Poor Nations: ವಿಶ್ವದ ಬಡ ರಾಷ್ಟ್ರಗಳು ಆದಾಯದ 16% ಸಾಲದ ಮೇಲೆ ಖರ್ಚು ಮಾಡುತ್ತವೆ; ಸಮೀಕ್ಷೆಯಿಂದ ಬಯಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶ್ರೀಲಂಕಾವು ಈ ವರ್ಷ ಅತಿ ಹೆಚ್ಚು ಬಾಹ್ಯ ಸಾಲ ಪಾವತಿಗಳನ್ನು ಹೊಂದಿದೆ, ಇದು ಸರ್ಕಾರದ ಆದಾಯದ 75% ರಷ್ಟಿದೆ, ನಂತರ 65.6% ಸಾಲವನ್ನು ಲಾವೋಸ್, 57.8% ಸಾಲವನ್ನು ಡೊಮಿನಿಕಾ ಮತ್ತು 46.7% ಸಾಲವನ್ನು ಪಾಕಿಸ್ತಾನ ಹೊಂದಿದೆ.

  • Share this:

ಕ್ಯಾಂಪೇನ್ ಗ್ರೂಪ್ (Campaign Group) ಡೆಟ್ ಜಸ್ಟೀಸ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 91 ದೇಶಗಳು ಈ ವರ್ಷ ಸರಾಸರಿ 16.3% ರಷ್ಟು ಆದಾಯದಲ್ಲಿ ಹೊರಗಿನ ಸಾಲಗಳಿಗೆ ಖರ್ಚುಮಾಡಲಿದ್ದು, ಈ ಹಿಂದೆ ಸಾಲದ ಪ್ರಮಾಣ 6.6% ವಿದ್ದು 2011 ರಿಂದ ಸುಮಾರು 150% ರಷ್ಟು ಹೆಚ್ಚಳವಾಗಿದೆ ಎಂಬುದಾಗಿ ವರದಿ ತಿಳಿಸಿದೆ. ಅತ್ಯಂತ ಹೆಚ್ಚಿನ ಸಾಲ ಪಾವತಿಗಳನ್ನು (Payment) ಹಾಗಾಗಿ ಮುಂದಿನ 25 ವರ್ಷಗಳಿಗೆ ಕಡಿಮೆ ಆದಾಯದ ದೇಶಗಳು ಮಾಡಬೇಕಾಗಿರುವುದರಿಂದ ಸಾರ್ವಜನಿಕ ಸೇವೆಗಳಿಗೆ (Public Service) ಖರ್ಚುಮಾಡುವುದನ್ನು ಆದಷ್ಟು ಮಿತಿಗೊಳಿಸಲು ತಿಳಿಸಲಾಗಿದೆ.


ಶ್ರೀಲಂಕಾವು ಈ ವರ್ಷ ಅತಿ ಹೆಚ್ಚು ಬಾಹ್ಯ ಸಾಲ ಪಾವತಿಗಳನ್ನು ಹೊಂದಿದೆ, ಇದು ಸರ್ಕಾರದ ಆದಾಯದ 75% ರಷ್ಟಿದೆ, ನಂತರ 65.6% ಸಾಲವನ್ನು ಲಾವೋಸ್, 57.8% ಸಾಲವನ್ನು ಡೊಮಿನಿಕಾ ಮತ್ತು 46.7% ಸಾಲವನ್ನು ಪಾಕಿಸ್ತಾನ ಹೊಂದಿದೆ. ಈ ಸಮಯದಲ್ಲಿ ವಿಶ್ವದ ದೇಶಗಳ ಸಾಲ ಪಾವತಿಗೆ ಆದಷ್ಟು ಸಹಕಾರವನ್ನು ನೀಡಬೇಕು ಎಂದು ಋಣಭಾರ ನ್ಯಾಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೈಡಿ ಚೌ ತಿಳಿಸಿದ್ದಾರೆ.


ಸಾಲದ ಹೊರೆಯಿಂದ ದೇಶದ ಪ್ರಗತಿಗೆ ಹಾನಿ


ಸಾಲ ಪಾವತಿಗಳು ಅನೇಕ ದೇಶಗಳಲ್ಲಿ ಬಿಕ್ಕಟ್ಟಿನ ಮಟ್ಟವನ್ನು ತಲುಪುತ್ತಿವೆ, ಸಾರ್ವಜನಿಕ ಸೇವೆಗಳನ್ನು ಒದಗಿಸಲು, ಹವಾಮಾನ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಮತ್ತು ಆರ್ಥಿಕ ಪ್ರಕ್ಷುಬ್ಧತೆಗೆ ಪ್ರತಿಕ್ರಿಯಿಸಲು ಸರ್ಕಾರಗಳ ಸಾಮರ್ಥ್ಯವನ್ನು ಸಾಲದ ಹೊರೆ ತಡೆಯುತ್ತಿದೆ ಎಂದು ಹೈಡಿ ತಿಳಿಸಿದ್ದಾರೆ.


ಇದನ್ನೂ ಓದಿ: 4 ಯೋಧರ ಗುಂಡಿಟ್ಟು ಕೊಂದ ಪ್ರಕರಣದಲ್ಲಿ ಓರ್ವ ಸೈನಿಕನ ಬಂಧನ!


ಶ್ರೀಲಂಕಾದಲ್ಲಿ ಪ್ರತಿಭಟನೆ


ಸಾಲದ ಹೊರೆಯಿಂದ ಬಹುತೇಕ ಜರ್ಝರಿತಗೊಂಡಿದ್ದ ಶ್ರೀಲಂಕಾ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ನಂತರ ವಿದ್ಯುತ್, ಇಂಧನ ಮತ್ತು ಔಷಧದ ಕೊರತೆಯನ್ನು ಎದುರಿಸಬೇಕಾಯಿತು ಹಾಗೂ ಭಾರೀ ಪ್ರತಿಭಟನೆಗೂ ಕಾರಣವಾಯಿತು. ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಜಾಗತಿಕ ಸಂಶೋಧನೆ ಮತ್ತು ನೀತಿ ಸಲಹೆಗಾರರಾದ ಸಂಹಿತಾ ಅಂಬಾಸ್ಟ್ ಶ್ರೀಲಂಕಾದ ಜನತೆ ತೀವ್ರ ಹಾನಿಗೊಳಗಾಗಿದ್ದಾರೆ ಎಂದು ತಿಳಿಸಿದ್ದಾರೆ. ದೇಶದ ಸಾಲದ ಹೊರೆ ಕಡಿಮೆಯಾದಾಗ ಜನತೆ ಸಂಪನ್ಮೂಲಗಳ ಕೊರತೆಯಿಂದ ಬಳಲಲಿದ್ದಾರೆ ಎಂದು ತಿಳಿಸಿದ್ದಾರೆ.


ಸರ್ಕಾರವು ಸಾಮಾಜಿಕ ರಕ್ಷಣೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಬೇಕು ಆದರೆ ಬದಲಿಗೆ ಅವರು ಬಾಹ್ಯ ಸಾಲವನ್ನು ಪೂರೈಸಲು ಅಸಾಮಾನ್ಯ ಪ್ರಮಾಣದ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬುದು ಸಂಹೀತಾ ಹೇಳಿಕೆಯಾಗಿದೆ.


ಆರ್ಥಿಕ ಮತ್ತು ಹವಾಮಾನ ಬಿಕ್ಕಟ್ಟು


ಏಷ್ಯನ್ ಪೀಪಲ್ಸ್ ಮೂವ್‌ಮೆಂಟ್ ಆನ್ ಡೆಬ್ಟ್ ಅಂಡ್ ಡೆವಲಪ್‌ಮೆಂಟ್‌ನ ಸಂಯೋಜಕರಾದ ಮೇ ಬ್ಯೂನಾವೆಂಚುರಾ ತಿಳಿಸಿರುವಂತೆ ಸಾಲವನ್ನು ಪಾವತಿಸಲು ದೇಶಗಳು ಹೆಚ್ಚು ಹಣ ಹರಿಸುತ್ತವೆ ಇದೇ ಸಂದರ್ಭದಲ್ಲಿ ಹದಗೆಡುತ್ತಿರುವ ಆರ್ಥಿಕ ಮತ್ತು ಹವಾಮಾನ ಬಿಕ್ಕಟ್ಟಿನಿಂದ ರಕ್ಷಿಸಲು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಸಾಲ ರದ್ಧತಿ ಇಲ್ಲವೇ ಅಭಿವೃದ್ಧಿಗಾಗಿ ಹಣಕಾಸಿನ ನಿರಂತರ ಖರ್ಚಿನೊಂದಿಗೆ ಸಾಲಗಳು ಏರಿಕೆಯಾಗುತ್ತಲೇ ಇರುತ್ತವೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗನನ್ನು ಮರ್ಯಾದಾ ಹತ್ಯೆ ಮಾಡಿದ ಕಿರಾತಕ ಅಪ್ಪ!


ಖಾಸಗಿ ಸಾಲದಾತರು ತಮ್ಮ ಸಾಲಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ಲಂಡನ್ ಮತ್ತು ನ್ಯೂಯಾರ್ಕ್‌ನ ಕಾನೂನು ಸಲಹೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಚೌ ಸಲಹೆ ನೀಡಿದ್ದಾರೆ. ಚೀನಾವನ್ನು ಹೊರತುಪಡಿಸಿ, 46% ಸಾಲ ಮರುಪಾವತಿಗಳು ಖಾಸಗಿ ಸಾಲದಾತರಿಗೆ, ಸುಮಾರು 30% ಬಹು ಸಂಸ್ಥೆಗಳಿಗೆ, 12% ಇತರ ಸರ್ಕಾರಗಳಿಗೆ ಮತ್ತು 12% ಚೀನೀ ಸಾರ್ವಜನಿಕ ಮತ್ತು ಖಾಸಗಿ ಸಾಲದಾತರಿಗೆ ಮರುಪಾವತಿ ಮಾಡಬೇಕಾಗುತ್ತದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.


top videos



    ಸರ್ಕಾರಗಳು ತಮ್ಮ ಸಾಲವನ್ನು ಪೂರೈಸುವ ಬದಲು ಅಗತ್ಯ ಸೇವೆಗಳಿಗೆ ಹಣವನ್ನು ಖರ್ಚು ಮಾಡಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಜಿ 20 ಯಂತಹ ಬಹುಪಕ್ಷೀಯ ಸಂಸ್ಥೆಗಳಿಂದ ಹೆಚ್ಚಿನ ಸಂಘಟಿತ ಕ್ರಮಕ್ಕಾಗಿ ಕರೆನೀಡಿದ್ದಾರೆ.

    First published: