World Vada Pav day: ವಡಾ ಪಾವ್ ಮಾರುತ್ತಲೇ 50 ಕೋಟಿ ಸಂಪಾದಿಸಿದ ಗೋಲಿ! 350 ಮಳಿಗೆ, ಎಲ್ಲಾ ಕಡೆಯಲ್ಲೂ ಒಂದೇ ಟೆಸ್ಟ್​

ವಡಾ ಪಾವ್​ ಮಾರುತ್ತಲೇ ಈ ಕಂಪೆನಿ 50 ಕೋಟಿ (50 Crore) ಸಂಪಾದಿಸಿದೆ. ಅದು ದೇಶದಾದ್ಯಂತ ಒಟ್ಟು 350 ಮಳಿಗೆಗಳು ಕೂಡ ಇವೆ. ಈ ಗೋಲಿ ವಡಾಪಾವ್ (Goli Vada Pav) ಹೆಸರಿನಲ್ಲಿ ಈ ವಡಾ ಪಾವ್​ ಅನ್ನು ಮಾರಾಟ ಮಾಡಲು ಶುರು ಮಾಡಿದ್ದರು.

ಗೋಲಿ ವಡಾ ಪಾವ್​

ಗೋಲಿ ವಡಾ ಪಾವ್​

  • Share this:
ವಿಶ್ವ (World) ದಲ್ಲಿ ಪ್ರತಿ ದಿನ ವಿಶೇಷ ಆಚರಣೆಗಳನ್ನು ಆಚರಿಸಲಾಗುತ್ತೆ. ಪ್ರತಿಯೊಂದು ದಿನವೂ ವಿಶೇಷ. ಹೀಗಿರುವಾಗ ಇಂದು ಏನು ವಿಶೇಷ ಅಂತ ನೋಡಿದರೆ, ಇಂದು ವಿಶ್ವ ವಡಾ ಪಾವ್​ ದಿನ (World Vada Pav Day) . ವಿಶ್ವ ವಡಾ ಪಾವ್ ದಿನದಂತಹ ಕೆಲವು ದಿನಗಳನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಆಗಸ್ಟ್ 23ರಂದು ವಿಶ್ವ ವಡಾ ಪಾವ್​ ದಿನವಾಗಿ ಆಚರಿಸಲಾಗುತ್ತೆ. ದೇಶದ ಮೂಲೆ ಮೂಲೆಯಲ್ಲೂ ಸಿಗುವ ವಡಾ ಪಾವ್​ಗೆ ಇಂಥದ್ದೊಂದು ದಿನ ಇರಲೇ ಬೇಕು ಎಂದು ವಿಶೇಷ ಅನ್ನಿಸದೇ ಇರಬಹುದು, ಆದರೆ ಈ ವಡಾ ಪಾವ್ ಮಾರಿ ಕೋಟಿಗಟ್ಟಲೆ ವಹಿವಾಟು ನಡೆಸುವವರ ಬಗ್ಗೆ ಗೊತ್ತಿರಬೇಕು. ವಡಾ ಪಾವ್​ ಮಾರುತ್ತಲೇ ಈ ಕಂಪೆನಿ 50 ಕೋಟಿ (50 Crore) ಸಂಪಾದಿಸಿದೆ. ಅದು ದೇಶದಾದ್ಯಂತ ಒಟ್ಟು 350 ಮಳಿಗೆಗಳು ಕೂಡ ಇವೆ. ಈ ಗೋಲಿ ವಡಾಪಾವ್ (Goli Vada Pav) ಹೆಸರಿನಲ್ಲಿ ಈ ವಡಾ ಪಾವ್​ ಅನ್ನು ಮಾರಾಟ ಮಾಡಲು ಶುರು ಮಾಡಿದ್ದರು.

ವಡಾ ಪಾವ್​ನಿಂದಲೇ ಸಿಕ್ಕಾಪಟ್ಟೆ ದುಡ್ಡು!

ಕೆಲವು ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಇರುವುದಿಲ್ಲ. ಈ ರೀತಿಯ ಮಕ್ಕಳನ್ನು ಅಪಹಾಸ್ಯ ಮಾಡಲಾಗುತ್ತದೆ. ಮುಂಬೈನಲ್ಲಿ ಒಬ್ಬ ಹುಡುಗ ನಿರಂತರವಾಗಿ ಅದನ್ನೇ ಕೇಳಬೇಕಾಗಿತ್ತು. ಆ ಹುಡುಗನ ತಂದೆ ಯಾವಾಗಲೂ ಓದು ಇಲ್ಲದಿದ್ದರೆ ನೀನು ವಡಾ ಪಾವ್​ ಮಾರಬೇಕಾಗುತ್ತದೆ ಎಂದು ಹಿಯಾಳಿಸುತ್ತಿದ್ದರಂತೆ. ಅದು ಈಗ ನಿಜವಾಗಿಯೂ ನೆರವೇರಿದೆ. ಆತನ ತಂದೆಯೆ ಹೆಮ್ಮೆ ಪಡುವಂತೆ ಆ ಬಾಲಕ ಇಡೀ ದೇಶದಾದ್ಯಂತ ವಡಾ ಪಾವ್​ ಮಾರುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ 50 ಕೋಟಿ ವಹಿವಾಟು ನಡೆಸುವಂತೆ ಆಗಿದೆ.

ಇವರ ಬಗ್ಗೆ ಎಲ್ಲಾ ಕಡೆ ಪಾಠ ಮಾಡ್ತಾರೆ!

ಅವರ ಕಂಪನಿಯ ಉದಾಹರಣೆಯನ್ನು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್, ಐಎಸ್‌ಬಿ ಹೈದರಾಬಾದ್, ಐಎಂಡಿ ಸ್ವಿಟ್ಜರ್ಲೆಂಡ್‌ನಂತಹ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ನೀಡಲಾಗಿದೆ. ಈಗ ಅನೇಕ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಅದೇ ಮಾದರಿಯನ್ನು ತೋರಿಸುತ್ತಾರೆ. ಈ ವಡಾ ಪಾವ್ ಕಂಪನಿಯ ಹೆಸರು ಗೋಲಿ ವಡಾ ಪಾವ್ ಮತ್ತು ಇದರ ಸಂಸ್ಥಾಪಕರು ವೆಂಕಟೇಶ್​ ಅಯ್ಯರ್.

ಇದನ್ನೂ ಓದಿ: ವೈಯಕ್ತಿಕ, ಆರ್ಥಿಕವಾಗಿ ಸದೃಢರಾಗಬೇಕೇ? ಹಾಗಿದ್ರೆ ಈ ಮೂರು ಮುತ್ತಿನಂತಹ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಿ

ಮಧ್ಯಮ ವರ್ಗದ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ವೆಂಕಟೇಶ್​ ಜನಿಸಿದರು.  ಅವರ ತಂದೆ-ತಾಯಿಗಳು ಇವರು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಅಥವಾ ಸಿಎ ಆಗಬೇಕೆಂದು ಬಯಸಿದ್ದರು. ಆದರೆ ವೆಂಕಟೇಶನಿಗೆ ಡಾಕ್ಟರ್, ಇಂಜಿನಿಯರ್ ಆಗುವ ಆಸಕ್ತಿ ಇರಲಿಲ್ಲ. ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ವ್ಯವಹಾರವನ್ನು ಪ್ರಾರಂಭಿಸುವ ಮೊದಲು, ಅವರು ಚಿಲ್ಲರೆ ಕ್ಷೇತ್ರದಲ್ಲಿ ಅನುಭವವನ್ನು ಹೊಂದಲು ಗಮನಹರಿಸಿದರು. ಉತ್ತಮ ಅನುಭವವನ್ನು ಪಡೆದ ನಂತರ, ಅವರು ವ್ಯಾಪಾರಕ್ಕೆ ಹೋಗಲು ನಿರ್ಧರಿಸಿದರು.

ಗೋಲಿ ವಡಾ ಪಾವ್​ ಮಾಲೀಕ ವೆಂಕಟೇಶ್​ ಅಯ್ಯರ್​


ಅಪ್ಪನ ತಮಾಷೆಯನ್ನು ಸೀರಿಯಸ್​ ಆಗಿ ತೆಗೆದುಕೊಂಡ ವೆಂಕಟೇಶ್​!

ಅವರ ಅಪ್ಪ ತಮಾಷೆಗಾಗಿ ವಡಾ ಪಾವ್​ ಮಾರು ಅಂದಿದ್ದನ್ನೇ ಸೀರಿಯಸ್​ ಆಗಿ ಸ್ವೀಕರಿಸಿದ ವೆಂಕಟೇಶ್​​ ಇಂದು ದೇಶಾದಾದ್ಯಂತ ಸುದ್ದಿಯಾಗುತ್ತಿದ್ದಾರೆ. ಫೆಬ್ರವರಿ 2004 ರಲ್ಲಿ, ವೆಂಕಟೇಶ್ ಅಯ್ಯರ್ ಅವರು ಥಾಣೆ ಜಿಲ್ಲೆಯ ಕಲ್ಯಾಣ್‌ನಲ್ಲಿ ಮೊದಲ ಗೋಲಿ ವಡಾ ಪಾವ್ ಔಟ್‌ಲೆಟ್ ಅನ್ನು ತೆರೆದರು. ತನ್ನ ವ್ಯವಹಾರವು ಸಾಧ್ಯವಾದಷ್ಟು ನಿರ್ಗತಿಕರಿಗೆ ಉದ್ಯೋಗವನ್ನು ಒದಗಿಸಬೇಕೆಂದು ಅವರು ಬಯಸಿದ್ದರು.

ಎಲ್ಲ ಬ್ರ್ಯಾಂಚ್​ನಲ್ಲೂ ಒಂದೇ ಟೇಸ್ಟ್​!

ಮುಂಬೈನಲ್ಲಿ, ಎಲ್ಲೆಡೆ ಕಂಡುಬರುವ ಒಂದು ಭಕ್ಷ್ಯವೆಂದರೆ ವಡಾ ಪಾವ್. ಕಾಲೇಜು ಪಾರ್ಟಿಗಳಿಂದ ಹಿಡಿದು ಕ್ರಿಕೆಟ್ ಪಂದ್ಯಗಳವರೆಗೆ ಎಲ್ಲರೂ ವಡಾ ಪಾವ್ ತಿನ್ನಲು ಇಷ್ಟಪಡುತ್ತಾರೆ. ಈ ವಡಾ ಪಾವ್ ಅನ್ನು ಮಾರಾಟ ಮಾಡಲುವೆಂಕಟೇಶ್ ಅಯ್ಯರ್ ನಿರ್ಧರಿಸಿದರು. ಗೋಲಿ ವಡಾ ಪಾವ್ ಮಳಿಗೆಗಳಲ್ಲಿ ಕೆಲವು ಹೊಸ ವಿಧದ ವಡಾ ಪಾವ್ ಅನ್ನು ಸಹ ಲಭ್ಯವಾಗುವಂತೆ ಮಾಡಿದ್ದಾರೆ. ಇದು ಪನೀರ್ ವಡಾ ಪಾವ್, ಶೆಜ್ವಾನ್, ಮಿಕ್ಸ್ ವೆಜ್, ಪಾಲಕ್ ಮಕಾ ಮುಂತಾದ ವಿಶಿಷ್ಟ ಪ್ರಭೇದಗಳನ್ನು ಹೊಂದಿದೆ. ಕುತೂಹಲಕಾರಿಯಾಗಿ, ಎಲ್ಲಾ ಭಕ್ಷ್ಯಗಳು ತಮ್ಮ ಪ್ರತಿಯೊಂದು ಮಳಿಗೆಗಳಲ್ಲಿ ಒಂದೇ ರುಚಿಯನ್ನು ಹೊಂದಿರುತ್ತವೆ.

ವೆಂಕಟೇಶ್​ ಅಯ್ಯರ್​, ಗೋಲಿ ವಡಾ ಪಾವ್​ ಮಾಲೀಕ


ಇದನ್ನೂ ಓದಿ: ಈ ಬ್ಯುಸಿನೆಸ್​ ಶುರು ಮಾಡೋಕೆ ಸರ್ಕಾರನೇ 10 ಲಕ್ಷ ಕೊಡುತ್ತೆ! ಕೋಟಿ ಕೋಟಿ ಸಂಪಾದಿಸೋ ವ್ಯಾಪಾರ ಗುರೂ

ವೆಂಕಟೇಶ್ ಅಯ್ಯರ್ ಈ ಉದ್ಯಮವನ್ನು ಪ್ರಾರಂಭಿಸಲು ನಿರ್ಧರಿಸಿದಾಗ, ಅವರು ಜನರೊಂದಿಗೆ ಮಾತನಾಡಲು ಪ್ರಾರಂಭಿಸಿದರು. ವೆಂಕಟೇಶ್​​ ಅಯ್ಯರ್​​​ ನೀವು ಯಾವ ಗೋಲು ಗಳಿಸಲಿದ್ದೀರಿ ಎಂದು ಅವರನ್ನು ಯಾವಾಗಲೂ ಕೇಳಲಾಗುತ್ತಿತ್ತು? ಬಟಾಟೆವಾಡದಲ್ಲಿ, ಆಲೂಗಡ್ಡೆ ತಿರುಳಿನ ಚಪ್ಪಟೆ ಉಂಡೆಯನ್ನು ಬೇಳೆ ಹಿಟ್ಟಿನಲ್ಲಿ ಕಲಿಸಿ ಎಣ್ಣೆಗೆ ಬಿಡಲಾಗುತ್ತಿತ್ತು. ಇದನ್ನು ಮನಗಂಡ ಅವರು ತಮ್ಮ ಕಂಪನಿಯ ಹೆಸರಿನಲ್ಲಿ ಗೋಲಿ ಎಂಬ ಹೆಸರು ಇಟ್ರಂತೆ. ಹೀಗಾಗಿ ಅವರ ಕಂಪನಿಯ ಹೆಸರು ಗೋಲಿ ವಡಾ ಪಾವ್ ಆಯಿತು.
Published by:Vasudeva M
First published: