಾವಿರ ರೂಪಾಯಿ ಲಾಭ ಸಿಗುತ್ತೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ