• Home
 • »
 • News
 • »
 • business
 • »
 • Elon Musk: 'ನಾನು ಟ್ವಿಟರ್‌ನ ಹೊಸ CEO ಆಗಬಹುದೇ' ಎಂದ ಖ್ಯಾತ ಯೂಟ್ಯೂಬರ್​​: ಎಲಾನ್ ಮಸ್ಕ್‌ ಕೊಟ್ಟ ಪ್ರತಿಕ್ರಿಯೆ ಇದು

Elon Musk: 'ನಾನು ಟ್ವಿಟರ್‌ನ ಹೊಸ CEO ಆಗಬಹುದೇ' ಎಂದ ಖ್ಯಾತ ಯೂಟ್ಯೂಬರ್​​: ಎಲಾನ್ ಮಸ್ಕ್‌ ಕೊಟ್ಟ ಪ್ರತಿಕ್ರಿಯೆ ಇದು

ಮಿಸ್ಟರ್ ಬೀಸ್ಟ್

ಮಿಸ್ಟರ್ ಬೀಸ್ಟ್

ಟ್ವಿಟರ್​ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕೆ? ಎಂದು ಎಲಾನ್​ ಮಸ್ಕ್ ಪೋಲ್​ ಹಾಕಿ ಸಮೀಕ್ಷೆ ನಡೆಸಿದ್ದರು. ಇದಕ್ಕೆ ಶೇಕಡ 57ರಷ್ಟು ಜನ ಹೌದು ನೀವು ಟ್ವಿಟ್ಟರ್​ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕು ಎಂದಿದ್ದಾರೆ.

 • Share this:

  ಟ್ವಿಟರ್‌ ಒಡೆಯ ಎಲಾನ್ ಮಸ್ಕ್‌ (Elon Musk) ಈ ಹಿಂದೆ ಕೂಡ ಕೆಲವು ನಿರ್ಧಾರಗಳನ್ನು ಸಮೀಕ್ಷೆ ಮೂಲಕವೇ ನಡೆಸಿ ನಿರ್ಧಾರ ತೆಗೆದುಕೊಂಡಿದ್ದಾರೆ. ಮೊನ್ನೆ ಕೂಡ ಒಂದು ಸಮೀಕ್ಷೆಯನ್ನು ಟ್ವಿಟರ್‌ (Twitter) ಪುಟದಲ್ಲಿ ನಡೆಸಿದ್ದಾರೆ. ನಾನು ಟ್ವಿಟ್ಟರ್​ ಮುಖ್ಯಸ್ಥನ ಹುದ್ದೆಯಿಂದ (Twitter CEO) ಕೆಳಗಿಳಿಯಬೇಕೆ? ಎಂದು ಎಲಾನ್​ ಮಸ್ಕ್ ಪೋಲ್​ ಹಾಕಿ ಸಮೀಕ್ಷೆ ನಡೆಸಿದ್ದರು. ಇದಕ್ಕೆ ಶೇಕಡ 57ರಷ್ಟು ಜನ ಹೌದು ನೀವು ಟ್ವಿಟ್ಟರ್​ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕು ಎಂದಿದ್ದಾರೆ.


  ಟ್ವಿಟರ್‌ನಲ್ಲಿ ಮಸ್ಕ್‌ ಸಮೀಕ್ಷೆ


  ಟ್ವಿಟರ್‌ ಮಾಲೀಕ ಎಲಾನ್ ಮಸ್ಕ್‌ ಅವರು ತಾವು 44 ಬಿಲಿಯನ್ ಡಾಲರ್‌ಗೆ ಖರೀದಿಸಿದ ಮೈಕ್ರೋಬ್ಲಾಗಿಂಗ್ ಸೈಟ್‌ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ ಎಂದು ಸಮೀಕ್ಷೆಯಲ್ಲಿ ಕೇಳಿ ಟ್ವೀಟ್ ಮಾಡಿದ್ದರು. ಈ ಪೈಕಿ, ಹೆಚ್ಚಿನ ಬಳಕೆದಾರರು ಮಸ್ಕ್‌ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಪರವಾಗಿ ಮತ ಚಲಾಯಿಸಿದ್ದಾರೆ. ಅದರಲ್ಲಿ 57ರಷ್ಟು ಜನರು ಎಲಾನ್ ಮಸ್ಕ್‌​ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕೆಂದು ಹೇಳಿದ್ದಾರೆ, ಶೇ.43ರಷ್ಟು ಬಳಕೆದಾರು ಮಾತ್ರ ಬೇಡ ಎಂದಿದ್ದಾರೆ.


  Elon Musk Shares "Real Pic" Showing Twitter San Francisco Headquarters
  ಎಲಾನ್ ಮಸ್ಕ್


  ಇದನ್ನೂ ಓದಿ: Elon Musk: ಎಲಾನ್​ ಮಸ್ಕ್​​ ಅವರಿಂದ ಕೈತಪ್ಪುತ್ತಾ ಟ್ವಿಟರ್​ ಒಡೆತನ? ಜನ ಏನ್​ ಹೇಳ್ತಾರೆ ನೀವೇ ನೋಡಿ


  "ಯಾರಾದರೂ ಮೂರ್ಖತನ ತೋರಿದ ತಕ್ಷಣ ನಾನು ಸಿಇಒ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಅದರ ನಂತರ, ನಾನು ಸಾಫ್ಟ್‌ವೇರ್ ಮತ್ತು ಸರ್ವರ್ ತಂಡಗಳನ್ನು ನಡೆಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.


  ಇನ್ನೂ ಸಮೀಕ್ಷೆಯಿಂದ ಬರುವ ರಿಸಲ್ಟ್​ಗೆ ನಾನು ಬದ್ಧನಾಗಿರುತ್ತೇನೆ ಎಂದು ಸಹ ಮಸ್ಕ್ ಹೇಳಿದ್ದರು. ಇದೀಗ ಸಮೀಕ್ಷೆಯಲ್ಲಿ ಬಹಳಷ್ಟು ಜನ ಎಲಾನ್ ಮಸ್ಕ್​ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮಾತಿನ ಅನುಗುಣವಾಗಿ ಟ್ವಿಟ್ಟರ್​ ಮುಖ್ಯಸ್ಥಾನ ತೊರೆಯುತ್ತಾರೆಯೇ ಎಂಬ ಅನುಮಾನ ಕಾಡುತ್ತಿದೆ.  ಟ್ವಿಟರ್‌ನ ಹೊಸ ಸಿಇಒ ಆಗಬಹುದೇ ಎಂದು ಮಸ್ಕ್‌ಗೆ ಪ್ರಶ್ನೆ


  ಈ ಎಲ್ಲಾ ಬೆಳವಣಿಗೆಯ ಮಧ್ಯೆ ವಿಶ್ವದ ಅತ್ಯಂತ ಪ್ರಸಿದ್ಧ ಯೂಟ್ಯೂಬರ್ ಒಬ್ಬರು ಮಸ್ಕ್‌ಗೆ ಒಂದು ಪ್ರಶ್ನೆಯನ್ನು ಸಹ ಕೇಳಿದ್ದಾರೆ. ಹೌದು, ಈ ಸಮೀಕ್ಷೆಯವನ್ನು ಗಮನಿಸಿದ ವಿಶ್ವದ ಅತ್ಯಂತ ಪ್ರಸಿದ್ಧ ಯೂಟ್ಯೂಬರ್ ಎಂದು ಜನಪ್ರಿಯವಾಗಿರುವ ಜಿಮ್ಮಿ 'ಮಿಸ್ಟರ್ ಬೀಸ್ಟ್' ಎಂಬಾತ ಎಲೋನ್ ಮಸ್ಕ್ ಅವರನ್ನು ಟ್ವಿಟರ್‌ನ ಹೊಸ ಸಿಇಒ ಆಗಬಹುದೇ ಎಂದು ಕೇಳಿದ್ದಾರೆ.


  ಸದ್ಯ ಈ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಈ ಮೂಲಕ ಜನಪ್ರಿಯ ಯೂಟ್ಯೂಬರ್ ಜಿಮ್ಮಿ 'MrBeast'Donaldson ಸೇರಿದಂತೆ ಅನೇಕರು ಈ ದೊಡ್ಡ ಉದ್ಯೋಗಾವಕಾಶದಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.


  ಯೂಟ್ಯೂಬರ್‌ಗೆ ಮಸ್ಕ್‌ ಪ್ರತಿಕ್ರಿಯೆ


  24 ವರ್ಷದ ಯೂಟ್ಯೂಬರ್ ವಿಶ್ವದ ಎರಡನೇ ಶ್ರೀಮಂತ ಬಿಲಿಯನೇರ್ ಎಲಾನ್ ಮಸ್ಕ್‌ಗೆ ಈ ಪ್ರಶ್ನೆ ಕೇಳಿದ್ದು, "ನಾನು ಹೊಸ ಟ್ವಿಟರ್ ಸಿಇಒ ಆಗಬಹುದೇ?" ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಸ್ಕ್ "ಇದು ಪ್ರಶ್ನೆಯಿಂದ ಹೊರಗಿಲ್ಲ" ಎಂದು ಉತ್ತರಿಸಿದ್ದಾರೆ.


  ಟ್ವಿಟರ್ ಮೂರನೇ ವ್ಯಕ್ತಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪ್ರಚಾರ ಮಾಡುವುದನ್ನು ಬಳಕೆದಾರರನ್ನು ನಿಷೇಧಿಸುತ್ತದೆ ಎಂದು ಹೇಳುವ ಇತ್ತೀಚಿನ ಟ್ವಿಟರ್‌ ನೀತಿಯನ್ನು ಡೊನಾಲ್ಡ್ಸನ್ ಟೀಕಿಸಿದ್ದಾರೆ. ಈ ನೀತಿಯನ್ನು ಖಂಡಿಸಿದ ಯೂಟ್ಯೂಬರ್ ಮಸ್ಕ್ ಸಿಇಒ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಟ್ವೀಟ್ ಮಾಡಿದ್ದಾರೆ. ನೀವು ಇದೇ ರೀತಿಯ ಕೆಲಗಳನ್ನು ಮಾಡುತ್ತಿದ್ದರೆ ನೀವು ಹುದ್ದೆಯಿಂದ ಇಳಿಯುವುದೇ ಉತ್ತಮ ಎಂದು ಅವರು ಟ್ವೀಟ್ ಮಾಡಿದ್ದಾರೆ.


  Twitter starts laying off staff in India
  ಎಲಾನ್ ಮಸ್ಕ್​


  ಇದನ್ನೂ ಓದಿ: Twitter: ಮಗನ ಸ್ವಾರಸ್ಯಕರ ಉತ್ತರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಮಾಜಿ ಗೂಗಲ್ ಎಂಡಿ


  "ಪ್ರಶ್ನೆಯು ಸಿಇಒ ಅನ್ನು ಹುಡುಕುತ್ತಿಲ್ಲ, ಪ್ರಶ್ನೆಯು ಟ್ವಿಟರ್ ಅನ್ನು ಜೀವಂತವಾಗಿಡಬಲ್ಲ ಸಿಇಒ ಅನ್ನು ಹುಡುಕುತ್ತಿದೆ" ಎಂದು ಮಸ್ಕ್ ಸಮೀಕ್ಷೆಯ ಫಲಿತಾಂಶಗಳ ನಂತರ ಟ್ವೀಟ್ ಮಾಡಿದ್ದಾರೆ.


  ಎಲಾನ್ ಮಸ್ಕ್‌ ಟ್ವಿಟರ್‌ ಸ್ವಾಧೀನಪಡಿಸಿಕೊಂಡಾಗಿನಿಂದಲೂ ಒಂದಲ್ಲ ಒಂದು ಹೊಸ ಕಠಿಣ ನೀತಿಗಳನ್ನು ಜಾರಿಗೆ ತರುತ್ತಲೇ ಇದ್ದಾರೆ, ಹೀಗಾಗಿ ಈ ಎಲ್ಲಾ ಕ್ರಮಗಳನ್ನು ವಿರೋಧಿಸಿದ ನೆಟ್ಟಿಗರು ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  Published by:Sumanth SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು