World’s first Drive-in Theater- ಮುಂಬೈನಲ್ಲಿ ವಿಶ್ವದ ಮೊದಲ ಡ್ರೈವ್-ಇನ್ ಥಿಯೇಟರ್; ಜಿಯೋ ವರ್ಲ್ಡ್ ಡ್ರೈವ್ ವಿಶೇಷತೆಗಳಿವು

Jio World Drive in Mumbai- ಮುಂಬೈನ ಬಾಂದ್ರಾ ಬಳಿ ಇರುವ ಜಿಯೋ ವರ್ಲ್ಡ್ ಡ್ರೈವ್ ಮಾಲ್​ನಲ್ಲಿ ನವೆಂಬರ್ 5ರಂದು ವಿಶ್ವ ದರ್ಜೆಯ ಓಪನ್ ಏರ್ ರೂಫ್​ಟಾಪ್ ಡ್ರೈವ್ ಇನ್ ಥಿಯೇಟರ್ ಆರಂಭವಾಗಲಿದೆ. ಈ ಮಾಲ್​ನಲ್ಲಿ ಇನ್ನೂ ಹಲವು ವಿಶೇಷತೆಗಳು ಭಾರತದ ಮಟ್ಟಿಗೆ ಹೊಸದೆನಿಸಿವೆ.

ಇಶಾ ಅಂಬಾನಿ

ಇಶಾ ಅಂಬಾನಿ

  • News18
  • Last Updated :
  • Share this:
    ಮುಂಬೈ, ನ. 01: ರಿಲಾಯನ್ಸ್ ಸಂಸ್ಥೆ ಆರಂಭಿಸಿರುವ ಜಿಯೋ ವರ್ಲ್ಡ್ ಡ್ರೈವ್ (JWD- Jio World Drive) ವಿಶ್ವ ದರ್ಜೆ ಶಾಪಿಂಗ್ ಮಾಲ್​ನಲ್ಲಿ ಹೊಸ ಪ್ರಯೋಗಗಳನ್ನ ಮಾಡಲಾಗುತ್ತಿದೆ. ಈ ಮಾಲ್​ನ ಹೈಲೈಟ್​ಗಳಲ್ಲಿ ಜಿಯೋ ಡ್ರೈವ್-ಇನ್ (Jio Drive-in) ಕೂಡ ಒಂದು. ಇದು ವಿಶ್ವದ ಮೊತ್ತಮೊದಲ ಓಪನ್ ಏರ್ ರೂಫ್ ಟಾಪ್ ಡ್ರೈವ್ ಇನ್ ಥಿಯೇಟರ್ (Open Air Rooftop Drive-in Theater) ಎನಿಸಿದೆ. ಇದೂ ಸೇರಿದಂತೆ ಹಲವು ಪ್ರಯೋಗಗಳನ್ನ ಮಾಡಲಾಗುತ್ತಿದೆ. ಇವುಗಳಲ್ಲಿ ಬಹುತೇಕವು ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರಯೋಗ ಕಾಣುತ್ತಿವೆ.

    ಡ್ರೈವ್-ಇನ್ ಥಿಯೇಟರ್​ನಲ್ಲಿ 290 ಕಾರ್​ಗಳಿಗೆ ಅವಕಾಶ: ಜೆಡಬ್ಲ್ಯೂಡಿ ಶಾಪಿಂಗ್ ಮಾಲ್​ನಲ್ಲಿ ಜಿಯೋ ಡ್ರೈವ್-ಇನ್ ಥಿಯೇಟರ್ ನವೆಂಬರ್ 5ರಂದು ಪ್ರಾರಂಭವಾಗುತ್ತದೆ. ಪಿವಿಆರ್ ಸಂಸ್ಥೆಯಿಂದ ಇದರ ನಿರ್ವಹಣೆ ಆಗುತ್ತದೆ. ಮಾಳಿಗೆ ಮೇಲಿರುವ ಡ್ರೈವ್ ಇನ್ ಥಿಯೇಟರ್ ಆಗಿರುವ ಇದು ವಿಶ್ವದಲ್ಲೇ ಮೊದಲು ಎನ್ನಲಾಗಿದೆ. ಇದರ ಸ್ಕ್ರೀನ್ ಬೃಹತ್ ಆಗಿದೆ. ಮುಂಬೈನ ಅತಿ ದೊಡ್ಡ ಸ್ಕ್ರೀನ್​ಗಳಲ್ಲಿ ಇದೂ ಒಂದು. ಈ ಡ್ರೈವ್-ಇನ್ ಥಿಯೇಟರ್​ನಲ್ಲಿ 290 ಕಾರ್​ಗಳನ್ನ ನಿಲ್ಲಿಸಿಕೊಂಡು ಸಿನಿಮಾ ವೀಕ್ಷಿಸಲು ಅವಕಾಶ ಇದೆ.

    ಇಶಾ ಅಂಬಾನಿ ಹೇಳಿದ್ದು:

    ಜಿಯೋ ವರ್ಲ್ಡ್ ಡ್ರೈವ್​ನ ವಿಶನ್ ಮತ್ತು ಕಾನ್ಸೆಪ್ಟ್ ಬಗ್ಗೆ ಮಾಹಿತಿ ಬಿಚ್ಚಿಟ್ಟ ರಿಲಾಯನ್ಸ್ ರೀಟೇಲ್​ನ ನಿರ್ದೇಶಕಿ ಇಶಾ ಅಂಬಾನಿ, “ಇವತ್ತಿನ ದಿನಗಳ ಗ್ರಾಹಕರ ಬೇಡಿಕೆ ಮತ್ತು ಅಭಿರುಚಿಯನ್ನ ದೃಷ್ಟಿಯಲ್ಲಿಟ್ಟುಕೊಂಡು ಜಿಯೋ ವರ್ಲ್ಡ್ ಡ್ರೈವ್ ಪ್ರಾರಂಭಿಸಲಾಗಿದೆ. ವಿಶ್ವಾದ್ಯಂತ ಇರುವ ಅತ್ಯುತ್ತಮ ಮನರಂಜನಾ ಮತ್ತು ರೀಟೇಲ್ ಪ್ರಯೋಗಗಳನ್ನ ಮುಂಬೈನಲ್ಲಿ ಮಾಡಲಾಗುತ್ತಿದೆ. ಗ್ರಾಹಕರು ಹಿಂದೆಂದೂ ಕಂಡು ಕೇಳರಿಯದ ಅತ್ಯುತ್ತಮ ವೈಯಕ್ತಿಕ ಅನುಭವಗಳ ಜಗತ್ತನ್ನು ಈ ಜಿಯೋ ವರ್ಲ್ಡ್ ಡ್ರೈವ್​ನಲ್ಲಿ ಕಾಣಬಹುದು…” ಎಂದಿದ್ಧಾರೆ.

    ಜಿಯೋ ವರ್ಲ್ಡ್ ಡ್ರೈವ್ ವಿಶೇಷತೆಗಳು:

    ಮುಂಬೈನ ಬಾಂದ್ರಾ-ದಾರಾವಿ ಪ್ರದೇಶದ ಸಮೀಪ 17.5 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿರುವ ಜಿಯೋ ವರ್ಲ್ಡ್ ಡ್ರೈವ್ ಈ ನಗರದ ಅತ್ಯಂತ ದೊಡ್ಡ ಹ್ಯಾಂಗೌಟ್ ಸ್ಥಳವಾಗಿದೆ. ಇದರಲ್ಲಿ 72 ಪ್ರತಿಷ್ಠಿತ ಅಂತರರಾಷ್ಟ್ರೀಯ ಮತ್ತು ಭಾರತೀಯ ಬ್ರ್ಯಾಂಡ್​ಗಳ ಮಳಿಗೆಗಳು ಇವೆ. ಅಂತರರಾಷ್ಟ್ರೀಯ ಬ್ರ್ಯಾಂಡ್​ನ 27 ಫೂಡ್ ಕೋರ್ಟ್​ಗಳು ಇವೆ. ನೈನ್ ಡೈನ್ (Nine Dine), ಮೋಟೊಡು (Motodo), ಸೀ ಸಾ (See Saw) ಮೊದಲಾದ ವರ್ಲ್ಡ್ ಕ್ಲಾಸ್ ಮತ್ತು ಮಲ್ಟಿ ಕ್ಯೂಸಿನರಿ ರೆಸ್ಟಾರೆಂಟ್​ಗಳು ಇದರಲ್ಲಿವೆ.

    ಇದನ್ನೂ ಓದಿ: JioPhone Next Unboxing: ಸಿಂಪಲ್ಲಾಗಿ ಸಖತ್ತಾಗಿದೆ ಜಿಯೋಫೋನ್ ನೆಕ್ಸ್ಟ್!

    ಸೀ ಸಾ ರೆಸ್ಟೋರೆಂಟ್​ನಲ್ಲಿ ಸಾಕು ಪ್ರಾಣಿಗಳಿಗೂ ಸೌಲಭ್ಯಗಳನ್ನ ಒದಗಿಸಲಾಗುತ್ತದೆ. ಮೊಟೊಡು ರೆಸ್ಟೋರೆಂಟ್ ಇಟಾಲಿಯನ್ ಶೈಲಿಯದ್ದಾಗಿದೆ.

    ಜಿಯೋ ವರ್ಲ್ಡ್ ಡ್ರೈವ್​ನಲ್ಲಿ ವಿವಿಧ ಕ್ರೀಡೆಗಳ ಸೌಲಭ್ಯ ಇರುವ ಬೇ ಕ್ಲಬ್ ಇದೆ. ಈ ಶಾಪಿಂಗ್ ಮಾಲ್​ನಲ್ಲಿ ಉತ್ಕೃಷ್ಟ ಮಟ್ಟದ ಕಲಾ ಮಳಿಗೆಗಳಿವೆ. ಇಲ್ಲಿ ವಿಶ್ವದ ದರ್ಜೆಯ ಆರು ಮಲ್ಟಿಪ್ಲೆಕ್ಸ್ ಥಿಯೇಟರ್​ಗಳು ಇವೆ.
    Published by:Vijayasarthy SN
    First published: