ಕಡಿಮೆ ಖರ್ಚಿನಲ್ಲಿ ಗ್ರ್ಯಾಂಡ್ ಆಗಿ ಮದುವೆ ಮಾಡೋಕೆ ಸಾಧ್ಯ ಇದೆ: ಈ ಟಿಪ್ಸ್ ಫಾಲೋ ಮಾಡಿ ಸಾಕು

Wedding: ವೆಚ್ಚಗಳ ಬಗ್ಗೆ ಹೇಗೆ ಮಾತುಕತೆ ನಡೆಸುವುದು ಮತ್ತು ಮೇಲೆ ಹೇಳಿದಂತೆ ಹಲವಾರು ಸೇವೆಗಳಿಗೆ ಸರಿಯಾದ ಮಾರಾಟಗಾರನನ್ನು ಹೇಗೆ ಹುಡುಕುವುದು ಎಂಬುದರ ಬಗ್ಗೆ ನೀವು ಗೊಂದಲದಲ್ಲಿದ್ದರೆ, ಮದುವೆ ಆಯೋಜಕರನ್ನು ನೇಮಿಸಿಕೊಳ್ಳುವುದು ಉತ್ತಮ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಒಂದೂವರೆ ವರ್ಷದಿಂದ ಕೋವಿಡ್-19 (Covid 19)ಸಾಂಕ್ರಾಮಿಕದ ಹಾವಳಿಯಿಂದಾಗಿ ಎಷ್ಟೋ ಮದುವೆಗಳು(Wedding) ಸಡಗರ ಸಂಭ್ರಮ ತ್ಯಜಿಸಿ ಸರಳವಾಗಿ (Simple)ಕಡಿಮೆ ಖರ್ಚಿನಲ್ಲಿ ನಡೆದು ಹೋಗಿವೆ. ಆದರೆ ಈಗ ಕೋವಿಡ್ ಪ್ರಕರಣಗಳ ಕುಸಿತ ಗಮನದಲ್ಲಿಟ್ಟುಕೊಂಡು ಮತ್ತೆ ಈ ಬಿಗ್ ಫ್ಯಾಟ್ ಇಂಡಿಯನ್ (Big fat india)ವೆಡ್ಡಿಂಗ್ ಸೀಸನ್ ಮರಳಿದೆ ಎಂದರೆ ತಪ್ಪಾಗುವುದಿಲ್ಲ.ಅನೇಕ ಪೋಷಕರು ತಮ್ಮ ಮಕ್ಕಳ ಮದುವೆಗಾಗಿ ಮೊದಲಿಗಿಂತ ಈಗ ಬಿಗಿಯಾದ ಬಜೆಟ್‌ನಲ್ಲಿ (Budget)ಮದುವೆಯನ್ನು ಹೇಗೆ ಮಾಡುವುದೆಂದು ಯೋಜಿಸುತ್ತಿದ್ದಾರೆ. "ಒಟ್ಟಾರೆ ಮದುವೆಯ ವೆಚ್ಚಗಳಲ್ಲಿ ಶೇಕಡಾ 40ರಷ್ಟು ಇಳಿಕೆಯಾಗಿದೆ" ಎಂದು ವಿವಾಹ ಯೋಜನಾ (Wedding Sutras)ಸಂಸ್ಥೆಯವರು ಹೇಳುತ್ತಾರೆ.

ಈಗ ಮದುವೆಯಲ್ಲಿ ಭಾಗವಹಿಸುವವರ ಸಂಖ್ಯೆಯು ಸರ್ಕಾರದ ನಿರ್ಬಂಧಗಳಿಂದಾಗಿ ಕಡಿಮೆ ಆಗಿದೆ ಎಂದು ಹೇಳಬಹುದು. ಹಾಗಿದ್ದರೂ, ಅನಗತ್ಯ ವೆಚ್ಚಗಳ ಮೇಲೆ ಹಿಡಿತ ಸಾಧಿಸುವುದು ಹೇಗೆ ಎಂದು ಅನೇಕರು ಯೋಚನೆ ಮಾಡುತ್ತಿದ್ದಾರೆ. ಸಡಗರ, ಸಂಭ್ರಮಕ್ಕೆ ಏನು ಕೊರತೆ ಆಗದಂತೆ ಮದುವೆಯ ವೆಚ್ಚ ಕಡಿಮೆ ಮಾಡಲು ನಿಮಗೆ ಸಹಾಯ ಮಾಡುವ ಕೆಲವು ಟಿಪ್ಸ್ ಇಲ್ಲಿವೆ.

ಇದನ್ನೂ ಓದಿ: Katrina Kaif-Vicky Kaushal: ಇಷ್ಟೆಲ್ಲಾ ಅದ್ಧೂರಿಯಾಗಿ ಮದ್ವೆಯಾದ್ರೂ, ಹನಿಮೂನ್​ ಮಾತ್ರ ಇಲ್ವಂತೆ: ಏನಾಗಿದ್ಯೋ ಏನೋ..!

ನಿಮ್ಮ ಮದುವೆಗೆ ತಗಲುವ ವೆಚ್ಚವನ್ನು ಮೊದಲೇ ರಚಿಸಿಕೊಳ್ಳಿ
ಮದುವೆ ಆಗಲು ಬಯಸುವ ವಧು ವರರು ಮತ್ತು ಅವರ ಮನೆಯವರು ಮದುವೆ ತುಂಬಾನೇ ಚೆನ್ನಾಗಿ ಆಗಬೇಕು, ಆದರೆ ಮದುವೆಗೆ ತುಂಬಾ ಖರ್ಚು ಆಗಬಾರದು ಎಂದು ಬಯಸುತ್ತಾರೆ. ಆದರೆ, ಯಶಸ್ವಿ ಮದುವೆ ಸಮಾರಂಭ ಆಯೋಜಿಸಲು, ನೀವು ಬಲವಾದ ಬಜೆಟ್ ಹೊಂದಿರಬೇಕು ಮತ್ತು ವೆಚ್ಚಗಳನ್ನು ಮಿತಿಯೊಳಗೆ ಇಡಬೇಕು. ನಿಮ್ಮ ಮದುವೆಯ ಪ್ರತಿಯೊಂದು ವಿಭಾಗದ ಅಂದಾಜು ವೆಚ್ಚಗಳನ್ನು ವಿಭಜಿಸುವ ಮೂಲಕ ನೀವು ನಿಮ್ಮ ಹಣವನ್ನು ಸಮರ್ಥವಾಗಿ ಖರ್ಚು ಮಾಡುವುದು ಮುಖ್ಯ.

ಮದುವೆಯ ವೆಚ್ಚವನ್ನು ಕಡ್ಡಾಯ ಮತ್ತು ಪೂರಕ ಎಂಬ ಎರಡು ವಿಭಾಗಗಳಲ್ಲಿ ಮಾಡಿಕೊಳ್ಳಿ. ಕಡ್ಡಾಯ ವೆಚ್ಚಗಳಲ್ಲಿ ಸ್ಥಳ, ಅಲಂಕಾರ, ಆಹಾರ ಮತ್ತು ಪಾನೀಯಗಳು, ಫೋಟೋ ಮತ್ತು ಉಡುಗೆಗಳು ಸೇರಿವೆ. ಪೂರಕ ವೆಚ್ಚಗಳಲ್ಲಿ ಸಂಗೀತ, ಮನರಂಜನೆ, ಬ್ಯಾಂಡ್ ಬಾಜಾ ಸೇರಿವೆ.

ಮದುವೆಯ ಸ್ಥಳವನ್ನು ಆದಷ್ಟು ಬೇಗ ನಿರ್ಧರಿಸಿ
ನೀವು ಮದುವೆಯ ಸ್ಥಳವನ್ನು ಎಷ್ಟು ಬೇಗ ಕಾಯ್ದಿರಿಸುತ್ತೀರೋ ಅಷ್ಟು ಉಳಿತಾಯಕ್ಕೆ ಒಳ್ಳೆಯದು. ನಿಮ್ಮ ಅಗತ್ಯವನ್ನು ಗುರುತಿಸಿ. ಹೋಟೆಲ್, ಹಾಲ್ ಅಥವಾ ತೆರೆದ ಮೈದಾನದಲ್ಲಿ ವಿವಾಹ ಸಮಾರಂಭ ಆಯೋಜಿಸಲು ನೀವು ಬಯಸುತ್ತೀರಾ ಎಂದು ನಿರ್ಧರಿಸಿ. ಅದಕ್ಕೆ ಅನುಗುಣವಾಗಿ ನೀವು ನಿಮ್ಮ ಹುಡುಕಾಟ ಪ್ರಾರಂಭಿಸಬೇಕು ಮತ್ತು ಕನಿಷ್ಠ 3- 4 ತಿಂಗಳ ಮುಂಚಿತವಾಗಿ ಸ್ಥಳವನ್ನು ಕಾಯ್ದಿರಿಸಬೇಕು.

ಎಲ್ಲಾ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಕಷ್ಟು ಆಯ್ಕೆಗಳನ್ನು ಹೊಂದಿರುವ ಸ್ಥಳ ಕಾಯ್ದಿರಿಸಿ ಮತ್ತು ನೀವು ಅತಿಥಿಗಳನ್ನು ಸ್ಥಳದಿಂದ ಹೊರಗೆ ಕರೆದೊಯ್ಯಬೇಕಾಗಿಲ್ಲ ಎಂಬುದನ್ನು ನೋಡಿಕೊಳ್ಳಿ. ನೀವು ಕೇಟರಿಂಗ್ ಮತ್ತು ಅಲಂಕಾರದ ಆಂತರಿಕ ಸೇವೆಗಳನ್ನು ತೆಗೆದುಕೊಳ್ಳಬೇಕಾದ ಸ್ಥಳವು ದುಬಾರಿಯಾಗುತ್ತದೆ ಎಂದು ವೆಡ್ಡಿಂಗ್ ಪ್ಲಾನರ್‌ಗಳು ಸೂಚಿಸುತ್ತಾರೆ. ನೀವು ತೆರೆದ ಮೈದಾನ ಕಾಯ್ದಿರಿಸುವುದು ಸೂಕ್ತ, ಏಕೆಂದರೆ ನಿಮ್ಮ ಆಯ್ಕೆಯ ಕಡಿಮೆ ವೆಚ್ಚದಲ್ಲಿ ಕೆಲಸಗಾರರನ್ನು ನೇಮಿಸಿಕೊಳ್ಳುವ ಸ್ವಾತಂತ್ರ್ಯ ನಿಮಗಿರುತ್ತದೆ.

ಭಾರತೀಯ ಅಥವಾ ಸ್ಥಳೀಯ ಪಾಕಪದ್ಧತಿ ಆಯ್ಕೆ ಮಾಡಿ
ಅತಿಥಿಗಳ ಆಹಾರ ಮತ್ತು ಪಾನೀಯಗಳಲ್ಲಿ ನೀವು ಬಹಳಷ್ಟು ಹಣ ಉಳಿಸಬಹುದು. ನಿಮ್ಮ ಕುಟುಂಬ ಮತ್ತು ಅತಿಥಿಗಳು ಅಲಂಕಾರಿಕ ಭಾರತೀಯ ಪಾಕಪದ್ಧತಿ ಇಷ್ಟಪಡುತ್ತಾರೆಯೇ ಅಥವಾ ನಿರ್ದಿಷ್ಟವಾಗಿ ಪ್ರಾದೇಶಿಕ ಭಕ್ಷ್ಯಗಳನ್ನು ಬಯಸುತ್ತಾರೆಯೇ ಎಂದು ತಿಳಿದುಕೊಳ್ಳಿರಿ. ಅಂತಾರಾಷ್ಟ್ರೀಯ ಪಾಕಪದ್ಧತಿಯ ಶುಲ್ಕಗಳು ಪ್ರತಿ ಪ್ಲೇಟ್‌ಗೆ ಸರಾಸರಿ 2,200 ರೂಪಾಯಿ. ಆದರೆ ಭಾರತೀಯ ಪಾಕಪದ್ಧತಿಯ ವೆಚ್ಚವು ಪ್ರತಿ ಪ್ಲೇಟ್‌ಗೆ 1,800 ರೂಪಾಯಿ ಆಗಬಹುದು.

ಸ್ಥಳೀಯ ಡೆಕೋರೇಟರ್‌ರನ್ನು ಆಯ್ಕೆ ಮಾಡಿ
ಸಾಂಪ್ರದಾಯಿಕ ಮತ್ತು ಸ್ಥಳೀಯ ಡೆಕೊರೇಟರ್‌ಗಳ ನಡುವೆ ಹಣದ ಅಗಾಧವಾದ ಅಂತರವಿರುತ್ತದೆ. ಬಜೆಟ್ ಕಡಿಮೆ ಮಾಡಲು, ಸ್ಥಳೀಯ ಮಾರಾಟಗಾರರನ್ನು ಸುಲಭವಾಗಿ ಆಯ್ಕೆ ಮಾಡಬಹುದು. ಏಕೆಂದರೆ ಅದು ವೆಚ್ಚವನ್ನು ಸುಮಾರು 50 ಪ್ರತಿಶತದಷ್ಟು ಕಡಿತಗೊಳಿಸುತ್ತದೆ.
ಡೆಕೊರೇಟರ್ ಪ್ರಧಾನವಾಗಿ ಮಾಡಿದ ಕೆಲಸದ ಪ್ರಕಾರ ಅರ್ಥಮಾಡಿಕೊಳ್ಳಿ ಮತ್ತು ಅದನ್ನೇ ಅವರಿಗೆ ಮಾಡಲು ಹೇಳಿ. ವೆಚ್ಚ ಕಡಿಮೆ ಮಾಡಲು ನೀವು ತಾಜಾ ಹೂವುಗಳ ಬದಲಿಗೆ ಅಲಂಕಾರದಲ್ಲಿ ಕೃತಕ ಹೂವುಗಳು ಮತ್ತು ವರ್ಣರಂಜಿತ ಬಟ್ಟೆಗಳನ್ನು ಬಳಸಬಹುದು. ಅಲಂಕಾರದಲ್ಲಿ ತಾಜಾ ಹೂವುಗಳನ್ನು ಬಳಸುವಾಗ ಲಕ್ಷ ರೂಪಾಯಿಯ ಹೆಚ್ಚುವರಿ ವೆಚ್ಚ ತಗಲುತ್ತದೆ.

ಮದುವೆಯ ಉಡುಗೆಗಳಿಗಾಗಿ ಉದಯೋನ್ಮುಖ ವಿನ್ಯಾಸಕನನ್ನು ನೇಮಿಸಿ
ಮದುವೆಯ ಉಡುಗೆಗಳು ಎಷ್ಟೇ ದುಬಾರಿಯಾದದ್ದು ಕೊಂಡುಕೊಂಡರೂ ಒಮ್ಮೆ ಧರಿಸುತ್ತೇವೆ. ಮೊದಲು ನಿಮ್ಮ ಬಜೆಟ್ ತಿಳಿದುಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಬಟ್ಟೆಗಳನ್ನು ಆಯ್ಕೆ ಮಾಡುವುದು ಉತ್ತಮ. ನಿಮ್ಮ ವಿಶೇಷ ದಿನದ ಉಡುಗೆಗಳನ್ನು ಬಾಡಿಗೆಗೆ ಅಥವಾ ಉದಯೋನ್ಮುಖ ಅಥವಾ ಮನೆಯಲ್ಲಿರುವ ವಿನ್ಯಾಸಕರನ್ನು ಆಯ್ಕೆ ಮಾಡುವುದರಿಂದ ವೆಚ್ಚ ಕಡಿಮೆ ಮಾಡಿಕೊಳ್ಳಬಹುದು.
ನೀವು ನಿಮ್ಮ ಆಯ್ಕೆಯ ಡಿಸೈನರ್ ಉಡುಪನ್ನು ಸಹ ಆಯ್ಕೆ ಮಾಡಬಹುದು ಮತ್ತು ಅದನ್ನು ಸ್ಥಳೀಯವಾಗಿ ಅರ್ಧದಷ್ಟು ವೆಚ್ಚದಲ್ಲಿ ಹೊಲಿಸಬಹುದಾಗಿದೆ.

ಡಿಜಿಟಲ್ ವಿವಾಹ ಆಹ್ವಾನ ಕಳುಹಿಸಿ
ಕೋವಿಡ್-19 ಸಾಂಕ್ರಾಮಿಕ ರೋಗವು ಎಲ್ಲವನ್ನೂ ಡಿಜಿಟಲ್ ಆಗಿ ಮಾಡಿದೆ. ನೀವು ಸೃಜನಶೀಲ ವಿಡಿಯೋದೊಂದಿಗೆ ವಾಟ್ಸ್‌ಆ್ಯಪ್‌ ಅಥವಾ ಇ-ಮೇಲ್ ಮೂಲಕ ಮದುವೆಯ ಆಹ್ವಾನ ಕಳುಹಿಸಬಹುದು. ಅಲ್ಲದೆ, ಅತಿಥಿಗಳು ಪ್ರವೇಶಿಸಲು ಎಲ್ಲಾ ಕಾರ್ಯಕ್ರಮಗಳ ವಿವರಗಳೊಂದಿಗೆ ನೀವು ವಿವಾಹದ ವೆಬ್‌ಸೈಟ್ ಅನ್ನು ಸಹ ಮಾಡಬಹುದು. ಹೀಗೆ ಮಾಡುವುದರಿಂದ ಸಾಂಪ್ರದಾಯಿಕ ವಿವಾಹ ಕಾರ್ಡ್‌ಗಳು, ಮುದ್ರಣ ಮತ್ತು ಕೊರಿಯರ್ ಶುಲ್ಕಗಳಲ್ಲಿ ಸುಮಾರು 80 ಪ್ರತಿಶತ ಉಳಿಸುತ್ತದೆ.

ಉದಯೋನ್ಮುಖ ಛಾಯಾಗ್ರಾಹಕರನ್ನು ನೇಮಿಸಿ
ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಮದುವೆಯಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಗಳು. ಏಕೆಂದರೆ, ಅವರು ಮದುವೆಯ ದಂಪತಿಗಳು ಮತ್ತು ಕುಟುಂಬದ ನೆನಪುಗಳನ್ನು ಸೆರೆಹಿಡಿಯುತ್ತಾರೆ. ಛಾಯಾಗ್ರಾಹಕ ಮತ್ತು ವೀಡಿಯೋಗ್ರಾಫರ್ ಇರುವ ತಂಡ ನೇಮಿಸಿಕೊಳ್ಳುವುದರಿಂದ ವೆಚ್ಚ ಕಡಿಮೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಗರ್ಭಿಣಿ ನಾಯಿಗೆ ಸೀಮಂತ, ಬಳೆ ಶಾಸ್ತ್ರ ಮಾಡಿದ ಪೊಲೀಸ್: ಹೀಗೊಬ್ಬ ಶ್ವಾನಪ್ರೇಮಿ

ಇತ್ತೀಚಿನ ದಿನಗಳಲ್ಲಿ, ಜನರು ಮದುವೆಗಾಗಿ ಕ್ಯಾಂಡಿಡ್ ಛಾಯಾಗ್ರಾಹಕರನ್ನು ಮಾತ್ರ ನೇಮಿಸುತ್ತಾರೆ. ಅವರು ಇಡೀ ಸಮಾರಂಭವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ. ಇದರ ವೆಚ್ಚವನ್ನು ಕಡಿಮೆ ಮಾಡಲು ಕೆಲಸವನ್ನು ಪರಿಶೀಲಿಸಿದ ನಂತರ, ಉದಯೋನ್ಮುಖ ಛಾಯಾಗ್ರಾಹಕನನ್ನು ಸಹ ನೀವು ಆಯ್ಕೆ ಮಾಡಿಕೊಳ್ಳಬಹುದು.

ತಜ್ಞರ ಸಲಹೆ ಪಡೆದುಕೊಳ್ಳಿ
ವೆಚ್ಚಗಳ ಬಗ್ಗೆ ಹೇಗೆ ಮಾತುಕತೆ ನಡೆಸುವುದು ಮತ್ತು ಮೇಲೆ ಹೇಳಿದಂತೆ ಹಲವಾರು ಸೇವೆಗಳಿಗೆ ಸರಿಯಾದ ಮಾರಾಟಗಾರನನ್ನು ಹೇಗೆ ಹುಡುಕುವುದು ಎಂಬುದರ ಬಗ್ಗೆ ನೀವು ಗೊಂದಲದಲ್ಲಿದ್ದರೆ, ಮದುವೆ ಆಯೋಜಕರನ್ನು ನೇಮಿಸಿಕೊಳ್ಳುವುದು ಉತ್ತಮ. ಅವರು ನೆಟ್ವರ್ಕ್ ಮಾರಾಟಗಾರರು, ತಜ್ಞರು ಮತ್ತು ಕಲಾವಿದರ ಮಾಹಿತಿಯನ್ನು ಹೊಂದಿರುತ್ತಾರೆ.
Published by:vanithasanjevani vanithasanjevani
First published: