E-Auction: ಅಗ್ಗದ ದರದಲ್ಲಿ ಮನೆ ಖರೀದಿಸಲು ಪ್ಲಾನ್ ಮಾಡ್ತಿದ್ದೀರಾ? ಈ 3 ಬ್ಯಾಂಕ್ ಗಳು ನೀಡುತ್ತಿವೆ ಸುವರ್ಣಾವಕಾಶ

ಈ ತಿಂಗಳ ಕೊನೆಯ ವಾರದಲ್ಲಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ (BoB) ಮತ್ತು ಬ್ಯಾಂಕ್ ಆಫ್ ಇಂಡಿಯಾ (BOI) ತಮ್ಮ ಡೀಫಾಲ್ಟ್ ಆಸ್ತಿಗಳ ಇ-ಹರಾಜು ನಡೆಸಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾರಿಗೆ ಆಗಲಿ ತನ್ನದೇ ಒಂದು ಸ್ವಂತ ಮನೆ (Own House) ಹೊಂದಬೇಕೆಂಬ ಮಹದಾಸೆ ಇರುತ್ತೆ. ಆದ್ರೆ ಇದಕ್ಕೆ ಆರ್ಥಿಕ ಪರಿಸ್ಥಿತಿಯೂ (Financial Condition) ಪೂರಕವಾಗಿರಬೇಕು. ಆದ್ರೆ ಎಷ್ಟೋ ಜನ ಸ್ವಂತ ಮನೆಯ ಕನಸು ನನಸು ಮಾಡಿಕೊಳ್ಳಲು ಸಾಧ್ಯ ಆಗಲ್ಲ. ಮಧ್ಯಮ ವರ್ಗದ (Middle Class) ಜನರ ಮನೆ ಕನಸು ಮಾಡಲು ಬ್ಯಾಂಕ್ (Banks)ಗಳು ಗೃಹ ಸಾಲ (Home Loan) ನೀಡುತ್ತವೆ. ಪ್ರಥಮ ಮನೆ ಹೊಂದುವವರಿಗೆ ಸರ್ಕಾರವೂ ರಿಯಾಯ್ತಿಗಳನ್ನು ನೀಡುತ್ತಿದೆ. ನೀವು ಅಗ್ಗದ ಮನೆಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ಸಮಯದಲ್ಲಿ ನಿಮಗೆ ಉತ್ತಮ ಅವಕಾಶವಿದೆ. ದೇಶದ ಅನೇಕ ಸರ್ಕಾರಿ ಬ್ಯಾಂಕ್‌ಗಳು ನಿಮಗಾಗಿ ಈ ವಿಶೇಷ ಕೊಡುಗೆಯನ್ನು ತಂದಿವೆ. ಈ ತಿಂಗಳ ಕೊನೆಯ ವಾರದಲ್ಲಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ (BoB) ಮತ್ತು ಬ್ಯಾಂಕ್ ಆಫ್ ಇಂಡಿಯಾ (BOI) ತಮ್ಮ ಡೀಫಾಲ್ಟ್ ಆಸ್ತಿಗಳ ಇ-ಹರಾಜು ನಡೆಸಲಿವೆ.

BOI ಇ-ಹರಾಜು BOB E Auction

ಬ್ಯಾಂಕ್ ಆಫ್ ಬರೋಡಾ (Bank Of Baroda) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಮೆಗಾ ಇ-ಹರಾಜು ಜನವರಿ 29, 2022 ರಂದು ನಡೆಯಲಿದೆ ಎಂದು ಬ್ಯಾಂಕ್ ಟ್ವೀಟ್‌ನಲ್ಲಿ ಬರೆದಿದೆ.

ಇದರಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿಗಳ ಇ-ಹರಾಜು ಮಾಡಲಾಗುತ್ತದೆ. ಇಲ್ಲಿ ನೀವು ಸಮಂಜಸವಾದ ಬೆಲೆಯಲ್ಲಿ ಆಸ್ತಿಯನ್ನು ಖರೀದಿಸಬಹುದು.

ಇದನ್ನೂ ಓದಿ:  Gold Price Today: ಏರಿಕೆಯಾಗುತ್ತಲೇ ಹೊರಟ ಚಿನ್ನದ ಬೆಲೆ; ನಾಳೆ ಅನ್ನೋ ಬದಲು ಇವತ್ತೇ ಖರೀದಿಸಿ; ಇಲ್ಲಿದೆ ಇಂದಿನ ದರ

PNB ಇ-ಹರಾಜು PNB E Auction

ಈ ಬಗ್ಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಮೆಗಾ ಇ-ಹರಾಜು ಜನವರಿ 31, 2022 ರಂದು ನಡೆಯಲಿದೆ ಎಂದು ಬ್ಯಾಂಕ್ ಟ್ವೀಟ್‌ನಲ್ಲಿ ಬರೆದಿದೆ. ಇದರಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿಗಳ ಇ-ಹರಾಜು ಮಾಡಲಾಗುತ್ತದೆ. ಇಲ್ಲಿ ನೀವು ಸಮಂಜಸವಾದ ಬೆಲೆಯಲ್ಲಿ ಆಸ್ತಿಯನ್ನು ಖರೀದಿಸಬಹುದು.

BOI ಇ-ಹರಾಜು BOI E Auction

ಬ್ಯಾಂಕ್ ಆಫ್ ಇಂಡಿಯಾ (Bank Of India) ತನ್ನ ಡೀಫಾಲ್ಟ್ ಆಸ್ತಿಗಳ ಇ-ಹರಾಜು ನಡೆಸುತ್ತಿದೆ. BOI ಯ ಈ ಹರಾಜು ಪ್ರಕ್ರಿಯೆಯು ನಾಳೆಯಿಂದ ಅಂದರೆ ಜನವರಿ 25 ರಿಂದ ದೇಶಾದ್ಯಂತ ಪ್ರಾರಂಭವಾಗಿದೆ.

ಎಲ್ಲಿ ನೋಂದಾಯಿಸಬೇಕು?

ಈ ಮೆಗಾ ಇ-ಹರಾಜಿಗಾಗಿ, ಆಸಕ್ತ ಬಿಡ್ದಾರರು e Bkray ಪೋರ್ಟಲ್ https://ibapi.in/ ನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ಪೋರ್ಟಲ್‌ನಲ್ಲಿ 'ಬಿಡ್ಡರ್ಸ್ ನೋಂದಣಿ' ಕ್ಲಿಕ್ ಮಾಡಿದ ನಂತರ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಮೂಲಕ ನೋಂದಣಿ ಮಾಡಬೇಕಾಗುತ್ತದೆ.

KYC ಡಾಕ್ಯುಮೆಂಟ್ ಅಗತ್ಯವಿದೆ

ಬಿಡ್ದಾರರು ಅಗತ್ಯವಾದ KYC ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. KYC ದಾಖಲೆಗಳನ್ನು ಇ-ಹರಾಜು ಸೇವಾ ಪೂರೈಕೆದಾರರು ಪರಿಶೀಲಿಸುತ್ತಾರೆ. ಇದು 2 ಕೆಲಸದ ದಿನಗಳವರೆಗೆ ತೆಗೆದುಕೊಳ್ಳಬಹುದು.

ಇದನ್ನೂ ಓದಿ:  Bank Rule: SBI, PNB & BoBಯಲ್ಲಿ ಫೆಬ್ರವರಿ 1 ರಿಂದ ಈ ನಿಯಮಗಳು ಬದಲಾವಣೆ

ಪತಿ-ಪತ್ನಿ ಒಟ್ಟಾಗಿ ಮನೆಗಾಗಿ ಸಾಲ ತೆಗೆದುಕೊಳ್ಳುತ್ತಿದ್ದರೆ, ಇದರ ದೊಡ್ಡ ಅನುಕೂಲವೆಂದರೆ ಒಬ್ಬ ವ್ಯಕ್ತಿಯ ಮೇಲೆ ಸಾಲವನ್ನು ಮರುಪಾವತಿ ಮಾಡುವ ಹೊರೆ ಕಡಿಮೆಯಾಗುತ್ತದೆ. ನೀವು ಒಟ್ಟಿಗೆ ದೊಡ್ಡ ಮನೆಯನ್ನು ಖರೀದಿಸಬಹುದು. ಸರ್ಕಾರವು ಮಹಿಳೆಯರಿಗೆ ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡುತ್ತದೆ. ಇದು ಒಂದು ನಿಗದಿತ ಮೊತ್ತ ಉಳಿಸಲು ಪ್ರಯೋಜನಕಾರಿಯಾಗಿದೆ. ನೀವಿಬ್ಬರೂ ತೆರಿಗೆದಾರರಾಗಿದ್ದರೆ, ಇಬ್ಬರೂ ಪ್ರತ್ಯೇಕ ತೆರಿಗೆ ವಿನಾಯಿತಿಗಳನ್ನು ಕ್ಲೈಮ್ ಮಾಡಬಹುದು ಇದರಿಂದ ನೀವು ಹೆಚ್ಚಿನ ವಿನಾಯಿತಿಗಳಿಗೆ ಅರ್ಹರಾಗಬಹುದು.

ನೀವು ಜಂಟಿ ಗೃಹ ಸಾಲವನ್ನು ತೆಗೆದುಕೊಂಡಾಗ, ಪತಿ ಮತ್ತು ಹೆಂಡತಿ ಇಬ್ಬರ ಕ್ರೆಡಿಟ್ ಮಿತಿಯು ಖಾಲಿಯಾಗುತ್ತದೆ. ಇದು ಸಂಭವಿಸಿದಲ್ಲಿ, ತುರ್ತು ಸಂದರ್ಭದಲ್ಲಿ ಅಥವಾ ನಿಮ್ಮ ಮಗುವಿಗೆ ಶಿಕ್ಷಣ ಸಾಲಕ್ಕಾಗಿ, ಬ್ಯಾಂಕ್ ಸಾಲವನ್ನು ನೀಡಲು ನಿರಾಕರಿಸಬಹುದು.
Published by:Mahmadrafik K
First published: